ಶುಕ್ರವಾರ, ಏಪ್ರಿಲ್ 15, 2011

ಮಾನವ ಹಕ್ಕು ಕಾರ್ಯಕರ್ತ ಬಿನಾಯಕ ಸೇನ್‌ಗೆ ಸುಪ್ರೀಂ ಕೋರ್ಟ್

ದೇಶದ್ರೋಹ ಹಾಗೂ ನಕ್ಸಲರಿಗೆ ನೆರವಾದ ಆರೋಪದಲ್ಲಿ ಛತ್ತೀಸ್‌ಗಡದ ನ್ಯಾಯಾಲಯವೊಂದರಿಂದ ಆಜೀವ ಶಿಕ್ಷೆಗೆ ಗುರಿಯಾಗಿರುವ ಮಾನವ ಹಕ್ಕು ಕಾರ್ಯಕರ್ತ ಬಿನಾಯಕ ಸೇನ್‌ಗೆ ಸುಪ್ರೀಂ ಕೋರ್ಟ್ ಇಂದು ಜಾಮೀನು ಬಿಡುಗಡೆ ನೀಡಿದೆ. 61ರ ಹರೆಯದ ಬಿನಾಯಕ ಸೇನ್‌ಗೆ ಜಾಮೀನು ಬಿಡುಗಡೆ ನೀಡುವಲ್ಲಿ ತಾನು ಯಾವುದೇ ಕಾರಣ ನೀಡುವುದಿಲ್ಲ ಎಂದಿ ರುವ ಸುಪ್ರೀಂ ಕೋರ್ಟ್, ವಿಚಾರಣಾ ನ್ಯಾಯಾಲಯ ತನಗೆ ಸೂಕ್ತವೆನಿಸಿದ ಜಾಮೀನು ಶರ್ತಗಳನ್ನು ವಿಧಿಸಬಹುದು ಎಂದಿದೆ. ತನಗೆ ಜಾಮೀನು ನಿರಾಕರಿಸಿದ ಛತ್ತೀಸ್‌ಗಡದ ಹೈಕೋರ್ಟ್‌ನ ಆದೇಶದ ವಿರುದ್ಧ ಸೇನ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಚ್.ಎಸ್.ಬೇಡಿ ಹಾಗೂ ಸಿ.ಕೆ. ಪ್ರಸಾದ್ ರನ್ನೊಳಗೊಂಡ ಪೀಠ ಈ ಆದೇಶ ನೀಡಿದೆ.
ಸೇನ್ ವಿರುದ್ಧ ದೇಶದ್ರೋಹದ ಆರೋ ಪವನ್ನು ಬೆಂಬಲಿಸುವ ಸಾಕ್ಷಗಳೇನಾದರೂ ಇವೆಯೇ? ಎಂದು ಪೀಠ ಪ್ರಶ್ನಿಸಿದಾಗ ಸಿಬಿಐ ಪರ ನ್ಯಾಯವಾದಿ ಲಲಿತ್, ಸೇನ್ ಬಂದಿಖಾನೆಯನ್ನು ಸಂದರ್ಶಿಸಿ ನಕ್ಸಲರಾದ ಗುಹಾ ಹಾಗೂ ಇತರರೊಂದಿಗೆ ದಾಖಲೆ ಗಳನ್ನು ಹಂಚಿಕೊಂಡಿದ್ದಾರೆಂದು ಉತ್ತರಿಸಿ ದರು. ಆದಾಗ್ಯೂ, ಈ ಉತ್ತರದಿಂದ ತೃಪ್ತವಾಗದ ಪೀಠ, ಬಂದಿಖಾನೆಯಲ್ಲಿರುವ ವರನ್ನು ಭೇಟಿ ಯಾಗಲು ಹೋಗುವವರ ತಪಾಸಣೆಯನ್ನು ಅಲ್ಲಿನ ಸಿಬ್ಬಂದಿ ನಡೆಸುತ್ತಾರೆ. ಇದನ್ನು ನೋಡಿಕೊಳ್ಳುವುದಕ್ಕಾ ಗಿಯೇ ಜೈಲರ್ ಗಳಿರುತ್ತಾರೆ. ಆದುದರಿಂದ ದಾಖಲೆ ಅಥವಾ ಪತ್ರಗಳನ್ನು ಹಂಚಿಕೊ ಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದಿದೆ. ಸೇನ್‌ರ ಬಳಿ ನಕ್ಸಲ್ ಚಟುವಟಿಕೆಗಳಿಗೆ ಸಂಬಂಧಿಸಿದ ಸಾಮಾನ್ಯ ದಾಖಲೆಗಳು ಪತ್ತೆಯಾಗಿವೆ. ಆದುದರಿಂದ ಅವರನ್ನು ಅಷ್ಟರಿಂದಲೇ ದೇಶದ್ರೋಹಿ ಎನ್ನುವುದು ಸಾಧ್ಯವೇ?, ಅದು ದೇಶದ್ರೋಹದ ಆರೋಪ ಹೊರಿಸಲು ಪುರಾವೆಯಾಗುತ್ತ ದೆಯೇ? ಎಂದು ನ್ಯಾಯಪೀಠ ಪ್ರಶ್ನಿಸಿದೆ. ದೇಶದ್ರೋಹದ ಪ್ರಕರಣವಿಲ್ಲದಿದ್ದರೂ ತೀರ್ಪು ಜಾರಿಗೊಳಿಸಿರುವ ಬಗ್ಗೆ ತಾವು ಕಳವಳ ಹೊಂದಿದ್ದೇವೆಂದು ನ್ಯಾಯಮೂರ್ತಿ ಗಳು ಹೇಳಿದ್ದಾರೆ.

ವಿಶ್ವಾಸ ಮೂಡಿದೆ: ಅನಸೂಯಾ

 

ದೇಶದ್ರೋಹ ಪ್ರಕರಣದಲ್ಲಿ ತನ್ನ ಮಗನಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದ ಬಳಿಕ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ತನಗೆ ವಿಶ್ವಾಸ ಹೆಚ್ಚಿದೆಯೆಂದು ಹಕ್ಕು ಕಾರ್ಯಕರ್ತ ಬಿನಾಯಕ ಸೇನ್‌ರ ಕಾಯಿಲೆ ಪೀಡಿತ ತಾಯಿ ಹೇಳಿದ್ದಾರೆ.
ಛತ್ತೀಸ್‌ಗಡದ ಹೈಕೋರ್ಟ್ ತನ್ನ ಮಗನಿಗೆ ಜಾಮೀನು ನಿರಾಕರಿಸಿದಾಗ ತಾನು ನೈತಿಕ ಹಿನ್ನಡೆ ಕಂಡಿದ್ದೆ. ತನ್ನ ಮಗನನ್ನು ಕಾಣಲಾರೆನೆಂದು ಭಾವಿಸಿದ್ದೆ. ಆದರೆ, ಈಗ ತನಗೆ ನ್ಯಾಯಾಂಗದ ಮೇಲೆ ಮತ್ತೆ ವಿಶ್ವಾಸ ಮೂಡಿದೆಯೆಂದು ನಾಡಿಯಾ ಜಿಲ್ಲೆಯ ತನ್ನ ನಿವಾಸದಲ್ಲಿ ಬಿನಾಯಕ ಸೇನರ ತಾಯಿ ಅನಸೂಯಾ ಸೇನ್ ನುಡಿದರು.
ಇಂದು ಬಂಗಾಳಿ ಹೊಸ ವರ್ಷದ ಮೊದಲ ದಿನವೇ ಶುಭವಾರ್ತೆ ಬಂದುದಕ್ಕಾಗಿ ಅತೀವ ಸಂತೋಷ ವ್ಯಕ್ತಪಡಿಸಿದ ಅವರು ‘ಸತ್ಯಮೇವ ಜಯತೇ’ ಎಂದುದ್ಗರಿಸಿದರು.


ಖುರ್ಷಿದ್ ಸ್ವಾಗತದೇಶದ್ರೋಹದ ಆರೋಪದಲ್ಲಿ ಆಜೀವ ಶಿಕ್ಷೆಗೆ ಗುರಿಯಾಗಿರುವ ಮಾನವ ಹಕ್ಕು ಕಾರ್ಯಕರ್ತ ಬಿನಾಯಕ ಸೇನ್‌ಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿರುವುದನ್ನು ಅಲ್ಪಸಂಖ್ಯಾತ ವ್ಯವಹಾರ ಸಚಿವ ಸಲ್ಮಾನ್ ಖುರ್ಷಿದ್ ಸ್ವಾಗತಿಸಿದ್ದಾರೆ.
ಜಾಮೀನು ಮಂಜೂರಾದ ಪರಿಸ್ಥಿತಿಯನ್ನು ಸ್ವಾಗತಿಸಬೇಕೆನ್ನುವುದು ತನ್ನ ಅಭಿಪ್ರಾಯವಾಗಿದೆಯೆಂದು ಅವರು ಪತ್ರಕರ್ತರೊಡನಿಂದು ಹೇಳಿದರು.

ಸೇನರನ್ನು ನಡೆಸಿಕೊಂಡ ರೀತಿ ಸರಿಯಲ್ಲವೆಂಬ ಸಾಮಾನ್ಯ ಅಭಿಪ್ರಾಯವೀಗ ಬಲಗೊಂಡಿದೆಯೆಂದು ಖುರ್ಶಿದ್ ನುಡಿದರು.
ಮಾವೊವಾದಿಗಳ ಗಂಭೀರ ಪಿಡುಗಿಗೆ ಸಂಬಂಧಿಸಿದಂತೆ ದೇಶದ ಆಂತರಿಕ ಭದ್ರತೆಯ ವಿಚಾರದಲ್ಲಿ ರಾಜಿಯಾಗಬಾರದೆಂಬ ಇನ್ನೊಂದು ವ್ಯಾಪಕ ಅಭಿಪ್ರಾಯವಿದ್ದರೂ, ಸೇನ್‌ಗೆ ಜಾಮೀನು ನೀಡಿರುವುದನ್ನು ಸ್ವಾಗತಿಸಲೇ ಬೇಕಾಗಿದೆಯೆಂದು ಅವರು ಹೇಳಿದರು.
ಸೇನ್ ಜಾಮೀನಿನಲ್ಲಿ ಹೊರಬಂದ ಬಳಿಕ ಅವರು ಏನಾದರೂ ಹೇಳಲು ಇಚ್ಛಿಸಬಹುದು ಹಾಗೂ ಜನರಿಗೆ ಇನ್ನೊಂದು ವಿಚಾರವನ್ನು ಕೇಳುವ ಅವಕಾಶ ದೊರೆಯಬಹುದೆಂದು ಖುರ್ಶಿದ್ ಅಭಿಪ್ರಾಯಿಸಿದರು.

ಚಿದಂಬರಂಗೆ ಸಂತಸ ಮಾನವ ಹಕ್ಕು ಕಾರ್ಯಕರ್ತ ಬಿನಾಯಕ ಸೇನ್‌ಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿರುವುದಕ್ಕೆ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಸಂತಸ ವ್ಯಕ್ತಪಡಿಸಿದ್ದಾರೆ.
ಬಿನಾಯಕ ಸೇನ್ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದಿರುವುದನ್ನು ಕೇಳಿ ತನಗೆ ಸಂತೋಷವಾಗಿದೆ. ಕೆಳಗಿನ ನ್ಯಾಯಾಲಯದ ಆದೇಶದಿಂದ ತೃಪ್ತರಾಗದವರು ಮೇಲಿನ ನ್ಯಾಯಾಲಯದಲ್ಲಿ ಪರಿಹಾರ ಪಡೆಯಲು ಸಾಧ್ಯವೆಂಬುದು ತನ್ನ ನಂಬುಗೆಯಾಗಿದೆ ಎಂದು ಸುಪ್ರೀಂ ಕೋರ್ಟ್‌ನ ಆದೇಶದ ಕುರಿತು ಪ್ರತಿಕ್ರಿಯಿಸುತ್ತ ಅವರು ಹೇಳಿದರು.

ದೇಶದ್ರೋಹ ಹಾಗೂ ನಕ್ಸಲರಿಗೆ ನೆರವು ನೀಡಿದ ಆರೋಪದಲ್ಲಿ ಸೇನ್‌ಗೆ ಜೀವಾವಧಿ ಶಿಕ್ಷೆ ಘೋಷಣೆಯಾದೊಡನೆಯೇ, ಈ ತೀರ್ಪು ಅನೇಕರಿಗೆ ಅತೃಪ್ತಿ ಉಂಟು ಮಾಡಿರಬಹುದು. ಆದರೆ, ಮೇಲ್ಮನವಿ ಸಲ್ಲಿಸುವ ಮೂಲಕ ಅದನ್ನು ಸರಿಪಡಿಸುವ ಅವಕಾಶವಿದೆಯೆಂದು ಚಿದಂಬರಂ ಹೇಳಿದ್ದರು.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ