ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಮಂಗಳೂರು ಹಿದಾಯಿ ಫೌಂಡೇಶನ್ ನಸಂಚಾಲಕರಾದ ಹಾಜಿ ಮುಹಮ್ಮದ್ ಹನೀಫ್, ಗೋಳ್ತಮಜಲು ಇವರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಸಾಮಾಜಿಕ ಕಳಕಳಿಯ ಬಗ್ಗೆ ಪ್ರಶಂಸೆಗಳನ್ನು ವ್ಯಕ್ತಪಡಿಸಿ, ಪವಿತ್ರ ಕುರ್‌ಆನ್‌ನ ಸೂಕ್ತದ ಮೂಲಕ ಉದ್ಘಾಟಿಸಿದರು.
ಮುಖ್ಯ ಅಥಿತಿಯಾಗಿ ಮಾತನಾಡಿದ ಶ್ರೀ ರಾಮಚಂದ್ರ ಭಟ್, ಮೆಡಿಕಲ್ ಅಫೀಸರ್, ರೋಟೈ ಕ್ಯಾಂಪ್ಕೊ ಬ್ಲಡ್ ಬ್ಯಾಂಕ್ ಪುತ್ತೂರು ಇವರು ಮಾತನಾಡಿ ಪಿ.ಯಫ್.ಐ ಯ ಸಮಯ ಪಾಲನೆ, ಶಿಸ್ತು ಹಾಗೂ ರಕ್ತದಾನ ಕಾರ್ಯಕ್ರಮಗಳ ಬಗ್ಗೆ ತನ್ನ ಸ್ವ-ಅನುಭವವನ್ನು ವಿವರಿಸಿದರು.
"ದಾನವು ವಿಪತ್ತನ್ನು ತಡೆಯುವುದು" ಎಂಬ ಪವಿತ್ರ ಕುರ್‌ಆನ್‌ನ ಸೂಕ್ತವನ್ನು ವಿವರಿಸುತ್ತಾ, ಪಿ.ಯಫ್.ಐ ಯ ಸದಸ್ಯರ, ಅಭಿಮಾನಿಗಳ ಮಹತ್ವದ ರಕ್ತದಾನವು ಪ್ರಸಕ್ತ ಜಾತಿ ವೈಷಮ್ಯವನ್ನು ತಡೆಯಲು ಹೇತುವಾಗಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ.ಎಸ್ ಮಹಮ್ಮದ್, ಸೋಷಿಯಲ್ಡೆ ಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ, ಕೆ.ಎಂ.ಸಿ ಬ್ಲಡ್ ಬ್ಯಾಂಕ್ ಮೆಡಿಕಲ್ ಅಫೀಸರ್ ಶ್ರೀ ಜೀತ್ ಹಾಗೂ ವಲಯ ಮಟ್ಟದ ಪದಾಧಿಕಾರಿಗಳು ಉಪಸ್ಥಿತ ರಿದ್ದರು.
ಸಭಾಕಾರ್ಯಕ್ರಮದ ನಂತರ ಹೈದರ್ ನೀರ್‌ಸಾಲ್ ರವರ ರಕ್ತದಾನದ ಮೂಲಕ ಚಾಲನೆ ಗೊಂಡ ಈ ಬ್ರಹತ್ ಶಿಬಿರದಲ್ಲಿ ಅಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದು, ಪಿ.ಯಫ್. ಐ ಯ ಸದಸ್ಯರು ಮತ್ತು ಅಭಿಮಾನಿಗಳು ಕೂಡಿ ೧೧೮ ಯುನಿಟ್ ಗಳಷ್ಟು ರಕ್ತವನ್ನು ದಾನ ಮಾಡಿ ಕಾರ್ಯಕ್ರಮವನ್ನು ವಿಜಯಗೊಳಿಸಿದರು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಶ್ರೀ ರಾಮಚಂದ್ರ ಭಟ್, ಪಿ.ಯಫ್.ಐ ಯು ಮಾತಿನಲ್ಲಿ ಹೇಳಿದ್ದನ್ನು ಕಾರ್ಯವಾಗಿ ತೋರಿಸುವ ಸಂಘಟನೆ ಎಂಬ ಪ್ರಶಂಸೆಯನ್ನು ವ್ಯಕ್ತಪಡಿ ಸುತ್ತಾ ಕಾರ್ಯಕರ್ತರಿಗೆ ಧನ್ಯವಾದಗಳನ್ನು ಸಮರ್ಪಿಸಿದರು. ಉತ್ತಮವಾಗಿ ನಡೆದ ಈ ಕಾರ್ಯ ಕ್ರಮವು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ