
ಅಡಿಮಾಲಿ : ಕೇರಳದ ಎರ್ನಾಕುಲಂ – ವಾಯಕುಲಂ ಬ್ಲಾಕ್ ಪಂಚಾಯತ್ ಸದಸ್ಯರೂ ಎಸ್.ಡಿ.ಪಿ.ಐ ಪಕ್ಷದ ನಾಯಕರೂ ಆದ ಪ್ರೊಫೆಸರ್ ಅನಸ್ ಮೇಲೆ ಕಲ್ಲೆಸೆದು ಆಕ್ರಮಣ ನಡೆಸಿದ ಘಟನೆ ದೇವಿಕುಲಂ ಎಂಬಲ್ಲಿ ನಡೆದಿದೆ. ಆದರೆ ಎಸೆದ ಕಲ್ಲು ಅವರ ಮೇಲೆ ಬೀಳದೇ ವೇದಿಕೆಗೆ ಬಿದ್ದ ಕಾರಣ ಅವರು ಅಪಾಯದಿಂದ ಪಾರಾಗಿದ್ದಾರೆ. ದೇವಿಕುಲಂ ಕ್ಷೇತ್ರದ ಎಸ್.ಡಿ.ಪಿ.ಐ ಕಾರ್ಯಕರ್ತರು ಪ್ರೊ ಅನಸ್ ಅವರಿಗೆ ಅಭಿನಂದನಾ ಸಮಾವೇಶ ಏರ್ಪಡಿಸಿದ್ದರು. ಆಗ ವೇದಿಕೆಯ ಸಮೀಪದಲ್ಲಿದ್ದ ವ್ಯಕ್ತಿಯೊಬ್ಬ ಅನಸ್ ಅವರನ್ನು ಗುರಿಯಾಗಿಸಿ ಕಲ್ಲೊಂದನ್ನು ಎಸೆದು ಪರಾರಿಯಾದ.
ಆತನನ್ನು ಹಿಡಿಯಲು ಕಾರ್ಯಕರ್ತರು ಪ್ರಯತ್ನ ಪಟ್ಟರೂ ಆತ ಅಲ್ಲಿಂದ ತಪ್ಪಿಸಿಕೊಂಡ ಎನ್ನಲಾಗಿದೆ. ಆನಂತರ ಕೆಲ ಹೊತ್ತಿನ ಬಳಿಕ ಇನ್ನೊಂದು ಕಲ್ಲು ವೇದಿಕೆಯ ಮೇಲೆ ಬಿದ್ದಾಗ ಕಾರ್ಯಕರ್ತರು ಮತ್ತು ಪೊಲೀಸರು ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾದರು. ಆರೋಪಿಯನ್ನು ಬಂಧಿಸಿದ ಪೊಲೀಸರು ಆತನನ್ನು ಜೀಪಿನಲ್ಲಿ ಕುಳ್ಳಿರಿಸಿಕೊಂಡು ಹೋಗಿ ಮೊಕದ್ದಮೆ ದಾಖಲಿಸದೇ ದಾರಿ ಮಧ್ಯೆ ಬಿಟ್ಟಿದ್ದಾರೆ ಎನ್ನಲಾಗಿದೆ. ಇದರ ವಿರುದ್ಧ ಎಸ್.ಡಿ.ಪಿ.ಐ ಮುಖಂಡರು ಸ್ಥಳೀಯ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಅನಸ್ ಪ್ರೊ ಟಿ.ಜೆ. ಜೋಸೆಫ್ ಅವರ ಕೈಕಡಿದ ಪ್ರಕರಣದಲ್ಲಿ ಬಂಧಿತರಾಗಿ ಜೈಲಿನಿಂದಲೇ ಚುನಾವಣೆಗೆ ಸ್ಪರ್ಧಿಸಿ ವಿಜಯಿಯಾಗಿದ್ದರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ