ಮಂಗಳವಾರ, ಏಪ್ರಿಲ್ 05, 2011

ಕೋಮುವಾದಿ ಶಕ್ತಿಗಳನ್ನು ಸೋಲಿಸುವುದರ ಜೊತೆಗೆ ಬಲಿಷ್ಠ ಮತ್ತು ಪ್ರಜಾಸತ್ತಾತ್ಮಕ ಭಾರತ ಕಟ್ಟಲು ಮುಂದಾಗಬೇಕೆಂದು :ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಶರೀಫ್

 
 
ದುಬೈ : ಭಾರತದಲ್ಲಿರುವ ಎಲ್ಲಾ ಜನರಿಗೆ ಸಮಾನ ಹಕ್ಕು ಮತ್ತು ಸಮಾನ ನ್ಯಾಯ ದೊರಕುವಂತಾಗಬೇಕಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಶರೀಫ್ ಹೇಳಿದ್ದಾರೆ. ಎಮಿರೇಟ್ಸ್ ಇಂಡಿಯಾ ಫ್ರಟೆರ್ನಿಟಿ ಫೋರಂ ವತಿಯಿಂದ ಮಾರ್ಚ್ ೨೫ ರಂದು ದುಬೈನ  ಕಂಫರ್ಟ್ ಇನ್ ಹೋಟೆಲಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡುತ್ತಿದ್ದರು.
 
ಭಾರತದಲ್ಲಿ ಮುಸ್ಲಿಮರ ಪರಿಸ್ಥಿತಿ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಅತ್ಯಂತ ಕೆಳಮಟ್ಟದಲ್ಲಿದೆ. ೩೦ ವರ್ಷಗಳ ಕಾಲ ಕಮ್ಯುನಿಸ್ಟ್ ಪಕ್ಷಗಳು ಆಳ್ವಿಕೆ ನಡೆಸಿದ ಪಶ್ಚಿಮ ಬಂಗಾಳದಲ್ಲಿ ದೇಶದಲ್ಲಿಯೇ ಅತ್ಯಂತ ಸಂಕಷ್ಟ ಪರಿಸ್ಥಿತಿಯನ್ನು ಅಲ್ಲಿನ ಮುಸ್ಲಿಮರು ಎದುರಿಸುತ್ತಿದ್ದಾರೆ. ಈ ಸಮುದಾಯವನ್ನು ಮೇಲೆತ್ತಲು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಶ್ರಮಿಸುತ್ತಿದ್ದು ನಾಗರೀಕರು ಸಂಘಟನೆಯ ಈ ಸಾಮಾಜಿಕ ಕಾಳಜಿಗಾಗಿ ಕೈಜೋಡಿಸಲು ಮುಂದಾಗಬೇಕೆಂದು ಹೇಳಿದರು. ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಕೋಮುವಾದಿ ಶಕ್ತಿಗಳನ್ನು ಸೋಲಿಸುವುದರ ಜೊತೆಗೆ ಬಲಿಷ್ಠ ಮತ್ತು ಪ್ರಜಾಸತ್ತಾತ್ಮಕ ಭಾರತ ಕಟ್ಟಲು ಮುಂದಾಗಬೇಕೆಂದು ಅವರು ಕರೆ ನೀಡಿದರು .
 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಮಿರೇಟ್ಸ್ ಇಂಡಿಯಾ ಫ್ರಟೆರ್ನಿಟಿ ಫೋರಂ ಅಧ್ಯಕ್ಷರಾದ ಜನಾಬ್ ನಾಸಿರ್ ಹುಸೇನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜನಾಬ್ ಅಶ್ರಫ್ ಉಮರ್ ಖಾನ್ ಭಾಗವಹಿಸಿದ್ದರು. ಮಜೀದ್ ಆಲಡ್ಕ ಧನ್ಯವಾದ ಸಮರ್ಪಿಸಿದರು. ಸಮಾರಂಭದಲ್ಲಿ ಸುಮಾರು ೧೩೦ ಮಂದಿ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ