ಮಾನವೀಯತೆಯ ವಿಜಯಕ್ಕಾಗಿ ನಾವೆಲ್ಲ ಹಾರೈಸೋಣ http://musthaqbil.blogspot.com
ಮಂಗಳವಾರ, ಡಿಸೆಂಬರ್ 07, 2010
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಫಿಎಫ್‌ಐ) ಬಡ ವಿಧವೆಗೆ ಕೊಡುಗೆ
ಪುತ್ತೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಫಿಎಫ್‌ಐ) ಈಶ್ವರಮಂಗಲ ಘಟಕದವರು ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಸಮೀಪದ ದರ್ಖಾಸು ಎಂಬಲ್ಲಿನ ಬಡ ವಿಧವೆ ಮಹಿಳೆ ಆಸ್ಯಮ್ಮ ಎಂಬವರಿಗೆ ಸ್ನಾನಗೃಹ ಮತ್ತು ಶೌಚಾಲಯ ನಿರ್ಮಿಸಿಕೊಟ್ಟದ್ದಾರೆ.ಸಂಘಟನೆಯ ಕಾರ್ಯಕರ್ತರು ರೂ.೧೭ ಸಾವಿರ ವೆಚ್ಚದಲ್ಲಿ ಸ್ನಾನಗೃಹ ಮತ್ತು ಶೌಚಾಲಯವನ್ನು ನಿರ್ಮಿಸಿ ಭಾನುವಾರ ಆಸ್ಯಮ್ಮರಿಗೆ ಹಸ್ತಾಂತರಿಸಿದ್ದಾರೆ. ಸಂಘಟನೆಯ ಈಶ್ವರ ಮಂಗಲ ವಲಯಾಧ್ಯಕ್ಷ ಸಂಶುದ್ದೀನ್ ಬಿ.ಸಿ.ನಗರ, ಪದಾಧಿಕಾರಿಗಳಾದ ಅಝೀಝ್ ಕೆ.ಪಿ, ರಶೀದ್, ಅಶ್ರಫ್.ಜಿ, ಅಶ್ರಫ್ ಸಿ. ಎಚ್., ಸಿರಾಜ್, ಅಬ್ದುಲ್ಲಾ ದರ್ಖಾಸು ಮತ್ತಿತರರು ಇದ್ದರು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ