ಸೋಮವಾರ, ಮಾರ್ಚ್ 07, 2011

ವಿದ್ಯಾರ್ಥಿಗಳ ಸಬಲೀಕರಣಕ್ಕಾಗಿ ಕೈ ಜೋಡಿಸಬೇಕಿದೆ

 ಲೇಖನ : ಝಾಮುದ್ದೀನ್
ಪ್ರಸ್ತುತ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳ ಸಬಲೀ ಕರಣಕ್ಕಾಗಿ ಮತ್ತು ನವಯುಗದಲ್ಲಿ ವಿದ್ಯಾರ್ಥಿಗಳ ಮದ್ಯಪಾನ, ಸಿಗರೇಟ್, ಗುಟ್ಕಾ, ಸಿನಿಮಾ ಮತ್ತು ಅನೈತಿಕ ಚಟುವಟಿಕೆಗಳಿಗೆ ತನ್ನನ್ನು ತಾನು ತೊಡಗಿ ಸಿಕೊಂಡ ಸಂಪೂರ್ಣವಾಗಿ ಬಿಂದಾಸ್ ಲೈಫ್‌ನ್ನು ಬಯಸಿ ಕೆಟ್ಟದಾರಿ ಹೋಗುತ್ತಿ ರುವುದನ್ನು ನಾವು ದಿನನಿತ್ಯ ಕಾಣುವಂತಹ ದೃಶ್ಯ ಗಳಾಗಿವೆ.
ಈ ಸಮಯದಲ್ಲಿ ವಿದ್ಯಾರ್ಥಿಗಳಲ್ಲಿ ಜವಾಬ್ದಾರಿ ಯುತ ಜೀವನ ಮತ್ತು ಕೆಟ್ಟ ಚಟುವ ಟಿಕೆಗಳಿಂದ ವಿದ್ಯಾರ್ಥಿ ಜೀವನಕ್ಕೆ ಮತ್ತು ಮುಂದಿನ ಜೀವನಕ್ಕೆ ಯಾವ ರೀತಿಯಲ್ಲಿ ಮುಳ್ಳಾಗಳಿವೆ ಎಂಬುದನ್ನು ಇಂದು ವಿದ್ಯಾರ್ಥಿಗಳ ಸಂಪೂರ್ಣ ಸಬಲೀಕರಣ ಕ್ಕಾಗಿ ಹೋರಾಡುತ್ತಿರುವ ಮತ್ತು ಯಾವುದೇ ಜಾತಿ ಭೇದ, ಕಪ್ಪುಬಿಳುಪು, ಮೇಲು ಕೀಳು, ಶ್ರೀಮಂತ ಬಡವ ಎಂಬ ತಾರತಮ್ಯ ಇಲ್ಲದೇ ವಿದ್ಯಾರ್ಥಿಗಳ ನ್ಯಾಯ ಯುತ ಸಂಘಟನೆ ಕ್ಯಾಂಪಸ್ ಆಫ್ ಇಂಡಿಯ ಇಂದು ಹೋರಾಡುತ್ತಿದೆ.
ಇತ್ತೀಚಿನ ದಿನಗಳಲ್ಲಿ ಕಾಲೇಜಿನ ಕ್ಯಾಂಪಸ್‌ನಲ್ಲಿ ಪರಸ್ಪರ ರ‍್ಯಾಗಿಂಗ್ ನಡೆಯುತ್ತಿರುವುದು ಸಹಜ. ಕಾಲೇಜ್ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿಗಳು ಪರಸ್ಪರ ಚರ್ಚೆಗಳು, ಕಲಿಕೆಯ ಸಂದರ್ಭದ ವಿಷಯಗಳು ಮತ್ತು ಸದಾ ಸಂತೋಷದಿಂದ ಮಾತನಾಡುತ್ತಿದ್ದ ವಿದ್ಯಾರ್ಥಿಗಳು ತಮ್ಮ ಜಾತಿ-ಮತ ಮರೆತು ಒಂದೇ ತಾಯಿಯ ಮಕ್ಕಳಂತೆ ಅಥವಾ ಅಣ್ಣ ತಂಗಿಯರಂತೆ ಪರಸ್ಪರ ಪ್ರೀತಿ-ವಿಶ್ವಾಸದಿಂದ ಮಾತನಾಡುತ್ತಿದ್ದರೂ ಕಾಲೇಜಿನ ಕ್ಯಾಂಪಸ್ ಒಳಗೆ ಬಂದ ತನಕ ನಾನು ಹಿಂದು, ನಾನು ಮುಸ್ಲಿಂ, ತಾನು ಕ್ರೈಸ್ತ ಎಂಬುದನ್ನು ಮರೆತು ನಾವು ಅಣ್ಣತಂಗಿಯರು ಕಲಿಯುತ್ತಿರುವುದು ಎಂಬ ಒಂದು ಕಾಲವಿತ್ತು. ಆದರೆ ಈಗ ಅದು ಬದಲಾಗಿದೆ.
ಈ ಒಂದು ಖೇದಕರ ಸಮಯವನ್ನು ಪರಿಶೀಲಿಸಿದ ವಿದ್ಯಾರ್ಥಿಗಳು ಒಟ್ಟಾಗಿ ಬಲಿಷ್ಠವಾದ ಎಲ್ಲಾ ಸಮುದಾಯದ ವಿದ್ಯಾರ್ಥಿಗಳ ಒಟ್ಟು ಸೇರಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿ ಯಾವನ್ನು ರಚಿಸಿದೆವು. ಇಂದು ಸಂಪೂರ್ಣವಾಗಿ ವಿದ್ಯಾರ್ಥಿ ಗಳ ಸಬಲೀಕರಣವನ್ನು ಬಯಸುತ್ತಾ ಇತ್ತೀಚಿಗೆ ಮಂಗಳೂರಿನಲ್ಲಿ ಬೃಹತ್ ರಾಜ್ಯ ಸಮ್ಮೇಳನವನ್ನು ಇಟ್ಟುಕೊಂಡಿತ್ತು. ವಿದ್ಯಾರ್ಥಿ-ವಿದ್ಯಾರ್ಥಿನಿಯರ ಭಾವನೆಯನ್ನು ಸಂಪೂರ್ಣವಾಗಿ ಕೆಡಿಸಿ ಅವರಲ್ಲಿ ಹಲ್ಲೆ, ಕೊಲೆ, ರ‍್ಯಾಗಿಂಗ್ ಮತ್ತು ಕಾಲೇಜಿನ ಮೇಲೆ ದಾಳಿ ದಾಳಿ ನಡೆಯುವುದಕ್ಕೆ ನೇರವಾದ ಕಾರಣ ವಾಗುತ್ತಿದೆ. ಆದ್ದರಿಂದ ಇನ್ನಾದರೂ ವಿದ್ಯಾರ್ಥಿ-ವಿದ್ಯಾರ್ಥಿ ನಿಯರು ಸರಿಯಾಗಿ ಚಿಂತಿಸಿ ಇದೆಲ್ಲಾ ವಿದ್ಯಾರ್ಥಿ ಜೀವನಕ್ಕೆ ಸೂಕ್ತವೇ ಎಂಬುದನ್ನು ಆಲೋಚಿಸಬೇಕಾಗಿದೆ.
ದಿನಂಪ್ರತಿ ನಾವು ಪತ್ರಿಕೆಗಳಲ್ಲಿ ನೋಡುವಾಗ ವಿದ್ಯಾರ್ಥಿಗಳಿಂದ ಮಾರಾಮಾರಿ, ವಿದ್ಯಾರ್ಥಿಗಳಿಂದ ಹಲ್ಲೆ ಇದು ಯಾತಕ್ಕಾಗಿ ಈ ರೀತಿಯಲ್ಲಿ ಸಂಪೂ ರ್ಣವಾಗಿ ವಿದ್ಯಾರ್ಥಿಗಳ ಸಬಲೀಕರಣವನ್ನು ಮುಂದಿ ಟ್ಟುಕೊಂಡು ಇಂದು ರಾಜ್ಯಾದ್ಯಾಂತ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಅಭಿಯಾನಗಳು ನಡೆಯುತ್ತಿದೆ. ವಿದ್ಯಾರ್ಥಿಗಳ ಸಬಲೀಕರಣಕ್ಕೆ ಸಂಪೂರ್ಣವಾಗಿ ಎದೆ ಗಾರಿಕೆಯಿಂದ ಮುನ್ನಡೆದು ಕಾಲೇಜು ಕ್ಯಾಂಪಸ್‌ನಲ್ಲಿ ಪರಸ್ಪರ ಪ್ರೀತಿ ವಿಶ್ವಾಸದಿಂದ ವಿದ್ಯಾಭ್ಯಾಸ ಮಾಡಲಿಕ್ಕೆ ವಿದ್ಯಾವಂತರಾದ ತಾವು ಮತ್ತು ಪ್ರeವಂತರಾದ ಎಲ್ಲಾ ನಾಗರಿಕರು ಕೈ ಜೋಡಿಸಬೇಕಾಗಿ ವಿನಂತಿ. ಈ ನಿಟ್ಟಿನಲ್ಲಿ ಇಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬಲಿಷ್ಠವಾಗಿ ತನ್ನ ಕಾರ್ಯ ವೈಖರಿಯನ್ನು ಬಹಳ ವೇಗವಾಗಿ ನಡೆಸುತ್ತಿದೆ.
 ಈ ರೀತಿಯಲ್ಲಿ ವಿದ್ಯಾರ್ಥಿ ಸಬಲೀಕರಣಕ್ಕಾಗಿ ಮತ್ತು ಪ್ರೀತಿವಿಶ್ವಾಸದಿಂದ ಕೋಮುಸಹಬಾಳ್ವೆಯನ್ನು ಕಾಪಾಡುತ್ತಿರುವ ಅದೆಷ್ಟೋ ಕ್ಯಾಂಪಸ್ ಫ್ರಂಟ್ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಜೈಲುವಾಸವನ್ನು ಕೂಡಾ ಮಾಡಿದರು. ಇದಕ್ಕಾಗಿ ದುಡಿಯುವ ಎಲ್ಲಾ ಕಾರ್ಯಕರ್ತರಿಗೆ ಸೃಷ್ಟಿಕರ್ತ ದೇವರು ಸದಾ ಆರೋಗ್ಯ ಮತ್ತು ಆಯುಷ್ಯವನ್ನು ನೀಡಲಿ ಎಂದು ಪ್ರಾರ್ಥಿಸುವ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ