ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್ ಸಂಘಟನೆಯ ಕಾರ್ಯಕರ್ತ ಸುನೀಲ್ ಜೋಶಿ ಎಂಬಾತನ ಕೊಲೆಯ ರೂವಾರಿಯೆಂದು ಅಜ್ಮೀರ್ ಸ್ಫೋಟ ಪ್ರಕರಣದಲ್ಲಿ ಗುಜರಾತ್‌ನಿಂದ ಇತ್ತೀಚೆಗೆ ಬಂಧಿಸಲಾಗಿ ರುವ ಪ್ರಮುಖ ಆರೋಪಿ ಭರತ್‌ಭಾಯಿ ರತೇಶ್ವರ್ ಎಂಬಾತ ರಾಜಸ್ಥಾನ ಎಟಿಎಸ್‌ಗೆ ತಿಳಿಸಿದ್ದಾನೆ. ಅಜ್ಮೀರ್‌ನ ನ್ಯಾಯಾಲಯ ವೊಂದರಲ್ಲಿ ಆತ ನೀಡಿರುವ ತಪ್ಪೊಪ್ಪಿಗೆ ಹೇಳಿಕೆಯಲ್ಲಿ, ಮಧ್ಯಪ್ರದೇಶದ ಆರೆಸ್ಸೆಸ್ ಪ್ರಚಾರಕ ಸುನೀಲ್ ಜೋಶಿ, 2007ರ ಅಜ್ಮೀರ್ ದರ್ಗಾ ಸ್ಫೋಟ ನಡೆದೊಡನೆಯೇ ತನಗೆ ಕರೆ ಮಾಡಿ, ‘‘ಹಮ್ನೆ ಪಟಾಖೆ ಫೋಡ್ ದಿಯೇ ಹೇಂ’’ (ನಾವು ಪಟಾಕಿಯನ್ನು ಸಿಡಿಸಿ ಬಿಟ್ಟಿದ್ದೇವೆ) ಎಂದು ತಿಳಿಸಿದ್ದನೆಂದು ಹೇಳಿದ್ದಾನೆ. ಇದನ್ನು ಬಾಂಬ್ ಸ್ಫೋಟ ನಡೆಸಿದ್ದಾರೆಂಬ ಗುಪ್ತ ಸೂಚನೆಯೆಂದು ಅರ್ಥೈಸಲಾಗಿದೆ.
ಸ್ಫೋಟವನ್ನು ಇಂದ್ರೇಶ್ ಕುಮಾರ್‌ಗೆ ತಿಳಿದೇ ನಡೆಸ ಲಾಗಿದೆಯೆಂದು ಜೋಶಿ ತನಗೆ ತಿಳಿಸಿದ್ದನೆಂದು ಭರತ್ ಹೇಳಿದ್ದಾನೆ.
ಇಂದ್ರೇಶ್ ಕುಮಾರ್, ಜೋಶಿಯ ಕೊಲೆಯ ರೂವಾರಿ ಯಾಗಿದ್ದಾರೆ. ಕೊಲೆ ನಡೆದ ರಾತ್ರಿಯೇ ತನಗೆ ಈ ಬಗ್ಗೆ ತಿಳಿದು ಬಂತು. ಅದು ಜೋಶಿಯನ್ನು ಮೆಚ್ಚದ ಇಂದ್ರೇಶ್‌ರ ಕೆಲಸವೆಂದು ತನಗೆ ಸ್ವಾಮೀ ಅಸೀಮಾನಂದರೂ ತಿಳಿಸಿದ್ದ ರೆಂದು ಭರತ್ ಸಹಿ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾನೆನ್ನಲಾಗಿದೆ. ಅಜ್ಮೀರ್ ಸ್ಫೋಟ ನಡೆದ ಎರಡು ತಿಂಗಳಲ್ಲಿ ಜೋಶಿಯ ಹತ್ಯೆ ನಡೆದಿತ್ತು.
ಇಂದ್ರೇಶ್ ಕುಮಾರ್, ಜೋಶಿಯ ಕೊಲೆಯ ರೂವಾರಿ ಯಾಗಿದ್ದಾರೆ. ಕೊಲೆ ನಡೆದ ರಾತ್ರಿಯೇ ತನಗೆ ಈ ಬಗ್ಗೆ ತಿಳಿದು ಬಂತು. ಅದು ಜೋಶಿಯನ್ನು ಮೆಚ್ಚದ ಇಂದ್ರೇಶ್‌ರ ಕೆಲಸವೆಂದು ತನಗೆ ಸ್ವಾಮೀ ಅಸೀಮಾನಂದರೂ ತಿಳಿಸಿದ್ದ ರೆಂದು ಭರತ್ ಸಹಿ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾನೆನ್ನಲಾಗಿದೆ. ಅಜ್ಮೀರ್ ಸ್ಫೋಟ ನಡೆದ ಎರಡು ತಿಂಗಳಲ್ಲಿ ಜೋಶಿಯ ಹತ್ಯೆ ನಡೆದಿತ್ತು.
ಅಭಿನವ ಭಾರತ್‌ನ ಸದಸ್ಯ 59ರ ಹರೆಯದ ಅಸೀಮಾನಂದ ಹೈದರಾ ಬಾದ್‌ನ ಮಕ್ಕಾ ಮಸೀದಿ ಸ್ಫೋಟ ಪ್ರಕರಣದ ಪ್ರಧಾನ ಆರೋಪಿಯಾಗಿ ದ್ದಾನೆ. ಆತ 2010ರ ಡಿ.18ರಂದು ಮ್ಯಾಜಿಸ್ಟ್ರೇಟರೊಬ್ಬರ ಮುಂದೆ ನೀಡಿದ ತಪ್ಪೊಪ್ಪಿಗೆ ಹೇಳಿಕೆಯಲ್ಲಿ, 2006ರ ಜೂನ್‌ನಲ್ಲಿ ತಾನು ಹಾಗೂ ರತೇಶ್ವರ, ಸಾಧ್ವಿ ಪ್ರಜ್ಞಾ ಸಿಂಗ್, ಸುನೀಲ್ ಜೋಶಿ ಮೊದಲಾದ ಸಂಘಪರಿವಾರದ ಸದಸ್ಯರು ಗುಜರಾತ್‌ನ ವಲ್ಸಾದ್‌ನಲ್ಲಿರುವ ರತೇಶ್ವರನ ನಿವಾಸದಲ್ಲಿ ಭೇಟಿಯಾಗಿ ದ್ದೇವೆಂದು ಹೇಳಿದ್ದಾನೆ. ಸಭೆಯಲ್ಲಿದ್ದವರಿಗೆ ಅಸೀಮಾನಂದ ‘ಬಾಂಬ್‌ಗೆ ಬಾಂಬಿನಿಂದಲೇ ಉತ್ತರ ನೀಡಬೇಕಾಗಿದೆ’ ಎಂದು ತಿಳಿಸಿದ್ದನೆನ್ನಲಾಗಿದೆ. ಈ ನಿಟ್ಟಿನಲ್ಲಿ ಜೋಶಿ ಹಾಗೂ ಆತನ ಗುಂಪು ಈಗಾಗಲೇ ಕೆಲಸ ಆರಂಭಿಸಿದ್ದಾರೆಂದು ತಾನು ಅಭಿಪ್ರಾಯಿಸಿರುವೆನೆಂದು ಆತ ಹೇಳಿದ್ದನು.
ಅಸೀಮಾನಂದ ಎಟಿಎಸ್‌ಗೆ, ಜೋಶಿ ಅತಿಯಾಗಿ ಹಚ್ಚಿಕೊಂಡಿದ್ದ ಇಬ್ಬರು ಮುಸ್ಲಿಂ ಯುವಕರ ಕುರಿತಾಗಿಯೂ ಮಾಹಿತಿ ನೀಡಿದ್ದು, ಆ ಇಬ್ಬರೊಂದಿಗೆ ಸಂಪರ್ಕ ಕಡಿದು ಕೊಳ್ಳದಿದ್ದಲ್ಲಿ ಜೋಶಿಯ ಪ್ರಾಣಕ್ಕೆ ಅಪಾಯವಿದೆಯೆಂದು ತಾನು ಆತನಿಗೆ ಎಚ್ಚರಿಕೆ ನೀಡಿದ್ದೆನೆಂದು ಹೇಳಿದ್ದಾನೆನ್ನಲಾಗಿದೆ. ಜೋಶಿ ಆ ಮುಸ್ಲಿಂ ಯುವಕರನ್ನು ನಂಬಿದರೆ, ತಮ್ಮ ಯೋಜನೆ ಬಹಿರಂಗವಾಗಬಹುದೆಂಬ ಹೆದರಿಕೆ ಇತರ ಪಿತೂರಿಗಾರರಿಗಿತ್ತೆಂಬುದು ಅಸೀಮಾನಂದನ ಅಭಿಪ್ರಾಯವಾಗಿತ್ತೆಂದು ಹೇಳಲಾಗಿದೆ. ಆದರೆ, ಇಂದ್ರೇಶ್ ಕುಮಾರ್ ಈ ಆರೋಪವನ್ನು ನಿರಾಕರಿಸಿದ್ದು, ಇದು ತನ್ನ ಮತ್ತು ಸಂಘದ ವರ್ಚಸ್ಸಿಗೆ ಧಕ್ಕೆ ತರುವ ಪಿತೂರಿಯೆಂದು ಆರೋಪಿಸಿದ್ದಾರೆ. ಆದರೆ, ಅಸೀಮಾನಂದನ ಸಿಬಿಐಗೆ ತಿಳಿಸಿರುವ ಅನೇಕ ವಿಚಾರಗಳನ್ನು ಭರತ್ ದೃಢಪಡಿಸುವುದರೊಂದಿಗೆ ಇಂದ್ರೇಶ್ ಶೀಘ್ರವೇ ರಾಜಸ್ಥಾನ ಎಟಿಎಸ್‌ನಿಂದ ಕಠಿಣ ವಿಚಾರಣೆಗೆ ಒಳಗಾಗುವ ಸಂಭವವಿದೆಯೆನ್ನಲಾಗಿದೆ. ಕ್ರಪೆ ವಾರ್ತಾಭಾರತಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ