ವಾಷಿಂಗ್ಟನ್: ಭಾರತದ ವಿದ್ಯಾರ್ಥಿಗಳನ್ನು ಅಮೆರಿಕಾ ಹಿಂದಿನಿಂದಲೂ ಕೆಟ್ಟ ರೀತಿಯಲ್ಲಿ ನಡೆಸಿಕೊಳ್ಳುತ್ತಿದೆ. ಇದಕ್ಕೆ ಹೊಸ ಸೇರ್ಪಡೆಯೆಂಬಂತೆ ಭಾರತೀಯ ವಿದ್ಯಾರ್ಥಿಗಳ ಕಾಲಿಗೆ ರೇಡಿಯೋ ಕಾಲರ್ ತೊಡಿಸಿ ಪ್ರಾಣಿಗಳಂತೆ ನಡೆಸಿಕೊಂಡಿರುವುದನ್ನು ಭಾರತ ತೀವ್ರವಾಗಿ ವಿರೋಧಿಸಿದೆ.
ವೀಸಾ ಮತ್ತು ವಲಸೆ ದಾಖಲೆಗಳ ಸಮಸ್ಯೆಯಿಂದಾಗಿ ಕೆಲವು ವಿವಿಗಳಿಂದ ಭಾರತೀಯ ವಿದ್ಯಾರ್ಥಿಗಳನ್ನು ತೆಗೆದುಹಾಕಲಾಗಿದೆ. ಕ್ಯಾಲಿಫೋರ್ನಿಯಾದ ಟ್ರೈವ್ಯಾಲಿ ವಿವಿಯನ್ನು ಮುಚ್ಚಲಾಗಿದ್ದು, ಇಲ್ಲಿ ವ್ಯಾಸಂಗ ನಡೆಸುತ್ತಿದ್ದ ಸುಮಾರು ಒಂದುವರೆ ಸಾವಿರ ಭಾರತೀಯ ವಿದ್ಯಾರ್ಥಿಗಳು ಅತಂತ್ರ ಸ್ಥಿತಿ ಎದುರಿ ಸುವಂತಾಗಿದೆ.
ಅಷ್ಟೇ ಅಲ್ಲ, ಅಮೆರಿಕ ಸರಕಾರ ಈ ವಿದ್ಯಾರ್ಥಿಗಳು ಬೇರೆಡೆಗೆ ವಲಸೆ ಹೋಗದಂತೆ ಅವರ ಕಾಲಿಗೆ ಜಿಪಿಆರ್‌ಎಸ್ ಇರುವ ಕಾಲರ್ ತೊಡಿಸಿ ಕ್ರೂರತನವನ್ನು ಮೆರೆದಿದೆ. ಅಮೆರಿಕದ ಈ ಅನಾಗರಿಕ ವರ್ತನೆಯನ್ನು ಭಾರತ ತೀವ್ರವಾಗಿ ಖಂಡಿಸಿ, ವಿವಿ ಮಾಡಿರುವ ತಪ್ಪಿಗೆ ವಿದ್ಯಾರ್ಥಿಗಳನ್ನು ಬಲಿಪಶು ಮಾಡಬಾರದು ಎಂದು ಆಗ್ರಹಿಸಿದೆ.
ಅಮೆರಿಕಾ ಸರಕಾರ ಹಾಗೂ ವಿವಿ ನಡುವೆ ಏನು ನಡೆಯುತ್ತಿದೆ ಎಂದು ನಮಗೆ ತಿಳಿದಿಲ್ಲ. ನಾವು ಅಕ್ರಮವಾಗಿ ವಲಸೆ ಬಂದಿದ್ದೇವೆ ಎಂದು ಹೇಳುತ್ತಿದ್ದಾರೆ. ಏಕಾಏಕಿ ವಿ.ವಿ. ಮುಚ್ಚಿದ ಬಗ್ಗೆ ನಮಗೆ ಯಾವುದೇ ಮಾಹಿತಿಯಿಲ್ಲ. ಸ್ಥಳೀಯ ಸೆನೆಟರ್ ಹಾಗೂ ಭಾರತೀಯ ರಾಯಭಾರಿಯ ನೆರವು ಕೋರಿದ್ದೇವೆ. ಈ ಮಧ್ಯೆ ವಲಸೆ ಕಚೇರಿಯ ಅಧಿಕಾರಿಗಳು ದಿಢೀರನೆ ಬಂದು ನಮ್ಮ ಕಾಲಿಗೆ ಕಾಲರ್ ಅಳವಡಿಸಿ ಹೋಗಿದ್ದಾರೆ. ಇದರಿಂದ ತುಂಬಾ ಅವಮಾನಿತರಾಗಿದ್ದೇವೆ ಎಂದು ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ