ಸೋಮವಾರ, ಫೆಬ್ರವರಿ 14, 2011

ಈಜಿಪ್ಟ್ ಜನತೆಗೆ ಪಿಎಫ್‌ಐ ಅಭಿನಂದನೆ

ಈಜಿಪ್ಟ್ ಜನತೆಗೆ ಪಿಎಫ್‌ಐ ಅಭಿನಂದನೆ

ಮಂಗಳೂರು, ಫೆ.14: ಈಜಿಪ್ಟ್ ಅಧ್ಯಕ್ಷ ಹುಸ್ನಿ ಮುಬಾರಕ್‌ರ ನಿರಂಕುಶ ಆಡಳಿತದ ವಿರುದ್ಧ ಸಿಡಿದೆದ್ದ ಈಜಿಪ್ಟ್‌ನ ಜನತೆಯ ಕೆಚ್ಚೆದೆಯ ಹೋರಾಟ ದೇಶದ ಸ್ವಾರ್ಥ ರಾಜಕಾರ ಣಿಗಳಿಗೆ ಪಾಠವಾಗಬೇಕು ಎಂದು ಪಿಎಫ್‌ಐ ಜಿಲ್ಲಾ ಸಮಿತಿ ಸದಸ್ಯ ನಝೀರ್ ಬೋಳಂಗಡಿ ಹೇಳಿದರು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸೋಮವಾರ ಸಂಜೆ ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂದೆ ಹಮ್ಮಿ ಕೊಂಡ ‘ಈಜಿಪ್ಟ್ ಜನತೆಗೆ ಅಭಿನಂದನೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಈ ಸಂದರ್ಭ ಯುವ ಲೇಖಕ ಇಸ್ಮತ್ ಫಜೀರ್, ಹಾಜಿ ಬಿ.ಎಸ್.ಹುಸೈನ್ ಜೋಕಟ್ಟೆ ಮಾತನಾಡಿದರು. ಈ ಸಂದರ್ಭ ನವಾಝ್ ಉಳ್ಳಾಲ, ಅತಾವುಲ್ಲ ಜೋಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ