ಶುಕ್ರವಾರ, ಡಿಸೆಂಬರ್ 17, 2010

ನೂಹ್‌ರ ಕಾಲದ ಪ್ರವಾಹದಿಂದ ಪರ್ಸಿಯನ್ ಕೊಲ್ಲಿ ಸೃಷ್ಟಿ: ಪುರಾತತ್ವ ಶಾಸ್ತ್ರಜ್ಞರ ಅಭಿಮತ

ಟೊರೊಂಟೊ, ಡಿ.17: ಬೈಬಲ್‌ನಲ್ಲಿ ಉಲ್ಲೇಖಿಸಲಾಗಿರುವ ನೂಹ್‌ರ ಕಾಲದ ಕತೆಯಲ್ಲಿ ಬರುವ ಜಲಪ್ರಳಯದ ಘಟನೆ ಯು ಒಂದು ವಾಸ್ತವ ಘಟನೆಯಾಗಿರುವ ಎಲ್ಲ ಸಾಧ್ಯತೆಯಿದೆ ಎಂದು ನೂತನ ಸಿದ್ಧಾಂತವೊಂದು ತಿಳಿಸಿದೆ. ನೂಹ್ ಜಲಪ್ರಳಯವು ಕೆನಡಾ ದಲ್ಲಿ ಕ್ರಿ.ಪೂ. 6000ದಲ್ಲಿ ಪ್ರಾರಂಭ ಗೊಂಡು ವಿಶ್ವವ್ಯಾಪಿಯಾದ ಅಭೂತ ಪೂರ್ವ ಪ್ರವಾಹದ ಕಾರಣ ಸಂಭವಿಸಿರುವ ಸಾಧ್ಯತೆಯಿದೆ ಎಂದು ಅದು ತಿಳಿಸಿದೆ.

ಇಂದಿನ ದಿನಗಳಲ್ಲಿ ನಾವು ಕಾಣುತ್ತಿರುವ ಪರ್ಸಿಯನ್ ಕೊಲ್ಲಿಯು ಈ ಜಲಪ್ರಳಯದ ಸೃಷ್ಟಿಯಾಗಿದೆ ಎಂದು ಬರ್ಮಿಂಗ್‌ಹ್ಯಾಮ್ ವಿಶ್ವವಿದ್ಯಾನಿಲಯ ದಲ್ಲಿ ಪುರಾತತ್ವ ಶಾಸ್ತ್ರಜ್ಞರಾಗಿರುವ ಜೆಫ್ರಿ ರೋಸ್‌ರ ಸಿದ್ಧಾಂತ ವಿವರಿಸುತ್ತದೆ.
ನೂತನ ಸಿದ್ಧಾಂತದ ಪ್ರಕಾರ, ಕೆನಡದ ಪ್ರಾಚೀನ ಬೃಹದ್ಗಾತ್ರದ ಸರೋವರ ಅಗಾಸಿಸ್(ಅದರ ಪಳೆಯುಳಿಕೆಯಾಗಿ ರುವ ಇಂದಿನ ವಿನ್ನಿಪೆಗ್ ಸರೋವರ) 8 ಸಾವಿರ ವರ್ಷಗಳ ಹಿಂದೆ ಹಠಾತ್ತನೆ ಒಡೆದು ವಿಶ್ವವ್ಯಾಪಿ ಜಲಪ್ರಳಯವನ್ನು ಉಂಟು ಮಾಡಿದೆ ಎಂದು ರೋಸ್ ವಿವರಿಸುತ್ತಾರೆ.

ಪ್ರಸ್ತಾಪಿತ ವಿಶ್ವವ್ಯಾಪಿ ಜಲಪ್ರಳಯವು ಪ್ರಸಕ್ತ ನಾವು ಕಾಣುವ ಪರ್ಸಿಯನ್ ಕೊಲ್ಲಿಯನ್ನು ಸೃಷ್ಟಿಸಿದೆ ಎಂದವರು ಹೇಳುತ್ತಾರೆ.
ಈ ಜಲಪ್ರಳಯವು ಮಾನವ ಜನಾಂಗದ ಪೂರ್ವ ವಿಕಾಸ ಯುಗದ ಪ್ರಮುಖ ಪುರಾತತ್ವದ ಆಧಾರವಾಗಿ ಹೊರಹೊಮ್ಮಿದೆ. ಈ ವಾದಕ್ಕೆ ಇತ್ತೀಚಿನ ಕೆಲವು ಸಂಶೋಧನೆಗಳು ಕೂಡಾ ಪುಷ್ಟಿ ನೀಡಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ