ಗುರುವಾರ, ಮೇ 05, 2011

ಅಮೆರಿಕ ಅತ್ಯುಗ್ರ ರಾಷ್ಟ್ರ: ಪಾಪ್ಯುಲರ್ ಫ್ರಂಟ್

ಹೊಸದಿಲ್ಲಿ: ಉಸಾಮಾ ಬಿನ್ ಲಾಡೆನ್‌ನ ಹತ್ಯೆಯ ಬಗೆಗೆ ಎದ್ದಿರುವ ಅನುಮಾನಗಳು ಇನ್ನೂ ಪರಿಹಾರವಾಗಿಲ್ಲ. ಅಮೆರಿಕ ಸಂಯುಕ್ತ ಸಂಸ್ಥಾನವೊಂದೇ ಈ ಬಗ್ಗೆ ಮಾಹಿತಿಯ ಮೂಲವಾಗಿರುವುದರಿಂದ ಅದು ಹಾಗೆಯೇ ಉಳಿಯಲಿದೆ. ನಾವು ವರದಿಗಳನ್ನು ನೋಡುವುದಾದರೆ ಅಮೆರಿಕ ಸಂಯುಕ್ತ ಸಂಸ್ಥಾನವು ವಿಶ್ವದ ಅತ್ಯುಗ್ರ ರಾಷ್ಟ್ರವಾಗಿದೆ. ದುರ್ಬಲ ರಾಷ್ಟ್ರಗಳ ಮೇಲೆ ತನ್ನ ಅಧಿಪತ್ಯವನ್ನು ರಕ್ಷಿಸಿಕೊಂಡು ಹೋಗುವುದಕ್ಕಾಗಿ ಅದು ರಾಜಾರೋಷವಾಗಿ ಎಲ್ಲಾ ಅಂತಾರಾಷ್ಟ್ರೀಯ ಕಾನೂನುಗಳನ್ನು ಮತ್ತು ಸಾಮಾನ್ಯ ಸಭ್ಯ ಆದರ್ಶಗಳನ್ನು ಉಲ್ಲಂಘಿಸುತ್ತದೆ. ಪೆಂಟಗಾನ್ ಮತ್ತು ವಿಶ್ವ ವಾಣಿಜ್ಯ ಕೇಂದ್ರಗಳ ಮೇಲಿನ ದಾಳಿಯ ನಂತರ 2001ರ ಆರಂಭದಲ್ಲಿ  ಇದರ ರೂವಾರಿಯೆಂದು ಹೇಳಲಾಗಿದಉಸಾಮಾ ಬಿನ್ ಲಾಡೆನ್‌ನನ್ನು ಅಂತಾರಾಷ್ಟ್ರೀಯ ನ್ಯಾಯಾಲಯ ಅಥವಾ ಸೌದಿ ಅರೇಬಿಯಾ ಅಥವಾ ಕತಾರ್ ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಸ್ತಾಪವನ್ನಿಟ್ಟಿತು. ಅಮೆರಿಕ ಆ ಕೊಡುಗೆಯನ್ನು ನಿರಾಕರಿಸಿತು ಮತ್ತು ಅಫ್ಘಾನಿಸ್ತಾನ ಹಾಗೂ ನಂತರ ಇರಾಕ್ ಮೇಲೆ ದಂಡೆತ್ತಿ ಹೋಯಿತು. ಭಯೋತ್ಪಾದನೆಯ ವಿರುದ್ಧ ಸಮರ ಎಂಬ ಲೇಬಲ್‌ನೊಂದಿಗೆ ಅದು ನೂರಾರು ಸಾವಿರಾರು ಮಂದಿಯನ್ನು ಕೊಂದು ಹಾಕಿತು, ಅಸಂಖ್ಯಾತ ಮಕ್ಕಳನ್ನು ಅನಾಥರನ್ನಾಗಿಸಿತು. ಅದು ಯಾವಾಗಲೂ ಎಲ್ಲಾ ರಾಷ್ಟ್ರಗಳ ಸಾರ್ವಭೌಮತ್ವದ ಮೇಲೆ ಹಸ್ತಕ್ಷೇಪ ಮಾಡುತ್ತದೆ, ನಾಗರಿಕ ಮತ್ತು ಮಾನವ ಹಕ್ಕುಗಳ ಅಂತಾರಾಷ್ಟ್ರೀಯ ಸಮಾವೇಶಗಳನ್ನು ಉಲ್ಲಂಘಿಸುತ್ತದೆ. ಅದು ಗ್ವಾಂಟನಾಮೋ ಸೇರಿದಂತೆ ಹಲವು ಪ್ರತ್ಯಕ್ಷ ಹಾಗೂ ರಹಸ್ಯ ಯಾತನಾ ಶಿಬಿರಗಳನ್ನು ನಡೆಸುತ್ತಿದೆ. ಗ್ವಾಂಟನಾಮೊದಲ್ಲಿ ಸುಮಾರು 200 ಮಂದಿಯನ್ನು ಯಾವುದೇ ವಿಚಾರಣೆಯಿಲ್ಲದೆ ಕಬ್ಬಿಣದ ಗೂಡಿನೊಳಗೆ ಬಂಧನದಲ್ಲಿಡಲಾಗಿದೆ. ತಮ್ಮನ್ನು ಅವಲಂಬಿಸಿರುವ ರಾಷ್ಟ್ರಗಳಲ್ಲಿ ಸಿಐಎ ರಹಸ್ಯ ಬಂಧನ ಶಿಬಿರಗಳನ್ನು ನಡೆಸುತ್ತಿದ್ದು, ಅಲ್ಲಿ ನೂರಾರು ಮಂದಿಗೆ ಚಿತ್ರಹಿಂಸೆಗಳನ್ನು ನೀಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ.
ಒಂದು ಮೃತದೇಹವನ್ನು ಸಮುದ್ರಕ್ಕೆ ಎಸೆಯುವುದು ಎಲ್ಲಾ ಧಾರ್ಮಿಕ ನಿಯಮಗಳು ಹಾಗೂ ಸಭ್ಯತೆಯ ಆದರ್ಶಗಳ ಉಲ್ಲಂಘನೆಯಾಗಿದೆ. ಹಲವು ಧರ್ಮಗಳಿಂದ ಸಹಾನುಭೂತಿಯನ್ನು ಪಡೆಯುತ್ತಿರುವುದಾಗಿ ಹೇಳಲಾಗುತ್ತಿರುವ ಬರಾಕ್ ಒಬಾಮಾ ಕೂಡ ಮುಸ್ಲಿಮ್ ಜಗತ್ತನ್ನು ಕೆರಳಿಸಲು ಇಷ್ಟಪಡುತ್ತಿರುವ ವ್ಯಕ್ತಿಗಳ ಕೈಗೊಂಬೆಯಷ್ಟೇ.
ಏನೇ ಆದರೂ, ಈಗ ಉಸಾಮಾ ಬಿನ್ ಲಾಡೆನ್‌ನ ಹತ್ಯೆಯೊಂದಿಗೆ ಅಫ್ಘಾನ್ ಮತ್ತು ಅಮೆರಿಕದಲ್ಲಿ ಉಳಿಯಲು ಅಮೆರಿಕಾಗೆ ‘ಉಸಾಮಾ ಬೇಟೆ’ ಎಂಬ ಪೊಳು ನೆಪ ಇಲ್ಲವಾಗಿದೆ. ಒಬ್ಬ ಸದ್ದಾಮ್ ಹುಸೇನ್ ಅಥವಾ ಉಸಾಮಾ ಬಿನ್ ಲಾಡೆನ್‌ನ ಸಾವಿನೊಂದಿಗೆ ದಂಡಯಾತ್ರೆಗಳು ಅಥವಾ ಲೂಟಿಗಳ ವಿರುದ್ಧ  ಸ್ಥಳೀಯ ಪ್ರತಿರೋಧವು ಕೊನೆಗೊಳ್ಳಬಹುದೆಂಬ ನವ ವಸಾಹತುಶಾಹಿ ಶಕ್ತಿಗಳ ನಂಬಿಕೆ ಮೂರ್ಖತನವಾಗಿದೆ. ಇತಿಹಾಸದಲ್ಲಿ ಯಾವುದಾದರೂ ಪುರಾವೆಗಳಿದ್ದರೆ, ಲೂಟಿ ಮಾಡುವ ಸ್ವಭಾವವುಳ್ಳ ವಿದೇಶಿಗಳು ತಮ್ಮ ದೇಶಕ್ಕೆ ಹಿಂದಿರುಗುವ ತನಕ ಆಕ್ರಮಿತ ಭೂಮಿಗಳಲ್ಲಿ ಜನರ ಪ್ರತಿರೋಧವು ಮುಂದುವರಿಯಲಿದೆ. ಎಲ್ಲಾ ರೀತಿಯ ಭಯೋತ್ಪಾದನೆಯ ಬಗ್ಗೆಯೂ ಬೇಸರಪಡುವ ಸಂದರ್ಭದಲ್ಲಿ, ಮಾನವತೆಯ ಪರವಾಗಿ ನಮ್ಮ ಭರವಸೆಯೇನೆಂದರೆ ಎಲ್ಲಾ ದಮನಕಾರಿ ಯಜಮಾನಿಕೆಯ ಸೂಪರ್ ಪವರ್ ರಾಷ್ಟ್ರಗಳು ಅಂತಿಮವಾಗಿ ಸೋಲಲಿದೆ ಮತ್ತು ಎಲ್ಲಾ ರಾಷ್ಟ್ರಗಳ ಸ್ವಾತಂತ್ರ ಹಾಗೂ ಸಾರ್ವಭೌಮತ್ವವು ಸಮಾನವಾಗಿ ರಕ್ಷಿಸಲ್ಪಡಲಿದ್ದು, ವಿಶ್ವದಲ್ಲಿ ಶಾಂತಿಯ ಪರ್ವಕ್ಕೆ ಇದು ನಾಂದಿಯಾಗಲಿದೆ.
ಇ.ಎಂ.ಅಬ್ದುಲ್ ರಹ್ಮಾನ್
ಅಧ್ಯಕ್ಷರು
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ