ಮುಂಬೈ: ವಿವಿಧ ಅರ್ಥಿಕ ವಲಯಗಳಲ್ಲಿ ಹೂಡಿಕೆ ವಿಚಾರಗಳಿಗೆ ಸಂಬಂಧಿಸಿ ಮುಸ್ಲಿಮ್ ಸಮುದಾಯವನ್ನು ಸುಶಿಕ್ಷಿತಗೊಳಿಸಲು ಸದ್ಯದಲ್ಲೇ ಶಿಕ್ಷಣ ಅಕಾಡಮಿಯೊಂದು ಸ್ಥಾಪನೆಯಾಗಲಿದೆ. ಈ ಶಿಕ್ಷಣ ಸಂಸ್ಥೆಯು ಶೇರು ವಿನಿಮಯ ಕೇಂದ್ರ, ಬಂಡವಾಳ ಮಾರುಕಟ್ಟೆ ಹಾಗೂ ಬ್ಯಾಂಕಿಂಗ್ ಸಹಿತ ವಿವಿಧ ಆರ್ಥಿಕ ಕ್ಷೇತ್ರಗಳಲ್ಲಿ ಇಸ್ಲಾಮಿಕ್ ಶರಿಯಾದ ತತ್ವಗಳಿಗೆ ಅನುಗುಣವಾಗಿ ಹೂಡಿಕೆ ಮಾಡುವ ಬಗ್ಗೆ ಬೋಧನೆಗಳನ್ನು ನೀಡಲಿದೆ.
ಮುಂಬೈ ಮೂಲದ ‘ಪ್ರಾಗ್‌ಮ್ಯಾಟಿಕ್ ವೆಲ್ತ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಸ್ಥಾಪಿಸಲಿರುವ ಈ ಅಕಾಡಮಿಯು, ಇಸ್ಲಾಮಿಕ್ ಕಾನೂನುಗಳಿಗೆ ಬದ್ಧವಾಗಿ, ಸಂಪತ್ತನ್ನು ಹೇಗೆ ನಿರ್ವ ಹಿಸಬೇಕೆಂಬ ಬಗ್ಗೆ ಯುವ ಮುಸ್ಲಿಮರಿಗೆ ಶಿಕ್ಷಣ ನೀಡಲಿದೆ. ಇದರ ಜೊತೆಗೆ ಆರ್ಥಿಕ ವಲಯಗಳಲ್ಲಿ ಉದ್ಯೋಗ ಪಡೆಯಲು ಹಾಗೂ ಉದ್ಯಮಗಳನ್ನು ಆರಂಭಿಸುವ ಬಗ್ಗೆ ಮುಸ್ಲಿಂ ಯುವ ಜನತೆಗೆ ಶಿಕ್ಷಣ ನೀಡಲಿದೆ. ಭಾರತದ ಆರ್ಥಿಕ ರಂಗದಲ್ಲಿ ಮುಸ್ಲಿಂ ಯುವಜನತೆಯ ಪಾಲ್ಗೊಳ್ಳುವಿಕೆಯು ತೀರಾ ಕೆಳಮಟ್ಟದಲ್ಲಿದೆಯೆಂದು ಸಾಚಾರ್ ವರದಿ ತಿಳಿಸಿತ್ತು. ಮುಂಬೈಯಲ್ಲಿ ರವಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಮ್ಮ ನೂತನ ಅಕಾಡಮಿಯ ರೂಪುರೇಷೆಗಳನ್ನು ವಿವರಿಸಿದ ಪ್ರಾಗ್ಮಾಟಿಕ್ ವೆಲ್ತ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ನಿರ್ವಾಹಕ ನಿರ್ದೇಶಕ ಇಮ್ತಿಯಾಜ್ ಮರ್ಚಂಟ್ ‘‘ಇಸ್ಲಾಮಿಕ್ ಶರಿಯಾಕ್ಕೆ ಬದ್ಧವಾದ ಕಂಪೆನಿಗಳಲ್ಲಿ ಆರ್ಥಿಕ ಹೂಡಿಕೆಯನ್ನು ಮಾಡುವ ಬಗ್ಗೆ ನಮ್ಮ ತಜ್ಞರು ಹಾಗೂ ಬೋಧಕ ವರ್ಗವು ಯುವಜನತೆಗೆ ಶಿಕ್ಷಣ ನೀಡಲಿದ್ದಾರೆ’’ ಎಂದು ಹೇಳಿದರು.
ಇಸ್ಲಾಮಿಕ್ ಆರ್ಥಿಕತೆಯ ಬಗ್ಗೆ ತರಬೇತಿ ಹೊಂದಿ ರುವ ವೃತ್ತಿಪರರಿಗೆ ಜಾಗತಿಕ ಮಟ್ಟದಲ್ಲಿ ಭಾರೀ ಬೇಡಿಕೆ ಯಿದೆ. ಇದೊಂದು ಸ್ವೀಕಾರಾರ್ಹವಾದ ಹೂಡಿಕೆಯ ಕ್ರಮವಾಗಿದೆಯೆಂದು ಅವರು ಹೇಳಿದರು. ಇಸ್ಲಾಮಿಕ್ ಆರ್ಥಿಕತೆ ಹಾಗೂ ಇಸ್ಲಾಮಿಕ್ ಬ್ಯಾಂಕಿಂಗ್ ನಲ್ಲಿ ತರಬೇತಿ ಪಡೆದವರಿಗೆ ಹೇರಳ ಉದ್ಯೋಗಾವಕಾಶಗಳಿವೆ ಯೆಂದು ಸಂಸ್ಥೆಯ ಚೇರ್‌ಮನ್ ಹಾಗೂ ಅಂತಾ ರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಸೇರಿದಂತೆ ಹಲವಾರು ಪ್ರತಿಷ್ಠಿತ ಸಂಸ್ಥೆಗಳಿಗೆ ಸಂದರ್ಶಕ ಪ್ರಾಚಾರ್ಯರೂ ಆದ ಡಾ.ಎಂ.ವೈ.ಖಾನ್ ಹೇಳಿದ್ದಾರೆ.
ತೀರಾ ಇತ್ತೀಚೆಗೆ ಇಮ್ತಿಯಾಝ್ ಮರ್ಚಂಟ್ ಅವರು ಪ್ರಸಿದ್ಧ ಧಾರ್ಮಿಕ ವಿದ್ವಾಂಸರು ಸಭೆಯೊಂದನ್ನು ಕರೆದು, ಅವರ ಸಲಹೆಯೊಂದಿಗೆ ಇಸ್ಲಾಮಿಕ್ ಹೂಡಿಕೆ ಹಾಗೂ ಹಣಕಾಸು ಮಂಡಳಿ (ಐಐಎಫ್‌ಬಿ)ವನ್ನು ಸ್ಥಾಪಿಸಿದರು. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ವೌಲಾನಾ ವಲಿ ರಹ್ಮಾನಿ ಹಾಗೂ ಹೈದರಾಬಾದ್‌ನ ಇಸ್ಲಾಮಿಕ್ ವಿದ್ವಾಂಸ ವೌಲಾನಾ ಖಾಲಿದ್ ಸೈಫುಲ್ಲಾ ರಹ್ಮಾನಿ ಮತ್ತಿ ತರರು ಈ ಮಂಡಳಿಯ ಸದಸ್ಯರಾಗಿದ್ದಾರೆ. ಬಹುತೇಕ ಮುಸ್ಲಿಮರು ಈಗಲೂ ದೂರವಿಡುವ ಶೇರು ಮಾರುಕಟ್ಟೆಯಲ್ಲಿ ಹಣಹೂಡಿಕೆಗೆ ಐಐಎಫ್‌ಬಿ ಮುಸ್ಲಿಮರಿಗೆ ಅವಕಾಶ ನೀಡಿದೆ. ಬ್ಯಾಂಕಿಂಗ್ ಹಾಗೂ ವಿಮಾ ವ್ಯವಸ್ಥೆಗಿಂತ ಶೇರು ಮಾರು ಕಟ್ಟೆಯು ಶರಿಯಾಕ್ಕೆೆ ಹೆಚ್ಚು ನಿಕಟವಾಗಿದೆಯೆಂದು ಈ ಧಾರ್ಮಿಕ ವಿದ್ವಾಂಸರು ಅಭಿಪ್ರಾಯಿಸಿದ್ದಾರೆ. ಶರಿಯಾಗೆ ಬದ್ಧವಾದ ಉದ್ಯಮ ಸಂಸ್ಥೆಗಳು ಹಣ ಹೂಡಿ ಕೆಗೆ ಮಾತ್ರವಲ್ಲ ಸುಶಿಕ್ಷಿತ ಮುಸ್ಲಿಮರಿಗೆ ಹೇರಳ ಉದ್ಯೋಗಾ ವಕಾಶವಿರುವ ತಾಣಗಳೆಂದು ಅವರು ಹೇಳುತ್ತಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ