ಸೋಮವಾರ, ಜನವರಿ 10, 2011

ಏಶ್ಯಕಪ್‌ ಫ‌ುಟ್ಬಾಲ್‌:ಮೊದಲ ಪಂದ್ಯ ಭಾರತಕ್ಕೆ ಹೀನಾಯ ಸೋಲು

ದೋಹಾ : 27 ವರ್ಷಗಳ ಬಳಿಕ ಏಶ್ಯಕಪ್‌ ಫ‌ುಟ್ಬಾಲ್‌ಗೆ ಅರ್ಹತೆ ಪಡೆದಿರುವ ಭಾರತ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಪ್ರಬಲ ಆಸ್ಟ್ರೇಲಿಯದೆದುರು ಹೀನಾಯ ಸೋಲಾಗಿದೆ 
ಈ ಟೂರ್ನಿಗೆ ಪೂರ್ವಭಾವಿ ಸೌಹಾರ್ದ ಪಂದ್ಯಗಳಲ್ಲಿ ಭಾರತ 9ರಲ್ಲಿ 7 ಪಂದ್ಯ ಸೋತು ಆಘಾತ ಅನುಭವಿಸಿದೆ. ಅದರಲ್ಲೂ ತಂಡ ಯುಎಇ ವಿರುದ್ಧ 0-5 ಹಾಗೂ ಕುವೈತ್‌ ವಿರುದ್ಧ 1-9 ಮುಜುಗರ ಅನುಭವಿಸಿದೆ. ಇದಲ್ಲದೆ ಕತಾರ್‌ ಮತ್ತು ಸಿರಿಯಾ ವಿರುದ್ಧದ ಸೌಹಾರ್ದ ಪಂದ್ಯಗಳಾದ ರದ್ದಾದವು. ಅದರೊಂದಿಗೆ ತಂಡಕ್ಕೆ ಸರಿಯಾದ ಪಂದ್ಯ ಅಭ್ಯಾಸ ಸಿಗಲಿಲ್ಲ.ತಂಡದ ನೈತಿಕ ಮಟ್ಟದಲ್ಲೂ ಕಳವಳಕಾರಿ ಪರಿಸ್ಥಿತಿಯಿದೆ. ಏಕೆಂದರೆ ಮ್ಯಾನೇಜರ್‌ ಪ್ರದೀಪ್‌ ಚೌಧುರಿ, ಕೋಚ್‌ ಹಾಟನ್‌ ನಡುವೆ ಜಗಳವಾಗಿ, ಹಾಟನ್‌ ರಾಜೀನಾಮೆ ನೀಡುವವರೆಗೂ ಮುಂದುವರಿದಿತ್ತು.
ಇದು ಆಶ್ಚರ್ಯ...ಆದರೂ ಅಚ್ಚರಿಯ ವಿಷಯವೆಂದರೆ, ಇತಿಹಾಸ ಭಾರತದ ಪರವಾಗಿದೆ. ಭಾರತ-ಆಸ್ಟ್ರೇಲಿಯ ಇದುವರೆಗೆ ಕೇವಲ ಎರಡು ಬಾರಿ ಮಾತ್ರ ಮುಖಾಮುಖೀಯಾಗಿವೆ. ಆ ಎರಡೂ ಪಂದ್ಯ 1956ರಲ್ಲಿ ನಡೆದಿದ್ದು ವಿಶೇಷ. ಮೆಲ್ಬರ್ನ್ ಒಲಿಂಪಿಕ್ಸ್‌ನಲ್ಲಿ ಭಾರತ 4-2ರಿಂದ ಆಸ್ಟ್ರೇಲಿಯವನ್ನು ಸೋಲಿಸಿತ್ತು. ಒಲಿಂಪಿಕ್ಸ್‌ ಅನಂತರ ಸಿಡ್ನಿಯಲ್ಲಿ ನಡೆದ ಸೌಹಾರ್ದ ಪಂದ್ಯದಲ್ಲೂ 7-1ರಿಂದ ಆಸ್ಟ್ರೇಲಿಯವನ್ನು ಸೋಲಿಸಿತು.
 ಆಸ್ಟ್ರೇಲಿಯ ತಂಡದಲ್ಲಿ ಕಳೆದ ವರ್ಷ ಫಿಫಾ ವಿಶ್ವಕಪ್‌ನಲ್ಲಿ ಆಡಿದ 12 ಮಂದಿಯಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ