ಬುಧವಾರ, ಜನವರಿ 05, 2011

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರಿಗೆ ಜಾಮೀನು

ಮಂಗಳೂರು: ಸಂಘ ಪರಿವಾರದ ಮುಖಂಡರೊಬ್ಬರ ಕೊಲೆಗೆ ಸಂಚು ಹೂಡಿದ್ದರು ಎಂಬ ಆರೋಪದಲ್ಲಿ ಬಂಧಿತರಾಗಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರಿಗೆ ದ.ಕ.ಜಿಲ್ಲಾ ನ್ಯಾಯಾಲಯ ಜಾಮೀನು ನೀಡಿದೆ ನಿರಪರಾಧಿಗಳಾದ ಶರೀಫ್‌, ನವಾಝ್‌, ಸೈಫುಲ್ಲಾ, ಅಶ್ರಫ್‌, ರಿಯಾಝ್‌, ನೂರುಲ್ಲಾ, ನೌಶಾದ್‌, ರಶೀದ್‌, ಅನ್ಸಾರ್‌ ಎಂಬವರಿಗೆ ಜಿಲ್ಲಾ ಸೆಷನ್ಸ್‌ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದ್ದು ಅವರನ್ನು ಬಿಡುಗಡೆಗೊಳಿಸಿದೆ. ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮವೊಂದಕ್ಕೆ ಈ 9 ಮಂದಿ ಹೋಗುತ್ತಿದ್ದಾಗ ಬಿ.ಸಿ.ರೋಡ್‌ ಸಮೀಪ ಪೊಲೀಸರು ಇವರನ್ನು ಬಂಧಿಸಿ ಸುಳ್ಳು ಮೊಕದ್ದಮೆ ಹೂಡಿದ್ದರು . ಇದನ್ನು ಆರೋಪಿಸಿ ಪಿಎಫ್ಐ ಕೆಲವು ದಿನಗಳ ಹಿಂದೆ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಬೃಹತ್ ಪ್ರತಿಭಟನೆ ನಡೆಸಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ