ಮಂಗಳವಾರ, ಮೇ 03, 2011

‘ಪ್ರಜಾಪ್ರಭುತ್ವದ ರಕ್ಷಣೆ ಎಸ್‌ಡಿಪಿಐ ಗುರಿ’

 ಹಾಸನ ಜಿಲ್ಲೆಯನ್ನು ಸ್ವಾರ್ಥ ರಾಜಕಾರಣಿಗಳಿಂದ ಮುಕ್ತಿಗೊಳಿಸಿ, ಜನಪರ ಆಡಳಿತವನ್ನು ಸ್ಥಾಪಿಸುವಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಮಹತ್ವದ ಪಾತ್ರ ವಹಿಸಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷರಾದ ಅಮೀರ್ ಜಾನ್ ಹೇಳಿದ್ದಾರೆ.
ಶುಕ್ರವಾರ ಎಸ್.ಡಿ.ಪಿ.ಐ ಸದಸ್ಯತ್ವ ಅಂದೋಲನವನ್ನು ಚಾಲನೆ ನೀಡಿದ ನಂತರ ಮಾತನಾಡಿದ ಅವರು, ದೇಶದಲ್ಲಿ ಪ್ರಜಾಫ್ರಭುತ್ವವನ್ನು ಕಾಪಾಡುವುದು ಪಕ್ಷದ ಗುರಿಯಾಗಿದೆ ಎಂದರು.
ಜಿಲ್ಲೆಯ ಅಭಿವೃದ್ಧಿಯು ಕುಂಟಿತ ಗೊಂಡಿದೆ, ಭ್ರಷ್ಟಾಚಾರ ತಾಂಡವವಾಡುತಿತಿದೆ. ಆಡಳಿತ ಯಂತ್ರ ಜನ  ವಿರೋಧಿಯಾಗಿದೆ. ಶ್ರೀ ಸಾಮಾನ್ಯರ ಅಳಲನ್ನು ಕೇಳುವವರಿಲ್ಲದಂತಾಗಿದೆ ಎಂದು ಅವರು ದೂರಿದರು.
ಪತ್ರಕರ್ತ ಮಲ್ನಾಡ್ ಮೆಹಬೂಬ್ ಮಾತನಾಡಿ ಜಿಲ್ಲೆಯಲ್ಲಿ ಜನಪರ ಚಳುವಳಿಯನ್ನು ಗಟ್ಟಿಗೊಳಿಸಬೇಕು, ದಲಿತರು ಕಾರ್ಮಿಕರು ಮಹಿಳೆಯರು ಮತುತಿ ಅಲ್ಪ ಸಂಖ್ಯಾತರು ಒಂದಾಗಬೇಕು. ಎಲ್ಲಾ ಸಮಾಜದ ಪ್ರಮಾಣಿಕರು ಒಂದೇ ವೇಧಿಕೆಯಲ್ಲಿ ಸೇರಬೇಕು ಎಂದರು.
ಪಕ್ಷದ ಹಾಸನ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷರಾದ ಸಾದಿಖ್ ಕಣತೂರ್ ಮಾತನಾಡಿ ಜನ ಸಾಮಾನ್ಯರ ಪರವಾದ ಧೋರಣೆಯೋಂದಿಗೆ ನಾವು ಜನರ ಬಳಿ ಹೋಗುತ್ತಿದ್ದೇವೆ. ವಿಚಾರವಂತರು ಪ್ರಗತಿ ಪರರು ನಮ್ಮನ್ನು ಬೆಂಬಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಸೂಫಿ ಇಬ್ರಾಹಿಂ ಜಿಲ್ಲಾ ಮುಖಂಡ ಮುಹಮ್ಮದ್ ಇನಾಯತ್ ಭಾಗವಹಿಸಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ