ಗುರುವಾರ, ಜನವರಿ 13, 2011

ಕೇಸರಿ ಭಯೋತ್ಪಾದನಾ ಜಾಲದ ಕೈವಾಡ ಕರ್ನಾಟದ ನಂಟು ತನಿಖೆ ನಡೆಸುವುದು ಅನಿವಾರ್ಯ

ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ, ಮಾಲೆಗಾಂವ್, ಮಕ್ಕಾ ಮಸೀದಿ ಮತ್ತು ಅಜ್ಮೀರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಕೇಸರಿ ಭಯೋತ್ಪಾದನಾ ಜಾಲದ ಕೈವಾಡವಿರುವ ಬಗ್ಗೆ ಆಳವಾದ ಸುಳಿವು ದೊರಕಿದೆಯಾದರೂ, ಪ್ರಕರಣಕ್ಕೆ ಸಂಬಂಧಿಸಿದ ಪೂರ್ಣ ಪ್ರಮಾಣದ ತನಿಖೆ ಇನ್ನೂ ಬಾಕಿಯಿದೆ ಎಂದು ತನಿಖೆಯಲ್ಲಿ ಭಾಗವಹಿಸಿರುವ ಮೂಲಗಳು ತಿಳಿಸಿವೆ.
ಸ್ವಾಮಿ ಅಸೀಮಾನಂದ, ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್, ಪ್ರಜ್ಞಾ ಠಾಕೂರ್ ಮತ್ತು ಇತರರ ಹೆಸರು ಈಗಾಗಲೇ ಗುರುತಿಸಲಾಗಿದೆ. ಆದರೆ ಅವರೆಲ್ಲರ ವಿರುದ್ಧ ತನಿಖಾ ಸಂಸ್ಥೆಗಳು ‘ವ್ಯಾಪಕ ತನಿಖೆ’ ನಡೆದಿಲ್ಲ ಎಂದು ಮೂಲಗಳು ಹೇಳಿವೆ.
ಕರ್ನಾಟಕದ ವ್ಯಕ್ತಿಯೊಬ್ಬ ತನ್ನ ಜಾಲ ದಿಂದ ಸಂಗ್ರಹಿಸಿ ನೀಡಿರುವ ಐಇಡಿ ಒಂದನ್ನು ಪಡೆದಿರುವುದಾಗಿ ತನಿಖೆಯ ವೇಳೆ ಪುರೋಹಿತ್ ತಿಳಿಸಿದ್ದಾನೆ ಎಂದು ಮೂಲಗಳು ಹೇಳಿವೆ. ಆದರೆ ಇದನ್ನು ಯಾವುದೇ ಸ್ಫೋಟದಲ್ಲಿ ಬಳಸಲಾಗಿತ್ತೇ ಎಂಬ ಕುರಿತು ಸ್ಪಷ್ಟ ಉತ್ತರವಿಲ್ಲ ಎಂದು ವರದಿಯೊಂದು ತಿಳಿಸಿದೆ.
ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಿಂದ ತುಂಬಾ ಜನರ ಹೆಸರಿದೆ. ಅವರ ಕುರಿತು ವಿವರಣಾತ್ಮಕವಾಗಿ ನೋಡಬೇಕಾಗಿದೆ. ಆದಾಗ್ಯೂ, ಇಡೀ ಪ್ರಕ್ರಿಯೆಗೆ ಹಣ ಪೂರೈಸಿದ ಜಾಲದ ಕುರಿತು ಇನ್ನೂ ತನಿಖೆಯಾಗಿಲ್ಲ.
ಕೇಸರಿ ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಅಭಿನವ್ ಭಾರತ್‌ನ ಚಟುವಟಿಕೆಗಳಿಗೆ ಹಣ ಸಂಗ್ರಹಿಸಿದ್ದ, ಪುಣೆ ಮೂಲದ ಆರೆಸ್ಸೆಸ್ ಸದಸ್ಯ ಶ್ಯಾಮ್ ಆಪ್ಟೆಯ ತನಿಖೆಯ ವೇಳೆ ತಿಳಿದು ಬಂದಿರುವ ಪ್ರಕಾರ, ಉಗ್ರವಾದಿ ಗುಂಪಿಗೆ ಕಾರ್ಯಾಚರಿಸಲು ಹಣ ಪೂರೈಸಿರುವವರಲ್ಲಿ ಬಹುತೇಕ ಮಂದಿ ಪ್ರಮುಖ ಉದ್ಯಮಿಗಳು ಎಂಬುದು ಬಹಿರಂಗವಾಗಿದೆ.
ಶ್ರೀರಾಮ ಸೇನೆಯ ನಾಯಕ ವಿಲಾಸ್ ಪವಾರ್‌ನ ಶಿಫಾರಸಿನ ಮೇರೆಗೆ ಕರ್ನಾಟಕದ ಬೆಳಗಾವಿಯ 30ರ ಹರೆಯದ ಪ್ರವೀಣ್ ಎಂಬಾತ ತನ್ನ ಬಳಿಗೆ ಬಂದಿದ್ದ ಎಂದು ಅಭಿನವ್ ಭಾರತ್ ಸಂಸ್ಥಾಪಕ ಪುರೋಹಿತ್ ತನಿಖೆದಾರರಿಗೆ ತಿಳಿಸಿರುವುದಾಗಿ ವರದಿಯಾಗಿದೆ.
ಸ್ಫೋಟಕಗಳನ್ನು ತಯಾರಿಸುವ ಕುರಿತು ಬೃಹತ್ ಪ್ರಮಾಣದ ಮಾಹಿತಿಗಳನ್ನು ಇಂಟರ್‌ನೆಟ್‌ನಿಂದ ಸಂಗ್ರಹಿಸಿದ್ದ ಪ್ರವೀಣ್, 2008ರ ಆಗಸ್ಟ್‌ನಲ್ಲಿ ಪಂಚ್‌ಮಾರಿ ಯಲ್ಲಿ ಪುರೋಹಿತ್‌ನ್ನು ಭೇಟಿಯಾಗಿದ್ದನು. ಐಇಡಿಗಳನ್ನು ತಯಾರಿಸಲು ಆತನಿಂದ ಪುರೋಹಿತ್ ನಿಂದಲೂ ಆತ ಮಾಹಿತಿಯನ್ನು ಪಡೆದಿದ್ದನು.
ಆರಂಭದಲ್ಲಿ ಮನಸ್ಸಿಲ್ಲದವಂತೆ ವರ್ತಿಸಿದ್ದ ಪುರೋಹಿತ್ ಕೊನೆಗೆ ಪ್ರವೀಣ್‌ಗೆ ಧಾವಡೆಯ ಪರಿಚಯ ಮಾಡಿಸಿಕೊಟ್ಟಿದ್ದನು. ಪ್ರವೀಣ್‌ಗೆ ಧಾವಡೆ ಈ ಕುರಿತ ಪಾಠ ಹೇಳಿಕೊಟ್ಟಿದ್ದನು ಎಂದು ತನಿಖಾ ಮೂಲಗಳು ಹೇಳುತ್ತವೆ.

ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ತನಿಖೆಯಲ್ಲಿ ಸ್ಪಷ್ಟವಾಗಿರುವುದೇನೆಂದರೆ, ಈ ಭಯಾನಕ ಗುಂಪಿನಲ್ಲಿ ಇನ್ನೂ ಹಲವಾರು ಹೆಸರುಗಳು ಗುಪ್ತವಾಗಿ ಉಳಿದಿವೆ ಎನ್ನುವುದಾಗಿದೆ. ಅವರಲ್ಲಿ ಕೆಲವರು ನೇರವಾಗಿ ಸ್ಫೋಟಕಗಳ ಕುರಿತು ಆಸಕ್ತಿಯನ್ನು ಹೊಂದಿದ್ದವರು ಮತ್ತು ಒಂದೇ ರೀತಿಯ ಹಿಂಸಾತ್ಮಕ ಮನೋಭಾವನೆಯನ್ನು ಹೊಂದಿದ್ದ ವರಾಗಿದ್ದಾರೆ ಎಂದು ಮೂಲಗಳು ಹೇಳುತ್ತವೆ.
ಉದಾಹರಣೆಗೆ, ಫರೀದಾಬಾದ್ ಮೂಲದ ಕೇಸರಿ ಭಯೋತ್ಪಾದನಾ ಜಾಲದ ಸದಸ್ಯ ಶಂಕರಾಚಾರ್ಯ ದಯಾನಂದ ಪಾಂಡೆ, ಪುರೋಹಿತ್ ನೀಡಿರುವ ಮಾಹಿತಿಯ ಪ್ರಕಾರ, ಅವರು ದಿಲ್ಲಿ ಮತ್ತು ಕೊಲ್ಕತಾಗಳಲ್ಲಿ ನಡೆಸಿರುವ ಸಭೆಗಳಲ್ಲಿ ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಸದಸ್ಯರು ಭಾಗವಹಿಸಿರುವುದಾಗಿ ತಿಳಿದುಬಂದಿದೆ. ಆದರೆ ಇವರೆಲ್ಲರ ಬಳಿಗೆ ತಾವು ಇನ್ನೂ ನಿಜವಾಗಿಯೂ ಹೋಗಿಲ್ಲ ಎಂದು ಮೂಲಗಳು ಹೇಳುತ್ತವೆ.
ಕಳೆದ ಎರಡು ವರ್ಷಗಳಲ್ಲಿ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಗಳ ಹೆಸರಲ್ಲಿ ಅನಾಮಧೇಯ ಪತ್ರಗಳನ್ನು ಬರೆದಿರುವ ಬಗ್ಗೆ ತನಿಖಾ ಸಂಸ್ಥೆಗಳು ಪತ್ತೆ ಹಚ್ಚಿವೆ. ‘‘ಅವುಗಳ ಕುರಿತು ತನಿಖೆ ನಡೆಸುವುದು ಅನಿವಾರ್ಯವಾಗಿದೆ’’ ಎಂದು ಮೂಲಗಳು ಹೇಳಿವೆ.
ಇಂತಹ ಅನಾಮಧೇಯ ಪತ್ರಗಳ ಹಿಂದೆ ಸಂಘಟನೆಗಳ ದೊಡ್ಡ ಸಂಚಿನ ಕುರಿತ ಉದ್ದೇಶ ಪೂರ್ವಕ ಕ್ರಿಯೆಗಳಿವೆ ಎಂದೂ ಮೂಲಗಳು ಹೇಳಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ