ಗುರುವಾರ, ಆಗಸ್ಟ್ 25, 2011

ಭ್ರಷ್ಟಾಚಾರದ ವಿರುದ್ಧ ಹೋರಾಡಲು ಯುವ ಸಮೂಹ ಜಾಗೃತರಾಗಿ !!!


ಶಫಿ, ಬಂಗಾಡಿ

ಲಾಡೆನ್‌ನ ಅಲ್‌ಖೈದಾ ಉಗ್ರರು ಭಯೋ ತ್ಪಾದನೆಯ ವಿರುದ್ಧ ಹೋರಾಡುತ್ತಿದ್ದಾರಂತೆ. ರೆಡ್ಡಿ ಬದ್ರರ‍್ಸ್ ಅಕ್ರಮ ಗಣಿಗಾರಿಕೆಯ ವಿರುದ್ಧ ಹೋರಾಟ ನಡೆಸುತ್ತಿದ್ದಾರಂತೆ... ಇಂಥ ಸುದ್ದಿಗಳು ಪತ್ರಿಕೆಗ ಳಲ್ಲಿ ಬಂದರೆ ನೀವು ನಂಬಲೇಬೇಕು. ಯಾಕೆಂ ದರೆ ಮಾಜಿ ಸಿಎಂ ಯಡಿಯೂರಪ್ಪನವರು ಭ್ರಷ್ಟಾ ಚಾರ ವಿರೋಧಿ ಆಂದೋಲನದಲ್ಲಿ ಅದೂ ಕೂಡಾ ಗಾಂಧಿ ಪ್ರತಿಮೆಯ ಅಡಿಯಲ್ಲಿ ಧರಣಿ ಕುಳಿತು ಕೊಳ್ಳಲು ಹೊರಟರಂತೆ ಎಂಥ ವಿಪರ್ಯಾಸ ನೋಡಿ. ತಾನು ಬಿಡುಗಡೆಯಾದರೂ ಜೈಲಿನಿಂದ ಹೊರಹೋಗಲು ನಿರಾಕರಿಸಿರುವ ಅಣ್ಣಾ ಹಜಾರೆ ಎಲ್ಲಿ? ಬಂಧನದ ಭೀತಿಯಿಂದ ನ್ಯಾಯಾಲಯದಿಂದ ನಿರೀ ಕ್ಷಣಾ ಜಾಮೀನು ಪಡೆಯಲು ಹೊರಟಿರುವ ಯಡಿಯೂ ರಪ್ಪ ಎಲ್ಲಿ?

ಎಲ್ಲ ಆಂದೋಲನವೂ ಅರ್ಥ ಕಳೆದುಕೊಳ್ಳುತ್ತಿದೆ. ಯಾಕೆಂ ದರೆ ಇದು ಭ್ರಷ್ಟಾಚಾರ ವಿರೋಧಿ ಆಂದೋಲನವಾಗಿರದೆ ಕಾಂಗ್ರೆಸ್ ವಿರೋಧಿ ಆಂದೋಲನವಾಗಿರುತ್ತದೆ. ಬಿಜೆಪಿ ಪ್ರಾಯೋಜಿತ ಸಂಘ-ಸಂಸ್ಥೆಗಳು, ವಿದ್ಯಾರ್ಥಿ ಸಂಘಟನೆಗಳು, ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ಬಿಜೆಪಿ ಪರ ಕಾಂಗ್ರೆಸ್ ವಿರೋಧಿ ಘೋಷಣೆಗಳು ಕೂಗುತ್ತಿವೆ. ಇದು ಎಲ್ಲೋ ಒಂದು ಕಡೆ ರಾಜಕೀಯ ಪಕ್ಷಗಳ ಹೋರಾಟವೋ ಎಂದೆನಿಸುತ್ತಿದೆ. ಯಾಕೆಂದರೆ ಕರ್ನಾಟಕದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಾ ಗಲೂ ಚಕಾರವೆತ್ತದ ಎಬಿವಿಪಿ ವಿದ್ಯಾರ್ಥಿ ಸಂಘಟನೆಗಳು ಈಗ ಭ್ರಷ್ಟಾಚಾರ ಹೋರಾಟಕ್ಕೆ ಇಳಿದಿರುವುದು ಹಾಸ್ಯಾಸ್ಪದ ವಾಗಿ ಕಾಣುತ್ತಿದೆ.

ಭ್ರಷ್ಟಾಚಾರದಲ್ಲಿ ಒಂದೇ ಬಗೆ. ಅದರಲ್ಲಿ ಕೇಂದ್ರ ಭ್ರಷ್ಟಾಚಾರ, ರಾಜ್ಯ ಭ್ರಷ್ಟಾಚಾರವೆಂಬುದಿಲ್ಲ. ದೀರ್ಘಕಾಲ ನಮ್ಮನ್ನಾಳಿದ ಕಾಂಗ್ರೆಸ್ಸಿಗರಿಗೆ ಮನಸ್ಸು ಮಾಡಿದರೆ ಇಷ್ಟೊತ್ತಿಗಾಗಲೇ ಭ್ರಷ್ಟಾ ಚಾರ ನಿರ್ಮೂಲನೆ ಮಾಡಬಹುದಿತ್ತು. ‘ಗರೀಬೀ ಹಠಾವೋ’ (ಬಡತನ ನಿರ್ಮೂಲನೆ) ಎಂಬ ಘೋಷಣೆ ಕೇವಲ ಘೋಷಣೆ ಯಾಗಿತ್ತೇ ಹೊರತು ಬಡತನ ನಿರ್ಮೂಲನೆಯಾಗಲಿಲ್ಲ. ಹಂತ ಹಂತವಾಗಿ ಬಡವರ (ರೈತರ ಆತ್ಮಹತ್ಯೆ, ವಿಷ ಮದ್ಯ, ಭೋಪಾಲ್ ದುರಂತ) ನಿರ್ಮೂಲನೆ ಮಾತ್ರ ಆಯಿತು.

ಬಡವರ ಉದ್ಧಾರದ ಯೋಜನೆಯಲ್ಲಿ ಬಂಡವಾಳಶಾಹಿ ಗಳು, ರಾಜಕೀಯ ಪುಡಾರಿಗಳು ಕೋಟಿ-ಕೋಟಿ ಹಣ ನುಂಗಿ ದರೇ ಹೊರತು ಬಡವರ ಉದ್ಧಾರವಾಗಲಿಲ್ಲ. ಇಷ್ಟರವರೆಗೆ ನಿದ್ರಿಸಿದ್ದ ಜನ ಈಗ ಎಚ್ಚೆತ್ತಿದ್ದಾರೆ. ಇದೀಗ ಸಮೂಹಸನ್ನಿಯಾ ಗದೆ ನಿರಂತರವಾಗಿ ಭ್ರಷ್ಟಾಚಾರದ ವಿರುದ್ಧ ಹೋರಾ ಡುವ ಯುವಸಮೂಹ ಜಾಗೃತರಾಗಿ ಕ್ರಿಯಾಶೀಲ ರಾಗಬೇಕು. ಇನ್ನು ಕೆಲವು ವಿದ್ಯಾರ್ಥಿಗಳು ಎಬಿ ವಿಪಿಯ ಹಿನ್ನೆಲೆ, ಪೂರ್ವಾ ಪರ ಉದ್ದೇಶ ತಿಳಿ ಯದೆ ಸಕ್ರಿಯರಾಗಿದ್ದಾರೆ. ಇನ್ನು ಮುಂದಾದರೂ ಸಂಘಟನೆಯ ಬಗ್ಗೆ ತಿಳಿಯುವಂತಾಗಬೇಕು.

ಪ್ರತೀ ಜಿಲ್ಲೆ, ತಾಲೂಕುಗಳಲ್ಲಿ ಭ್ರಷ್ಟಾಚಾರ ವಿರೋಧಿ ಸಮಿತಿ ರಚನೆಯಾಗಬೇಕು. ಆದರೆ ಪಕ್ಷಾತೀತವಾಗಿರಬೇಕು. ಇಲ್ಲಿ ಅಣ್ಣಾ ಹಜಾರೆಗೆ ಬೆಂಬಲವಾಗಿ ಮೆರವಣಿಗೆ ಸಾಗುತ್ತಿತ್ತು. ಅದರಲ್ಲೂ ಘೋಷಣೆ ಕೂಗಿಕೊಂಡು ಹೋಗುತ್ತಿರುವವರಲ್ಲಿ ಅತ್ಯಂತ ಭ್ರಷ್ಟ ಹಾಗೂ ಲಂಚಕೋರ ಸರಕಾರಿ ನೌಕರರು ಹಾಗೂ ಕುಟುಂಬ ಸಮೇತರಾಗಿ ಸಾಗುತ್ತಿದ್ದರು. ಇವರನ್ನೆಲ್ಲಾ ಕಂಡಾಗ ನಗುವುದೋ, ಅಳುವುದೋ ಎಂದು ತಿಳಿಯದಾಗಿ, ನಮ್ಮೆನ್ನೆಲ್ಲಾ ಕಾಡುವ ಕಟ್ಟ ಕಡೆಯ ಪ್ರಶ್ನೆ ಹೀಗೂ ಉಂಟೇ....? ಈ ಲೇಖನ ಪ್ರಕಟಗೊಳ್ಳುವಷ್ಟರಲ್ಲಿ ನಮ್ಮ ಮಾಜಿ ಸಿಎಂ ಯಡಿಯೂರಪ್ಪನ ವರ ಧರಣಿಗೆ ಪಕ್ಷದಲ್ಲೇ ವಿರೋಧ ಉಂಟಾದುದರಿಂದ ಯಡ್ಡಿ ಯವರು ಧರಣಿಯಲ್ಲಿ ಪಾಲ್ಗೊಳ್ಳುವುದಿಲ್ಲವಂತೆ! ಮಾಧ್ಯಮದ ವರು ಕಾರಣ ಕೇಳಿದರೆ ಯಡ್ಡಿಯವರ ಮಾನ(ಸಿಕ)ಸ ಪುತ್ರ ನಮ್ಮ ಎಣ್ಣೆ ಸಚಿವ ರೇಣುಕಾಚಾರ್ಯ ಹೇಳಿದ್ದೇನು ಗೊತ್ತಾ? ಯಡ್ಡಿಯ ವರು ಧರಣಿಗೆ ಕೂತರೆ ಭಾರೀ ಸಂಖ್ಯೆಯಲ್ಲಿ ಜನಸೇರಿ ಟ್ರಾಫಿಕ್ ಜಾಮ್ ಆಗ ಬಹುದಂತೆ. ೨೦೧೧ರ ಸೂಪರ್ ಜೋಕ್ ಅಲ್ಲವೇ? ಭ್ರಷ್ಟರ ವಿರುದ್ಧ ಭ್ರಷ್ಟರು ಇದನ್ನೆಲ್ಲಾ ನೋಡುವಾಗ ನಮಗೆ ಹೊಳೆ ಯುವ ಉತ್ತರ ಹೀಗೂ ಉಂಟು..!


ಶಫಿ, ಬಂಗಾಡಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ