ಶನಿವಾರ, ಜನವರಿ 22, 2011

ಸ್ವಾರ್ಥಿಗಳಿಗಾಗಿ ಭಟ್ಕಳದ ಹಿತ ಬಲಿಕೊಡೆವು:ಮಜ್ಲಿಸೆ ತಂಜ್ಹೀಮ್‌

ರಾ.ಹೆ. ೧೭ರ ವಿಸ್ತರಣೆಗೆ ಸಂಬಂಧಿಸಿದಂತೆ ಕೆಲವು ವ್ಯಕ್ತಿಗಳು ತಕರಾರನ್ನು ತೆಗೆದು ಹೆದ್ದಾರಿಯನ್ನು ನಗರದಿಂದ ೨ ಕಿ.ಮೀ. ದೂರದಲ್ಲಿ ಬೈಪಾಸ್ ಮೂಲಕ ನಿರ್ಮಿಸುವಂತೆ ಹೆದ್ದಾರಿ ಇಲಾಖೆಗೆ ಪತ್ರವನ್ನು ಬರೆದಿದ್ದು, ಅವರು ತಮ್ಮ ಸ್ವಾರ್ಥ ಸಾಧನೆಗಾಗಿ ಊರಿನ ಹಿತವನ್ನು ಬಲಿಕೊಡುತ್ತಿದ್ದಾರೆ ಎಂದು ಭಟ್ಕಳದ ಮಜ್ಲಿಸೆ-ಇಸ್ಲಾಹ್-ವ-ತಂಝೀಮ್ ಆರೋಪಿಸಿದೆ.
ಈ ಕುರಿತು ತಂಝೀಮ್ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ತಂಝೀಮ್ ಮುಖಂಡ ಹಾಗೂ ಭಟ್ಕಳ ಪುರಸಭೆಯ ಮಾಜಿ ಅಧ್ಯಕ್ಷ ಪರ್ವೇಝ್ ಖಾಶಿಂಜಿ, ಅನಧಿಕೃತವಾಗಿ ರಾ.ಹೆ. ೧೭ರ ಸಮೀಪ ಇರುವ ತಮ್ಮ ಆಸ್ತಿ ನಷ್ಟವಾಗುತ್ತದೆ ಎಂದು ಇದೀಗ ಇಡೀ ಭಟ್ಕಳದ ಹಿತವನ್ನೇ ಬಲಿಕೊಡಲು ಹೊರಟಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಇದಕ್ಕಾಗಿ ತಾವು ಯಾವುದೇ ಬೆಲೆತೆತ್ತಾದರೂ ಭಟ್ಕಳದ ಹಿತವನ್ನು ಬಲಿಕೊಡಲು ಬಿಡೆವು ಎಂದು ಹೇಳಿದ ಅವರು, ಈ ಕುರಿತು ಜ.೨೪ರಂದು ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ