ಮಸೀದಿ ತೆರವುಗೊಳಿಸುವ ಬದಲು ಅದರ ಸಮೀಪದಲ್ಲಿರುವ 10 ಮನೆಗಳನ್ನು ಸ್ವಯಂ ಪ್ರೇರಿತರಾಗಿ ತೆರವುಗೊಳಿಸಿ ರಸ್ತೆ ವಿಸ್ತರಣೆಗಾಗಿ ಜಿಲ್ಲಾಡಳಿತಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಈ ಪ್ರಕ್ರಿಯೆಗೆ ಜಿಲ್ಲಾಡಳಿತ ವೌಖಿಕ ಒಪ್ಪಿಗೆ ನೀಡಿದೆ.
ಸ್ಥಳೀಯರ ಈ ತೀರ್ಮಾನದಿಂದ ಮಸೀದಿಯೊಂದು ಉಳಿದಿದ್ದು, ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಊರಿನ ಮುಖಂಡರು ಮುಂದಾಗಿದ್ದಾರೆ.
‘ಸುಪ್ರೀಂ ಕೋರ್ಟ್‌ನ ಆದೇಶಕ್ಕೆ ನಾವು ತಲೆಬಾಗುತ್ತೇವೆ. ಅದೇ ರೀತಿ ಮಸೀದಿಯೂ ಉಳಿದಿದೆ’ ಎಂದು ಸ್ವಯಂ ಪ್ರೇರಿತವಾಗಿ ಮನೆ ತೆರವುಗೊಳಿಸಿದ ವ್ಯಕ್ತಿಯೊಬ್ಬರು ಸಂತೋಷದಿಂದ ಪ್ರತಿಕ್ರಿಯಿಸಿದ್ದಾರೆ.
‘ಅಲ್ಲಾಹನ ಭವನವನ್ನು ರಕ್ಷಿಸುವುದು ಮುಸಲ್ಮಾನರ ಕರ್ತವ್ಯವಾಗಿದೆ. ಆದ್ದರಿಂದ ನಮ್ಮ ಮನೆಯನ್ನು ತೆರವುಗೊಳಿಸಿ ಮಸೀದಿಯನ್ನು ಉಳಿಸಿಕೊಂಡಿದ್ದೇವೆ’ ಎಂದು ಮನೆ ತೆರವುಗೊಳಿಸಿದ ಮತ್ತೋರ್ವರು ಪ್ರತಿಕ್ರಿಯಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ