ಪುತ್ತೂರು :ಯುವತಿಯೊಬ್ಬಳ ಬುರ್ಖಾವನ್ನು ಎಳೆದು ಅವಮಾನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಕಂಡೆಕ್ಟರ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಸೇಡಿಯಾಪು ಗ್ರಾಮದ ಯುವತಿ ಪುತ್ತೂರು ಶಾಂತಿನಗರದ ತನ್ನ ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಬಸ್ ಚಾಲಕ ಈಕೆಯ ಬಸ್ ಪಾಸ್ ಚೆಕ್ ಮಾಡುವ ನೆಪದಲ್ಲಿ ಈಕೆಯ ಬುರ್ಖಾದ ಶಾಲನ್ನು ಬಸ್ಸಿನಲ್ಲಿ ಸಾರ್ವಜನಿಕವಾಗಿ ಎಳೆದು ಅವಮಾನಿಸಿದ್ದ.
ಈ ಪ್ರಕರಣದ ನಂತರ ವಿದ್ಯಾರ್ಥಿನಿ ಶಾಲೆಗೇ ಹೋಗುವುದನ್ನೇ ಬಿಟ್ಟಿದ್ದಳು. ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಂತೆ ವಿದ್ಯಾರ್ಥಿ ಸಂಘಟನೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಒತ್ತಾಯಿಸಿತ್ತು. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಗದಗ್ ಮೂಲದ ಲಕ್ಷ್ಮಣ ಎಂದು ಗುರುತಿಸಲಾಗಿದೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ