
ಮಂಗಳೂರು, ಡಿ.7: ಮಂಗಳೂರಿನ ಖಾಝಿ ಸಿ.ಎಂ.ಅಬ್ದುಲ್ಲಾ ಮುಸ್ಲಿಯಾರ್ ಚೆಂಬರಿಕರ ನಿಗೂಢ ಮರಣದ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳ ತಂಡ ಇಂದು ಮಂಗಳೂರಿನ ಕೇಂದ್ರ ಜುಮಾ ಮಸೀದಿಗೆ ಭೇಟಿ ನೀಡಿತು.
ಕಳೆದ ಫೆಬ್ರವರಿ 15ರಂದು ಮುಂಜಾನೆ ಚೆಂಬರಿಕ ಸಮುದ್ರ ತೀರದಲ್ಲಿ ಖಾಝಿಯವರ ಮೃತದೇಹ ಕಂಡು ಬಂದಿದ್ದು, ಅವರ ಮರಣದ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಬಳಿಕ ಸಾರ್ವಜನಿಕರ ಒತ್ತಡದ ಮೇರೆಗೆ ತನಿಖೆಯನ್ನು ಸಿಬಿಐಗೆ ಒಪ್ಪಿಸಲಾಗಿತ್ತು. ಈ
ಹಿನ್ನೆಲೆಯಲ್ಲಿ ತಿರುವನಂತಪುರ ಘಟಕದ ಸರ್ಕಲ್ ಇನ್ಸ್‌ಪೆಕ್ಟರ್ ಲಾಸರ್‌ರ ನೇತೃತ್ವದ ತಂಡ ಕಾಸರಗೋಡಿನಲ್ಲಿ ತನಿಖೆ ನಡೆಸಿ ಇದೀಗ ಚೆನ್ನೈ ಸಿಬಿಐ ಬ್ರಾಂಚ್ ತಂಡದ ಸದಸ್ಯರೊಂದಿಗೆ ಮಂಗಳೂರಿಗೆ ಭೇಟಿ ನೀಡಿ ಖಾಝಿಯವರ ನಿಕಟವರ್ತಿಗಳ ಹೇಳಿಕೆಗಳನ್ನು ಪಡೆದಿದ್ದಾರೆ. ಕೇಂದ್ರ ಜುಮಾ ಮಸೀದಿಯ ಆಡಳಿತ ಸಮಿತಿಯ ರಶೀದ್ ಹಾಜಿ, ಹನೀಫ್ ಹಾಜಿ ಮೊದಲಾದವರ ಹೇಳಿಕೆ ಪಡೆದುಕೊಳ್ಳಲಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ