ಗುರುವಾರ, ಆಗಸ್ಟ್ 25, 2011

ಭ್ರಷ್ಟಾಚಾರದ ವಿರುದ್ಧ ಹೋರಾಡಲು ಯುವ ಸಮೂಹ ಜಾಗೃತರಾಗಿ !!!


ಶಫಿ, ಬಂಗಾಡಿ

ಲಾಡೆನ್‌ನ ಅಲ್‌ಖೈದಾ ಉಗ್ರರು ಭಯೋ ತ್ಪಾದನೆಯ ವಿರುದ್ಧ ಹೋರಾಡುತ್ತಿದ್ದಾರಂತೆ. ರೆಡ್ಡಿ ಬದ್ರರ‍್ಸ್ ಅಕ್ರಮ ಗಣಿಗಾರಿಕೆಯ ವಿರುದ್ಧ ಹೋರಾಟ ನಡೆಸುತ್ತಿದ್ದಾರಂತೆ... ಇಂಥ ಸುದ್ದಿಗಳು ಪತ್ರಿಕೆಗ ಳಲ್ಲಿ ಬಂದರೆ ನೀವು ನಂಬಲೇಬೇಕು. ಯಾಕೆಂ ದರೆ ಮಾಜಿ ಸಿಎಂ ಯಡಿಯೂರಪ್ಪನವರು ಭ್ರಷ್ಟಾ ಚಾರ ವಿರೋಧಿ ಆಂದೋಲನದಲ್ಲಿ ಅದೂ ಕೂಡಾ ಗಾಂಧಿ ಪ್ರತಿಮೆಯ ಅಡಿಯಲ್ಲಿ ಧರಣಿ ಕುಳಿತು ಕೊಳ್ಳಲು ಹೊರಟರಂತೆ ಎಂಥ ವಿಪರ್ಯಾಸ ನೋಡಿ. ತಾನು ಬಿಡುಗಡೆಯಾದರೂ ಜೈಲಿನಿಂದ ಹೊರಹೋಗಲು ನಿರಾಕರಿಸಿರುವ ಅಣ್ಣಾ ಹಜಾರೆ ಎಲ್ಲಿ? ಬಂಧನದ ಭೀತಿಯಿಂದ ನ್ಯಾಯಾಲಯದಿಂದ ನಿರೀ ಕ್ಷಣಾ ಜಾಮೀನು ಪಡೆಯಲು ಹೊರಟಿರುವ ಯಡಿಯೂ ರಪ್ಪ ಎಲ್ಲಿ?

ಎಲ್ಲ ಆಂದೋಲನವೂ ಅರ್ಥ ಕಳೆದುಕೊಳ್ಳುತ್ತಿದೆ. ಯಾಕೆಂ ದರೆ ಇದು ಭ್ರಷ್ಟಾಚಾರ ವಿರೋಧಿ ಆಂದೋಲನವಾಗಿರದೆ ಕಾಂಗ್ರೆಸ್ ವಿರೋಧಿ ಆಂದೋಲನವಾಗಿರುತ್ತದೆ. ಬಿಜೆಪಿ ಪ್ರಾಯೋಜಿತ ಸಂಘ-ಸಂಸ್ಥೆಗಳು, ವಿದ್ಯಾರ್ಥಿ ಸಂಘಟನೆಗಳು, ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ಬಿಜೆಪಿ ಪರ ಕಾಂಗ್ರೆಸ್ ವಿರೋಧಿ ಘೋಷಣೆಗಳು ಕೂಗುತ್ತಿವೆ. ಇದು ಎಲ್ಲೋ ಒಂದು ಕಡೆ ರಾಜಕೀಯ ಪಕ್ಷಗಳ ಹೋರಾಟವೋ ಎಂದೆನಿಸುತ್ತಿದೆ. ಯಾಕೆಂದರೆ ಕರ್ನಾಟಕದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಾ ಗಲೂ ಚಕಾರವೆತ್ತದ ಎಬಿವಿಪಿ ವಿದ್ಯಾರ್ಥಿ ಸಂಘಟನೆಗಳು ಈಗ ಭ್ರಷ್ಟಾಚಾರ ಹೋರಾಟಕ್ಕೆ ಇಳಿದಿರುವುದು ಹಾಸ್ಯಾಸ್ಪದ ವಾಗಿ ಕಾಣುತ್ತಿದೆ.

ಭ್ರಷ್ಟಾಚಾರದಲ್ಲಿ ಒಂದೇ ಬಗೆ. ಅದರಲ್ಲಿ ಕೇಂದ್ರ ಭ್ರಷ್ಟಾಚಾರ, ರಾಜ್ಯ ಭ್ರಷ್ಟಾಚಾರವೆಂಬುದಿಲ್ಲ. ದೀರ್ಘಕಾಲ ನಮ್ಮನ್ನಾಳಿದ ಕಾಂಗ್ರೆಸ್ಸಿಗರಿಗೆ ಮನಸ್ಸು ಮಾಡಿದರೆ ಇಷ್ಟೊತ್ತಿಗಾಗಲೇ ಭ್ರಷ್ಟಾ ಚಾರ ನಿರ್ಮೂಲನೆ ಮಾಡಬಹುದಿತ್ತು. ‘ಗರೀಬೀ ಹಠಾವೋ’ (ಬಡತನ ನಿರ್ಮೂಲನೆ) ಎಂಬ ಘೋಷಣೆ ಕೇವಲ ಘೋಷಣೆ ಯಾಗಿತ್ತೇ ಹೊರತು ಬಡತನ ನಿರ್ಮೂಲನೆಯಾಗಲಿಲ್ಲ. ಹಂತ ಹಂತವಾಗಿ ಬಡವರ (ರೈತರ ಆತ್ಮಹತ್ಯೆ, ವಿಷ ಮದ್ಯ, ಭೋಪಾಲ್ ದುರಂತ) ನಿರ್ಮೂಲನೆ ಮಾತ್ರ ಆಯಿತು.

ಬಡವರ ಉದ್ಧಾರದ ಯೋಜನೆಯಲ್ಲಿ ಬಂಡವಾಳಶಾಹಿ ಗಳು, ರಾಜಕೀಯ ಪುಡಾರಿಗಳು ಕೋಟಿ-ಕೋಟಿ ಹಣ ನುಂಗಿ ದರೇ ಹೊರತು ಬಡವರ ಉದ್ಧಾರವಾಗಲಿಲ್ಲ. ಇಷ್ಟರವರೆಗೆ ನಿದ್ರಿಸಿದ್ದ ಜನ ಈಗ ಎಚ್ಚೆತ್ತಿದ್ದಾರೆ. ಇದೀಗ ಸಮೂಹಸನ್ನಿಯಾ ಗದೆ ನಿರಂತರವಾಗಿ ಭ್ರಷ್ಟಾಚಾರದ ವಿರುದ್ಧ ಹೋರಾ ಡುವ ಯುವಸಮೂಹ ಜಾಗೃತರಾಗಿ ಕ್ರಿಯಾಶೀಲ ರಾಗಬೇಕು. ಇನ್ನು ಕೆಲವು ವಿದ್ಯಾರ್ಥಿಗಳು ಎಬಿ ವಿಪಿಯ ಹಿನ್ನೆಲೆ, ಪೂರ್ವಾ ಪರ ಉದ್ದೇಶ ತಿಳಿ ಯದೆ ಸಕ್ರಿಯರಾಗಿದ್ದಾರೆ. ಇನ್ನು ಮುಂದಾದರೂ ಸಂಘಟನೆಯ ಬಗ್ಗೆ ತಿಳಿಯುವಂತಾಗಬೇಕು.

ಪ್ರತೀ ಜಿಲ್ಲೆ, ತಾಲೂಕುಗಳಲ್ಲಿ ಭ್ರಷ್ಟಾಚಾರ ವಿರೋಧಿ ಸಮಿತಿ ರಚನೆಯಾಗಬೇಕು. ಆದರೆ ಪಕ್ಷಾತೀತವಾಗಿರಬೇಕು. ಇಲ್ಲಿ ಅಣ್ಣಾ ಹಜಾರೆಗೆ ಬೆಂಬಲವಾಗಿ ಮೆರವಣಿಗೆ ಸಾಗುತ್ತಿತ್ತು. ಅದರಲ್ಲೂ ಘೋಷಣೆ ಕೂಗಿಕೊಂಡು ಹೋಗುತ್ತಿರುವವರಲ್ಲಿ ಅತ್ಯಂತ ಭ್ರಷ್ಟ ಹಾಗೂ ಲಂಚಕೋರ ಸರಕಾರಿ ನೌಕರರು ಹಾಗೂ ಕುಟುಂಬ ಸಮೇತರಾಗಿ ಸಾಗುತ್ತಿದ್ದರು. ಇವರನ್ನೆಲ್ಲಾ ಕಂಡಾಗ ನಗುವುದೋ, ಅಳುವುದೋ ಎಂದು ತಿಳಿಯದಾಗಿ, ನಮ್ಮೆನ್ನೆಲ್ಲಾ ಕಾಡುವ ಕಟ್ಟ ಕಡೆಯ ಪ್ರಶ್ನೆ ಹೀಗೂ ಉಂಟೇ....? ಈ ಲೇಖನ ಪ್ರಕಟಗೊಳ್ಳುವಷ್ಟರಲ್ಲಿ ನಮ್ಮ ಮಾಜಿ ಸಿಎಂ ಯಡಿಯೂರಪ್ಪನ ವರ ಧರಣಿಗೆ ಪಕ್ಷದಲ್ಲೇ ವಿರೋಧ ಉಂಟಾದುದರಿಂದ ಯಡ್ಡಿ ಯವರು ಧರಣಿಯಲ್ಲಿ ಪಾಲ್ಗೊಳ್ಳುವುದಿಲ್ಲವಂತೆ! ಮಾಧ್ಯಮದ ವರು ಕಾರಣ ಕೇಳಿದರೆ ಯಡ್ಡಿಯವರ ಮಾನ(ಸಿಕ)ಸ ಪುತ್ರ ನಮ್ಮ ಎಣ್ಣೆ ಸಚಿವ ರೇಣುಕಾಚಾರ್ಯ ಹೇಳಿದ್ದೇನು ಗೊತ್ತಾ? ಯಡ್ಡಿಯ ವರು ಧರಣಿಗೆ ಕೂತರೆ ಭಾರೀ ಸಂಖ್ಯೆಯಲ್ಲಿ ಜನಸೇರಿ ಟ್ರಾಫಿಕ್ ಜಾಮ್ ಆಗ ಬಹುದಂತೆ. ೨೦೧೧ರ ಸೂಪರ್ ಜೋಕ್ ಅಲ್ಲವೇ? ಭ್ರಷ್ಟರ ವಿರುದ್ಧ ಭ್ರಷ್ಟರು ಇದನ್ನೆಲ್ಲಾ ನೋಡುವಾಗ ನಮಗೆ ಹೊಳೆ ಯುವ ಉತ್ತರ ಹೀಗೂ ಉಂಟು..!


ಶಫಿ, ಬಂಗಾಡಿ


ಶನಿವಾರ, ಜೂನ್ 18, 2011

ಸತ್ತದ್ದು ಬರೀ ಆರು ಮಂದಿ; ಯಾಕ್ಹೀಗಾಯ್ತು....? ಮಾಲೆಗಾಂವ್ ಸ್ಫೋಟದ ಬಳಿಕ ಮಾಸ್ಟರ್‌ಮೈಂಡ್ ಸಾಧ್ವಿ ಪ್ರಜ್ಞಾಸಿಂಗ್‌ಳ ಪ್ರಶ್ನೆ ಹೀಗಿತ್ತು..

.

ಗುರುವಾರ - ಜೂನ್ -16-2011

2006, ಸೆಪ್ಟೆಂಬರ್ 8, ಶುಕ್ರವಾರ, ಮಧ್ಯಾಹ್ನ 2.15 ಗಂಟೆ. ಮಾಲೆಗಾಂವ್ ಬಾಂಬ್ ಸ್ಫೋಟದ ರೂವಾರಿಗಳು ತಮ್ಮ ವಿಧ್ವಂಸಕ ಕೃತ್ಯಕ್ಕಾಗಿ ಒಂದು ಕರಾರುವಕ್ಕಾದ ದಿನವನ್ನೇ ಆಯ್ದುಕೊಂಡಿದ್ದರು. ಅಂದು ಶಬೆ ಬರಾತ್ ದಿನವಾಗಿತ್ತು. ಅಂದರೆ ವಿಮೋಚನೆಯ ಪವಿತ್ರ ರಾತ್ರಿ ಎಂದರ್ಥ. ಇಸ್ಲಾಮಿ ಕ್ಯಾಲೆಂಡರ್‌ನಲ್ಲಿ ಎಂಟನೆ ತಿಂಗಳ 15ನೆ ದಿನವಾಗಿತ್ತು ಅದು. ತಮ್ಮ ಪೂರ್ವಿಕರ ಸ್ಮರಿಸಿ, ಗೌರವಿಸಲು ಇದೊಂದು ಪವಿತ್ರವಾದ ದಿನವೆಂದು ಮುಸ್ಲಿಮರು ಭಾವಿಸುತ್ತಾರೆ. ಅದರೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಪುಟ್ಟ ನಗರವಾದ ಮಾಲೆಗಾಂವ್‌ನಲ್ಲಿ ಅಂದು ನಡೆದದ್ದೇ ಬೇರೆ. ಮಧ್ಯಾಹ್ನ ಸುಮಾರು 2.15ರವೇಳೆಗೆ ನಗರದ ಮಸೀದಿ ಹಾಗೂ ಪಕ್ಕದ ದಫನಭೂಮಿಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳು ರಕ್ತದ ಹೊಳೆಯನ್ನು ಹರಿಸಿದವು. ಈ ಭೀಕರ ಸ್ಫೋಟದಲ್ಲಿ 37 ಮಂದಿ ಮೃತಪಟ್ಟು, ಸುಮಾರು 130 ಮಂದಿ ಗಾಯಗೊಂಡಿದ್ದರು.

2008, ಸೆಪ್ಟೆಂಬರ್ 29...

2008ರಲ್ಲಿ ಪಾತಕಿಗಳು ಎರಡನೆ ಬಾರಿಗೆ ಸರಣಿ ಬಾಂಬ್ ಸ್ಫೋಟಗಳನ್ನು ನಡೆಸಲು ಪವಿತ್ರ ರಂಝಾನ್ ತಿಂಗಳನ್ನೇ ಆಯ್ದುಕೊಂಡರು. ತಾವು ಪ್ರತಿಪಾದಿಸುವ ‘‘ಹಿಂದೂ ತೀವ್ರವಾದ’’ಕ್ಕೆ ಉತ್ತೇಜನ ನೀಡಲು ಈ ಸಲ ಅವರು ಉತ್ತರ ಭಾರತಾದ್ಯಂತ ಸರಣಿ ಸ್ಫೋಟಕ್ಕೆ ಸಂಚು ಹೂಡಿದರು. ಹರ್ಯಾಣದ ಫರೀದಾಬಾದ್ ಹಾಗೂ ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಈ ದುಷ್ಕರ್ಮಿಗಳು ಇರಿಸಿದ ಬಾಂಬನ್ನು ಪೊಲೀಸರು ಸಕಾಲದಲ್ಲಿ ನಿಷ್ಕ್ರಿಯಗೊಳಿಸಿದರು. ಆದರೆ ಮಾಲೆಗಾಂವ್‌ನಲ್ಲಿ ಎರಡು ಬಾಂಬ್‌ಗಳು ಸ್ಫೋಟಿಸಿ ಆರು ಮಂದಿ ಮೃತಪಟ್ಟರು ಹಾಗೂ ಗುಜರಾತ್‌ನ ಮೊಡಸ್ಸಾದಲ್ಲಿ ನಡೆದ ಸ್ಫೋಟದಲ್ಲಿ ಓರ್ವ ಸಾವನ್ನಪ್ಪಿದ.

2008ರ ಮಾಲೆಗಾಂವ್ ಸ್ಫೋಟದ ಹಿಂದೆ ‘ಅಭಿನವ್ ಭಾರತ್’ ಎಂಬ ಕೇಸರಿ ಉಗ್ರಗಾಮಿ ಸಂಘಟನೆಯ ಕೈವಾಡವಿರುವ ಬಗ್ಗೆ ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹದಳದ (ಎಟಿಎಸ್)ಪೊಲೀಸರಿಗೆ ಬಲವಾದ ಸುಳಿವು ಸಿಕ್ಕಿತು. ಭಾರತೀಯ ಸೇನಾಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಲೆ.ಕ.ಪ್ರಸಾದ್ ಶ್ರೀಕಾಂತ್ ಪುರೋಹಿತ್ ಎಂಬಾತನನ್ನು ಪೊಲೀಸರು ಭಯೋತ್ಪಾದನೆಯ ಆರೋಪದಲ್ಲಿ ವಶಕ್ಕೆ ತೆಗೆದುಕೊಂಡರು. ಈ ಎಲ್ಲ ಬೆಳವಣಿಗೆಗಳು ನಡೆಯುತ್ತಿರುವಾಗಲೇ ಅಭಿನವ್ ಭಾರತ್ ಜೊತೆ ತಮಗೆ ಯಾವುದೇ ರೀತಿಯ ಸಂಬಂಧವಿಲ್ಲವೆಂದು ಬಿಜೆಪಿ, ವಿಶ್ವಹಿಂದೂ ಪರಿಷತ್ ಹಾಗೂ ಆರೆಸ್ಸೆಸ್‌ಗಳು ಪದೇ ಪದೇ ಸ್ಪಷ್ಟಪಡಿಸುತ್ತಲೇ ಇದ್ದವು. ಆದರೆ ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್ ಹಾಗೂ ನಿವೃತ್ತ ಸೇನಾಧಿಕಾರಿ ಯೊಬ್ಬರ ನಡುವೆ ಪುಣೆಯಲ್ಲಿ ನಡೆದ ಮಾತುಕತೆಗೆ ಸಾಕ್ಷಿಯಾಗಿದ್ದ ವ್ಯಕ್ತಿ ಯೊಬ್ಬರನ್ನು ಖ್ಯಾತ ಆಂಗ್ಲ ಸಾಪ್ತಾಹಿಕ ಪತ್ರಿಕೆ ‘ದಿ ವೀಕ್’ ಇತ್ತೀಚೆಗೆ ಸಂಪ ರ್ಕಿಸಿ, ಅವರಿಂದ ಮಹತ್ವದ ಮಾಹಿತಿಗಳನ್ನು ಕಲೆಹಾಕುವಲ್ಲಿ ಯಶಸ್ವಿಯಾಗಿದೆ.

ಇಂದ್ರೇಶ್ ಕುಮಾರ್ ಹಾಗೂ ನಿವೃತ್ತ ಸೇನಾಧಿಕಾರಿ ನಡುವೆ ನಡೆದ ಮಾತುಕತೆಯ ಬಗ್ಗೆ ಈ ಪ್ರತ್ಯಕ್ಷದರ್ಶಿಯು ‘ದಿ ವೀಕ್’ಗೆ ನೀಡಿದ ವಿವರಗಳನ್ನು ಆತನ ಮಾತುಗಳಲ್ಲಿಯೇ ಓದಿ... ‘‘ ಈ ಸಭೆಯು 2002ರ ಜುಲೈಯಲ್ಲಿ ನಡೆದಿತ್ತು.ನಿವೃತ್ತ ಸೇನಾಧಿಕಾರಿ ಹಾಗೂ ಇಂದ್ರೇಶ್(ಕುಮಾರ್) ನಡುವೆ ನಡೆದ ಆ ಸಭೆಯಲ್ಲಿ ನಾನು ಭಾಗವಹಿಸಿದ್ದೆ. ಹಿಂಸಾತ್ಮಕ ಚಟುವಟಿಕೆಗಳನ್ನು ನಡೆಸಬಲ್ಲಂತಹ ವ್ಯಕ್ತಿಗಾಗಿ ಇಂದ್ರೇಶ್ ಹುಡುಕಾಡುತ್ತಿದ್ದ. ಆತ್ಮಹತ್ಯಾ ದಳಗಳನ್ನು ರಚಿಸುವ ಬಗ್ಗೆ (ನಿವೃತ್ತ) ಸೇನಾಧಿಕಾರಿ ಮಾತನಾಡುತ್ತಿದ್ದ. ಆತನ ಸಾಹಸಕ್ಕೆ ತನ್ನ ಬೆಂಬಲವಿರುವುದಾಗಿ ಇಂದ್ರೇಶ್ ಹೇಳಿದ. ನಾಸಿಕ್‌ನ ಭೋನ್ಸಾಲಾ ಮಿಲಿಟರಿ ಶಾಲೆಯಲ್ಲಿ ನುರಿತ ತಂಡಗಳಿಗೆ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕಗಳ ಬಳಕೆ ಬಗ್ಗೆ ತರಬೇತಿ ನೀಡುವ ಬಗ್ಗೆ ಅವರು ಚರ್ಚಿಸಿದರು. ನಾನು ಈಗಾಗಲೇ ಈ ಬಗ್ಗೆ ಸಿಬಿಐಗೆ ಹೇಳಿಕೆಯೊಂದನ್ನು ನೀಡಿರುವೆ’’.

ಇದೀಗ ಮಾಲೆಗಾಂವ್ ಸ್ಫೋಟ ಪ್ರಕರಣದ ತನಿಖೆಗೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಮಹತ್ತರವಾದ ಯಶಸ್ಸೊಂದನ್ನು ಸಾಧಿಸುವ ಸಮಯ ಸನ್ನಿಹಿತವಾಗಿದೆಯೆಂದು ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ. ಈ ಪ್ರತ್ಯಕ್ಷದರ್ಶಿಯು ನೀಡಿದ ಮಾಹಿತಿಗಳು ಮಾಲೆಗಾಂವ್ ಪ್ರಕರಣದ ಕೆಲವು ನಿಗೂಢತೆಗಳನ್ನು ಭೇದಿಸುವಲ್ಲಿ ಎನ್‌ಐಎಗೆ ಬಹಳಷ್ಟು ನೆರವಾಗಿವೆ.
ತಮ್ಮ ಉದ್ದೇಶ ಸಾಧನೆಗೆ ಬೇಕಾದ ವ್ಯಕ್ತಿಗಳು ಹಾಗೂ ಶಸ್ತ್ರಾಸ್ತ್ರಗಳನ್ನು ಸಂಘಟಿಸಲು ಇಂದ್ರೇಶ್ ಉತ್ಸುಕನಾಗಿದ್ದ. ಏನೇ ಆದರೂ ಈ ಎಲ್ಲ ಚಟುವಟಿಕೆಗಳ ಜೊತೆ ಆರೆಸ್ಸೆಸ್‌ನ ಹೆಸರನ್ನು ಎಳೆದು ತರಕೂಡದು ಎಂದು ಆತ ತಾಕೀತು ಮಾಡಿದ್ದ.
2008ರಲ್ಲಿ ಮಾಲೆಗಾಂವ್‌ನಲ್ಲಿ ಸರಣಿ ಸ್ಫೋಟ ನಡೆಸಲು ವಿಧ್ವಂಸಕರು ಹೆಣೆದ ಸಂಚಿನ ಕುರಿತಾದ ಸಂಕ್ಷಿಪ್ತ ದಾಖಲೆಗಳನ್ನು ಪಡೆದುಕೊಳ್ಳುವಲ್ಲಿ ‘ದಿ ವೀಕ್’ ಪತ್ರಿಕೆಯ ತನಿಖಾ ತಂಡವು ಯಶಸ್ವಿಯಾಗಿದೆ. ಮಾಲೆಗಾಂವ್ ಸ್ಫೋಟ ಸಂಚು ರೂಪಿಸಿದವರು ನಡೆಸಿದ 400 ನಿಮಿಷಗಳ ಸಂಭಾಷಣೆಗಳ ಧ್ವನಿಸುರುಳಿಗಳು ಕೂಡಾ ಈ ತಂಡಕ್ಕೆ ಲಭ್ಯವಾಗಿದೆ.
ಸ್ವಾಮಿ ಅಸೀಮಾನಂದ ಹಾಗೂ 2008ರ ಮಾಲೆಗಾಂವ್ ಸ್ಫೋಟ
ಪ್ರಸ್ತುತ ಎನ್‌ಐಎನ ಕಸ್ಟಡಿಯಲ್ಲಿರುವ ನಭ ಕುಮಾರ್ ಯಾನೆ ಸ್ವಾಮಿ ಅಸೀಮಾನಂದ ಮೂಲತಃ ಆರೆಸ್ಸೆಸ್‌ನ ಸಹಸಂಸ್ಥೆ ವನವಾಸಿ ಕಲ್ಯಾಣ ಆಶ್ರಮದ ಮುಖ್ಯಸ್ಥನಾಗಿದ್ದ. ಈತ ಗುಜರಾತ್‌ನ ಡಾಂಗ್ ಜಿಲ್ಲೆಯಲ್ಲಿ ಶಬರಿ ಮಠವನ್ನು ಸ್ಥಾಪಿಸಿ, ಅಲ್ಲಿ ತನ್ನ ಕೋಮುವಾದಿ ಚಟುವಟಿಕೆಗಳನ್ನು ನಡೆಸುತ್ತಿದ್ದ. 2007ರ ಸಂಜೋತಾ ರೈಲು ಬಾಂಬ್ ಸ್ಫೋಟ ಪ್ರಕರಣದ ಆರೋಪಿಯಾಗಿರುವ 59 ವರ್ಷ ವಯಸ್ಸಿನ ಅಸೀಮಾನಂದನನ್ನು 2010ರ ನವೆಂಬರ್ 19ರಂದು ಸಿಬಿಐ ಅಧಿಕಾರಿಗಳು ಹರಿದ್ವಾರದಲ್ಲಿ ಬಂಧಿಸಿದ್ದರು.

ಆದರೆ ಅಸೀಮಾನಂದ ನ್ಯಾಯಾಲಯಕ್ಕೆ ಸಲ್ಲಿಸಿದ ತಪ್ಪೊಪ್ಪಿಗೆಯ ಅಫಿದಾವಿತ್‌ನಲ್ಲಿ ಕೆಲವೊಂದು ಮಾಹಿತಿಗಳನ್ನು ಬಚ್ಚಿಟ್ಟಿರುವುದು ‘ದಿ ವೀಕ್’ಗೆ ದೊರೆತ ದಾಖಲೆ ಗಳಿಂದ ಸಾಬೀತಾಗಿದೆ. ಉದಾಹರಣೆಗೆ, 2006ರ ಮಾಲೆಗಾಂವ್ ಸ್ಫೋಟ, ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ, ಹೈದರಾಬಾದ್‌ನ ಮಕ್ಕಾ ಮಸೀದಿ ಸ್ಫೋಟ ಹಾಗೂ ಅಜ್ಮೀರ್ ಸ್ಫೋಟದ ಬಗ್ಗೆ ಅಸೀಮಾನಂದ ಸಲ್ಲಿಸಿದ ತಪ್ಪೊಪ್ಪಿಗೆಯ ಅಫಿದಾವಿತ್‌ನಲ್ಲಿ ತನಗೆ ‘ಅಭಿನವ್ ಭಾರತ್’ ಅಥವಾ 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಜೊತೆ ನಂಟಿರುವ ಬಗ್ಗೆ ಆತ ಯಾವುದೇ ಪ್ರಸ್ತಾಪವನ್ನು ಮಾಡಿಲ್ಲ. ಆದರೆ ಸ್ವಾಮಿ ಅಸೀಮಾನಂದನಿಗೆ 2008ರ ಮಾಲೆಗಾಂವ್ ಸ್ಫೋಟ ಸಂಚಿನ ನೀಲನಕ್ಷೆಯೊಂದು ಸಿದ್ಧವಾಗಿರುವ ಬಗ್ಗೆ ಅರಿವಿತ್ತು.ಮಾತ್ರವಲ್ಲ ಆತನಿಗೆ ಆರೋಪಿಗಳ ಜೊತೆ ನಿಕಟ ಸಂಪರ್ಕ ಕೂಡಾ ಇದ್ದಿತ್ತು.

2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಸಾಕ್ಷಿಯೂ ಆಗಿರುವ ಹಿರಿಯ ಸೇನಾಧಿಕಾರಿಯೊಬ್ಬರು ನ್ಯಾಯಾಲಯದ ಮುಂದೆ ಹೀಗೆ ಹೇಳಿಕೆ ನೀಡಿದ್ದಾರೆ. ‘‘2008ರ ಫೆಬ್ರವರಿ 16ರಂದು ಕೋಲ್ಕತಾದಲ್ಲಿ ನಾನು ಮೊದಲ ಬಾರಿಗೆ ಸ್ವಾಮಿ ಅಸೀಮಾನಂದ ಅವರನ್ನು ಭೇಟಿಯಾದೆ. ಆತ ಪುರೋಹಿತ್‌ಗಾಗಿ ಕಾಯುತ್ತಿದ್ದ. ಒಂದು ತಾಸಿನ ಬಳಿಕ ಪುರೋಹಿತ್ ಆಗಮಿಸಿದವನೇ, ವಿಳಂಬಕ್ಕಾಗಿ ಕ್ಷಮೆಯಾಚಿಸಿದ. ಆತ ತನಗೆ ಹಿಮಾನಿ ಸರ್ಕಾರ್ ಎಂಬ ವೃದ್ಧ ಮಹಿಳೆಯೊಬ್ಬರನ್ನು ಪರಿಚಯಿಸಿದ. ವಿನಾಯಕ್ ವೀರ್ ಸಾವರ್ಕರ್ ಅವರ ಸೊಸೆಯಾದ ಈಕೆ ಗಾಂಧೀಜಿಯ ಹಂತಕ ನಾಥೂರಾಮ್ ಗೋಡ್ಸೆಯ ಸೋದರಸೊಸೆಯೂ ಹೌದು.
ಈ ಅಧಿಕಾರಿಯು 2008ರ ಎಪ್ರಿಲ್ 12ರಂದು ಮತ್ತೊಮ್ಮೆ ಪುರೋಹಿತ್‌ನನ್ನು ಭೋಪಾಲ್‌ನ ಶ್ರೀರಾಮ ದೇವಾಲಯದಲ್ಲಿ ಭೇಟಿಯಾದ. ಅಲ್ಲಿ ಉಪಸ್ಥಿತರಿದ್ದ ಇತರರೆಂದರೆ ಹಿಮಾನಿ,ಸಾಧ್ವಿ ಪೂರ್ಣಚೇತನಾನಂದ (ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್), ಸುಧಾಕರ್ ಉದಯಭಾನ್ ಧರ್ ದ್ವಿವೇದಿ ಯಾನೆ ಶಂಕರಾ ಚಾರ್ಯ, ಮೇಜರ್ (ನಿವೃತ್ತ) ರಮೇಶ್ ಉಪಾಧ್ಯಾಯ, ಸಮೀರ್ ಕುಲಕರ್ಣಿ (ಸುಧಾಕರ್), ಚತುರ್ವೇದಿ ಹಾಗೂ ಭರತ್‌ಭಾಯ್ (ಭರತ್ ರತೇಶ್ವರ್).
‘‘ ಇಲ್ಲಿ,ಅಭಿನವ್ ಭಾರತ್ ಸಂಘಟನೆಯನ್ನು ಬೆಳಕಿಗೆ ತರಲು ಮಾಡಬೇಕಾದ ಕೆಲವೊಂದು ಕಾರ್ಯಗಳ ಬಗ್ಗೆ ಪುರೋಹಿತ್ ಮಾತನಾಡಿದ. ಅಭಿನವ್ ಭಾರತ್‌ನ ಅಧ್ಯಕ್ಷತೆಗೆ ಅಸೀಮಾನಂದನ ಹೆಸರನ್ನು ಪ್ರಸ್ತಾಪಿಸಲಾಯಿತು. ತದನಂತರ ದೇಶಭ್ರಷ್ಟ ಸರಕಾರವೊಂದನ್ನು ರಚಿಸುವ ಬಗ್ಗೆ ಪುರೋಹಿತ್ ಮಾತನಾಡಿದ. (ಈ ದೇಶ ಭ್ರಷ್ಟ ಸರಕಾರಕ್ಕೆ ಮಾನ್ಯತೆ ದೊರೆಯಲು) ತಾನು ಇಸ್ರೇಲ್ ಹಾಗೂ ಥಾಲ್ಯಾಂಡ್ ಜೊತೆ ಸಂಪರ್ಕ ಸ್ಥಾಪಿಸಿರುವುದಾಗಿಯೂ ಆತ ಹೇಳಿದ’’ ಎಂದು ಈ ಅಧಿಕಾರಿಯು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಸಭೆಯಲ್ಲಿ ಸಮೀರ್ ಕುಲಕರ್ಣಿಯ ಗುಣಗಾನ ಮಾಡಿದ ಪುರೋಹಿತ್ ಆತನನ್ನು ‘ಚಾಣಕ್ಯ’ ಎಂದು ಬಣ್ಣಿಸಿದ. ಅಸೀಮಾನಂದ ಹಾಗೂ ಹಿಮಾನಿಯನ್ನು ಹೊರತುಪಡಿಸಿದರೆ ಭೋಪಾಲ್ ಸಭೆಯಲ್ಲಿ ಪಾಲ್ಗೊಂಡಿ ದ್ದವರೆಲ್ಲರೂ 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿಗಳಾಗಿದ್ದಾರೆ.
ಬಾಂಬ್ ಸ್ಫೋಟಕ್ಕೆ ಬಳಕೆಯಾದದ್ದು ಸಾಧ್ವಿಯ ಮೋಟಾರ್‌ಬೈಕ್
2008ರ ಮಾಲೆಗಾಂವ್ ಸ್ಫೋಟಕ್ಕೆ ಬಾಂಬರ್ ವಾಹನವಾಗಿ ಪ್ರಜ್ಞಾ ಸಿಂಗ್‌ಳ ಮೋಟಾರ್‌ಬೈಕನ್ನು ಅಭಿನವ್ ಭಾರತ್ ಅಳುಕಿಲ್ಲದೆಯೇ ಉಪಯೋಗಿಸಿತು. ಆದರೆ ಸ್ಫೋಟದಲ್ಲಿ ಈ ಬೈಕ್ ಪೂರ್ಣವಾಗಿ ನಾಶಗೊಳ್ಳಲಿಲ್ಲ. ಇದರಿಂದಾಗಿ ಪೊಲೀಸರಿಗೆ ಸ್ಫೋಟದ ಸಂಚಿನ ಬಗ್ಗೆ ಸಾಕಷ್ಟು ಸುಳಿವುಗಳನ್ನು ಅದು ನೀಡಿದೆ. 2006ರ ಮಾಲೆಗಾಂವ್ ಸ್ಫೋಟ ಪ್ರಕರಣದ ತನಿಖೆಯ ಅನುಭವವಿರುವ ಮಹಾರಾಷ್ಟ್ರ ಪೊಲೀಸರು ಹಾಗೂ ಭಯೋತ್ಪಾದನಾ ನಿಗ್ರಹದಳ (ಎಟಿಎಸ್), 2008ರಲ್ಲಿ ಸರಣಿ ಸ್ಫೋಟಗಳು ಸಂಭವಿಸಿದ್ದೇ ತಡ ತಕ್ಷಣವೇ ಚುರುಕಾದವು. ಮಾಲೆಗಾಂವ್‌ನ ಸುತ್ತಮುತ್ತ ಆ ಸಮಯದಲ್ಲಿ ಹರಿದಾಡಿದ ಸಾವಿರಾರು ದೂರವಾಣಿ ಕರೆಗಳನ್ನು ಕದ್ದಾಲಿಸುತ್ತಿದ್ದ ಎಟಿಎಸ್‌ಗೆ ದೊರೆತ ಈ ಕುತೂಹಲಕಾರಿ ಸಂಭಾಷಣೆ ತನಿಖೆಯ ಗತಿಯನ್ನೇ ಬದಲಾಯಿಸಿತು.
ಸ್ತ್ರೀಧ್ವನಿ (ಪ್ರಜ್ಞಾ ಸಿಂಗ್): ‘‘ನನ್ನ ಮೋಟಾರ್‌ಸೈಕಲ್ ಉಪಯೋಗಿಸ ಬೇಡವೆಂದು ನಾನು ನಿನಗೆ ಹೇಳಿದ್ದೆ.ಯಾಕೆ ನೀನದನ್ನು ಬಳಸಿದೆ?’’.
ಗಂಡು ಧ್ವನಿ (ರಾಮಚಂದ್ರ ‘ರಾಮ್‌ಜೀ’ ಕಾಲಾಸಂಗ್ರಾ): ‘‘ನಾವದನ್ನು ಕೊನೆಗಳಿಗೆಯಲ್ಲಿ ನಿರ್ಧರಿಸಿದೆವು’’.
ಸ್ತ್ರೀ: ಆದರೆ.. ಸತ್ತದ್ದು ಕೇವಲ ಆರು ಮಂದಿ ಮಾತ್ರ... ಯಾಕೆ?
ಗಂಡು: ಜನರ ಗುಂಪು ಸ್ವಲ್ಪ ದೂರದಲ್ಲಿತ್ತು... ಅಲ್ಲೊಂದು ಪೊಲೀಸ್ ತಡೆಬೇಲಿ ಕೂಡಾ ಇತ್ತು.ಹಾಗಾಗಿ ನಾವು ಅಲ್ಲಿ ಬೈಕನ್ನು ಪಾರ್ಕ್ ಮಾಡಬೇಕಾಯಿತು’’.
ಪೊಲೀಸರು ಈ ದೂರವಾಣಿ ಸಂಖ್ಯೆಯ ಜಾಡು ಹಿಡಿದು, ಪ್ರಜ್ಞಾಸಿಂಗ್‌ಳನ್ನು ಸೂರತ್‌ನಲ್ಲಿ ಬಂಧಿಸಿದರು. ಬಾಂಬ್ ಸ್ಫೋಟಕ್ಕೆ ಬಳಕೆಯಾದ ಬೈಕ್ ಕೂಡಾ ಆಕೆಗೆ ಸೇರಿದ್ದಾಗಿತ್ತು. ಆದರೆ ತಾನದನ್ನು ಎರಡು ವರ್ಷಗಳ ಹಿಂದೆ ಮಧ್ಯಪ್ರದೇಶದ ದೇವಸ್‌ನ ಆರೆಸ್ಸೆಸ್ ಕಾರ್ಯಕರ್ತ ಸುನೀಲ್ ಜೋಶಿ ಎಂಬಾತನಿಗೆ ಮಾರಾಟ ಮಾಡಿದ್ದಾಗಿ ಆಕೆ ಪೊಲೀಸರಿಗೆ ತಿಳಿಸಿದ್ದಳು. ಈ ಸುನೀಲ್ ಜೋಶಿ 2007ರಲ್ಲಿ ನಿಗೂಢವಾಗಿ ಕೊಲೆಯಾಗಿದ್ದ.
ತನಿಖಾ ಸಂಸ್ಥೆಗಳ ಮೂಲಗಳು ಹೇಳುವ ಪ್ರಕಾರ ಸುನೀಲ್ ಜೋಶಿಯು ಮಧ್ಯಪ್ರದೇಶದಲ್ಲಿ ಅಭಿನವ್ ಭಾರತ್‌ನ ಕಾರ್ಯಾಚರಣೆಗಳ ಸಮನ್ವಯತೆಯನ್ನು ನೋಡಿಕೊಳ್ಳುತ್ತಿದ್ದ. ಆತನಿಗೆ ಗುಜರಾತ್ ರಾಜ್ಯದಲ್ಲಿ ಸಂಸ್ಥೆಯ ಚಟುವಟಿಕೆಗಳ ಸಮನ್ವಯಕಾರನಾಗಿದ್ದ ಅಸೀಮಾನಂದನ ಜೊತೆ ಸಂಪರ್ಕವಿತ್ತು. ತನಗೆ ಜೋಶಿಯು ತಿಳಿದಿರುವುದಾಗಿ ಅಸೀಮಾ ನಂದ ನ್ಯಾಯಾಲಯದಲ್ಲಿ ಹೇಳಿಕೊಂಡಿದ್ದ.
ಮಕ್ಕಾ ಮಸೀದಿ ಸ್ಫೋಟದ ಬಳಿಕ ತಾನು ಸುನೀಲ್ ಜೋಶಿ ಜೊತೆ ನಡೆಸಿದ ಮಾತು ಕತೆಯ ವಿವರಗಳನ್ನು ನ್ಯಾಯಾ ಲಯದಲ್ಲಿ ಅಸೀಮಾನಂದ ಬಹಿರಂಗ ಪಡಿಸುತ್ತಾ ‘‘ಬಾಂಬ್ ಇರಿ ಸಲು ಇಬ್ಬರು ಮುಸ್ಲಿಂ ಯುವಕರನ್ನು ಇಂದ್ರೇಶ್ ಕುಮಾರ್ ಒದಗಿಸಿಕೊಟ್ಟಿ ರುವು ದಾಗಿ ಜೋಶಿ ತನಗೆ ತಿಳಿಸಿದ್ದ’’ ಎಂದು ಹೇಳಿದ್ದ. ಈ ಪ್ರಕರಣದಲ್ಲಿ ತುಂಬಾ ಜಾಗರೂಕನಾಗಿರು ವಂತೆ ನಾನು ಜೋಶಿಗೆ ಹೇಳಿದ್ದ. ಇಂದ್ರೇಶ್ ನಿಂದ ಆತ ಜೀವಕ್ಕೆ ಅಪಾಯ ಬಂದೀತು ಎಂಬುದಾಗಿ ನಾನ ವನಿಗೆ ಎಚ್ಚರಿಸಿದ್ದೆ’’ ಎಂದು ಅಸೀಮಾನಂದ ನ್ಯಾಯಾ ಲಯಕ್ಕೆ ನೀಡಿದ ಗೌಪ್ಯ ಹೇಳಿಕೆಯಲ್ಲಿ ತಿಳಿಸಿದ್ದ.
ಎರಡು ತಿಂಗಳ ಆನಂತರ ಜೋಶಿ ದೇವಸ್‌ನಲ್ಲಿ ಕೊಲೆ ಯಾದ ಹಾಗೂ ಆತನ ಕುಟುಂ ಬಿಕರು ಆರೆ ಸ್ಸೆಸ್ ಮೇಲೆ ಆರೋಪ ಹೊರಿಸಿ ದ್ದರು. ವಿಶೇಷವೆಂ ದರೆ ಜೋಶಿ ಕೊಲೆ ಪ್ರ ಕರಣದ ಆರೋಪಿಗಳೆ ಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಆರೆಸ್ಸೆಸ್ ಜೊತೆ ಸಂಪರ್ಕ ಹೊ ಂದಿದವರಾಗಿದ್ದರು. ಬಹುಶಃ ಆರೆಸ್ಸೆಸ್ ಬಗ್ಗೆ ಸುನೀಲ್ ಜೋಶಿಗೆ ಜಾಸ್ತಿ ತಿಳಿದಿತ್ತೇನೋ...!



2008ರ ಮಾಲೆಗಾಂವ್ ಸ್ಫೋಟಕ್ಕೆ ಬಳಕೆಯಾದ ಬೈಕ್ ಸಾಧ್ವಿ ಪ್ರಜ್ಞಾಸಿಂಗ್‌ಗೆ ಸೇರಿದ್ದಾಗಿತ್ತು. ಆದರೆ ತಾನದನ್ನು ಎರಡು ವರ್ಷಗಳ ಹಿಂದೆಯೇ ಮಧ್ಯಪ್ರದೇಶದ ಆರೆಸ್ಸೆಸ್ ಕಾರ್ಯಕರ್ತ ಸುನೀಲ್ ಜೋಶಿ ಎಂಬಾತನಿಗೆ ಮಾರಾಟ ಮಾಡಿದ್ದಾಗಿ ಆಕೆ ಪೊಲೀಸರ ಮುಂದೆ ಹೇಳಿ ಕೊಂಡಿದ್ದಳು.ಆದರೆ ಈ ಸುನೀಲ್ ಜೋಶಿ 2007ರಲ್ಲಿ ನಿಗೂಢವಾಗಿ ಕೊಲೆಯಾಗಿದ್ದ.



‘ನಿವೃತ್ತ ಸೇನಾಧಿಕಾರಿ ಹಾಗೂ ಇಂದ್ರೇಶ್ ಕುಮಾರ್ ನಡುವೆ ನಡೆದ ಸಭೆಯಲ್ಲಿ ನಾನು ಭಾಗವಹಿಸಿದ್ದೆ. ಹಿಂಸಾತ್ಮಕ ಚಟುವಟಿಕೆಗಳನ್ನು ನಡೆಸಬಲ್ಲಂತಹ ವ್ಯಕ್ತಿಗಾಗಿ ಇಂದ್ರೇಶ್ ಹುಡುಕಾಡುತ್ತಿದ್ದ. ಆತ್ಮಹತ್ಯಾ ದಳಗಳನ್ನು ರಚಿಸುವ ಬಗ್ಗೆ (ನಿವೃತ್ತ) ಸೇನಾಧಿಕಾರಿ ಮಾತನಾಡುತ್ತಿದ್ದ. ಆತನ ಸಾಹಸಕ್ಕೆ ತನ್ನ ಬೆಂಬಲವಿರುವುದಾಗಿ ಇಂದ್ರೇಶ್ ಹೇಳಿದ. ನಾಸಿಕ್‌ನ ಭೋನ್ಸಾಲಾ ಮಿಲಿಟರಿ ಶಾಲೆಯಲ್ಲಿ ನುರಿತ ತಂಡಗಳಿಗೆ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕಗಳ ಬಳಕೆ ಬಗ್ಗೆ ತರಬೇತಿ ನೀಡುವ ಬಗ್ಗೆ ಅವರಿಬ್ಬರೂ ಚರ್ಚಿಸಿದರು’.






ಆರೆಸ್ಸೆಸ್ ಮುಖಂಡ ಇಂದ್ರೇಶ್ ಕುಮಾರ್ ಹಾಗೂ ನಿವೃತ್ತ ಸೇನಾಧಿಕಾರಿಯೊಬ್ಬರ ನಡುವೆ ಪುಣೆಯಲ್ಲಿ ನಡೆದ ರಹಸ್ಯ ಮಾತುಕತೆಗೆ ಸಾಕ್ಷಿಯಾಗಿದ್ದ ವ್ಯಕ್ತಿಯ ಹೇಳಿಕೆ

ಮಂಗಳವಾರ, ಜೂನ್ 14, 2011

ಪಾವೂರು ನೀರಿನ ಬೆಲೆ ಏರಿಕೆ ಪ್ರತಿಬಟನೆ







ಸೋಸಿಅಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಾವೂರು   ಘಟಕದ ವತಿಯಿಂದ ೧೪/೬/೨೦೧೧ ರಂದು ಬೆಳಿಗ್ಗೆ ೧೦:೩೦ ಕ್ಕೆ ಸರಿಯಾಗಿ ಪಾವೂರ್ ಗ್ರಾಮ ಪಂಚಾಯತ್  ಮುಂಬಾಗದಲ್ಲಿ ಬ್ರಹತ್ ಪ್ರತಿಬಟನೆ ನಡೆಸಲಾಯಿತು.

  ಪಾವೂರ್ ಗ್ರಾಮ ಪಂಚಾಯತ್ ನ ಅನ್ಯಾಯದ ವಿರುದ್ಧ  ಸೋಸಿಅಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದ್ವನಿಯನ್ನು ಎತ್ತುತ್ತಲೇ ಬರುತ್ತಿದೆ ಅದೇ ರೀತಿ ನೀರಿನ ಬಿಲ್ಲನ್ನು ೪೫ ರೂ ಇದ್ದುದ್ದನ್ನು ಒಮ್ಮೆಲೇ ೭೫ ರೂ ಗೆ  ಏರಿಸಿದರಿಂದ  ಇದು  ಗ್ರಾಮದ  ಬಡವರಿಗೆ  ದುಬಾರಿಯಾದ  ಮೊತ್ಥವೆಂದು  ತಿಳಿದ  sdpi ಪಾರ್ಟಿಯು ನೀರಿನ ಧರವನ್ನುಕಡಿತ ಮಾಡಬೇಕೆಂದು ಪಂಚಾಯತ್ ಮುಂಬಾಗದಲ್ಲಿ ಪ್ರತಿಬಟನೆ ನಡೆಸಿತು .
 ನೀರಿನ ಬೆಲೆ ಏರಿಕೆ ಮಾಡಿಧ ಗ್ರಾಮ ಪಂಚಾಯತ್ ನ ನೀತಿ ಸರಿಯಲ್ಲ ಅದು ಬಡವರ ಹೊಟ್ಟೆಗೆ ಬೆಂಕಿ ಇಟ್ಟ ಹಾಗೆ ಇದನ್ನು ರದ್ದು ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮಾಡಲಾಗುವೂದು   ಎಂದು ಗ್ರಾಮ ಸಮೀತಿ  ಸದಸ್ಯ ಹಾರಿಸ್ ಮಲಾರ್ ಮಾತನಾಡಿದರು.
ಸೋಸಿಅಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಾವೂರ್ ಗ್ರಾಮ ಸಮೀತಿ  ಸದಸ್ಯ ಅಬ್ಬಾಸ್ ಅಕ್ಷರ ನಗರ  ಅದ್ಯಕ್ಷ ತೆಯನ್ನು ವಹಿಸಿದರು .ಗ್ರಾಮ ಸಮೀತಿ  ಸದಸ್ಯ ಹಾರಿಸ್ ಮುಸ್ಲಿಯಾರ್ ಮಲಾರ್  ಪ್ರಸ್ಥಾವಿಕವಾಗಿ ಮಾತನಾಡಿದರು. . sdpi ದ ಕ ಜಿಲ್ಲಾ ಸದಸ್ಯ  ಮುಹಮ್ಮದ್ ಯು.ಬಿ ಮುಖ್ಯ ಬಾಷಣ ಮಾಡಿದರು  sdpi  ಮಂಗಳೂರು ವಿಧಾನ ಸಬಾ ಕ್ಷೇತ್ರ ಪ್ರದಾನ ಕಾರ್ಯದರ್ಶಿ  ನೌಶಾದ್ ಕಿನ್ಯ ಬಾಗವಹಿಸಿದರು  ರಹೀಂ ಮಲಾರ್ ವಂದಿಸಿದರು .

ಬುಧವಾರ, ಜೂನ್ 08, 2011

ಪಿಎಫ್‌ಐನಿಂದ ಸಾರ್ವಜನಿಕ ಸಂದೇಶ

ಮಂಗಳೂರು, ಜೂ.8: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಳ್ಳಾಲ ವಲಯದ ವತಿಯಿಂದ ‘ಇಸ್ಲಾಮನ್ನು ಅರಿಯಿರಿ’ ರಾಷ್ಟ್ರೀಯ ಅಭಿಯಾನದ ಪ್ರಯುಕ್ತ ‘ಯಶಸ್ವಿ ಇಸ್ಲಾಮೀ ಜೀವನ’ ಎಂಬ ಸಾರ್ವಜನಿಕ ಸಂದೇಶ ಕಾರ್ಯ ಕ್ರಮವು ತೊಕ್ಕೊಟ್ಟು ಒಳ ಪೇಟೆಯ ಆಮಂತ್ರಣ ಹಾಲ್‌ನಲ್ಲಿ ನಡೆಯಿತು.ಹಾರಿಸ್ ಮುಸ್ಲಿಯಾರ್ ಮಲಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು.‘‘ನೆರೆಹೊರೆಯವರು ಹಸಿದಿರುವಾಗ ಹೊಟ್ಟೆ ತುಂಬಾ ಉಣ್ಣುವವನು ಮುಸ್ಲಿಮನಲ್ಲ’’ ಎಂಬ ಪ್ರವಾದಿ ವಚನದ ಬಗ್ಗೆ ಮಾತನಾಡುತ್ತಾ ಹಸಿವು ಎಂದರೆ ಕೇವಲ ಹೊಟ್ಟೆ ಹಸಿವು ಮಾತ್ರವಲ್ಲ. ಬದಲಾಗಿ ಅವರ ಎಲ್ಲಾ ಸಮಸ್ಯೆಗಳಿಗೆ ಜಾತಿ,ಮತ ಎಂಬ ಭೇದವನ್ನು ಮರೆತು ಭಾಗಿಯಾಗಬೇಕು ಎಂದು ದ.ಕ. ಜಿಲ್ಲಾ ಇಮಾಮ್ ಕೌನ್ಸಿಲ್‌ನ ಕಾರ್ಯದರ್ಶಿ ಇಬ್ರಾಹೀಂ ಖಲೀಲ್ ಅಝ್‌ಹರಿ ಹೇಳಿದರು.ಕಾರ್ಯಕ್ರಮದಲ್ಲಿ ಎಸ್‌ಡಿಪಿಐ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ, ಉಳ್ಳಾಲ ವಲಯದ ಕಾರ್ಯದರ್ಶಿ ನಾಸಿರ್ ಮಲಾರ್ ಉಪಸ್ಥಿತರಿದ್ದರು

ಮಂಗಳವಾರ, ಜೂನ್ 07, 2011

ಮಲಾರಿನಲ್ಲಿ ಸ್ಕೂಲ್ ಚಲೋ ಕಾರ್ಯಕ್ರಮ


ಪಾಪ್ಲರ್ ಫ್ರಂಟ್ ಆಫ್ ಇಂಡಿಯಾ ಮಲಾರ್ ಘಟಕದ ವತಿಯಿಂದ ಸ್ಕೂಲ್ ಚಲೋ ಅಬಿಯಾನದ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣ ಕಾರ್ಯಕ್ರಮ ದಿನಾಂಕ ೫\೬\೨೦೧೧ ರಂದು ಸಂಜೆ ೪:೩೦ ಕ್ಕೆ ಸರಿಯಾಗಿ ಪಾವೂರ್ ಗ್ರಾಮದ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ೧ನೇ ತರಗತಿಯಿಂದ ದ್ವಿತೀಯ ಪಿಯುಸಿ ಸುಮಾರು 300 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು.


PFI ಘಟಕ ಪ್ರದಾನ ಕಾರ್ಯದರ್ಶಿ  ಹಾರಿಸ್ ಮಲಾರ್  ಪ್ರಾಸ್ತಾವಿಕ ಭಾಷಣ ಮಾಡುತಿರುವುದು .
                                                                  ನೆರೆದ ಮಹಿಳೆಯರು
                                                            ವೇದಿಕೆಯಲ್ಲಿ ಅತಿಥಿಗಳು
                                             pfi ಘಟಕ ಅದ್ಯಕ್ಷ  ಕಮರ್ ಮಲಾರ್ ಪುಸ್ತಕ ವಿತರಿಸುದು. 


                                       ಪಾಪ್ಲರ್ ಫ್ರಂಟ್ ಆಫ್ ಇಂಡಿಯಾ ದ ಕ ಜಿಲ್ಲಾ ಸಮೀತಿ ಸದಸ್ಯ ಹೈದರ್ ನಿರ್ಶಲ್ ಕಾರ್ಯಕ್ರಮದ ಅದ್ಯಕ್ಷ ತೆಯನ್ನು ವಹಿಸಿದರು . ಮಲಾರ್ ಘಟಕದ  ಪ್ರದಾನ ಕಾರ್ಯದರ್ಶಿ ಹಾರಿಸ್ ಮುಸ್ಲಿಯಾರ್ ಮಲಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. sdpi ದ ಕ ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಅಲಿ ಮುಖ್ಯ ಬಾಷಣ  ಮಾಡಿದರು ಹಾಗೂ pfi ಉಳ್ಳಾಲ ವಲಯದಕ್ಷ ಅಬ್ಬಾಸ್ ಕಿನ್ಯ ,ಕಾರ್ಯದರ್ಶಿ ನಾಸೀರ್ ಮಲಾರ್,sdpi ಮಂಗಳೂರು ವಿಧಾನ ಸಬ ಅದ್ಯಕ್ಷ ನವಾಜ್  ಉಳ್ಳಾಲ ಬೆಳ್ತಂಗಡಿ ವಿದಾನ ಸಬ ಅದ್ಯಕ್ಷ ಅಕ್ಬರ್, ಸಮಾಜ ಸೇವಕ ಶಂಕರಾನಂದ ,ಮಲಾರ್ ಶಾಲಾ ಅದ್ಯಾಪಕ ಮಜೀದ್ ಮಾಸ್ಟರ್  ತಾಲೂಕ್ ಪಂಚಾಯತ್ ಸದಸ್ಯ ಮುಸ್ತಫಾ ಪಾವೂರ್, ಗ್ರಾಮ ಪಂಚಾಯತ್ ಸದಸ್ಯ ಎಂ ಮಹಮ್ಮದ್ ಬದ್ರಿಯ ನಗರ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಎಂ ಇಸ್ಮಾಯೀಲ್ ವೇದಿಕೆಯಲ್ಲಿ ಅತಿಥಿಗಳಾಗಿದ್ದರು .  ಉಬೈದ್ ಅಮ್ಮೆಂಬಳ ಸ್ವಾಗತಿಸಿ ರಹೀಂ ಮಲಾರ್ ವಂದಿಸಿದರು ಮತ್ತು ಜಾಹಿದ್ ಮಲಾರ್ ಕಾರ್ಯಕ್ರಮ ನಿರೂಪಿಸಿದರು. 

ಸೋಮವಾರ, ಮೇ 09, 2011

ಇದೊಂದು ವಿಚಿತ್ರ ತೀರ್ಪು: ಹೈಕೋರ್ಟ್ ತೀರ್ಪಿಗೆ ಸುಪ್ರೀಂ ವ್ಯಂಗ್ಯ....... ಅಯೋಧ್ಯಾ ಮಾಲಕತ್ವ ವಿವಾದ: ಹೈಕೋರ್ಟ್ ತೀರ್ಪಿಗೆ ಸುಪ್ರೀಂ ತಡೆ

ಹೊಸದಿಲ್ಲಿ, ಮೇ 9: ಅಯೋಧ್ಯೆಯ ವಿವಾದಿತ ನಿವೇಶನವನ್ನು ಮೂರು ಪಾಲು ಮಾಡಿ ಹಂಚಿರುವ ಅಲಹಾಬಾದ್ ಹೈಕೋರ್ಟ್‌ನ ತೀರ್ಪಿಗೆ ಸುಪ್ರೀಂ ಕೋರ್ಟ್ ಇಂದು ತಡೆಯಾಜ್ಞೆ ವಿಧಿಸಿದೆ. ಯಾವುದೇ ಕಕ್ಷಿಯೂ ಭೂಮಿಯನ್ನು ಪಾಲು ಮಾಡುವಂತೆ ಕೇಳಿರದ ಕಾರಣ ಈ ತೀರ್ಪು ‘ವಿಚಿತ್ರವಾದುದು’ ಎಂದು ಅದು ವ್ಯಾಖ್ಯಾನಿಸಿದ್ದು, ಅದರ ಜಾರಿಗೆ ತಡೆ ನೀಡಿದೆ. ವಿವಾದಿತ ಕಟ್ಟಡದ ಸಮೀಪ ಕೇಂದ್ರ ಸರಕಾರ ವಶಪಡಿಸಿಕೊಂಡಿರುವ 67 ಎಕರೆ ಪ್ರದೇಶದಲ್ಲಿ ಯಾವುದೇ ಧಾರ್ಮಿಕ ಚಟುವಟಿಕೆ ನಡೆಸಬಾರದೆಂದು ಆದೇಶಿಸಿರುವ ನ್ಯಾಯಮೂರ್ತಿಗಳಾದ ಅಫ್ತಾಬ್ ಆಲಂ ಹಾಗೂ ಆರ್.ಎಂ. ಲೋಧಾರಿದ್ದ ಪೀಠವು, ಉಳಿದ ಭೂಮಿಗೆ ಸಂಬಂಧಿಸಿ ಯಥಾಸ್ಥಿತಿ ಕಾಯಬೇಕೆಂದು ಸೂಚಿಸಿದೆ.
ಯಾವುದೇ ಪಕ್ಷವೂ ಪಾಲಿಗೆ ಒತ್ತಾಯಿಸದಿದ್ದಾಗ ಇಂತಹ ತೀರ್ಪು ಹೇಗೆ ನೀಡುವುದಕ್ಕೆ ಸಾಧ್ಯ? ಎಂದು ಪ್ರಶ್ನಿಸಿದ ನ್ಯಾಯಪೀಠ, ಹೈಕೋರ್ಟ್ ತನ್ನ ಸ್ವಂತದ ನಿರ್ಧಾರ ಕೈಗೊಂಡಿದೆ. ಅದು ವಿಚಿತ್ರವಾಗಿದೆ. ಅಂತಹ ತೀರ್ಪಿನ ಜಾರಿಗೆ ಅವಕಾಶ ನೀಡಲಾಗದು ಎಂದಿದೆ. ಈಗ ಪರಿಸ್ಥಿತಿ ಕಠಿಣವಾಗಿದೆ. ಹೈಕೋರ್ಟ್‌ನ ತೀರ್ಪು ವ್ಯಾಜ್ಯದ ಶಾಂತಿ ಪಂಚಾತಿಗೆ ಮಾಡಿದಂತಿದೆ ಎಂದು ಅದು ಹೇಳಿದೆ.
ಹಿಂದೆ ವಿವಾದಿತ ಕಟ್ಟಡವಿದ್ದ 2.77 ಎಕ್ರೆ ಭೂಮಿಯನ್ನು ಮೂರು ಸಮಪಾಲು ಮಾಡಿ ಮುಸ್ಲಿಂ, ಹಿಂದೂ ಹಾಗೂ ನಿರ್ಮೋಹಿ ಅಖಾರಗಳಿಗೆ ಹಂಚುವಂತೆ ಹೈಕೋರ್ಟ್‌ನ ಲಕ್ನೊ ಪೀಠ ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ತೀರ್ಪು ನೀಡಿತ್ತು. ವಿವಾದಿತ ನಿವೇಶನ ಹಿಂದೂ, ಮುಸ್ಲಿಂ ಹಾಗೂ ನಿರ್ಮೋಹಿ ಅಖಾರಗಳ ಜಂಟಿ ಕಬ್ಜೆಯಲ್ಲಿತ್ತೆಂದು ಹೈಕೋರ್ಟ್‌ನಲ್ಲಿ ಯಾರೂ ಪ್ರಕರಣ ದಾಖಲಿಸಿರಲಿಲ್ಲ. ಮೂವರು ಕಕ್ಷಿದಾ ರರೂ ವಿವಾದಿತ ನಿವೇಶನ ಇಡಿಯಾಗಿ ತಮಗೆ ಸೇರಿದುದೆಂದು ಪ್ರತಿಪಾದಿಸಿದ್ದರು ಹಾಗೂ ಅದನ್ನು ಪಾಲು ಮಾಡಿ ಕೊಡುವಂತೆ ಯಾರೂ ಕೇಳಿ ರಲಿಲ್ಲವೆಂದು ಮೇಲರ್ಜಿಗಳನ್ನು ಸಲ್ಲಿಸಲಾಗಿತ್ತು. ಇನ್ನೊಂದೆಡೆ, ಹಿಂದೂ ಮಹಾಸಭಾ, ಹೈಕೋರ್ಟ್‌ನ ಬಹು ಸಂಖ್ಯಾತ ತೀರ್ಪನ್ನು ಭಾಗಶಃ ತಿದ್ದುಪಡಿ ಮಾಡಿ, ಮುಸ್ಲಿಮರಿಗೆ ಮೂರನೆ ಒಂದಂಶ ನೀಡುವಂತೆ ಆದೇಶಿಸಿರುವುದನ್ನು ರದ್ದು ಗೊಳಿಸಬೇಕು. ಇಡೀ ಪ್ರದೇಶವನ್ನು ಹಿಂದೂಗಳಿಗೇ ನೀಡುವುದಕ್ಕೆ ಒಲವು ಸೂಚಿಸಿದ್ದ ನ್ಯಾ. ಧರ್ಮವೀರ ಶರ್ಮಾರ ಸೆ.30ರ ಅಲ್ಪಮತ ತೀರ್ಪಿಗೆ ಸುಪ್ರೀಂ ಕೋರ್ಟ್ ಮುದ್ರೆಯೊತ್ತಬೇಕೆಂದು ಕೋರಿತ್ತು.
ಲಕ್ನೊ ಪೀಠದ ಮೂವರು ನ್ಯಾಯಾಧೀಶರು ಸೆ.30ರಂದು ಮೂರು ವಿಧವಾದ ತೀರ್ಪುಗಳನ್ನು ನೀಡಿದ್ದು, ರಾಮ ಲಲ್ಲಾನ ವಿಗ್ರಹವಿರುವ ಭಾಗ ಹಿಂದೂಗಳಿಗೆ ಸೇರಬೇಕೆಂದು ಬಹುಮತದ ಅಭಿಪ್ರಾಯ ಸೂಚಿಸಿದ್ದರು. ನ್ಯಾ. ಖಾನ್ ಹಾಗೂ ಅಗರ್ವಾಲ್, ವಿವಾದಿತ ನಿವೇಶನವನ್ನು 3 ಭಾಗ ಮಾಡಿ ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರ ಹಾಗೂ ರಾಮಲಲ್ಲಾ ವಿರಾಜಮಾನ್ ಪರ ದಾವೆದಾರರಿಗೆ ನೀಡುವಂತೆ ತೀರ್ಪಿತ್ತಿದ್ದರೆ, ನ್ಯಾ. ಶರ್ಮಾ ಸಂಪೂರ್ಣ ನಿವೇಶನ ಹಿಂದೂಗಳಿಗೆ ಸೇರಬೇಕು ಎಂದಿದ್ದರು.

ಗುರುವಾರ, ಮೇ 05, 2011

ಅಮೆರಿಕ ಅತ್ಯುಗ್ರ ರಾಷ್ಟ್ರ: ಪಾಪ್ಯುಲರ್ ಫ್ರಂಟ್

ಹೊಸದಿಲ್ಲಿ: ಉಸಾಮಾ ಬಿನ್ ಲಾಡೆನ್‌ನ ಹತ್ಯೆಯ ಬಗೆಗೆ ಎದ್ದಿರುವ ಅನುಮಾನಗಳು ಇನ್ನೂ ಪರಿಹಾರವಾಗಿಲ್ಲ. ಅಮೆರಿಕ ಸಂಯುಕ್ತ ಸಂಸ್ಥಾನವೊಂದೇ ಈ ಬಗ್ಗೆ ಮಾಹಿತಿಯ ಮೂಲವಾಗಿರುವುದರಿಂದ ಅದು ಹಾಗೆಯೇ ಉಳಿಯಲಿದೆ. ನಾವು ವರದಿಗಳನ್ನು ನೋಡುವುದಾದರೆ ಅಮೆರಿಕ ಸಂಯುಕ್ತ ಸಂಸ್ಥಾನವು ವಿಶ್ವದ ಅತ್ಯುಗ್ರ ರಾಷ್ಟ್ರವಾಗಿದೆ. ದುರ್ಬಲ ರಾಷ್ಟ್ರಗಳ ಮೇಲೆ ತನ್ನ ಅಧಿಪತ್ಯವನ್ನು ರಕ್ಷಿಸಿಕೊಂಡು ಹೋಗುವುದಕ್ಕಾಗಿ ಅದು ರಾಜಾರೋಷವಾಗಿ ಎಲ್ಲಾ ಅಂತಾರಾಷ್ಟ್ರೀಯ ಕಾನೂನುಗಳನ್ನು ಮತ್ತು ಸಾಮಾನ್ಯ ಸಭ್ಯ ಆದರ್ಶಗಳನ್ನು ಉಲ್ಲಂಘಿಸುತ್ತದೆ. ಪೆಂಟಗಾನ್ ಮತ್ತು ವಿಶ್ವ ವಾಣಿಜ್ಯ ಕೇಂದ್ರಗಳ ಮೇಲಿನ ದಾಳಿಯ ನಂತರ 2001ರ ಆರಂಭದಲ್ಲಿ  ಇದರ ರೂವಾರಿಯೆಂದು ಹೇಳಲಾಗಿದಉಸಾಮಾ ಬಿನ್ ಲಾಡೆನ್‌ನನ್ನು ಅಂತಾರಾಷ್ಟ್ರೀಯ ನ್ಯಾಯಾಲಯ ಅಥವಾ ಸೌದಿ ಅರೇಬಿಯಾ ಅಥವಾ ಕತಾರ್ ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಸ್ತಾಪವನ್ನಿಟ್ಟಿತು. ಅಮೆರಿಕ ಆ ಕೊಡುಗೆಯನ್ನು ನಿರಾಕರಿಸಿತು ಮತ್ತು ಅಫ್ಘಾನಿಸ್ತಾನ ಹಾಗೂ ನಂತರ ಇರಾಕ್ ಮೇಲೆ ದಂಡೆತ್ತಿ ಹೋಯಿತು. ಭಯೋತ್ಪಾದನೆಯ ವಿರುದ್ಧ ಸಮರ ಎಂಬ ಲೇಬಲ್‌ನೊಂದಿಗೆ ಅದು ನೂರಾರು ಸಾವಿರಾರು ಮಂದಿಯನ್ನು ಕೊಂದು ಹಾಕಿತು, ಅಸಂಖ್ಯಾತ ಮಕ್ಕಳನ್ನು ಅನಾಥರನ್ನಾಗಿಸಿತು. ಅದು ಯಾವಾಗಲೂ ಎಲ್ಲಾ ರಾಷ್ಟ್ರಗಳ ಸಾರ್ವಭೌಮತ್ವದ ಮೇಲೆ ಹಸ್ತಕ್ಷೇಪ ಮಾಡುತ್ತದೆ, ನಾಗರಿಕ ಮತ್ತು ಮಾನವ ಹಕ್ಕುಗಳ ಅಂತಾರಾಷ್ಟ್ರೀಯ ಸಮಾವೇಶಗಳನ್ನು ಉಲ್ಲಂಘಿಸುತ್ತದೆ. ಅದು ಗ್ವಾಂಟನಾಮೋ ಸೇರಿದಂತೆ ಹಲವು ಪ್ರತ್ಯಕ್ಷ ಹಾಗೂ ರಹಸ್ಯ ಯಾತನಾ ಶಿಬಿರಗಳನ್ನು ನಡೆಸುತ್ತಿದೆ. ಗ್ವಾಂಟನಾಮೊದಲ್ಲಿ ಸುಮಾರು 200 ಮಂದಿಯನ್ನು ಯಾವುದೇ ವಿಚಾರಣೆಯಿಲ್ಲದೆ ಕಬ್ಬಿಣದ ಗೂಡಿನೊಳಗೆ ಬಂಧನದಲ್ಲಿಡಲಾಗಿದೆ. ತಮ್ಮನ್ನು ಅವಲಂಬಿಸಿರುವ ರಾಷ್ಟ್ರಗಳಲ್ಲಿ ಸಿಐಎ ರಹಸ್ಯ ಬಂಧನ ಶಿಬಿರಗಳನ್ನು ನಡೆಸುತ್ತಿದ್ದು, ಅಲ್ಲಿ ನೂರಾರು ಮಂದಿಗೆ ಚಿತ್ರಹಿಂಸೆಗಳನ್ನು ನೀಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ.
ಒಂದು ಮೃತದೇಹವನ್ನು ಸಮುದ್ರಕ್ಕೆ ಎಸೆಯುವುದು ಎಲ್ಲಾ ಧಾರ್ಮಿಕ ನಿಯಮಗಳು ಹಾಗೂ ಸಭ್ಯತೆಯ ಆದರ್ಶಗಳ ಉಲ್ಲಂಘನೆಯಾಗಿದೆ. ಹಲವು ಧರ್ಮಗಳಿಂದ ಸಹಾನುಭೂತಿಯನ್ನು ಪಡೆಯುತ್ತಿರುವುದಾಗಿ ಹೇಳಲಾಗುತ್ತಿರುವ ಬರಾಕ್ ಒಬಾಮಾ ಕೂಡ ಮುಸ್ಲಿಮ್ ಜಗತ್ತನ್ನು ಕೆರಳಿಸಲು ಇಷ್ಟಪಡುತ್ತಿರುವ ವ್ಯಕ್ತಿಗಳ ಕೈಗೊಂಬೆಯಷ್ಟೇ.
ಏನೇ ಆದರೂ, ಈಗ ಉಸಾಮಾ ಬಿನ್ ಲಾಡೆನ್‌ನ ಹತ್ಯೆಯೊಂದಿಗೆ ಅಫ್ಘಾನ್ ಮತ್ತು ಅಮೆರಿಕದಲ್ಲಿ ಉಳಿಯಲು ಅಮೆರಿಕಾಗೆ ‘ಉಸಾಮಾ ಬೇಟೆ’ ಎಂಬ ಪೊಳು ನೆಪ ಇಲ್ಲವಾಗಿದೆ. ಒಬ್ಬ ಸದ್ದಾಮ್ ಹುಸೇನ್ ಅಥವಾ ಉಸಾಮಾ ಬಿನ್ ಲಾಡೆನ್‌ನ ಸಾವಿನೊಂದಿಗೆ ದಂಡಯಾತ್ರೆಗಳು ಅಥವಾ ಲೂಟಿಗಳ ವಿರುದ್ಧ  ಸ್ಥಳೀಯ ಪ್ರತಿರೋಧವು ಕೊನೆಗೊಳ್ಳಬಹುದೆಂಬ ನವ ವಸಾಹತುಶಾಹಿ ಶಕ್ತಿಗಳ ನಂಬಿಕೆ ಮೂರ್ಖತನವಾಗಿದೆ. ಇತಿಹಾಸದಲ್ಲಿ ಯಾವುದಾದರೂ ಪುರಾವೆಗಳಿದ್ದರೆ, ಲೂಟಿ ಮಾಡುವ ಸ್ವಭಾವವುಳ್ಳ ವಿದೇಶಿಗಳು ತಮ್ಮ ದೇಶಕ್ಕೆ ಹಿಂದಿರುಗುವ ತನಕ ಆಕ್ರಮಿತ ಭೂಮಿಗಳಲ್ಲಿ ಜನರ ಪ್ರತಿರೋಧವು ಮುಂದುವರಿಯಲಿದೆ. ಎಲ್ಲಾ ರೀತಿಯ ಭಯೋತ್ಪಾದನೆಯ ಬಗ್ಗೆಯೂ ಬೇಸರಪಡುವ ಸಂದರ್ಭದಲ್ಲಿ, ಮಾನವತೆಯ ಪರವಾಗಿ ನಮ್ಮ ಭರವಸೆಯೇನೆಂದರೆ ಎಲ್ಲಾ ದಮನಕಾರಿ ಯಜಮಾನಿಕೆಯ ಸೂಪರ್ ಪವರ್ ರಾಷ್ಟ್ರಗಳು ಅಂತಿಮವಾಗಿ ಸೋಲಲಿದೆ ಮತ್ತು ಎಲ್ಲಾ ರಾಷ್ಟ್ರಗಳ ಸ್ವಾತಂತ್ರ ಹಾಗೂ ಸಾರ್ವಭೌಮತ್ವವು ಸಮಾನವಾಗಿ ರಕ್ಷಿಸಲ್ಪಡಲಿದ್ದು, ವಿಶ್ವದಲ್ಲಿ ಶಾಂತಿಯ ಪರ್ವಕ್ಕೆ ಇದು ನಾಂದಿಯಾಗಲಿದೆ.
ಇ.ಎಂ.ಅಬ್ದುಲ್ ರಹ್ಮಾನ್
ಅಧ್ಯಕ್ಷರು
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ

ಮಂಗಳವಾರ, ಮೇ 03, 2011

ಮೈಸೂರಿನಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಮೈಸೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಮೈಸೂರು ಜಿಲ್ಲೆಯ ಸದಸ್ಯತ್ವ ಅಭಿಯಾನಕ್ಕೆ ಇತ್ತೀಚೆಗೆ ಇಲ್ಲಿನ ಎಆರ್‌ಕೆ ಫಂಕ್ಷನ್ ಹಾಲ್‌ನಲ್ಲಿ ಚಾನೆ ನೀಡಲಾಯಿತು.
ಮಹಿಳೆಯರನ್ನೊಳಗೊಂಡಂತೆ ಹಲವು ಮಂದಿ ಪಕ್ಷದ ಸದಸ್ಯತ್ವ ಸ್ವೀಕರಿಸಿದರು.
ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕೊಡ್ಲಿಪೇಟೆ, ಜಿಲ್ಲಾಧ್ಯಕ್ಷ ಮುಹಮ್ಮದ್ ಫೈಝಲ್, ಉಪಾಧ್ಯಕ್ಷ ಕಿರಣ್ ಕುಮಾರ್, ಕೋಶಾಧಿಕಾರಿ ಜೆ.ಫಝಲುಲ್ಲಾ, ಸಮಿತಿ ಸದಸ್ಯರಾದ ಸಯ್ಯದ್ ಸೈಫುಲ್ಲಾ, ಫಾತಿಮಾ, ಅಕ್ರಮ್, ಶರೀಫ್ ಮತ್ತು ತಬ್ರೇಝ್ ಸೇಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮಂಗಳೂರು: ಎಸ್‌ಡಿಪಿಐ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ   (ಎಸ್‌ಡಿಪಿಐ) ಕರ್ನಾಟಕ ರಾಜ್ಯಾದ್ಯಂತ ಹಮ್ಮಿಕೊಂಡ ಸದಸ್ಯತ್ವ ಅಭಿಯಾಕ್ಕೆ ನಗರದ ಪುರಭವನದಲ್ಲಿ ದಿನಾಂಕ 22-04-11ರಂದು ಶುಕ್ರವಾರ ಚಾಲನೆ ನೀಡಲಾಯಿತು.
ಈ ಸಂದರ್ಭ ದಿಕ್ಸೂಚಿ ಭಾಷಣ ಮಾಡಿದ ಎಸ್‌ಡಿಪಿಐ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಅನ್ವರ್ ಸಾದಾತ್, ದೇಶದ ಪ್ರಮುಖ ರಾಜಕೀಯ ಪಕ್ಷಗಳು ವ್ಯಾಪರಿ ದೃಷ್ಟಿಕೋನ ಹೊಂದಿದ್ದು, ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿಕೊಡುವ ಮುಕ್ತ ಮನಸ್ಸನ್ನು ಹೊಂದಿಲ್ಲ. ಬಡವರನ್ನು ಶೋಷಿಸುತ್ತಲೇ ಶ್ರೀಮಂತರಿಗೆ ಪೂರಕವಾದ ಕಾನೂನುಗಳನ್ನು ರೂಪಿಸುತಿವೆ. ಈ ನಿಟ್ಟಿನಲ್ಲಿ ಸಾಮಾಜಿಕ ಕಳಕಳಿ ಹೊಂದಿರುವ ಎಸ್‌ಡಿಪಿಐ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಮುಂದಾಗಿದೆ. ಪಕ್ಷಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಮಾತ್ರ ಮುಖ್ಯ ಉದ್ದೇಶವಲ್ಲ. ಅನ್ಯಾಯವನ್ನು ತಡೆಗಟ್ಟವುದರೊಂದಿಗೆ ಸಾಮಾಜಿಕ ನ್ಯಾಯ ಕಲ್ಪಿಸಿಕೊಡಲು ಪಕ್ಷ ಬದ್ಧವಾಗಿದೆ ಎಂದರು.
ರಾಜ್ಯ ಉಪಾಧ್ಯಕ್ಷ ಅಬ್ದುಲ್ ಲತೀಫ್ ಪುತ್ತೂರು ಮಾತನಾಡಿ, ಎಸ್‌ಡಿಪಿಐ ದೇಶದಲ್ಲಿ ನಡೆಸುತ್ತಿರುವ ಕಾರ್ಯಕ್ರಮಗಳ ಬಗ್ಗೆ ವಿವರಗಳನ್ನು ನೀಡಿದರು. ಪಕ್ಷವು ತಳಮಟ್ಟದಲ್ಲಿ ಸಂಘಟಿತವಾಗಿ ಬೆಳೆದುಬರುತ್ತಿದ್ದು, ಜನರು ಇದರತ್ತ ಆಕರ್ಷಿತರಾಗುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಹುಜನ ಸಮಾಜವಾದಿ ಪಕ್ಷ (ಬಿಎಸ್ಪಿ)ದಲ್ಲಿ ಹಲವು ವರ್ಷಗಳ ಕಾಲ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡು ಪಕ್ಷದ ಕರ್ನಾಟಕ ರಾಜ್ಯ ಕಾರ್ಯದರ್ಶಿಯೂ ಆಗಿದ್ದ ಇಬ್ರಾಹೀಂ ಪೇಜಾವರ ಎಸ್‌ಡಿಪಿಐಗೆ ಸೇರ್ಪಡೆಗೊಂಡರು. ಪಕ್ಷದ ಧ್ವಜವನ್ನು ಅವರಿಗೆ ಹಸ್ತಾಂತರಿಸುವ ಮೂಲಕ ಅಬ್ದುಲ್ ಲತೀಫ್ ಪುತ್ತೂರು ಅವರನ್ನು ಬರಮಾಡಿಕೊಂಡರು.
ಸಮಾರಂಭದ ಅಧ್ಯಕ್ಷತೆಯನ್ನು ಪಕ್ಷದ ಜಿಲ್ಲಾಧ್ಯಕ್ಷ ಅಬ್ದುಲ್ ಜಲೀಲ್ ಕೆ. ವಹಿಸಿದ್ದರು. ಪಕ್ಷದ ರಾಜ್ಯ ಉಪಾಧ್ಯಕ್ಷ ಅಬ್ದುಲ್ ಲತೀಫ್ ಪುತ್ತೂರು ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಪಕ್ಷದ ಪದಾಧಿಕಾರಿಗಳಾದ ನ್ಯಾಯವಾದಿ ಮಜೀದ್ ಖಾನ್, ಇಸ್ಮಾಯೀಲ್ ಎಂಜಿನಿಯರ್, ಮುಹಮ್ಮದ್ ಶರೀಫ್, ಅಬೂಬಕ್ಕರ್ ಸಿದ್ದೀಕ್, ನವಾಝ್ ಉಳ್ಳಾಲ್, ಹಮೀದ್ ಸಾಲ್ಮರ, ಅಕ್ಬರ್ ಬೆಳ್ತಂಗಡಿ, ಅಕ್ರಂ ಹಸನ್ ಉಳ್ಳಾಲ ಮತ್ತಿತರಿದ್ದರು.
ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ ಸ್ವಾಗತಿಸಿದರು. ಫಝ್‌ಲುದ್ದೀನ್ ಆತೂರು ವಂದಿಸಿದರು. ಸಲೀಂ ಗುರುವಾಯನಕೆರೆ ಕಾರ್ಯಕ್ರಮ ನಿರೂಪಿಸಿದರು.

ಬೆಳ್ತಂಗಡಿ: ಎಸ್‌ಡಿಪಿಐ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

 
ಬೆಳ್ತಂಗಡಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯಾದ್ಯಂತ ‘ಪ್ರಜಾಪ್ರಭುತ್ವಕ್ಕೆ ಕಾಯಕಲ್ಪ-ಎಸ್‌ಡಿಪಿಐ ಸಂಕಲ್ಪ’ ಎಂಬ ಘೋಷಣೆಯೊಂದಿಗೆ ಹಮ್ಮಿಕೊಂಡಿರುವ ಸದಸ್ಯತ್ವ ಅಭಿಯಾನಕ್ಕೆ ನಗರದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.
ಎಸ್‌ಡಿಪಿಐ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ದಿಕ್ಸೂಚಿ ಭಾಷಣ ಮಾಡಿದ ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ,  ಎಸ್‌ಡಿಪಿಐ ಬೆಳವಣಿಗೆ ಮತ್ತು ಅದರ ಉದ್ದೇಶದ ಬಗ್ಗೆ ವಿವರಿಸಿದರು.
ಅಧ್ಯಕ್ಷೀಯ ಭಾಷಣ ಮಾಡಿದ ಅಕ್ಬರ್ ಬೆಳ್ತಂಗಡಿ, ದೇಶವು ಎದುರಿಸುತ್ತಿರುವ ಸವಾಲುಗಳು, ಇಂದಿನ ರಾಜಕೀಯ ಪರಿಸ್ಥಿತಿ ಮತ್ತು ಎಸ್‌ಡಿಪಿಐ ಜವಾಬ್ದಾರಿಯ ಬಗ್ಗೆ ಮಾತನಾಡಿದರು. ತಾಲೂಕಿನಲ್ಲಿ ಸದಸ್ಯತ್ವ ಅಭಿಯಾನವು ಯಶಸ್ವಿಯಾಗಿ ನಡೆಯಬೇಕು ಎಂದು ಅವರು ಕರೆಯಿತ್ತರು.
ವೇದಿಕೆಯಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಜಲೀಲ್ ಕೆ., ಕಾರ್ಯದರ್ಶಿ ಸಲೀಂ ಗುರುವಾಯನಕೆರೆ, ತಾಲೂಕು ಪ್ರಧಾನ ಕಾರ್ಯದರ್ಶಿ ಹಮೀದ್ ವೇಣೂರು, ಸದಸ್ಯರಾದ ಇಸ್ಮಾಯೀಲ್ ಹಾಜಿ, ಹೈದರ್ ನೀರ್‌ಸಾಲ್ ಉಪಸ್ಥಿತರಿದ್ದರು.
ತಾಲೂಕು ಕಾರ್ಯದರ್ಶಿ ಅನೀಸ್ ಗೇರುಕಟ್ಟೆ ಸ್ವಾಗತಿಸಿ, ಅಶ್ರಫ್ ಪಿ. ವಂದಿಸಿದರು. ನಿಝಾಮುದ್ದೀನ್ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

ಮಂಗಳೂರು: ಬೀದಿ ವ್ಯಾಪಾರಸ್ಥರ ಪ್ರತಿಭಟನೆಗೆ ಎಸ್‌ಡಿಪಿಐ ಬೆಂಬಲ

ಮಂಗಳೂರು: ತಮ್ಮ ಅಂಗಡಿಯನ್ನು ತೆರವುಗೊಳಿಸಿರುವುದರ ವಿರುದ್ಧ ಮಂಗಳೂರಿನ ಬೀದಿ ವ್ಯಾಪಾರಸ್ಥರು ದಿನಾಂಕ 2-5-2011ರಂದು  ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಎಸ್‌ಡಿಪಿಐ ಬೆಂಬಲಿಸಿತು.
ಪ್ರತಿಭಟನೆಯ ಅಂಗವಾಗಿ ರ್ಯಾಲಿ ನಡೆಸಲಾಯಿತು.
ಮಂಗಳೂರಿನ ಸ್ಟೇಟ್‌ಬ್ಯಾಂಕ್‌ನಿಂದ ಬಂದರ್ ಮಾರ್ಗವಾಗಿ ಸಂಚರಿಸಿದ ರ್ಯಾಲಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಸೇರಿತು. ನಂತರ ಒಂದು ದಿನದ ಉಪವಾಸ ಧರಣಿ ಕುಳಿತುಕೊಳ್ಳಲಾಯಿತು. ಎಸ್‌ಡಿಪಿಐ ಕೂಡ ಧರಣಿಯಲ್ಲಿ ಪಾಲ್ಗೊಂಡಿತು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಅಕ್ಬರ್ ಅಲಿ ಮತ್ತು ಕಾರ್ಯದರ್ಶಿ ಸಲೀಂ ಗುರುವಾಯನಕೆರೆ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಮಂಗಳೂರು, ಉಳ್ಳಾಲ ವಿಧಾನ ಸಭಾ ಕ್ಷೇತ್ರಾಧ್ಯಕ್ಷರಾದ ನವಾಝ್ ಉಳ್ಳಾಲ್, ಬಂಟ್ವಾಳ ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ ಅಶ್ರಫ್ ಮಂಚಿ, ಮಂಗಳೂರು ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಝಮೀರ್ ಬೆಂಗ್ರೆ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ನಿಯಾಝ್ ಅಹ್ಮದ್ ಹಾಗೂ ಇತರರು ಭಾಗವಹಿಸಿದ್ದರು.

‘ಪ್ರಜಾಪ್ರಭುತ್ವದ ರಕ್ಷಣೆ ಎಸ್‌ಡಿಪಿಐ ಗುರಿ’

 ಹಾಸನ ಜಿಲ್ಲೆಯನ್ನು ಸ್ವಾರ್ಥ ರಾಜಕಾರಣಿಗಳಿಂದ ಮುಕ್ತಿಗೊಳಿಸಿ, ಜನಪರ ಆಡಳಿತವನ್ನು ಸ್ಥಾಪಿಸುವಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಮಹತ್ವದ ಪಾತ್ರ ವಹಿಸಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷರಾದ ಅಮೀರ್ ಜಾನ್ ಹೇಳಿದ್ದಾರೆ.
ಶುಕ್ರವಾರ ಎಸ್.ಡಿ.ಪಿ.ಐ ಸದಸ್ಯತ್ವ ಅಂದೋಲನವನ್ನು ಚಾಲನೆ ನೀಡಿದ ನಂತರ ಮಾತನಾಡಿದ ಅವರು, ದೇಶದಲ್ಲಿ ಪ್ರಜಾಫ್ರಭುತ್ವವನ್ನು ಕಾಪಾಡುವುದು ಪಕ್ಷದ ಗುರಿಯಾಗಿದೆ ಎಂದರು.
ಜಿಲ್ಲೆಯ ಅಭಿವೃದ್ಧಿಯು ಕುಂಟಿತ ಗೊಂಡಿದೆ, ಭ್ರಷ್ಟಾಚಾರ ತಾಂಡವವಾಡುತಿತಿದೆ. ಆಡಳಿತ ಯಂತ್ರ ಜನ  ವಿರೋಧಿಯಾಗಿದೆ. ಶ್ರೀ ಸಾಮಾನ್ಯರ ಅಳಲನ್ನು ಕೇಳುವವರಿಲ್ಲದಂತಾಗಿದೆ ಎಂದು ಅವರು ದೂರಿದರು.
ಪತ್ರಕರ್ತ ಮಲ್ನಾಡ್ ಮೆಹಬೂಬ್ ಮಾತನಾಡಿ ಜಿಲ್ಲೆಯಲ್ಲಿ ಜನಪರ ಚಳುವಳಿಯನ್ನು ಗಟ್ಟಿಗೊಳಿಸಬೇಕು, ದಲಿತರು ಕಾರ್ಮಿಕರು ಮಹಿಳೆಯರು ಮತುತಿ ಅಲ್ಪ ಸಂಖ್ಯಾತರು ಒಂದಾಗಬೇಕು. ಎಲ್ಲಾ ಸಮಾಜದ ಪ್ರಮಾಣಿಕರು ಒಂದೇ ವೇಧಿಕೆಯಲ್ಲಿ ಸೇರಬೇಕು ಎಂದರು.
ಪಕ್ಷದ ಹಾಸನ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷರಾದ ಸಾದಿಖ್ ಕಣತೂರ್ ಮಾತನಾಡಿ ಜನ ಸಾಮಾನ್ಯರ ಪರವಾದ ಧೋರಣೆಯೋಂದಿಗೆ ನಾವು ಜನರ ಬಳಿ ಹೋಗುತ್ತಿದ್ದೇವೆ. ವಿಚಾರವಂತರು ಪ್ರಗತಿ ಪರರು ನಮ್ಮನ್ನು ಬೆಂಬಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಸೂಫಿ ಇಬ್ರಾಹಿಂ ಜಿಲ್ಲಾ ಮುಖಂಡ ಮುಹಮ್ಮದ್ ಇನಾಯತ್ ಭಾಗವಹಿಸಿದ್ದರು.

ಶುಕ್ರವಾರ, ಏಪ್ರಿಲ್ 15, 2011

ಜನತೆಯ ಪರವಾಗಿ ಧ್ವನಿ ಎತ್ತುವವರನ್ನು ಭಯೋತ್ಪಾದಕರೆ......?

ಅನ್ಯಾಯಕ್ಕೊಳಗಾದ ನೊಂದ ಜನತೆಯ ಪರವಾಗಿ ಮಾತನಾಡುವುದೇ ಈ ದೇಶದಲ್ಲಿ ಅಪರಾಧವಾಗಿದೆ. ಜನತೆಯ ಪರವಾಗಿ ಧ್ವನಿ ಎತ್ತುವವರನ್ನು ಭಯೋತ್ಪಾದಕರೆಂದು, ನಕ್ಸಲೀಯರೆಂದು ಜೈಲಿಗೆ ಅಟ್ಟುವುದು ನಮ್ಮ ಪ್ರಭುತ್ವದ ಚಾಳಿಯಾಗಿದೆ. ಹೆಸರಾಂತ ಮಾನವ ಹಕ್ಕು ಹೋರಾಟಗಾರ, ಶಿಶು ರೋಗ ತಜ್ಞ ಡಾ. ಬಿನಾಯಕ್ ಸೇನ್ ಈ ರೀತಿ ಪ್ರಭುತ್ವದ ಕೆಂಗಣ್ಣಿಗೆ ಗುರಿಯಾಗಿ ಕಳೆದ 2 ವರ್ಷಗಳಿಂದ ಸೆರೆಮನೆಯಲ್ಲಿ ಯಾತನೆ ಅನುಭವಿಸಿದರು. ಇದೀಗ ಸುಪ್ರೀಂ ಕೋರ್ಟ್ ಡಾ. ಸೇನ್‌ರನ್ನು ಜಾಮೀನಿನ ಮೇಲೆ ಬಿಡುವ ಸಂಬಂಧ ತೀರ್ಪು ನೀಡಿದೆ. ಎಲ್ಲ ಪ್ರಜಾಪ್ರಭುತ್ವವಾದಿಗಳು, ಮಾನವ ಹಕ್ಕು ಹೋರಾಟಗಾರರು ಈ ತೀರ್ಪನ್ನು ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ.
ಡಾ. ಬಿನಾಯಕ್ ಸೇನ್ ವೈದಕೀಯ ಪದವಿಯನ್ನು ಪೂರೈಸಿ ಉಳಿದ ವೈದ್ಯರಂತೆ ತನ್ನದೇ ನರ್ಸಿಂಗ್‌ಹೋಂ ಆರಂಭಿಸಿ ಹಣ ಗಳಿಸಲು ಮುಂದಾಗಲಿಲ್ಲ. ಅವರು, ಛತ್ತೀಸ್‌ಗಡದ ಆದಿವಾಸಿ ಪ್ರದೇಶಗಳಲ್ಲಿ ಯಾವುದೇ ಕನಿಷ್ಠ ಸೌಕರ್ಯವಿಲ್ಲದ ಜನರಿಗೆ ಉಚಿತ ಆರೋಗ್ಯ ಸೇವೆ ನೀಡಲು ತನ್ನ ಬದುಕನ್ನು ಮುಡಿಪಾಗಿಟ್ಟರು. ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುತ್ತಿದ್ದ ಅಲ್ಲಿಯ ಮಕ್ಕಳನ್ನು ಬದುಕಿಸಲು ಹಗಲಿರುಳು ದುಡಿದರು. ಅಂತಹ ಬಿನಾಯಕ್ ಸೇನ್‌ರನ್ನು ಛತ್ತೀಸ್‌ಗಡದ ಬಿಜೆಪಿ ಸರಕಾರ ನಕ್ಸಲೀಯ ಬೆಂಬಲಿಗನೆಂದು ಆರೋಪಿಸಿ ಜೈಲಿಗಟ್ಟಿತು. ಅವರ ಮೇಲೆ ದೇಶದ್ರೋಹದ ಆರೋಪವನ್ನೂ ಮಾಡಿತು.
ಇದನ್ನು ಪ್ರಶ್ನಿಸಿ ಛತ್ತೀಸ್‌ಗಡದ ವಿವಿಧ ನ್ಯಾಯಾಲಯಗಳಲ್ಲಿ ಬಿನಾಯಕ್ ಸೇನ್‌ರ ಪತ್ನಿ ಇಲಿನಾ ಸೇನ್ ಮತ್ತು ಮಾನವ ಹಕ್ಕು ಹೋರಾಟಗಾರರು ಕಾನೂನು ಬದ್ಧವಾದ ಹೋರಾಟವನ್ನು ನಡೆಸಿದರೂ ಕೂಡ ಅಲ್ಲಿನ ನ್ಯಾಯಾಲಯಗಳು ಸರಕಾರದ ವಾದವನ್ನು ಪುರಸ್ಕರಿಸಿದವು. ರಾಷ್ಟ್ರದ ಭದ್ರತೆಗೆ ಗಂಡಾಂತರಕಾರಿಯಾದ ಬಿನಾಯಕ್ ಸೇನ್‌ರನ್ನು ಜೀವಾವಧಿ ಶಿಕ್ಷೆಗೆ ಗುರಿಪಡಿಸುವಂತೆ ತೀರ್ಪು ನೀಡಿದವು. ಈ ತೀರ್ಪು ಪ್ರಜಾಪ್ರಭುತ್ವವಾದಿಗಳನ್ನೆಲ್ಲ ಆಘಾತಕ್ಕೀಡುಮಾಡಿತು.ಡಾ. ಬಿನಾಯಕ ಸೇನ್‌ರನ್ನು ಬಂಧಿಸಿದಾಗ ಭಾರತದ ಮಾತ್ರವಲ್ಲ, ಜಗತ್ತಿನ ಮಾನವ ಹಕ್ಕು ಹೋರಾಟಗಾರರು ಒಕ್ಕೊರಲಿನಿಂದ ಪ್ರತಿಭಟಿಸಿದ್ದರು. ಅವರ ಬಿಡುಗಡೆಗೆ ಆಗ್ರಹಪಡಿಸಿದ್ದರು. ಭಾರತದ ವೈದ್ಯ ಸಮುದಾಯ ಡಾ. ಸೇನ್‌ರ ಬಿಡುಗಡೆಗೆ ಸಹಿ ಸಂಗ್ರಹ ಮಾಡಿ, ರಾಷ್ಟ್ರಾಧ್ಯಕ್ಷೆಗೆ ಮನವಿ ಸಲ್ಲಿಸಿತ್ತು. ಆದರೂ ಛತ್ತೀಸ್‌ಗಡದ ರಮಣ್ ಸಿಂಗ್ ಸರಕಾರದ ಕಲ್ಲು ಹೃದಯ ಕರಗಲಿಲ್ಲ.
ಡಾ. ಬಿನಾಯಕ್ ಸೇನ್ ಮಾಡಿದ ಅಪರಾಧವಾದರೂ ಏನು? ಬಡ ಆದಿವಾಸಿಗಳ ಪ್ರಾಣ ರಕ್ಷಣೆಗೆ ತನ್ನ ಬದುಕನ್ನು ಮೀಸಲಾಗಿಟ್ಟುದು ಅಪರಾಧವೇ? ಬತ್ತಾರ್‌ನ ಆದಿವಾಸಿ ಪ್ರದೇಶದಲ್ಲಿ ಶತಮಾನಗಳಿಂದ ನೆಲೆಸಿದ ಮೂಲ ನಿವಾಸಿಗಳನ್ನು ಅಲ್ಲಿಂದ ಎತ್ತಂಗಡಿ ಮಾಡಿ ಸಂಪದ್ಭರಿತವಾದ ಆ ಭೂಪ್ರದೇಶವನ್ನು ಬಹುರಾಷ್ಟ್ರೀಯ ಕಂಪೆನಿಗಳ ಲೂಟಿಗೆ ಅವಕಾಶ ಮಾಡಿಕೊಟ್ಟುದನ್ನು ಬಿನಾಯಕ ಸೇನ್ ಒಪ್ಪಲಿಲ್ಲವೆಂಬುದು ಅಪರಾಧವೇ ? ಇಲ್ಲವೇ ಸೆಲ್ವಾಜುಡುಂ ಎಂಬ ಗೂಂಡಾ ಪಡೆಯನ್ನು ಕಟ್ಟಿ ಆದಿವಾಸಿಗಳ ಗುಡಿಸಲಿಗೆ ಬೆಂಕಿ ಹಾಕಿ ಅವರನ್ನು ಅಲ್ಲಿಂದ ಎತ್ತಂಗಡಿ ಮಾಡಲು ಬಿಜೆಪಿ ಸರಕಾರ ಹುನ್ನಾರ ನಡೆಸಿದುದನ್ನು ಅವರು ಒಪ್ಪಲಿಲ್ಲವೆಂಬುದು ಅಪರಾಧವೇ? ಯಾವುದು ಅಪರಾಧ? ಇದೆಲ್ಲ ಅಪರಾಧವೆಂದಾದರೆ ಇಂದು ಬಿನಾಯಕ್ ಸೇನ್‌ಗೆ ಆದ ಗತಿ ನಾಳೆ ಜನತೆಯ ಪರವಾಗಿ ಧ್ವನಿಯೆತ್ತುವ ಮೇಧಾ ಪಾಟ್ಕರ್, ಅರುಂಧತಿ ರಾಯ್, ಸ್ವಾಮಿ ಅಗ್ನಿವೇಶ್ ಅವರಿಗೂ ಆಗದಿರದು.
ಜನತೆಯ ಪರವಾಗಿ ಧ್ವನಿಯೆತ್ತಿದುದನ್ನೇ ಅಪರಾಧವಾಗಿ ಬಿಂಬಿಸಿದ ಛತ್ತೀಸ್‌ಗಡ ಸರಕಾರ ಬಿನಾಯಕ್ ಸೇನ್ ನಕ್ಸಲ್ ಬೆಂಬಲಿಗರೆಂದೂ ನಕ್ಸಲೀಯ ನಾಯಕರನ್ನು ಅವರು ಭೇಟಿ ಮಾಡಿದ್ದಾರೆಂದೂ ಅವರ ಬಳಿ ಕ್ರಾಂತಿಕಾರಿ ಸಾಹಿತ್ಯ ದೊರೆಯಿತೆಂದು ಆರೋಪಿಸಿ ಅವರನ್ನು ದೇಶದ್ರೋಹಿಯೆಂದು ಹೆಸರಿಸಿ ಜೈಲಿಗೆ ಅಟ್ಟಿತು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಗಮನಾರ್ಹವಾಗಿದೆ. ಡಾ. ಬಿನಾಯಕ್ ಸೇನ್‌ರನ್ನು ಜಾಮೀನಿನ ಮೇಲೆ ಬಿಡಲು ಆಕ್ಷೇಪಣೆ ಸಲ್ಲಿಸಿದ ಛತ್ತೀಸ್‌ಗಡ ಸರಕಾರದ ವಾದವನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ. ಯಾರೋ ನಕ್ಸಲ್ ನಾಯಕರನ್ನು ಭೇಟಿ ಮಾಡುವುದು ಅಪರಾಧವಲ್ಲವೆಂದು ಅದು ಹೇಳಿದೆ. ಬಿನಾಯಕ ಸೇನ್‌ರ ಮನೆಯಲ್ಲಿ ನಕ್ಸಲ್ ಸಾಹಿತ್ಯ ಸಿಕ್ಕಿತೆಂದ ಮಾತ್ರಕ್ಕೆ ಅವರನ್ನು ರಾಷ್ಟ್ರದ್ರೋಹಿ ಎಂದು ಕರೆಯಲು ಸಾಧ್ಯವಿಲ್ಲ ಎಂದಿದೆ.
ಅನ್ಯಾಯಕ್ಕೊಳಗಾದ ಜನತೆಯ ಪರವಾಗಿ ಹೋರಾಡುವ ಮಾವೊವಾದಿಗಳ ಬಗ್ಗೆ ಸಹಾನೂಭೂತಿ ಹೊಂದಿದ ಮಾತ್ರಕ್ಕೆ ಅವರನ್ನು ನಕ್ಸಲೀಯನೆಂದು ಪರಿಗಣಿಸಬೇಕಾಗಿಲ್ಲ. ಆ ರೀತಿ ಸಹಾನೂಭೂತಿ ಹೊಂದಿದವರು ಈ ದೇಶದಲ್ಲಿ ಸಾಕಷ್ಟಿದ್ದಾರೆಂದು ಸುಪ್ರೀಂ ಕೋರ್ಟ್ ಹೇಳಿದೆ. ಸುಪ್ರೀಂ ಕೋರ್ಟ್ ನೀಡಿದ ಈ ತೀರ್ಪು ಛತ್ತೀಸ್‌ಗಡದ ಬಿಜೆಪಿ ಸರಕಾರಕ್ಕೆ ಮಾತ್ರವಲ್ಲ, ಜನತೆಯ ಚಳವಳಿಯನ್ನು ದಮನ ಮಾಡಲು ಹೊರಟಿರುವ ಕೇಂದ್ರ ಸರಕಾರಕ್ಕೂ ಕಪಾಲಮೋಕ್ಷ ಮಾಡಿದಂತಾಗಿದೆ.ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದ ಕಳೆದ ಎರಡು ವರ್ಷಗಳಿಂದ ನೊಂದು ಬಸವಳಿದಿದ್ದ ಬಿನಾಯಕ್ ಕುಟುಂಬ ನೆಮ್ಮದಿಯ ಉಸಿರು ಬಿಡುವಂತಾಗಿದೆ. ಅವರ ವಯೋವೃದ್ಧೆ ತಾಯಿ ಈ ತೀರ್ಪಿನಿಂದ ಸಂತಸಗೊಂಡಿದ್ದಾರೆ. ಅವರು ಮಾತ್ರವಲ್ಲ, ಈ ದೇಶದ ಎಲ್ಲ ಮಾನವ ಹಕ್ಕು ಹೋರಾಟಗಾರರು ಪ್ರಜಾಪ್ರಭುತ್ವದ ಆಶಯಗಳಿಗೆ ಇನ್ನೂ ಭವಿಷ್ಯವಿದೆ ಎಂದು ಈ ತೀರ್ಪಿನಿಂದ ನಂಬುವಂತಾಗಿದೆ.

ಎಸ್‌ಡಿಪಿಐ ಸದಸ್ಯತ್ವ ಅಭಿಯಾನ ಉದ್ಘಾಟನೆ

ಎಸ್‌ಡಿಪಿಐ ಸದಸ್ಯತ್ವ ಅಭಿಯಾನ ಉದ್ಘಾಟನೆ
 ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಉಡುಪಿ ಜಿಲ್ಲೆಯ ಸದಸ್ಯತ್ವ ಅಭಿಯಾನಕ್ಕೆ ಗುರುವಾರ ಉಡುಪಿಯ ರುಕ್ಮಿಣಿ ರೆಸಿ ಡೆನ್ಸಿಯಲ್ಲಿ ಚಾಲನೆ ನೀಡಲಾಯಿತು.ಕಾರ್ಯಕ್ರಮದ ಮುಖ್ಯ ಅತಿಥಿ ಗಳಾಗಿ ಎಸ್‌ಡಿಪಿಐ ರಾಜ್ಯ ಕಾರ್ಯ ಕಾರಿ ಸಮಿತಿ ಸದಸ್ಯ ಅಬ್ದುಲ್ ಮಜೀದ್ ಮಾತನಾಡಿ, ಇಂದು ದೇಶದ ಬಹು ಸಂಖ್ಯಾತರಾದ ಆದಿವಾಸಿಗಳು, ದಲಿ ತರು, ಅಲ್ಪಸಂಖ್ಯಾತರು ಅಧಿಕಾರದಿಂದ ವಂಚಿತರಾಗಿದ್ದಾರೆ. ನಮ್ಮಲ್ಲಿ ಒಡೆದು ಆಳುವ ನೀತಿಯನ್ನು ರಾಜಕೀಯ ಪಕ್ಷ ಗಳು ಅನುಸರಿಸುತ್ತಿವೆ. ದಲಿತರ ಕೇರಿಗಳಲ್ಲಿ ಯಾವುದೇ ರೀತಿಯ ಮೂಲಭೂತ ವ್ಯವಸ್ಥೆಗಳಿಲ್ಲ ಎಂದು ಆರೋಪಿಸಿದರು.

ರಾಜ್ಯ ಉಪಾಧ್ಯಕ್ಷ ಅಬ್ದುಲ್ ಲತೀಫ್ ಪುತ್ತೂರು ಉಪಸ್ಥಿತರಿದ್ದರು. ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮೀರ್ ಹಂಝ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಕೀಂ ಉಚ್ಚಿಲ ಸ್ವಾಗತಿಸಿದರು. ಉಡುಪಿ ಕ್ಷೇತ್ರ ಅಧ್ಯಕ್ಷ ಫಝಿಲ್ ಆದಿ ಉಡುಪಿ ಕಾರ್ಯಕ್ರಮ ನಿರೂಪಿಸಿದರು.

ಮಾನವ ಹಕ್ಕು ಕಾರ್ಯಕರ್ತ ಬಿನಾಯಕ ಸೇನ್‌ಗೆ ಸುಪ್ರೀಂ ಕೋರ್ಟ್

ದೇಶದ್ರೋಹ ಹಾಗೂ ನಕ್ಸಲರಿಗೆ ನೆರವಾದ ಆರೋಪದಲ್ಲಿ ಛತ್ತೀಸ್‌ಗಡದ ನ್ಯಾಯಾಲಯವೊಂದರಿಂದ ಆಜೀವ ಶಿಕ್ಷೆಗೆ ಗುರಿಯಾಗಿರುವ ಮಾನವ ಹಕ್ಕು ಕಾರ್ಯಕರ್ತ ಬಿನಾಯಕ ಸೇನ್‌ಗೆ ಸುಪ್ರೀಂ ಕೋರ್ಟ್ ಇಂದು ಜಾಮೀನು ಬಿಡುಗಡೆ ನೀಡಿದೆ. 61ರ ಹರೆಯದ ಬಿನಾಯಕ ಸೇನ್‌ಗೆ ಜಾಮೀನು ಬಿಡುಗಡೆ ನೀಡುವಲ್ಲಿ ತಾನು ಯಾವುದೇ ಕಾರಣ ನೀಡುವುದಿಲ್ಲ ಎಂದಿ ರುವ ಸುಪ್ರೀಂ ಕೋರ್ಟ್, ವಿಚಾರಣಾ ನ್ಯಾಯಾಲಯ ತನಗೆ ಸೂಕ್ತವೆನಿಸಿದ ಜಾಮೀನು ಶರ್ತಗಳನ್ನು ವಿಧಿಸಬಹುದು ಎಂದಿದೆ. ತನಗೆ ಜಾಮೀನು ನಿರಾಕರಿಸಿದ ಛತ್ತೀಸ್‌ಗಡದ ಹೈಕೋರ್ಟ್‌ನ ಆದೇಶದ ವಿರುದ್ಧ ಸೇನ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಚ್.ಎಸ್.ಬೇಡಿ ಹಾಗೂ ಸಿ.ಕೆ. ಪ್ರಸಾದ್ ರನ್ನೊಳಗೊಂಡ ಪೀಠ ಈ ಆದೇಶ ನೀಡಿದೆ.
ಸೇನ್ ವಿರುದ್ಧ ದೇಶದ್ರೋಹದ ಆರೋ ಪವನ್ನು ಬೆಂಬಲಿಸುವ ಸಾಕ್ಷಗಳೇನಾದರೂ ಇವೆಯೇ? ಎಂದು ಪೀಠ ಪ್ರಶ್ನಿಸಿದಾಗ ಸಿಬಿಐ ಪರ ನ್ಯಾಯವಾದಿ ಲಲಿತ್, ಸೇನ್ ಬಂದಿಖಾನೆಯನ್ನು ಸಂದರ್ಶಿಸಿ ನಕ್ಸಲರಾದ ಗುಹಾ ಹಾಗೂ ಇತರರೊಂದಿಗೆ ದಾಖಲೆ ಗಳನ್ನು ಹಂಚಿಕೊಂಡಿದ್ದಾರೆಂದು ಉತ್ತರಿಸಿ ದರು. ಆದಾಗ್ಯೂ, ಈ ಉತ್ತರದಿಂದ ತೃಪ್ತವಾಗದ ಪೀಠ, ಬಂದಿಖಾನೆಯಲ್ಲಿರುವ ವರನ್ನು ಭೇಟಿ ಯಾಗಲು ಹೋಗುವವರ ತಪಾಸಣೆಯನ್ನು ಅಲ್ಲಿನ ಸಿಬ್ಬಂದಿ ನಡೆಸುತ್ತಾರೆ. ಇದನ್ನು ನೋಡಿಕೊಳ್ಳುವುದಕ್ಕಾ ಗಿಯೇ ಜೈಲರ್ ಗಳಿರುತ್ತಾರೆ. ಆದುದರಿಂದ ದಾಖಲೆ ಅಥವಾ ಪತ್ರಗಳನ್ನು ಹಂಚಿಕೊ ಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದಿದೆ. ಸೇನ್‌ರ ಬಳಿ ನಕ್ಸಲ್ ಚಟುವಟಿಕೆಗಳಿಗೆ ಸಂಬಂಧಿಸಿದ ಸಾಮಾನ್ಯ ದಾಖಲೆಗಳು ಪತ್ತೆಯಾಗಿವೆ. ಆದುದರಿಂದ ಅವರನ್ನು ಅಷ್ಟರಿಂದಲೇ ದೇಶದ್ರೋಹಿ ಎನ್ನುವುದು ಸಾಧ್ಯವೇ?, ಅದು ದೇಶದ್ರೋಹದ ಆರೋಪ ಹೊರಿಸಲು ಪುರಾವೆಯಾಗುತ್ತ ದೆಯೇ? ಎಂದು ನ್ಯಾಯಪೀಠ ಪ್ರಶ್ನಿಸಿದೆ. ದೇಶದ್ರೋಹದ ಪ್ರಕರಣವಿಲ್ಲದಿದ್ದರೂ ತೀರ್ಪು ಜಾರಿಗೊಳಿಸಿರುವ ಬಗ್ಗೆ ತಾವು ಕಳವಳ ಹೊಂದಿದ್ದೇವೆಂದು ನ್ಯಾಯಮೂರ್ತಿ ಗಳು ಹೇಳಿದ್ದಾರೆ.

ವಿಶ್ವಾಸ ಮೂಡಿದೆ: ಅನಸೂಯಾ

 

ದೇಶದ್ರೋಹ ಪ್ರಕರಣದಲ್ಲಿ ತನ್ನ ಮಗನಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದ ಬಳಿಕ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ತನಗೆ ವಿಶ್ವಾಸ ಹೆಚ್ಚಿದೆಯೆಂದು ಹಕ್ಕು ಕಾರ್ಯಕರ್ತ ಬಿನಾಯಕ ಸೇನ್‌ರ ಕಾಯಿಲೆ ಪೀಡಿತ ತಾಯಿ ಹೇಳಿದ್ದಾರೆ.
ಛತ್ತೀಸ್‌ಗಡದ ಹೈಕೋರ್ಟ್ ತನ್ನ ಮಗನಿಗೆ ಜಾಮೀನು ನಿರಾಕರಿಸಿದಾಗ ತಾನು ನೈತಿಕ ಹಿನ್ನಡೆ ಕಂಡಿದ್ದೆ. ತನ್ನ ಮಗನನ್ನು ಕಾಣಲಾರೆನೆಂದು ಭಾವಿಸಿದ್ದೆ. ಆದರೆ, ಈಗ ತನಗೆ ನ್ಯಾಯಾಂಗದ ಮೇಲೆ ಮತ್ತೆ ವಿಶ್ವಾಸ ಮೂಡಿದೆಯೆಂದು ನಾಡಿಯಾ ಜಿಲ್ಲೆಯ ತನ್ನ ನಿವಾಸದಲ್ಲಿ ಬಿನಾಯಕ ಸೇನರ ತಾಯಿ ಅನಸೂಯಾ ಸೇನ್ ನುಡಿದರು.
ಇಂದು ಬಂಗಾಳಿ ಹೊಸ ವರ್ಷದ ಮೊದಲ ದಿನವೇ ಶುಭವಾರ್ತೆ ಬಂದುದಕ್ಕಾಗಿ ಅತೀವ ಸಂತೋಷ ವ್ಯಕ್ತಪಡಿಸಿದ ಅವರು ‘ಸತ್ಯಮೇವ ಜಯತೇ’ ಎಂದುದ್ಗರಿಸಿದರು.


ಖುರ್ಷಿದ್ ಸ್ವಾಗತದೇಶದ್ರೋಹದ ಆರೋಪದಲ್ಲಿ ಆಜೀವ ಶಿಕ್ಷೆಗೆ ಗುರಿಯಾಗಿರುವ ಮಾನವ ಹಕ್ಕು ಕಾರ್ಯಕರ್ತ ಬಿನಾಯಕ ಸೇನ್‌ಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿರುವುದನ್ನು ಅಲ್ಪಸಂಖ್ಯಾತ ವ್ಯವಹಾರ ಸಚಿವ ಸಲ್ಮಾನ್ ಖುರ್ಷಿದ್ ಸ್ವಾಗತಿಸಿದ್ದಾರೆ.
ಜಾಮೀನು ಮಂಜೂರಾದ ಪರಿಸ್ಥಿತಿಯನ್ನು ಸ್ವಾಗತಿಸಬೇಕೆನ್ನುವುದು ತನ್ನ ಅಭಿಪ್ರಾಯವಾಗಿದೆಯೆಂದು ಅವರು ಪತ್ರಕರ್ತರೊಡನಿಂದು ಹೇಳಿದರು.

ಸೇನರನ್ನು ನಡೆಸಿಕೊಂಡ ರೀತಿ ಸರಿಯಲ್ಲವೆಂಬ ಸಾಮಾನ್ಯ ಅಭಿಪ್ರಾಯವೀಗ ಬಲಗೊಂಡಿದೆಯೆಂದು ಖುರ್ಶಿದ್ ನುಡಿದರು.
ಮಾವೊವಾದಿಗಳ ಗಂಭೀರ ಪಿಡುಗಿಗೆ ಸಂಬಂಧಿಸಿದಂತೆ ದೇಶದ ಆಂತರಿಕ ಭದ್ರತೆಯ ವಿಚಾರದಲ್ಲಿ ರಾಜಿಯಾಗಬಾರದೆಂಬ ಇನ್ನೊಂದು ವ್ಯಾಪಕ ಅಭಿಪ್ರಾಯವಿದ್ದರೂ, ಸೇನ್‌ಗೆ ಜಾಮೀನು ನೀಡಿರುವುದನ್ನು ಸ್ವಾಗತಿಸಲೇ ಬೇಕಾಗಿದೆಯೆಂದು ಅವರು ಹೇಳಿದರು.
ಸೇನ್ ಜಾಮೀನಿನಲ್ಲಿ ಹೊರಬಂದ ಬಳಿಕ ಅವರು ಏನಾದರೂ ಹೇಳಲು ಇಚ್ಛಿಸಬಹುದು ಹಾಗೂ ಜನರಿಗೆ ಇನ್ನೊಂದು ವಿಚಾರವನ್ನು ಕೇಳುವ ಅವಕಾಶ ದೊರೆಯಬಹುದೆಂದು ಖುರ್ಶಿದ್ ಅಭಿಪ್ರಾಯಿಸಿದರು.

ಚಿದಂಬರಂಗೆ ಸಂತಸ ಮಾನವ ಹಕ್ಕು ಕಾರ್ಯಕರ್ತ ಬಿನಾಯಕ ಸೇನ್‌ಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿರುವುದಕ್ಕೆ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಸಂತಸ ವ್ಯಕ್ತಪಡಿಸಿದ್ದಾರೆ.
ಬಿನಾಯಕ ಸೇನ್ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದಿರುವುದನ್ನು ಕೇಳಿ ತನಗೆ ಸಂತೋಷವಾಗಿದೆ. ಕೆಳಗಿನ ನ್ಯಾಯಾಲಯದ ಆದೇಶದಿಂದ ತೃಪ್ತರಾಗದವರು ಮೇಲಿನ ನ್ಯಾಯಾಲಯದಲ್ಲಿ ಪರಿಹಾರ ಪಡೆಯಲು ಸಾಧ್ಯವೆಂಬುದು ತನ್ನ ನಂಬುಗೆಯಾಗಿದೆ ಎಂದು ಸುಪ್ರೀಂ ಕೋರ್ಟ್‌ನ ಆದೇಶದ ಕುರಿತು ಪ್ರತಿಕ್ರಿಯಿಸುತ್ತ ಅವರು ಹೇಳಿದರು.

ದೇಶದ್ರೋಹ ಹಾಗೂ ನಕ್ಸಲರಿಗೆ ನೆರವು ನೀಡಿದ ಆರೋಪದಲ್ಲಿ ಸೇನ್‌ಗೆ ಜೀವಾವಧಿ ಶಿಕ್ಷೆ ಘೋಷಣೆಯಾದೊಡನೆಯೇ, ಈ ತೀರ್ಪು ಅನೇಕರಿಗೆ ಅತೃಪ್ತಿ ಉಂಟು ಮಾಡಿರಬಹುದು. ಆದರೆ, ಮೇಲ್ಮನವಿ ಸಲ್ಲಿಸುವ ಮೂಲಕ ಅದನ್ನು ಸರಿಪಡಿಸುವ ಅವಕಾಶವಿದೆಯೆಂದು ಚಿದಂಬರಂ ಹೇಳಿದ್ದರು.



ಗುರುವಾರ, ಏಪ್ರಿಲ್ 14, 2011

‘‘ಬನ್ನಿ ಸಾರ್ ಬನ್ನಿ.. ಅಂಬೇಡ್ಕರ್‌ರ ಜೈ ಭೀಮ್ ವಂದನೆಗಳು.. ಬಿರಿಯಾನಿ ತಿನ್ನಿ.. ಸಂವಿಧಾನದ ಮೇಲೆ ನಂಬಿಕೆಯುಳ್ಳ ಜನರಿಗೆಲ್ಲ ಎಪ್ರಿಲ್ 14 ವಿಶೇಷವಾದ ದಿನ

‘‘ಬನ್ನಿ ಸಾರ್ ಬನ್ನಿ.. ಅಂಬೇಡ್ಕರ್‌ರ ಜೈ ಭೀಮ್ ವಂದನೆಗಳು.. ಬಿರಿಯಾನಿ ತಿನ್ನಿ.. ಸಂವಿಧಾನದ ಮೇಲೆ ನಂಬಿಕೆಯುಳ್ಳ ಜನರಿಗೆಲ್ಲ ಎಪ್ರಿಲ್ 14 ವಿಶೇಷವಾದ ದಿನ. ನಿಮ್ಮ ಮನೆಯಲ್ಲಿ ಹಬ್ಬ ಆಚರಣೆ ಮಾಡಿ, ಸಂವಿಧಾನ ಶಿಲ್ಪಿಯ ಜನ್ಮದಿನ ಇದು ಬನ್ನಿ...’’ ಹೀಗೆಂದು ದಸಂಸ ಕಾರ್ಯಕರ್ತರು ಸಾರ್ವಜನಿಕರನ್ನು ಕರೆದು ಅವರ ಕೈಗೊಂದು ಬಿಸಿ-ಬಿಸಿ ದನದ ಮಾಂಸದ ಬಿರಿಯಾನಿ ಪ್ಯಾಕೆಟ್ ನೀಡುತ್ತಿದ್ದುದು ನಿಜಕ್ಕೂ ಅಚ್ಚರಿ. ಇದು ಬೆಂಗಳೂರಿನ ಪುರಭವನದ ಮುಂಭಾಗದಲ್ಲಿ ಗುರುವಾರ ಕಂಡುಬಂದ ದೃಶ್ಯ. ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರ ಜಯಂತಿ ಯನ್ನು ವಿಚಾರ ಸಂಕಿರಣ, ಸಂವಾದ, ಜನಾಂದೋಲನ, ಪ್ರತಿಭಟನೆ, ಮೆರವಣಿಗೆ, ಜಾಥಾ, ಹಾರ-ತುರಾಯಿ, ಪುಷ್ಪ ನಮನದೊಂದಿಗೆ ಆಚರಿಸುವುದನ್ನು ಕಂಡಿದ್ದೇವೆ.
ಆದರೆ, ಎನ್.ಮೂರ್ತಿ ನೇತೃತ್ವದ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಬಿಜೆಪಿ ಸರಕಾರ ಅಂಬೇಡ್ಕರ್‌ರನ್ನು ದೇವಮಾನವನ ನ್ನಾಗಿಸಿ ಜನಿವಾರ ತೊಡಿಸಲು ಹೊರಟಿದೆ ಎಂದು ಆರೋಪಿಸಿ, ಮಾಂಸ ಮಾರಾಟ ನಿಷೇಧ ಖಂಡಿಸಿ ದನದ ಮಾಂಸದ ಬಿರಿಯಾನಿ ತಿಂದು ವಿಶಿಷ್ಟ ರೀತಿಯಲ್ಲಿ ಆಚರಿಸಿತು.
 ನೂರಾರು ಕಾರ್ಯಕತರು ಪುರಭವ ನದ ಮುಂಭಾಗದಲ್ಲಿ ಒಂದು ಸಾವಿರಕ್ಕೂ ಹೆಚ್ಚು ದನದ ಮಾಂಸದ ಬಿರಿಯಾನಿ ಪ್ಯಾಕೆಟ್‌ಗಳನ್ನು ಹಂಚಿದರು. ಇದೇ ಸಂದರ್ಭದಲ್ಲಿ ಕಾರ್ಯಕರ್ತರು ರಾಜ್ಯ ಬಿಜೆಪಿ ಸರಕಾರದ ಅಂಬೇಡ್ಕರ್ ತತ್ತ್ವಾದರ್ಶ ಹಾಗೂ ದಲಿತ ವಿರೋಧಿ ನೀತಿಗಳನ್ನು ಖಂಡಿಸಿ ಘೋಷಣೆ ಕೂಗಿದರು. ಗೋಹತ್ಯೆ ನಿಷೇಧ ಮಸೂದೆ ಜಾರಿಗೆ ತರುವ ಮೂಲಕ ದಲಿತರು ತಿನ್ನುವ ಆಹಾರದ ಹಕ್ಕನ್ನು ಮನುವಾದಿ ಸರಕಾರ ಕಸಿದುಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಸಂಸ ರಾಜ್ಯಾಧ್ಯಕ್ಷ ಎನ್.ಮೂರ್ತಿ, ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳು ತಿನ್ನುವ ಮಾಂಸಾ ಹಾರವನ್ನೇ ನಿಷೇಧಿಸಿದ ಬಿಜೆಪಿ ಸರಕಾರಕ್ಕೆ ಅಂಬೇಡ್ಕರ್ ಜನ್ಮ ದಿನವನ್ನು ಆಚರಣೆ ಮಾಡುವ ನೈತಿಕತೆ ಇಲ್ಲ ಎಂದು ಆಕ್ರೋಶದಿಂದ ನುಡಿದರು.
ಅಂಬೇಡ್ಕರ್‌ರನ್ನು ದೇವಮಾನವ ನನ್ನಾಗಿಸಿ ಜನಿವಾರ ತೊಡಿಸಲು ಬಿಜೆಪಿ ಮುಂದಾಗಿದ್ದು, ಅವರ ವಿಚಾರಗಳಿಗೆ ಮನುವಾದದ ಬಣ್ಣ ಲೇಪನ ಮಾಡುತ್ತಿದೆ ಎಂದು ಕಿಡಿಗಾರಿದ ಮೂರ್ತಿ, ಹಿಂದೂ ಧರ್ಮದ ವಿರುದ್ಧವಿದ್ದ ಅಂಬೇಡ್ಕರ್‌ರ ಹೆಸರಿನಲ್ಲಿ ಹಿಂದುತ್ವದ ವೈಭವೀಕರಣ ಮಾಡಲಾಗುತ್ತಿದೆ ಎಂದು ಆಪಾದಿಸಿದರು. ಎಪ್ರಿಲ್ 14 ಅಂಬೇಡ್ಕರ್ ಜಯಂತಿ ಮತ್ತು ಡಿಸೆಂಬರ್ 6 ಅವರ ಪರಿನಿರ್ವಾಣ ದಿನ ದಲಿತರಿಗೆ ಪವಿತ್ರ. ಆದರೆ, ಬಿಜೆಪಿ ಸರಕಾರ ಅಂಬೇಡ್ಕರ್ ರನ್ನು ಹಿಂದೂ ಧರ್ಮಕ್ಕೆ ಮತಾಂತರ ಮಾಡಲು ಹೊರಟಿದೆ ಎಂದು ಆರೋಪಿಸಿದ ಅವರು, ಅಂಬೇಡ್ಕರ್ ಜನ್ಮದಿನಕ್ಕೆ ದಲಿತರಿಗೆ ಆಹ್ವಾನ ನೀಡಿಲ್ಲ ಎಂದು ದೂರಿದರು. ಆನಂತರ ಪುರಭವನದಿಂದ ವಿಧಾನಸೌಧದ ವರೆಗೆ ದ್ವಿಚಕ್ರ ವಾಹನ ರ್ಯಾಲಿ ನಡೆಸಲಾಯಿತು. ದಲಿತ ಮುಖಂಡರಾದ ನರಸಿಂಹಮೂರ್ತಿ, ಸುಬ್ರಹ್ಮಣ್ಯ ಹಾಗೂ ಶಂಕರ ಬಾಬು ಮತ್ತಿತರರು ಪಾಲ್ಗೊಂಡಿದ್ದರು.

ಬುಧವಾರ, ಏಪ್ರಿಲ್ 13, 2011

ಜೆಡಿಎಸ್ ಕಪಟ ಜಾತ್ಯತೀತ ಪಕ್ಷ: ಅಬ್ದುಲ್ ಮಜೀದ್ ಕೊಡ್ಲಿಪೇಟೆ

ಬೆಂಗಳೂರು: ಜೆಡಿಎಸ್ ಒಂದು ಕಪಟ ಜಾತ್ಯತೀತ ಪಕ್ಷವಾಗಿದೆ. ಇದನ್ನು ಜಾತ್ಯಾತೀತ ಪಕ್ಷವೆಂದು ಕರೆದುಕೊಳ್ಳುವ ಎಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ಢೋಂಗಿ ಜಾತ್ಯತೀತವಾದಿಗಳು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕೊಡ್ಲಿಪೇಟೆ ಕಿಡಿಗಾರಿದರು. ಅವರು ಬೆಂಗಳೂರಿನ ಕ್ವೀನ್ಸ್ ರೋಡ್‌ನಲ್ಲಿರುವ ದಾರುಸ್ಸಲಾಮ್ ಹಾಲ್‌ನಲ್ಲಿ ಪಕ್ಷದ ರಾಜ್ಯ ಮಟ್ಟದ ಸದಸ್ಯತ್ವ ಅಭಿಯಾನವನ್ನು ಉದ್ಘಾಟಿಸುತ್ತಾ ಮಾತನಾಡುತ್ತಿದ್ದರು.

ಜಾತ್ಯತೀತವೆಂದು ಕರೆದುಕೊಳ್ಳುವ ಜೆಡಿಎಸ್ ಕೋಮುವಾದಿ ಬಿಜೆಪಿಯೊಂದಿಗೆ ಸೇರಿ ಆಡಳಿತ ನಡೆಸಿದ್ದು ಇವರ ಮೋಸದಾಟಕ್ಕೆ ಸಾಕ್ಷಿಯಾಗಿದೆ. ಬಿಜೆಪಿ ಅಧಿಕಾರಕ್ಕೆ ಬರಲು ನೇರ ಕಾರಣ ಜೆಡಿಎಸ್ ಆಗಿದೆ. ಹಿಂದೊಮ್ಮೆ ಪತ್ರಕರ್ತರು ಜಾತ್ಯತೀತತೆಯ ಬಗ್ಗೆ ಕೇಳಿದ್ದಕ್ಕೆ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ತನಗೆ ಜಾತ್ಯತೀತ ಪದದ ಅರ್ಥ ಗೊತ್ತಿಲ್ಲ ಎಂದಿದ್ದರು. ಇಂತಹ ಮುಖ್ಯಮಂತ್ರಿ ಈ ರಾಜ್ಯವನ್ನು ಆಳಿದ್ದು ಕರ್ನಾಟಕದ ದುರಂತವಾಗಿದೆ ಎಂದು ಅವರು ಗುಡುಗಿದರು.
ಬಿಜೆಪಿಯೊಂದಿಗೆ ಸಮ್ಮಿಶ್ರ ಸರಕಾರ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ದೆಹಲಿಯಲ್ಲಿ ಪ್ರಧಾನ ಮಂತ್ರಿ ಕರೆದಿದ್ದ ಮುಖ್ಯಮಂತ್ರಿಗಳ ಸಭೆಯಲ್ಲಿ ಕರ್ನಾಟಕದ ಮದರಸಗಳಲ್ಲಿ ಭಯೋತ್ಪಾದನೆ ನಡೆಯುತ್ತಿದೆಯೆಂದು ಹೇಳಿಕೆ ನೀಡುವ ಮೂಲಕ ಕುಮಾರಸ್ವಾಮಿ ಕೋಮುವಾದದಲ್ಲಿ ತಾನೇನು ಕಡಿಮೆಯಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಅವರು ಟೀಕಿಸಿದರು.
ಜೆಡಿಎಸ್‌ನ ವರಿಷ್ಠ ದೇವೇಗೌಡ ತಾನು ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟುತ್ತೇನೆ ಎಂದು ಆಗಾಗ್ಗೆ ಹೇಳುತ್ತಿರುತ್ತಾರೆ. ಅವರು ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟುವ ಅಗತ್ಯವಿಲ್ಲ. ಮುಸಲ್ಮಾನರ ಬಗ್ಗೆ ನಿಜವಾದ ಕಾಳಜಿಯಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ 50 ಮುಸ್ಲಿಮರಿಗೆ ಜೆಡಿಎಸ್‌ನಿಂದ ಟಿಕೆಟ್ ನೀಡಲಿ ಮತ್ತು ಹಾಸನ ನಗರದಲ್ಲಿ ಮುಸ್ಲಿಮ್ ಅಭ್ಯರ್ಥಿಯನ್ನು ನಿಲ್ಲಿಸಿ ಗೆಲ್ಲಿಸಲಿ ಎಂದು ಅವರು ಸವಾಲೆಸೆದರು.
ಮುಸಲ್ಮಾನರ ಪರ ಎನ್ನುವ ಜೆಡಿಎಸ್ ಕಳೆದ ಜಿಲ್ಲಾ ಪಂಚಾಯತ್ ಚುನಾವಣೆಯ ವೇಳೆ ಹಾಸನ ಜಿಲ್ಲೆಯ 40 ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಒಬ್ಬ ಮುಸ್ಲಿಮ್ ಅಭ್ಯರ್ಥಿಗೂ ಟಿಕೆಟ್ ನೀಡಿಲ್ಲ. ಇದು ಇವರ ಢೋಂಗಿ ಜಾತ್ಯತೀತವಾದಕ್ಕೆ ಸಾಕ್ಷಿ. ಮುಸ್ಲಿಮರ ಮತ ಪಡೆಯುವುದಕ್ಕಾಗಿ ಜಾತ್ಯತೀತ ಮುಖವಾಡವನ್ನು ಹಾಕಿಕೊಂಡಿರುವ ಇಂತಹ ಎಲ್ಲಾ ರಾಜಕಾರಣಿಗಳನ್ನೂ ತಿರಸ್ಕರಿಸಬೇಕೆಂದು ಅವರು ಕರೆಯಿತ್ತರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಹನ್ನಾನ್ ಮಾತನಾಡಿ, ಇಷ್ಟರ ತನಕ ನಾವು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ಗಳ ಬಾಡಿಗೆ ಮನೆಗಳಲ್ಲಿದ್ದೆವು. ಈ ಬಾಡಿಗೆ ಮನೆಯ ಯಜಮಾನರು ಬಾಡಿಗೆದಾರರನ್ನು ಯಾವಾಗಲಾದರೂ ಅಟ್ಟುವ ಪರಿಸ್ಥಿತಿಯಿತ್ತು. ಇದೀಗ ಶೋಷಿತ, ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತ ವರ್ಗದವರು ಸೇರಿಕೊಂಡು ಎಸ್‌ಡಿಪಿಐ ಎಂಬ ಸ್ವಂತ ಮನೆಯೊಂದನ್ನು ಕಟ್ಟಿಕೊಂಡಿದ್ದೇವೆ. ಈ ಪಕ್ಷದಲ್ಲಿ ಜನರೇ ಪ್ರಭುಗಳು. ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ಈ ಪಕ್ಷವು ಸಂವಿಧಾನದ ಜಾರಿಗೆ ಬದ್ಧವಾಗಿದೆ ಎಂದರು.
ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಡಾ ಆವಾಝ್ ಶರೀಫ್ ಮಾತನಾಡಿ, ಪಕ್ಷ ಪ್ರಾರಂಭವಾದ ಹಿನ್ನೆಲೆ, ಪಕ್ಷ ನಡೆಸಿಕೊಂಡು ಬಂದ ಹೋರಾಟ ಮತ್ತು ಚುನಾವಣಾ ಕಣದಲ್ಲಿ ಪಕ್ಷ ಮಾಡಿದ ಸಾಧನೆ ಇತ್ಯಾದಿಗಳನ್ನು ವಿವರಿಸಿದರು.
ರಾಜಕೀಯದಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಮಾತನಾಡುತ್ತಾ ಎಸ್‌ಡಿಪಿಐ ರಾಜ್ಯ ಉಪಾಧ್ಯಕ್ಷೆ ಮತ್ತು ಬಿಬಿಎಂಪಿ ಕಾರ್ಪೊರೇಟರ್ ಪ್ರೊ ನಾಝ್ನೀನ್ ಬೇಗಂ,  ರಾಜಕೀಯ ಆಗುಹೋಗುಗಳಲ್ಲಿ ಮಹಿಳೆಯರು ಸಕ್ರಿಯವಾಗಬೇಕು. ಸರಕಾರ ಮಹಿಳೆಯರಿಗಾಗಿ ಮೀಸಲಿಟ್ಟ ಸ್ಥಾನಗಳ ಪ್ರಯೋಜನವನ್ನು ಕೇವಲ ಉನ್ನತ ಜಾತಿಗಳ ಮಹಿಳೆಯರು ಪಡೆಯುವಂತಾಗಿದೆ. ಆದ್ದರಿಂದ ಬಡ ಜನರ, ಶೋಷಿತ ಗ್ರಾಮೀಣ ಪ್ರದೇಶಗಳ ಮಹಿಳೆಯರ ನೈಜ ಸಮಸ್ಯೆಗಳ ಅರಿವಿರುವ ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಮಹಿಳಾ ಪ್ರತಿನಿಧಿಗಳು ಸ್ಥಳೀಯ ಸಂಸ್ಥೆಗಳಲ್ಲಿ, ವಿಧಾನಸಭೆಗಳಲ್ಲಿ, ಪಾರ್ಲಿಮೆಂಟ್‌ನಲ್ಲಿ ಪ್ರಾತನಿಧ್ಯ ಪಡೆಯಬೇಕು ಎಂದರು.
ಎಸ್‌ಡಿಪಿ ರಾಜ್ಯ ಕಾರ್ಯದರ್ಶಿ ಹೇಮಲತಾ ಮಾತನಾಡಿ ಎಸ್‌ಡಿಪಿಐ ನಿಜವಾದ ಜಾತ್ಯತೀತ ಪಕ್ಷವಾಗಿದೆ. ಇಲ್ಲಿ ಮಹಿಳೆಯರನ್ನು, ದಲಿತರನ್ನು, ಅಲ್ಪಸಂಖ್ಯಾತರನ್ನು ವಿವಿಧ ಸೆಲ್‌ಗಳಾಗಿ ವಿಂಗಡಿಸದೆ, ಅಧಿಕಾರದಲ್ಲಿ ಇವರಿಗೆ ಸಮಾನ ಅವಕಾಶವನ್ನು ನೀಡಲಾಗುತ್ತದೆ ಎಂದರು.
ಸಿರಾಜ್, ಅಫ್ಸರ್ ಪಾಶ, ಬೆಂಗಳೂರು ಜಿಲ್ಲಾಧ್ಯಕ್ಷ ಇರ್ಫಾನ್ ಇಬ್ರಾಹೀಂ ಮತ್ತು ಜಿಲ್ಲೆಯ ಇತರ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
SDPI membership campaign in bangalore
SDPI membership campaign in bangalore
SDPI membership campaign in bangalore
SDPI membership campaign in bangalore
SDPI membership campaign in bangalore
SDPI membership campaign in bangalore
SDPI membership campaign in bangalore
SDPI membership campaign in bangalore
 

ಮಡಿಕೇರಿ: ಎಸ್‌ಡಿಪಿಐ ವತಿಯಿಂದ ಅಮಾಯಕರ ಬಂಧನದ ಬಗ್ಗೆ ಜಾಗೃತಿ ಸಭೆ

ಮಡಿಕೇರಿ: ‘ಅಮಾಯಕರನ್ನು ಬಿಡುಗಡೆಗೊಳಿಸಿ, ಅಪರಾಧಿಗಳನ್ನು ಶಿಕ್ಷಿಸಿ, ಭ್ರಷ್ಟಾಚಾರವನ್ನು ತೊಲಗಿಸಿ’ ರಾಷ್ಟ್ರೀಯ ಅಭಿಯಾನದ ಅಂಗವಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾವು ಇತ್ತೀಚೆಗೆ ಮಡಿಕೇರಿಯಲ್ಲಿ ಜಾಗೃತಿ ಸಭೆೊಂದನ್ನು ನಡೆಸಿತು.

ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಫಝಲುಲ್ಲಾ, ಪ್ರಧಾನ ಕಾರ್ಯದರ್ಶಿ ಅಮೀನ್ ಮುಹ್ಸಿನ್, ದಲಿತ ನಾಯಕ ನಿರ್ವಾಣಪ್ಪ, ಸಿದ್ದಾಪುರ ಗ್ರಾಮ ಪಂಚಾಯತ್ ಸದಸ್ಯ ಶೌಕತ್ ಅಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ದೇಶದಲ್ಲಿ ನಡೆಯುತ್ತಿರುವ ಹಲವು ಬಾಂಬ್ ಸ್ಫೋಟಗಳಲ್ಲಿ ಅಮಾಯಕ ಯುವಕರ ಬಂಧನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು, ಅವರ ಬಿಡುಗಡೆಗಾಗಿ ಒತ್ತಾಯಿಸಲು ಮತ್ತು ದೇಶದಲ್ಲಿ ಅಪಾಯಕಾರಿಯಾಗಿ ಬೆಳೆಯುತ್ತಿರುವ ಭ್ರಷ್ಟಾಚಾರಗಳ ವಿರುದ್ಧ ಜನರಲ್ಲಿ ಎಚ್ಚರಿಕೆ ಮೂಡಿಸುವುದಕ್ಕಾಗಿ ಪಕ್ಷವು ದೇಶಾದ್ಯಂತ ಈ ರಾಷ್ಟ್ರೀಯ ಅಭಿಯಾನವನ್ನು ನಡೆಸುತ್ತಿದೆ.
 
 

ಶಿರಾ: ಎಸ್‌ಡಿಪಿಐ ಸಮಿತಿ ರಚನೆ

ತುಮಕೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾವು ತುಮಕೂರಿನ ಶಿರಾ ತಾಲೂಕಿನಲ್ಲಿ ತನ್ನ ಹೊಸ ಅಸೆಂಬಿ ಕಮಿಟಿಯನ್ನು ಸ್ಥಾಪಿಸಿದೆ.
ಪಕ್ಷವು ಎಪ್ರಿಲ್ 11ರಂದು ಈ ಬಗ್ಗೆ ತಾಲೂಕಿನ ತಹಾಶೀಲ್ದಾರಿಗೆ ಪತ್ರವೊಂದನ್ನು ಸಲ್ಲಿಸಿದೆ
SDPI tumkur

ದನದ ವ್ಯಾಪಾರಿ ದಯಾನಂದ ಶೆಟ್ಟಿ ಹತ್ಯೆ

ದನದ ವ್ಯಾಪಾರಿಯ ಕೊಲೆ: ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಧರಣಿ

ಉಡುಪಿ, : ಕುಂದಾಪುರ ತಾಲೂಕಿನ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಆರ್ಡಿ ಗ್ರಾಮದ ದನದ ವ್ಯಾಪಾರಿ ದಯಾನಂದ ಶೆಟ್ಟಿ ಹತ್ಯೆ ಕುರಿತು ಶೀಘ್ರ ತನಿಖೆ ಹಾಗೂ ಆರೋಪಿಗಳನ್ನು ಬಂಧಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಮುಂದೆ ಧರಣಿ ನಡೆಸಲಾಯಿತು.

ಧರಣಿನಿರತರನ್ನುದ್ದೇಶಿಸಿ ಮಾತನಾಡಿದ ವೇದಿಕೆಯ ಜಿಲ್ಲಾಧ್ಯಕ್ಷ ಹಾಗೂ ಹಿರಿಯ ಚಿಂತಕ ಜಿ.ರಾಜಶೇಖರ್, ಬಡರೈತರು ಜಾನುವಾರು ಸಾಕುವುದು ಹಾಗೂ ಮಾರುವುದು ಅನಿವಾರ್ಯವಾಗಿದೆ. ಇದು ಜೀವನೋಪಾ ಯದ ಪ್ರಶ್ನೆಯೇ ಹೊರತು ಧರ್ಮಕ್ಕೆ ಸಂಬಂಧಿಸಿದ್ದಲ್ಲ ಎಂದು ತಿಳಿಸಿದರು.

ಕೋಮುವಾದಿ ಶಕ್ತಿಗಳು ಕೆಲವು ವಾಸ್ತವವನ್ನು ಮುಚ್ಚಿಹಾಕಿ ದನದ ವ್ಯಾಪಾರವನ್ನು ಮುಸ್ಲಿಮರು ಮಾತ್ರ ಮಾಡುತ್ತಿದ್ದಾರೆಂಬುದಾಗಿ ಹೇಳುತ್ತಿದ್ದಾರೆ. ಆದರೆ ಈ ವೃತ್ತಿಯನ್ನು ಎಲ್ಲ ಧರ್ಮದವರು ಕೂಡ ಮಾಡುತ್ತಿದ್ದಾರೆ ಎಂದ ಅವರು, ದಯಾನಂದ ಶೆಟ್ಟಿ ಕೊಲೆ ಪ್ರಕರಣದಲ್ಲಿ ಸಂಘಪರಿವಾರ ಮಾತ್ರವಲ್ಲದೆ ಶಂಕರನಾರಾಯಣ ಪೊಲೀಸರು ಕೂಡ ಶಾಮೀಲಾಗಿರುವುದು ಕಂಡು ಬರುತ್ತದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಯೋಗ್ಯ ಕಾರಣಗಳಿಗೆ ಹಾಗೂ ಸೂಕ್ತ ದಾಖಲೆಗಳೊಂದಿಗೆ ಜಾನುವಾರು ಸಾಗಾಟ ಮಾಡುವವರ ಮೇಲೆ ಪದೇ ಪದೇ ಹಲ್ಲೆಗಳು ನಡೆಯುತ್ತಲೇ ಇವೆ. 2006ರಲ್ಲಿ ಕಾವ್ರಾಡಿಯ ಪಾಟಳಿ ಕೃಷ್ಣಯ್ಯ ಕೊಲೆ ಪ್ರಕರಣದಲ್ಲಿ ಯಾವುದೇ ಆರೋಪಿಗಳಿಗೆ ಶಿಕ್ಷೆ ಆಗಿಲ್ಲ. ಇದರಲ್ಲಿ ಹಾಗೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ. ಧರಣಿಯಲ್ಲಿ ವೇದಿಕೆಯ ಉಪಾಧ್ಯಕ್ಷ ಫಣಿರಾಜ್, ದಸಂಸ ಮುಖಂಡ ಜಯನ್ ಮಲ್ಪೆ, ಅಲ್ಪಸಂಖ್ಯಾತ ವೇದಿಕೆ ಜಿಲ್ಲಾಧ್ಯಕ್ಷ ಅಬ್ದುಲ್ ಖತೀಬ್ ರಶೀದ್, ಕರ್ನಾಟಕ ಕ್ರೈಸ್ತ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಲೂವಿಸ್ ಲೋಬೊ, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮೀರ್ ಹಂಝಾ, ದಿನಕರ ಬೆಂಗ್ರೆ, ಪ್ರೊ.ಸಿರಿಲ್ ಮಥಾಯಿಸ್, ಇದ್ರೀಸ್ ಹೂಡೆ ಮತ್ತಿತರರು ಉಪಸ್ಥಿತರಿದ್ದರು.

ಸೋಮವಾರ, ಏಪ್ರಿಲ್ 11, 2011

ಉಳ್ಳಾಲದ ಮಾಸ್ತಿಕಟ್ಟಾ ಜಂಕ್ಷನ್‌ನಲ್ಲಿ ರವಿವಾರ ಸಮಸ್ತ ಸುನ್ನಿ ಸಮ್ಮೇಳನ




ಎಸ್ಕೆಎಸ್ಸೆಸೆಫ್ ಉಳ್ಳಾಲ ವಲಯ ಸಮಿತಿಯ ವತಿಯಿಂದ ಉಳ್ಳಾಲದ ಮಾಸ್ತಿಕಟ್ಟಾ ಜಂಕ್ಷನ್‌ನಲ್ಲಿ ರವಿವಾರ ಸಮಸ್ತ ಸುನ್ನಿ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಮಂಗಳೂರು ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್‌ರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಪಟ್ಟಿಕ್ಕಾಡ್ ಜಾಮೀಯಾ ನೂರಿಯಾ ಅರೇಬಿಕ್ ಕಾಲೇಜಿನ ಪ್ರಾಂಶುಪಾಲ ಕೆ. ಅಲಿಕುಟ್ಟಿ ಉಸ್ತಾದ್ ಉದ್ಘಾಟಿಸಿದರು. ಕೇಂದ್ರ ಹಜ್ ಸಮಿತಿಯ ಸದಸ್ಯ ಅಬ್ದುಸ್ಸಮದ್ ಪೂಕೋಟೂರು ಪ್ರಧಾನ ಭಾಷಣ ಮಾಡಿದರು.

ಗುರುವಾರ, ಏಪ್ರಿಲ್ 07, 2011

കരുനാഗപ്പള്ളി SDPI സ്ഥാനാര്‍ഥി



ಮಕ್ಕಾ ಮಸೀದಿ, ಅಜ್ಮೀರ್ ದರ್ಗಾ ಮತ್ತು ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣಗಳ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೈಗೆತ್ತಿಕೊಂಡಿದೆ

ಕೇಸರಿ ಭಯೋತ್ಪಾದನಾ ಜಾಲದ ಕೈವಾಡವಿದೆ ಎಂದು ಶಂಕಿಸಲಾಗಿರುವ ಮಕ್ಕಾ ಮಸೀದಿ, ಅಜ್ಮೀರ್ ದರ್ಗಾ ಮತ್ತು ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣಗಳ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೈಗೆತ್ತಿಕೊಂಡಿದೆ. ಪ್ರಕರಣಗಳಿಗೆ ಸಂಬಂಧಿಸಿದ ಶಂಕಿತರ ಪಾತ್ರದ ಕುರಿತು ಎನ್‌ಐಎ ತನಿಖೆ ಆರಂಭಿಸಿದೆ ಎಂದು ಮೂಲಗಳು ಇಂದು ಹೇಳಿವೆ. ತನಿಖೆಯನ್ನು ಹಸ್ತಾಂತರಿಸುವ ಕುರಿತು ಕೇಂದ್ರ ಗೃಹ ಸಚಿವಾಲಯಕ್ಕೆ ಸಿಬಿಐ ಮತ್ತು ರಾಜಸ್ಥಾನ ಸರಕಾರ ಸಮ್ಮತಿ ಸೂಚಿಸಿದ ಬಳಿಕ ಎನ್‌ಐಎ ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಮಕ್ಕಾ ಮಸೀದಿ, ಅಜ್ಮೀರ್ ದರ್ಗಾ ಮತ್ತು 2006ರ ಮಾಲೆಗಾಂವ್ ಸ್ಫೋಟ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಎನ್‌ಐಎ ಮೂಲಗಳು ಹೇಳಿವೆ. ಅಭಿನವ್ ಭಾರತ್‌ನ ಕೈವಾಡವಿದೆ ಎಂದು ಆಪಾದಿಸಲಾಗಿರುವ 2008ರ ಮಾಲೆಗಾಂವ್ ಸ್ಫೋಟ ಪ್ರಕರಣವನ್ನು ಮುಂದಿನ ದಿನಗಳಲ್ಲಿ ದಾಖಲಿಸಿಕೊಳ್ಳಲಾಗುವುದು ಎಂದು ಅವು ಸ್ಪಷ್ಟಪಡಿಸಿವೆ.
ಆದಾಗ್ಯೂ, ಕೇಸರಿ ಭಯೋತ್ಪಾದನಾ ಜಾಲದ ಶಂಕೆಯಿರುವ ಎಲ್ಲ ಪ್ರಕರಣಗಳ ತನಿಖೆಯನ್ನು ಜಂಟಿಯಾಗಿ ನಿರ್ವಹಿಸುವ ಕೇಂದ್ರ ಗೃಹ ಸಚಿವಾಲಯದ ಇಚ್ಛೆಗೆ ಮಧ್ಯಪ್ರದೇಶ ಸರಕಾರ ನಿರಾಸಕ್ತಿ ತೋರಿಸಿದೆ. ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಆರೆಸ್ಸೆಸ್ ನಾಯಕ ಸುನೀಲ್ ಜೋಶಿ ಹತ್ಯೆ ಪ್ರಕರಣದ ತನಿಖೆಯನ್ನು ಎನ್‌ಐಎಗೆ ಒಪ್ಪಿಸಲು ಮಧ್ಯಪ್ರದೇಶ ಸರಕಾರ ನಿರಾಕರಿಸಿದೆ. ಪ್ರಕರಣದ ತನಿಖೆ ಮುಗಿದಿದೆ ಮತ್ತು ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ದಾಖಲಿಸಲಾಗಿದೆ ಎಂದು ರಾಜ್ಯ ಸರಕಾರ ಸ್ಪಷ್ಟಪಡಿಸಿದೆ.

ಕೇಸರಿ ಭಯೋತ್ಪಾದನಾ ಜಾಲದ ಶಂಕೆಯಿರುವ ಮೂರು ಪ್ರಕರಣಗಳ ತನಿಖೆಯ ಕುರಿತು ಗೃಹ ಸಚಿವಾಲಯವು ಸುತ್ತೋಲೆ ಹೊರಡಿಸಿದೆ ಮತ್ತು ಇದು ಎನ್‌ಐಎಯಿಂದ ತನಿಖೆ ನಡೆಯಲಿದೆ. ಸುಮಾರು 65 ಮಂದಿಯ ಸಾವಿಗೆ ಕಾರಣವಾದ ಸಂಜೋತಾ ಸ್ಫೋಟ ಪ್ರಕರಣದ ತನಿಖೆಯನ್ನು ಎನ್‌ಐಎ ಈಗಾಗಲೇ ನಿರ್ವಹಿಸುತ್ತಿದೆ. 2006ರ ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಎಟಿಎಸ್ 9 ಮಂದಿಯ ವಿರುದ್ಧ ದೋಷಾರೋಪ ದಾಖಲಿಸಿದೆ ಮತ್ತು ಅವರು ನಿಷೇದಿತ ಸಿಮಿ ಹಾಗೂ ಲಷ್ಕರೆ ತಯ್ಯಿಬ ಕಾರ್ಯಕರ್ತರೆಂದು ಆಪಾದಿಸಿದೆ. ಆದಾಗ್ಯೂ, ಕೇಸರಿ ಭಯೋತ್ಪಾದನಾ ಜಾಲದ ರೂವಾರಿ ಎಂದು ಪರಿಗಣಿಸಲಾಗಿರುವ ಸ್ವಾಮಿ ಅಸೀಮಾನಂದ ನ್ಯಾಯಾಲಯವೊಂದರಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿರುವುದರಲ್ಲಿ ಈ ಪ್ರಕರಣದಲ್ಲೂ ಕೇಸರಿ ಭಯೋತ್ಪಾದಕರ ಕೈವಾಡವಿದ್ದುದು ಬೆಳಕಿಗೆ ಬಂದಿದೆ. ಮಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿಯೂ ಹೆಚ್ಚಿನ ಸುಳಿವೇನೂ ದೊರಕಿಲ್ಲ. ಆದರೆ ಅಜ್ಮೀರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ರಾಜಸ್ಥಾನ ಎಟಿಎಸ್ ಅಸೀಮಾನಂದ ಸಹಿತ ನಾಲ್ವರನ್ನು ಬಂಧಿಸಿದೆ. ಇದೀಗ ಹೆಚ್ಚಿನ ತನಿಖೆಗಾಗಿ ಈ ಮೂರು ಪ್ರಕರಣಗಳನ್ನು ಎನ್‌ಐಎ ವಶಕ್ಕೆ ಅಧಿಕೃತವಾಗಿ ಒಪ್ಪಿಸಲಾಗಿದೆ.

ಸಮಸ್ಯೆಗಳನ್ನು ಸರಕಾರಕ್ಕೆ ಮುಟ್ಟಿಸುವ, ನ್ಯಾಯ ಕೊಡಲು ಆಗದ, ರಾಜಕಾರಣಿಗಳ ಹಿಂಬಾಲಕರಾಗಿ ಕಾರ್ಯ ನಿರ್ವಹಿಸುವ ಜಿಲ್ಲಾಧಿಕಾರಿ, ತಹಶೀಲ್ದಾರ್ ಹುದ್ದೆಯನ್ನು ರದ್ದುಮಾಡಬೇಕು:ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್

ರೈತರ ಮೇಲಿನ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವುದಲ್ಲದೆ, ರೈತರ ಮನೆ, ಆಸ್ತಿಯೊಳಗೆ ನುಗ್ಗಿ ಜಪ್ತಿ ಮಾಡುವ ಕಾರ್ಯವನ್ನು ಅಧಿಕಾರಿಗಳು ತಕ್ಷಣಕ್ಕೆ ನಿಲ್ಲಿಸಬೇಕು. ರೈತರ ಈ ಪ್ರಮುಖ ಬೇಡಿಕೆಗಳಿಗೆ 20 ದಿನಗಳೊಳಗೆ ಜಿಲ್ಲಾಡಳಿತ ಸ್ಪಂದಿಸದಿದ್ದರೆ ಉಗ್ರವಾದ ಚಳವಳಿಯನ್ನು ನಡೆಸುವುದಲ್ಲದೆ,ರೈತರ ಮನೆಗಳಿಗೆ ಜಪ್ತಿ ಮಾಡಲು ಬರುವ ಅಧಿಕಾರಿಗಳನ್ನು ಕಾನೂನಿನ ಪ್ರಕಾರ ಮರುಜಪ್ತಿ ಮಾಡುವುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದ್ದಾರೆ.

ಡಿಸಿ, ತಹಶೀಲ್ದಾರ್ ಹುದ್ದೆ ರದ್ದಾಗಲಿ
 ಇಂದು ರೈತ ಸಂಘದಿಂದ ಮುತ್ತಿಗೆ ಕಾರ್ಯಕ್ರಮದ ಬಗ್ಗೆ ಜಿಲ್ಲಾಡಳಿತಕ್ಕೆ ಪೂರ್ವಭಾವಿಯಾಗಿ ಸೂಚನೆ ನೀಡಲಾಗಿದ್ದರೂ ರೈತರ ಮನವಿ ಸ್ವೀಕರಿಸಲು ಜಿಲ್ಲಾಧಿಕಾರಿ ಸುಬೋದ್ ಯಾದವ್ ಕಚೇರಿಯಲ್ಲಿಲ್ಲ ಎಂಬ ಮಾಹಿತಿ ದೊರತಾಗ ಸಿಟ್ಟುಗೊಂಡ ಕೋಡಿಹಳ್ಳಿ ಚಂದ್ರಶೇಖರ್, ನಾಗರಿಕರ ಸಮಸ್ಯೆಗಳನ್ನು ಸರಕಾರಕ್ಕೆ ಮುಟ್ಟಿಸುವ, ನ್ಯಾಯ ಕೊಡಲು ಆಗದ, ರಾಜಕಾರಣಿಗಳ ಹಿಂಬಾಲಕರಾಗಿ ಕಾರ್ಯ ನಿರ್ವಹಿಸುವ ಜಿಲ್ಲಾಧಿಕಾರಿ, ತಹಶೀಲ್ದಾರ್ ಹುದ್ದೆಯನ್ನು ರದ್ದುಮಾಡಬೇಕು ಎಂದು ಹೇಳಿದರು.


ಮಾತ್ರವಲ್ಲದೆ, ತಹಶೀಲ್ದಾರ್ ಹುದ್ದೆಯನ್ನು ತಾಲೂಕು ಹೆಡ್ ಗುಮಾಸ್ತ, ಜಿಲ್ಲಾಧಿಕಾರಿ ಹುದ್ದೆಯನ್ನು ಜಿಲ್ಲಾ ಹೆಡ್ ಗುಮಾಸ್ತ ಎಂದು ಬದಲಾಯಿಸಬೇಕೆಂದು ಹೇಳಿದರು.

ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರಾದರೂ ಜಿಲ್ಲಾಧಿಕಾರಿ ಅಕ್ರಮ ಮರಳುಗಾರಿಕೆಗೆ ತೆರಳಿದ್ದಾರೆಂಬ ಮಾಹಿತಿಯನ್ನು ಪೊಲೀಸರು ನೀಡಿದಾಗ ಅಸಮಾಧಾನಗೊಂಡ ಕೋಡಿಹಳ್ಳಿ, ಜಿಲ್ಲಾಧಿಕಾರಿ ಬರುವವರೆಗೆ ಪ್ರತಿಭಟನೆ ಮುಂದುವರಿಸುವುದಾಗಿ ಹೇಳಿದರು.

ಕೊನೆಗೆ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಸ್ಥಳಕ್ಕೆ ಆಗಮಿಸಿ, ರೈತರ ಬೇಡಿಕೆಗಳ ಕುರಿತಂತೆ ಜಿಲ್ಲಾಡಳಿತ ಹಾಗೂ ಸರಕಾರದ ಅವಗಾಹನೆಗೆ ತರುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆಯನ್ನು ಕೊನೆಗೊಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಮಧ್ಯಾಹ್ನ ಸುಮಾರು 12 ಗಂಟೆಯಿಂದ ಮೂರು ಗಂಟೆಯವರೆಗೆ ಉರಿ ಬಿಸಿಲಲ್ಲಿ ಕುಳಿತೇ ರೈತರು ಪ್ರತಿಭಟನೆ ನಡೆಸಿದರು.

ಇದಕ್ಕೂ ಮುನ್ನ ಸಾವಿರಾರು ಸಂಖ್ಯೆಯಲ್ಲಿ ರೈತರು ನಗರದ ಜ್ಯೋತಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಬೆಳಗ್ಗೆ 10 ಗಂಟೆಗೆ ಆರಂಭವಾಗಬೇಕಿದ್ದ ಮೆರವಣಿಗೆ ಸುಮಾರು 11:30ರ ವೇಳೆಗೆ ಜ್ಯೋತಿ ಸರ್ಕಲ್‌ನಿಂದ ಹೊರಟಿತ್ತು.

ಅಡಿಕೆ ಬೆಳೆಗಾರರು ಸೇರಿದಂತೆ ದ.ಕ. ಜಿಲ್ಲೆಯ ರೈತರ ವಿವಿಧ ಬೇಡಿಕೆಗಳು ಹಾಗೂ ಹಕ್ಕೊತ್ತಾಯಗಳನ್ನು ಮುಂದಿಟ್ಟು ಇಂದು ಕರ್ನಾಟಕ ರಾಜ್ಯ ರೈತ ಸಂಘದ ದ.ಕ. ಜಿಲ್ಲಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಚಳವಳಿಯನ್ನುದ್ದೇಶಿಸಿ ಅವರು ಮಾತನಾಡಿದರು.

ರೈತರು ಬೆಳೆಯುವ ಬೆಳೆಗಳ ಬಗ್ಗೆ ಖರ್ಚು ವೆಚ್ಚಗಳನ್ನು ಸರಕಾರ ವೈಜ್ಞಾನಿಕವಾಗಿ ಲೆಕ್ಕಹಾಕಿ ಸಮಗ್ರ ತೀರ್ಮಾನ ಕೈಗೊಳ್ಳಬೇಕು. ರೈತರ ಸಾಲ ಮನ್ನಾ ಮಾಡಲಾಗಿದೆ ಎಂಬ ಬಗ್ಗೆ ‘ಸಾಲ ಬಾಕಿ ಇಲ್ಲ’ ಎಂಬ ಪ್ರಮಾಣ ಪತ್ರವನ್ನು ಜಿಲ್ಲಾಡಳಿತ ದ.ಕ. ಜಿಲ್ಲೆಯ ರೈತರಿಗೆ ನೀಡಬೇಕು. ಎಪ್ರಿಲ್ 11, 18 ಮತ್ತು 19ರಂದು ಉಪ್ಪಿನಂಗಡಿಯ ಕೆಲ ರೈತರ ಮನೆ ಜಪ್ತಿ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಒಂದು ವೇಳೆ ಜಪ್ತಿಗೆ ಮುಂದಾದಲ್ಲಿ, ಕರ್ನಾಟಕ ಉಚ್ಛ ನ್ಯಾಯಾಲಯದ ಆದೇಶದ ಪ್ರಕಾರ ಪ್ರಾಣ, ಮಾನ ಹಾಗೂ ಆಸ್ತಿಯ ರಕ್ಷಣೆಗಾಗಿರುವ ಕಾನೂನಿನ ಪ್ರಕಾರ ಜಪ್ತಿಗೆ ಆಗಮಿಸುವ ಅಧಿಕಾರಿಗಳ ಪ್ರಾಣವನ್ನು ಹೊರತುಪಡಿಸಿ ರೈತರು ಮರು ಜಪ್ತಿ ಮಾಡುವ ಕಾರ್ಯವನ್ನು ಕೈಗೆತ್ತಿಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದರು.

ಯಡಿಯೂರಪ್ಪ ಸರಕಾರದಿಂದ 85000 ಕೋಟಿ ರೂ. ಸಾಲ!: ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಯಡಿಯೂರಪ್ಪ ರೈತರಿಗಾಗಿ ಮಾಡಿರುವ ಶೂನ್ಯ. ಆದರೆ, ಜನರ ಅಭಿವೃದ್ಧಿಯ ಹೆಸರಿನಲ್ಲಿ ಯಡಿಯೂರಪ್ಪ ಮಾಡಿರುವ ಸಾಲ 85,000 ಕೋಟಿ ರೂ.ಗಳು. ಇತ್ತೀಚೆಗೆ ಮಂಡಿಸಲಾದ ಬಜೆಟ್ ಅನುಷ್ಠಾನಕ್ಕೆ ತರಬೇಕಾದರೆ ಮುಖ್ಯಮಂತ್ರಿ ಮತ್ತೆ 15,000 ಕೋಟಿ ರೂ. ಸಾಲ ಮಾಡಬೇಕಾಗುತ್ತದೆ. ಈ ರೀತಿ ಯಡಿಯೂರಪ್ಪರ ಮೂಲಕ ರಾಜ್ಯವು ಒಂದು ಲಕ್ಷ ಕೋಟಿ ಸಾಲದಲ್ಲಿದೆ. ಹಾಗಾಗಿ ಅದರೊಂದಿಗೆ ಈ ರೈತರ ಸುಮಾರು 20000 ಕೋಟಿರೂ. ಸಾಲ ಸೇರಿದಂತೆ ಎಲ್ಲಾ ಸಾಲವನ್ನು ತೀರಿಸುವ ನಿರ್ಧಾರವನ್ನು ಸರಕಾರ ಮಾಡಬೇಕಾಗಿದೆ ಎಂದು ಅವರು ಹೇಳಿದರು.

ಕರ್ನಾಟಕದ ಇತಿಹಾಸದಲ್ಲಿ ಬದಲಾವಣೆ ತರುವ ಕೆಲಸ ಮಂಗಳೂರಿನಿಂದಲೇ ಆಗಲಿ ಎಂದು ಹೇಳಿದ ಅವರು, ರೈತರ ಮೇಲಿನ ಶೋಷಣೆ ಮುಂದುವರಿದರೆ ರೈತರು ಕಾಲಿನ ಚಪ್ಪಲಿ ಕೈಗೆತ್ತಿ ವಿಧಾನಸೌಧಕ್ಕೆ ಬರುವರು ಎಂದು ಖಾರವಾಗಿ ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವ ಅಣ್ಣಾ ಹಝಾರೆಗೆ ರೈತ ಸಂಘದ ಬೆಂಬಲ ವ್ಯಕ್ತಪಡಿಸಿದ ಅವರು, ಲೋಕಪಾಲ ಕಾಯ್ದೆಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಶನಿವಾರ ಬೆಂಗಳೂರಿನ ಎಂಜಿ ರಸ್ತೆಯಲ್ಲಿ ರೈತ ಸಂಘದಿಂದ ಧರಣಿ ಸತ್ಯಾಗ್ರಹ ನಡೆಸುತ್ತಿರುವುದಾಗಿ ಹೇಳಿದರು.

11ರಂದು ಕೊಪ್ಪಳ ಎಸ್ಪಿ ಕಚೇರಿಗೆ ಬಾರ್‌ಕೋಲ್ ಚಾರ್ಜ್: ಕೊಪ್ಪಳದಲ್ಲಿ ಇತ್ತೀಚೆಗೆ ಕೂಲಿ ಕೇಳಲು ಹೋದ ರೈತರ ಮೇಲೆ ಲಾಠಿ ಚಾರ್ಜ್ ಮಾಡಿದ್ದಲ್ಲದೆ, ಬೂಟುಕಾಲಿನಿಂದ ತುಳಿಯುವ ಅಮಾನವೀಯ ಕೃತ್ಯವೆಸಗಿದ ಪೊಲೀಸರನ್ನು ಈಗಾಗಲೆ ಅಮಾನತು ಮಾಡಲಾಗಿದ್ದರೂ ಕೊಪ್ಪಳದ ಎಸ್ಪಿ ಈಶ್ವರಚಂದ್ರ ವಿದ್ಯಾಸಾಗರರನ್ನು ಅಮಾನತು ಮಾಡಿಲ್ಲ. ಎ.11ರೊಳಗೆ ಈ ಬಗ್ಗೆ ಕ್ರಮಕೈಗೊಳ್ಳದಿದ್ದರೆ ರೈತರು ಬಾರ್‌ಕೋಲ್ ಹಿಡಿದು ಎಸ್ಪಿ ಕಚೇರಿಗೆ ನುಗ್ಗಲಿದ್ದಾರೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಈ ಸಂದರ್ಭ ಎಚ್ಚರಿಕೆ ನೀಡಿದರು.

ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಶ್ರೀನಿವಾಸ ಆಚಾರ್ಯ ಮಾತನಾಡಿ, ಕೆಂಪು ಅಡಿಕೆ, ಬಿಳಿ ಅಡಿಕೆಯ ತಲಾ ಕೆಜಿ ಒಂದಕ್ಕೆ ತಲಾ 140 ರೂ. ಹಾಗೂ 104 ರೂ. ಉತ್ಪಾದನಾ ವೆಚ್ಚ ತಗಲುತ್ತಿದ್ದು, ಸರಕಾರ ನೀಡುವ ಬೆಂಬಲ ಬೆಲೆಯಿಂದ ಅಡಿಕೆ ರೈತರು ಬೆಳೆ ಬೆಳೆಯಲು ಅಸಾಧ್ಯ ಎಂದರು.

ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ರವಿಕಿರಣ್ ಪುಣಚ ಮಾತನಾಡಿ, ವಿಧಾನಸಭೆ, ಸಂಸತ್ತಿನಲ್ಲಿ ರೈತರ ಸಂಕಷ್ಟಗಳ ಬಗ್ಗೆ ದನಿ ಎತ್ತಲು ಆಗದ ರಾಜಕಾರಣಿಗಳು ರಾಜೀನಾಮೆ ನೀಡಲಿ ಎಂದರು.

ಹಗಲು ರೈಲು ವಾರದ ಏಳು ದಿನಗಳಲ್ಲೂ ಓಡಾಡುವಂತಾಗಬೇಕು, ರೈಲೊಂದಕ್ಕೆ ತುಳುನಾಡು ಎಕ್ಸ್‌ಪ್ರೆಸ್ ಎಂದು ನಾಮಕರಣ ಮಾಡಬೇಕೆಂದು ರವಿಕಿರಣ ಪುಣಚ ಒತ್ತಾಯಿಸಿದರು.

ನಾಳೆ ಸಚಿವ ಆಚಾರ್ಯರ ಮನೆ ಎದುರು ಪ್ರತಿಭಟನೆ: ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರವನ್ನು ಮುಚ್ಚುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಎಸ್. ಆಚಾರ್ಯ ಅವರ ಮನೆ ಎದುರು ನಾಳೆ ರೈತ ಸಂಘದ ವತಿಯಿಂದ ಬಾರ್‌ಕೋಲ್ ಹಿಡಿದು ಪ್ರತಿಭಟನೆ ನಡೆಸುವುದಾಗಿ ರೈತ ಸಂಘದ ಉಡುಪಿ ಜಿಲ್ಲಾಧ್ಯಕ್ಷ ವಿಜಯ ಕುಮಾರ್ ಹೆಗ್ಡೆ ತಿಳಿಸಿದರು. ಉಡುಪಿಯಿಂದ ಕಲ್ಲಿದ್ದಲನ್ನು ರೈಲಿನ ಮೂಲಕ ಒಯ್ಯುವುದನ್ನು ನಿಲ್ಲಿಸದಿದ್ದರೆ ರೈಲು ತಡೆ ಮಾಡಲಾಗುವದು ಎಂದು ಅವರು ಈ ಸಂದರ್ಭ ಎಚ್ಚರಿಸಿದರು.








ಮಂಗಳವಾರ, ಏಪ್ರಿಲ್ 05, 2011

ಪಾವೂರು ಹರೇಕಳ: ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ

ಮಂಗಳೂರು, ಎ.5: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಪಾವೂರು ಹರೇಕಳದ ನೇತ್ರಾವತಿ ನದಿ ತೀರದಲ್ಲಿ ಕಳೆದ ಹಲವು ವರ್ಷದಿಂದ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಅಡ್ಡೆಗೆ ಜಿಲ್ಲಾಧಿಕಾರಿ, ನಗರ ಪೊಲೀಸ್ ಕಮಿಷನರ್ ನೇತೃತ್ವದ ವಿವಿಧ ಇಲಾಖೆಗಳನ್ನು ಒಳಗೊಂಡ ತಂಡ ಮಂಗಳವಾರ ಅಪರಾಹ್ನ ದಾಳಿ ನಡೆಸಿ ಎಂಟಕ್ಕೂ ಅಧಿಕ ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

 ಖಚಿತ ಮಾಹಿತಿ ಮೇರೆಗೆ ಅಪರಾಹ್ನ 1ಕ್ಕೆ ದಾಳಿ ಆರಂಭಿಸಿದ ಹಿರಿಯ ಅಧಿಕಾರಿಗಳ ತಂಡ 2 ಗಂಟೆಯವರೆಗೆ ಕಾರ್ಯಾಚರಣೆ ನಡೆಸಿತು. ಬಳಿಕ ಸಂಜೆಯ ವರೆಗೆ ಕಾರ್ಯಾಚರಣೆ ಮುಂದುವರಿಯಿತು.

ಪಾವೂರು ಹರೇಕಳ: ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ
ಜಿಲ್ಲಾಧಿಕಾರಿ ಸುಬೋಧ್ ಯಾದವ್, ಮಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತ ಪ್ರಭುಲಿಂಗ ಕವಳಿಕಟ್ಟೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ಎಂ.ರವೀಂದ್ರ, ಆರ್‌ಟಿಓ ಎನ್.ಎಂ.ಬಳವಳ್ಳಿ ಅಪರಾಹ್ನ 1ಗಂಟೆಯ ವೇಳೆಗೆ ಏಕ ಕಾಲದಲ್ಲಿ ಮಂಗಳೂರಿನಿಂದ ಹರೇಕಳ ಪಾವೂರಿಗೆ ಲಗ್ಗೆ ಇಟ್ಟರು. ಇಷ್ಟರಲ್ಲೇ ಮಾಹಿತಿ ಸೋರಿಕೆಯೂ ಆಗಿತ್ತು.

*ಸಂಯುಕ್ತ ದಾಳಿ: ಇಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ಅದರ ಆಧಾರದ ಮೇಲೆ ಮೂರ್ನಾಲ್ಕು ಇಲಾಖೆಗಳು ಜಂಟಿ ಯಾಗಿ ದಾಳಿ ನಡೆಸಿದೆ. ಇದೀಗ ವಶ ಪಡಿಸಿಕೊಂಡ ಯಾವ ಲಾರಿ ಗಳಲ್ಲೂ ಜಿಪಿಎಸ್ ಅಳವಡಿಸಿಲ್ಲ. 1ಲಾರಿಗೆ ನೋಂದಣಿ ಸಂಖ್ಯೆಯೇ ಇಲ್ಲ. ಕೆಲವು ವಾಹನಗಳಲ್ಲಿ ಮಾತ್ರ ‘ಮರಳು ಸಾಗಾಟದ ಲಾರಿ’ ಎಂದು ನಮೂದಿ ಸಲಾಗಿದೆ. ಅಕ್ರಮವಾಗಿ ನಿರ್ಮಿಸಲಾಗಿ ರುವ ಜೆಟ್ಟಿಯನ್ನು ತೆರವು ಗೊಳಿಸಲಾಗು ವುದು. ಈ ದಾಳಿ ಇಲ್ಲಿಗೆ ಕೊನೆ ಗೊಳ್ಳದು. ಜಿಲ್ಲೆಯ ಎಲ್ಲೆಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತದೆಯೋ ಅಲ್ಲಿ ಕಾರ್ಯಾಚರಣೆ ಮುಂದುವರಿ ಸುತ್ತೇವೆ’ ಎಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ತಿಳಿಸಿದ್ದಾರೆ.


*ಗೂಂಡಾ ಕಾಯ್ದೆ:  ಅಕ್ರಮ ಮರಳುಗಾರಿಕೆಯ ಹಿಂದೆ ದೊಡ್ಡ ಮಾಫಿಯಾವೇ ಇದೆ. ಇದರ ಹಿಂದಿರುವ ರೂವಾರಿಗಳನ್ನು ಬಂಧಿಸಿ ಗೂಂಡಾ ಕಾಯ್ದೆ ಹೇರುವ ಬಗ್ಗೆ ಚಿಂತನೆ ನಡೆಸಲಾಗುವುದು. ಅಕ್ರಮ ಮರಳುಗಾರಿಕೆ ತಡೆಗಟ್ಟಲು ಯೋಜನೆ ರೂಪಿಸಲಾಗುವುದು ಎಂದು ಸೀಮಂತ್ ಕುಮಾರ್ ತಿಳಿಸಿದರು.


*ಶಾಸಕ ಖಾದರ್ ಆಕ್ಷೇಪ: ಅಕ್ರಮ ಮರಳುಗಾರಿಕೆಗೆ ಸಂಬಂಧಿಸಿದ ಕಾಯ್ದೆಯ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವರು 2-3 ದಿನದೊಳಗೆ ಸಮಸ್ಯೆಯನ್ನು ಬಗೆಹರಿಸುವೆ ಎಂದಿರುವ ಮಧ್ಯೆಯೇ ಜಿಲ್ಲಾಧಿಕಾರಿ ಯಾವುದೇ ಎಚ್ಚರಿಕೆ ನೀಡದೆ ದಾಳಿ ಮಾಡಿರುವುದು ಸರಿಯಲ್ಲ. ಉಡುಪಿ, ಉತ್ತರ ಕನ್ನಡಕ್ಕೂ ಕೂಡ ಮರಳುಗಾರಿಕೆಗೆ ಸಂಬಂಧಿಸಿದ ಹೊಸ ಕಾಯ್ದೆ ಅನ್ವಯವಾಗಲಿದೆ. ಅಲ್ಲೀಗ ಮರಳಿನ ಸಮಸ್ಯೆಯಿಲ್ಲ. ಆದರೆ, ದ.ಕ.ಜಿಲ್ಲೆಯಲ್ಲಿ ಮರಳಿನ ಅಭಾವ ಸೃಷ್ಟಿಸುವಲ್ಲಿ ಅಧಿಕಾರಿಗಳು ಮುಂದೆ ಬಂದಂತಿದೆ. ಎಷ್ಟೋ ಮಂದಿ ಮನೆ, ಕಟ್ಟಡ ಕಟ್ಟಲಾಗದೆ ತೊಂದರೆಗೆ ಸಿಲುಕಿದ್ದಾರೆ. ಇದು ಸರಿಯಲ್ಲ. ಯಾರದೋ ಒತ್ತಡಕ್ಕೆ ಮಣಿದು ಏಕಾಏಕಿ ದಾಳಿ ಮಾಡಿ ಕೂಲಿ ಕಾರ್ಮಿಕರನ್ನು, ಲಾರಿ ಸಿಬ್ಬಂದಿಯನ್ನು ಬಂಧಿಸಿರುವುದು ಸಮರ್ಥನೀಯವಲ್ಲ ಎಂದು ಶಾಸಕ ಯು.ಟಿ.ಖಾದರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೋಮುವಾದಿ ಶಕ್ತಿಗಳನ್ನು ಸೋಲಿಸುವುದರ ಜೊತೆಗೆ ಬಲಿಷ್ಠ ಮತ್ತು ಪ್ರಜಾಸತ್ತಾತ್ಮಕ ಭಾರತ ಕಟ್ಟಲು ಮುಂದಾಗಬೇಕೆಂದು :ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಶರೀಫ್

 
 
ದುಬೈ : ಭಾರತದಲ್ಲಿರುವ ಎಲ್ಲಾ ಜನರಿಗೆ ಸಮಾನ ಹಕ್ಕು ಮತ್ತು ಸಮಾನ ನ್ಯಾಯ ದೊರಕುವಂತಾಗಬೇಕಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಶರೀಫ್ ಹೇಳಿದ್ದಾರೆ. ಎಮಿರೇಟ್ಸ್ ಇಂಡಿಯಾ ಫ್ರಟೆರ್ನಿಟಿ ಫೋರಂ ವತಿಯಿಂದ ಮಾರ್ಚ್ ೨೫ ರಂದು ದುಬೈನ  ಕಂಫರ್ಟ್ ಇನ್ ಹೋಟೆಲಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡುತ್ತಿದ್ದರು.
 
ಭಾರತದಲ್ಲಿ ಮುಸ್ಲಿಮರ ಪರಿಸ್ಥಿತಿ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಅತ್ಯಂತ ಕೆಳಮಟ್ಟದಲ್ಲಿದೆ. ೩೦ ವರ್ಷಗಳ ಕಾಲ ಕಮ್ಯುನಿಸ್ಟ್ ಪಕ್ಷಗಳು ಆಳ್ವಿಕೆ ನಡೆಸಿದ ಪಶ್ಚಿಮ ಬಂಗಾಳದಲ್ಲಿ ದೇಶದಲ್ಲಿಯೇ ಅತ್ಯಂತ ಸಂಕಷ್ಟ ಪರಿಸ್ಥಿತಿಯನ್ನು ಅಲ್ಲಿನ ಮುಸ್ಲಿಮರು ಎದುರಿಸುತ್ತಿದ್ದಾರೆ. ಈ ಸಮುದಾಯವನ್ನು ಮೇಲೆತ್ತಲು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಶ್ರಮಿಸುತ್ತಿದ್ದು ನಾಗರೀಕರು ಸಂಘಟನೆಯ ಈ ಸಾಮಾಜಿಕ ಕಾಳಜಿಗಾಗಿ ಕೈಜೋಡಿಸಲು ಮುಂದಾಗಬೇಕೆಂದು ಹೇಳಿದರು. ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಕೋಮುವಾದಿ ಶಕ್ತಿಗಳನ್ನು ಸೋಲಿಸುವುದರ ಜೊತೆಗೆ ಬಲಿಷ್ಠ ಮತ್ತು ಪ್ರಜಾಸತ್ತಾತ್ಮಕ ಭಾರತ ಕಟ್ಟಲು ಮುಂದಾಗಬೇಕೆಂದು ಅವರು ಕರೆ ನೀಡಿದರು .
 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಮಿರೇಟ್ಸ್ ಇಂಡಿಯಾ ಫ್ರಟೆರ್ನಿಟಿ ಫೋರಂ ಅಧ್ಯಕ್ಷರಾದ ಜನಾಬ್ ನಾಸಿರ್ ಹುಸೇನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜನಾಬ್ ಅಶ್ರಫ್ ಉಮರ್ ಖಾನ್ ಭಾಗವಹಿಸಿದ್ದರು. ಮಜೀದ್ ಆಲಡ್ಕ ಧನ್ಯವಾದ ಸಮರ್ಪಿಸಿದರು. ಸಮಾರಂಭದಲ್ಲಿ ಸುಮಾರು ೧೩೦ ಮಂದಿ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಎಸ್‌ಡಿಪಿಐ ಐಸ್‌ಕ್ರೀಂ ವಿತರಣೆ

 ಭಾರತ ತಂಡ ವಿಶ್ವಕಪ್ ಗೆದ್ದ ಹಿನ್ನೆಲೆಯಲ್ಲಿ ಎಸ್‌ಡಿಪಿಐ ಕಾರ್ಯ ಕರ್ತರು ಸೋಮವಾರ ೧೧೧ ಮೀಟರ್ ಉದ್ದದ ರಾಷ್ಟ್ರ ಧ್ವಜದೊಂದಿಗೆ ಪುತ್ತೂರಿನಲ್ಲಿ ವಿಜಯೋತ್ಸವ ಆಚರಿಸಿದರು.
ಪುತ್ತೂರು ನಗರದಾದ್ಯಂತ ಐಸ್ ಕ್ರೀಂ ಹಂಚಿ ಎಸ್‌ಡಿ ಪಿಐ ಕಾರ್ಯಕರ್ತರು ಸಾರ್ವಜನಿಕರಿಗೆ ವಿಶ್ವಕಪ್ ಸಿಹಿ ಉಣಿ ಸಿದರು. ದರ್ಬೆಯಿಂದ ಬೊಳುವಾರು ತನಕ ಮುಖ್ಯ ರಸ್ತೆಯಲ್ಲಿ ವಿಜಯೋತ್ಸವ ಮೆರವಣಿಗೆ ನಡೆಯಿತು. ದಾರಿಯುದ್ದಕ್ಕೂ ನೆರೆದ ಮಂದಿಗೆ ಮತ್ತು ಪೇಟೆಯಲ್ಲಿ ಸಂಚರಿಸುತ್ತಿದ್ದವರಿಗೆ ವಿಶ್ವಕಪ್ ವಿಜಯದ ಹೆಸರಿನಲ್ಲಿ ಐಸ್‌ಕ್ರೀಂ ಕಪ್ ವಿತರಿಸಲಾಯಿತು. ಪುತ್ತೂರು ವಿಧಾನ ಸಭಾ ಕ್ಷೇತ್ರ ಸಮಿತಿಯ ಎಸ್‌ಡಿಪಿಐ ಅಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ ಪುತ್ತೂರಿನ ದರ್ಬೆಯಲ್ಲಿ ವಿಜಯೋತ್ಸವ ಮೆರವಣಿಗೆಗೆ ಚಾಲನೆ ನೀಡಿದರು. ರಾಜ್ಯ ಸಮಿತಿಯ ಉಪಾಧ್ಯಕ್ಷ ಅಬ್ದುಲ್ ಲತೀಫ್ ಪುತ್ತೂರು ಪ್ರಾಸ್ತಾವಿಕವಾಗಿ ಮಾತನಾಡಿದರು.
 ಎಸ್‌ಡಿಪಿಐ ಮುಖಂಡರಾದ ಅಶ್ರಫ್ ಬಾವು ಪಡೀಲು, ರಿಜ್ವಾನ್ , ಕೆ.ಎಚ್. ಖಾಸಿಂ, ಸಮೀರ್ ಪರ್ಲಡ್ಕ , ಮೂಸಕುಂಞ ಅರಿಯಡ್ಕ , ಉಮ್ಮರ್ ಕೂರ್ನಡ್ಕ , ನಸೀರ್ ಸಂಪ್ಯ , ದೀನಾರ್ ಫಾರೂಕ್ ಸಂಪ್ಯ ಮತ್ತಿತರ ನೂರಾರು ಮಂದಿ ವಿಶ್ವಕಪ್ ವಿಜಯೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.