ಮಂಗಳವಾರ, ಜನವರಿ 04, 2011

26/11: ಕರ್ಕರೆಯೊಂದಿಗಿನ ದೂರವಾಣಿ ದಾಖಲೆ ಬಿಡುಗಡೆ ಮಾಡಿದ ದಿಗ್ವಿಜಯ್ ಸಿಂಗ್: ಸಮಗ್ರ ತನಿಖೆಗೆ ಆಗ್ರಹ

ಮುಂಬೈ, ಜ.4: 26/11ರ ಮುಂಬೈ ದಾಳಿಗೆ ಮೊದಲು ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ತನ್ನ ಮೊಬೈಲ್‌ಗೆ ಕರೆ ಮಾಡಿದ್ದ ದಾಖಲೆಗಳನ್ನು ಇಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಬಿಡುಗಡೆ ಮಾಡಿದ್ದಾರೆ.

ದಾಳಿಗೆ ಅಲ್ಪ ಮೊದಲು ಕರ್ಕರೆ ತನಗೆ ಕರೆ ಮಾಡಿ, ಕೇಸರಿ ಪಡೆಗಳಿಂದ ತನ್ನ ಜೀವಕ್ಕೆ ಬೆದರಿಕೆಯಿದೆ ಎಂದು ಹೇಳಿದ್ದರು ಎಂದು ದಿಗ್ವಿಜಯ್ ಸಿಂಗ್ ಇತ್ತೀಚೆಗೆ ಬಹಿರಂಗಪಡಿಸಿದ್ದರು.
ಪತ್ರಿಕಾಗೋಷ್ಠಿಯಲ್ಲಿಂದು ನವೆಂಬರ್ 26,2008ರಲ್ಲಿ ಕರ್ಕರೆ ತನಗೆ ಮಾಡಿದ್ದ ದೂರವಾಣಿ ದಾಖಲೆಗಳನ್ನು ಇಂದು ದಿಗ್ವಿಜಯ್ ಸಿಂಗ್ ಬಿಡುಗಡೆ ಮಾಡಿದರು. ಕರ್ಕರೆ ಎಟಿಎಸ್ ಸ್ಥಿರ ದೂರವಾಣಿಯಿಂದ 022 23087336 ತನ್ನ ಮೊಬೈಲ್ 09425015461 ಸಂಜೆ 5.44ಕ್ಕೆ ಕರೆ ಮಾಡಿದ್ದರು ಎಂದು ದಿಗ್ವಿಜಯ್ ದಾಖಲೆಗಳನ್ನು ಪತ್ರಕರ್ತರಿಗೆ ನೀಡಿದರು.
ರಾಷ್ಟ್ರೀಯ ತನಿಖಾ ತಂಡವು ಎಲ್ಲ ಉಗ್ರ ಸಂಘಟನೆಗಳ ತನಿಖೆ ಕೈಗೊಳ್ಳಬೇಕು ಎಂದು ದಿಗ್ವಿಜಯ್ ಈ ಸಂದರ್ಭದಲ್ಲಿ ಆಗ್ರಹಿಸಿದರು.
ಬಿಜೆಪಿ ಮತ್ತು ಆರೆಸ್ಸೆಸನ್ನು ತೀವ್ರ ತರಾಟೆಗೆ ತೆಗೆದುಕೊಂಡ ದಿಗ್ವಿಜಯ್, ತನ್ನ ವಿರುದ್ಧ ಆರೋಪ ಮಾಡಿದವರು ದಾಖಲೆಗಳನ್ನು ನೋಡಿದ ಮೇಲೆ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.
ಮಹಾರಾಷ್ಟ್ರದ ಗೃಹ ಸಚಿವರು, ಕರ್ಕರೆ ಮತ್ತು ನನ್ನ ನಡುವೆ ನಡೆದ ದೂರವಾಣಿ ಸಂಭಾಷಣೆಯ ದಾಖಲೆಗಳು ಇಲ್ಲ ಎಂದು ಹೇಳಿದ್ದರಿಂದ ತನಗೆ ತುಂಬಾ ದುಃಖವಾಗಿತ್ತು. ಆದ್ದರಿಂದ ಇದೀಗ ಮಹಾರಾಷ್ಟ್ರದ ಗೃಹ ಸಚಿವ ಆರ್.ಆರ್.ಪಾಟೀಲ್ ಕೂಡಾ ಸಾರ್ವಜನಿಕವಾಗಿ ತನ್ನ ಕ್ಷಮೆಯಾಚಿಸಬೇಕು ಎಂದು ದಿಗ್ವಿಜಯ್ ಆಗ್ರಹಿಸಿದರು. ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿಗಳನ್ನು ಬಂಧಿಸಿದ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆಗೆ ಕೇಸರಿ ಉಗ್ರರಿಂದ ಬೆದರಿಕೆ ಕರೆಗಳನ್ನು ಬರುತ್ತಿದ್ದವು ಎಂದು ದಿಗ್ವಿಜಯ್ ಹೇಳಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ