ನಾಲ್ಕು ವರ್ಷಗಳ ಮೊದಲು ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಸೋಲುಂಡು ಟೂರ್ನಿಯಿಂದಲೇ ನಿರ್ಗಮಿಸಿದ ನೋವು ಇನ್ನು ಮನದಾಳದಲ್ಲಿ ಉಳಿದುಕೊಂಡಿರುವಂತೆ ೨೦೧೧ರ ವಿಶ್ವಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಭಾರತ ತನ್ನ ನೆರೆಯ ರಾಷ್ಟ್ರದ ವಿರುದ್ಧ ಸೇಡು ತೀರಿಸಿಕೊಂಡು ಭರ್ಜರಿ ಆರಂಭವನ್ನು ಪಡೆಯಲು ಬಯಸಿದೆ.
ಅಹರ್ನಿಶಿಯಾಗಿ ನಡೆಯುವ ಇಂದಿನ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ದೊಡ್ಡ ಗೆಲುವು ದಾಖಲಿಸಿಕೊಳ್ಳಲು ಟೀಂ ಇಂಡಿಯಾ ಸಜ್ಜಾಗಿ ನಿಂತಿದೆ. ವಿಶ್ವಕಪ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕನಾಗಿ ಮೊದಲ ಬಾರಿಗೆ ಟೀಂ ಇಂಡಿಯಾವನ್ನು ಮುನ್ನ ಡೆಸಲಿದ್ದಾರೆ. ಈಗಾಗಲೇ ಭಾರತ ವಿಶ್ವಕಪ್ ಪೂರ್ವಭಾವಿಯಾಗಿ ನಡೆದ ತನ್ನ ಎರಡೂ ಅಭ್ಯಾಸ ಪಂದ್ಯಗಳನ್ನು ಗೆದ್ದಿದ್ದು ಇಂದಿನ ಪಂದ್ಯಕ್ಕೆ ಆತ್ಮ ವಿಶ್ವಾಸದಿಂದ ಕಣಕ್ಕಿಳಿಯಲಿದೆ.
ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ಬ್ಯಾಟಿಂಗ್ ಕುಸಿತದಿಂದ ಅಭಿಮಾನಿ ಗಳಿಗೆ ಆಘಾತವನ್ನುಂಟು ಮಾಡಿದರೂ ಎರಡನೇ ಪಂದ್ಯದಲ್ಲಿ ಬಲಿಷ್ಟ ಬ್ಯಾಟಿಂಗ್ ಪ್ರದರ್ಶನ ನೀಡಿ ಸಮಾ ಧಾನಗೊಳಿಸಿತ್ತು. ನಾಯಕ ಧೋನಿ ಸೇರಿದಂತೆ ತಂಡದಲ್ಲಿ ಅನುಭವಿ ಸಚಿನ್, ಸೆಹ್ವಾಗ್, ಯುವರಾಜ್ ಸೇರಿದಂತೆ ಕೊಹ್ಲಿ, ರೈನಾ, ಯೂಸುಫ್ ಮುಂತಾದ ಯುವ ಆಟಗಾರರನ್ನು ಒಳಗೊಂಡ ಬಲಿಷ್ಟ ಬ್ಯಾಟಿಂಗ್ ಲೈನ್ ಹೊಂದಿದೆ. ಜಹೀರ್, ನೆಹ್ರಾ, ಹರ್ಭ ಜನ್ ಮುಂತಾದ ಅನುಭವಿಗಳು ಬೌಲಿಂಗ್ ವಿಭಾಗದ ನೇತೃತ್ವ ವಹಿಸಲಿದ್ದಾರೆ.
ಟೂರ್ನಿಯಲ್ಲಿ ಸಚಿನ್ ಹಾಗೂ ಸೆಹ್ವಾಗ್ ಓಪನಿಂಗ್ ವಿಭಾಗದಲ್ಲಿ ಸಾರಥ್ಯ ವಹಿಸಿಕೊಂಡರೆ ಗಂಭೀರ್ ಒನ್‌ಡೌನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇದು ಸಚಿನ್ ತೆಂಡುಲ್ಕರ್‌ರ ಆರನೇ ವಿಶ್ವಕಪ್ ಟೂರ್ನಿಯಾಗಿರುವುದು ವಿಶೇಷವಾಗಿದೆ. ಭಾರತದ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗ ಸಮಬಲದಿಂದ ಕೂಡಿರುವುದರಿಂದ ಪಂದ್ಯ ಜಯಿಸುವ ನೆಚ್ಚಿನ ತಂಡವಾಗಿದೆ. ಮಿರ್‌ಪುರ ಮೈದಾನವು ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ನೀಡಿದರೂ ನಿಧಾನ ಗತಿಯಿಂದಾಗಿ ವೇಗದ ಬೌಲರ್‌ಗಳಿಗೆ ಕಠಿಣವಾಗಿ ಪರಿಣಮಿಸಲಿದೆ. ಅಹರ್ನಿ ಶಿಯಾಗಿ ಪಂದ್ಯ ನಡೆಯುವುದರಿಂದ ಇಬ್ಬನಿ ಫಲಿತಾಂಶದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಕೂಡ ಅಲ್ಲಗಳೆ ಯುವಂತಿಲ್ಲ.
ಇನ್ನು ಎದುರಾಳಿ ಬಾಂಗ್ಲಾ ಕೂಡ ತಾನೇನು ಇತರರಿಗಿಂತ ಕಡಿಮೆಯಿಲ್ಲ ಎನ್ನುವ ಸಂದೇಶವನ್ನು ಈಗಾಗಲೇ ನೀಡಿದೆ. ತಂಡವನ್ನು ಆಲ್‌ರೌಂಡರ್ ಶಕೀಬುಲ್ ಹಸನ್ ಮುನ್ನಡೆಸಲಿದ್ದು ಮಿಗಿಲಾಗಿ ತಂಡಕ್ಕೆ ತಾಯ್ನಾಡಿನ ಬೆಂಬಲ ದೊರಕುತ್ತಿರುವುದು ಅದರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ತಮೀಮ್ ಇಕ್ಬಾಲ್ ಆರಂಭಿಕರಾಗಿ ಕಾಣಿಸಿಕೊಂ ಡರೆ ಇವರಿಗೆ ಸಾಥ್ ನೀಡಲು ಇಮ್ರುಲ್ ಕೈಸ್ ಹಾಗೂ ನಫೀಸ್ ಮಧ್ಯೆ ಪೈಪೋಟಿಯಿದೆ. ಮಧ್ಯಮ ಕ್ರಮಾಂಕದ ಉಸ್ತುವಾರಿಯನ್ನು ಅಶ್ರಫುಲ್, ರಖಿಬುಲ್ ಹಸನ್, ಶಹರಿಯಾರ್ ನಫೀಸ್ ವಹಿಸಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಮೊಹ್ಮುದುಲ್ಲಾ, ಶಫಿವುಲ್ ಇಸ್ಲಾಂ, ಅಬ್ದುರ್ ರಜಾಕ್ ಮುಂತಾದ ಅನುಭವಿ ಬೌಲರ್‌ಗಳ ದಂಡು ತಂಡಕ್ಕೆ ಶ್ರೀರಕ್ಷೆಯಾಗಿದೆ. ಇನ್ನುಳಿದಂತೆ ಎರಡೂ ತಂಡಗಳು ಬಲಿಷ್ಟವಾಗಿದ್ದು ಸಮಬಲದ ಹೋರಾಟ ನಿರೀಕ್ಷಿಸಲಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ