ಕಳೆದ ತಿಂಗಳು ೧೨ರಂದು ಮೈಸೂರಿನಲ್ಲಿ ಪಿ.ಎಫ್.ಐ. ಸಮಾವೇಶ ನಡೆದಿತ್ತು. ಇದರಲ್ಲಿ ಭಾಗವಹಿಸಲೆಂದು ೧೧ರಂದು ರಾತ್ರಿ ದ.ಕ. ಜಿಲ್ಲಾ ಸಮಿತಿಯ ಒಂಬತ್ತು ಮಂದಿ ಸದಸ್ಯರು ವಾಹನ ದಲ್ಲಿ ಹೊರಟಿದ್ದರು. ಇದೇ ವೇಳೆ ಇವ ರಿದ್ದ ವಾಹನ ಬಿ.ಸಿ.ರೋಡ್ ತಲುಪು ತ್ತಿದ್ದಂತೆಯೇ ಅಡ್ಡಲಾಗಿ ನಿಂತ ಇನ್ಸ್ ಪೆಕ್ಟರ್ ನಂಜುಡೇಗೌಡ ಮತ್ತು ಸಿಬ್ಬಂದಿ ಯಿದ್ದ ಪೊಲೀಸ್ ವಾಹನ ಪಿ.ಎಫ್.ಐ. ಕಾರ್ಯಕರ್ತರನ್ನು ಬಂಧಿಸಿತ್ತು.
ಅದೇ ದಿನದಿಂದ ನಿರಂತರವಾಗಿ ಮೂರು ದಿನಗಳವರೆಗೆ ದೌರ್ಜನ್ಯ ನಡೆಸಿದ್ದರು ಎಂದು ನಂತರ ನಡೆದ ಪತ್ರಿಕಾಗೋಷ್ಟಿಯಲ್ಲಿ ದೂರಲಾಗಿತ್ತು. ವಾಹನದಲ್ಲಿದ್ದ ಉಳ್ಳಾಲದ ನವಾಝ್ ಎಂಬರನ್ನು ಟಾರ್ಗೆಟ್ ಮಾಡಿದ ನಂಜುಂಡೇಗೌಡ ಅವರು ಕುಂಪಲ ಮಸೀದಿಯಲ್ಲಿ ಸಿಕ್ಕ ಮಾಂಸ ಎಸೆದಿರು ವುದನ್ನು ಒಪ್ಪಿಕೊಳ್ಳುವಂತೆ ಹೇಳಿ ದೌರ್ಜನ್ಯ ನಡೆಸಿದ್ದರಲ್ಲದೆ, ಇತರರ ಮೇಲೂ ನಿರಂತರವಾಗಿ ದೌರ್ಜನ್ಯ ನಡೆಸಿದ್ದರೆಂದು ಪಿ.ಎಫ್.ಐ. ಕಾರ್ಯ ಕರ್ತರು ದೂರಿದ್ದರು.
ಬಳಿಕ ಪೊಲೀಸ್ ದೌರ್ಜನ್ಯದ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ಕಾರ್ಯಕರ್ತರ ಪೈಕಿ ನವಾಝ್ ರಾಜ್ಯ ಮಾನವ ಹಕ್ಕು ಅಯೋಗಕ್ಕೆ ದೂರು ನೀಡಿದ್ದರು. ದೂರನ್ನು ಪರಿಗಣಿಸಿರುವ ಅಯೋಗ ದ.ಕ. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅವರಿಗೆ ನೋಟೀಸ್ ಜಾರಿ ಮಾಡಿದ್ದು ನಂಜುಂಡೇಗೌಡ ಅವರು ನಡೆಸಿದ ದೌರ್ಜನ್ಯದ ಬಗ್ಗೆ ತನಿಖೆ ನಡೆಸಿ ಕೈ ಗೊಂಡ ಕ್ರಮದ ಬಗ್ಗೆ ಆರು ವಾರಗಳಲ್ಲಿ ವರದಿ ನೀಡುವಂತೆ ಆದೇಶಿಸಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ