ಶನಿವಾರ, ಡಿಸೆಂಬರ್ 18, 2010

ಹಿಂದೂ ಉಗ್ರವಾದ ಸಮರ್ಥಿಸಿಕೊಂಡ ರಾಹುಲ್

ನವದೆಹಲಿ: ಲಷ್ಕರ್-ಇ-ತೊಯ್ಬಾ ಭಯೋತ್ಪಾದಕ ಸಂಘಟ ನೆಗಿಂತ ಹಿಂದೂ ಉಗ್ರವಾದಿಗಳಿಂ ದಲೇ ಭಾರತಕ್ಕೆ ಹೆಚ್ಚಿನ ಅಪಾಯವಿದೆ ಎಂದು ವಿಕಿಲೀಕ್ಸ್ ಲೀಕ್ ಮಾಡಿರುವ ಹೇಳಿಕೆಯನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಈ ಕುರಿತು ಕಾಂಗ್ರೆಸ್ ಸ್ಪಷ್ಟನೆ ನೀಡಿದ್ದು, ಎಲ್ಲ ಬಗೆಯ ಭಯೋತ್ಪಾದನೆಯನ್ನು ಎದುರಿಸಲು ಭಾರತ ಸನ್ನದ್ಧವಾಗಿ ರಬೇಕು ಎಂದು ಹೇಳಿದೆ.
ಎಲ್ಲ ರೂಪದ ಭಯೋತ್ಪಾದನೆ ಮತ್ತು ಕೋಮುವಾದಿತ್ವದಿಂದ ಭಾರತಕ್ಕೆ ಅಪಾಯವಿದೆ. ಇವನ್ನು ಯಾರೇ ಮಾಡಿರಲಿ, ಎಲ್ಲ ಬಗೆಯ ಭಯೋತ್ಪಾದನೆಯನ್ನು ಎದುರಿಸುವ ನಿಟ್ಟಿನಲ್ಲಿ ಭಾರತ ಜಾಗೃತವಾಗಿರಬೇಕು ಎಂಬುದು ರಾಹುಲ್ ಹೇಳಿಕೆಯ ತಾತ್ಪರ್ಯ ಎಂದು ಕಾಂಗ್ರೆಸ್ ಹೇಳಿಕೆ ನೀಡಿದೆ.
೨೦೦೯ರಲ್ಲಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಹಿಲರಿ ಕ್ಲಿಂಟನ್ ಅವರ ಗೌರವಾರ್ಥ ನೀಡಿದ್ದ ಔತಣಕೂಟದಲ್ಲಿ ಭಾರತದಲ್ಲಿನ ಅಮೆರಿಕಾದ ರಾಯಭಾರಿ ಟಿಮೋತಿ ರೋಮರ ಅವರ ಜೊತೆ ಮಾತನಾ ಡುವಾಗ, ಲಷ್ಕರ್-ಇ-ತೊಯ್ಬಾಗೆ ಕೆಲ ಭಾರತೀಯ ಮುಸ್ಲಿಂ ಸಂಘಟನೆಗಳ ಬೆಂಬಲವಿರುವುದಕ್ಕೆ ಪೂರಕ ಸಾಕ್ಷ್ಯ ವಿದ್ದರೂ, ಹಿಂದೂ ಸಂಘಟನೆಗ ಳಿಂದ ಭಾರತಕ್ಕೆ ಹೆಚ್ಚಿನ ಅಪಾಯವಿದೆ. ಈ ಕೋಮುವಾದಿ ಸಂಘಟನೆಗಳು ಮುಸ್ಲಿಂ ಸಂಘಟನೆಗಳೊಂದಿಗೆ ಅನ ಗತ್ಯವಾಗಿ ಧಾರ್ಮಿಕ ಮತ್ತು ರಾಜ ಕೀಯ ಸಂಘರ್ಷಕ್ಕಿಳಿಯುತ್ತಿದ್ದಾರೆ ಎಂದು ರಾಹುಲ್ ಹೇಳಿಕೆ ನೀಡಿದ್ದರು.
ಬಿಜೆಪಿ ಕಿಡಿಕಿಡಿ
ರಾಹುಲ್ ಹೇಳಿಕೆಗೆ ಬಿಜೆಪಿ ಯಿಂದ ಭಾರೀ ವಿರೋಧ ವ್ಯಕ್ತವಾಗಿದೆ. ರಾಹುಲ್‌ಗೆ ಭಾರತದ ಬಗ್ಗೆ ತಿಳಿವಳಿಕೆ ತೀರ ಕಮ್ಮಿ. ಹಿಂದೂ ಉಗ್ರವಾದಿತ್ವ ಅಪಾಯಕಾರಿ ಎಂಬ ಹೇಳಿಕೆ ನೀಡಿ ಭಾರತದ ವಿರುದ್ಧ ಪಾಕಿಸ್ತಾನ ನಡೆಸು ತ್ತಿರುವ ಭಯೋತ್ಪಾದನೆಗೆ ಮತ್ತಷ್ಟು ಉತ್ತೇಜನ ಕೊಟ್ಟಂತಾಗುತ್ತದೆ. ರಾಹುಲ್ ಗಾಂಧಿಯ ಈ ಹೇಳಿಕೆ ಯನ್ನು ಬಲವಾಗಿ ಖಂಡಿಸುತ್ತೇವೆ. ಪ್ರಧಾನಿ ಇದರ ಬಗ್ಗೆ ಸ್ಪಷ್ಟನೆ ನೀಡಲೇ ಬೇಕು. ಭಯೋತ್ಪಾದನೆ ವಿರುದ್ಧ ಭಾರತ ನಡೆಸುತ್ತಿರುವ ಹೋರಾಟಕ್ಕೆ ಈ ಹೇಳಿಕೆ ಭಾರೀ ಧಕ್ಕೆ ತಂದಿದೆ ಎಂದು ಬಿಜೆಪಿ ವಕ್ತಾರ ರವಿ ಶಂಕರ್ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ ಕೋಮುವಾ ದವನ್ನು ಬಳಸಿಕೊಂಡು ಭಾರತವನ್ನು ಒಡೆಯಲು ನೋಡುತ್ತಿದ್ದಾರೆ. ಹಿಂದೂ ಗಳ ವಿರುದ್ಧ ಮಾತನಾಡಿ ಉತ್ತರ ಪ್ರದೇಶದಲ್ಲಿ ಮುಸ್ಲಿಂ ಮತಗಳನ್ನು ಗಳಿಸಬಹುದೆಂದು ಅವರು ತಿಳಿದಿದ್ದಾರೆ. ಇದು ನಿಜಕ್ಕೂ ದುರದೃ ಷ್ಟಕರ ಎಂದು ಬಿಜೆಪಿ ವಕ್ತಾರ ತರುಣ್ ವಿಜಯ ಹೇಳಿದ್ದಾರೆ.
ಬಿಜೆಪಿಗೆ ಕಾಂಗ್ರೆಸ್ ಪ್ರತಿಕ್ರಿಯೆ
ಬಿಜೆಪಿ ಪ್ರತಿಭಟನೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ವಕ್ತಾರ ಮನೀಶ ತಿವಾರಿ, ಬಿಜೆಪಿ ಪ್ರತಿಯೊಂದಕ್ಕೂ ಕೋಮುವಾದ ಮತ್ತು ರಾಜಕೀಯ ಬಣ್ಣ ಬಳಿಯಲು ನೋಡುತ್ತದೆ. ಭಯೋತ್ಪಾದಕರನ್ನು ಕಂದಹಾರಕ್ಕೆ ಕರೆದೊಯ್ಯಲು ಸಹಕರಿಸಿದ ಪಕ್ಷ ಈಗ ಕಾಂಗ್ರೆಸ್‌ನತ್ತ ಬೊಟ್ಟು ಮಾಡಿ ತೋರಿ ಸುತ್ತಿರುವುದು ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದ್ದಾರೆ.
  ಕುತಂತ್ರವಿ ದ್ದಂತಿದೆ.  ಎಂದೂ ಕಾಂಗ್ರೆಸ್ ಹೇಳಿಕೆ ನೀಡಿದೆ.
ಹಸಿವು ಮತ್ತು ಭಯ ಮುಕ್ತ ಭವ್ಯ ಭಾರತ
ವಿಕಿಲೀಕ್ಸ್ ಬಿಡುಗಡೆ ಮಾಡಿರುವ ಮಾಹಿತಿಯ ಹಿಂದೆ ಪ್ರಸಕ್ತಿ ಸತ್ಯಾಸತ್ಯತೆಯ ಬಗ್ಗೆ ಪರಿಶೀಲಿಸಬೇಕು ಸಂಗಪರಿವಾರದ ಉಗ್ರಗಾಮಿಗಳನ್ನು ಬಯಲಿಗೆ ತರಬೇಕು.   

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ