ಮಾನವೀಯತೆಯ ವಿಜಯಕ್ಕಾಗಿ ನಾವೆಲ್ಲ ಹಾರೈಸೋಣ http://musthaqbil.blogspot.com
ಶನಿವಾರ, ಡಿಸೆಂಬರ್ 18, 2010
ಹಿಂದೂ ಸಮಾಜೋತ್ಸವದ ವಿರುದ್ಧ ರಾಜ್ಯಪಾಲರಿಗೆ ದೂರು.
ಬೆಂಗಳೂರು: ಹಿಂದೂ ಸಮಾ ಜೋತ್ಸವದ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವ ಎಡಪಕ್ಷ ಮತ್ತು ಪ್ರಗತಿಪರ ಸಂಘಟನೆಗಳು ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ರಾಜಕೀಯ ಸ್ವರೂಪದ ಹಿಂದೂ ಸಮಾಜೋತ್ಸವಕ್ಕೆ ನಿರ್ಬಂಧ ಹೇರಬೇಕೆಂದು ಮನವಿ ಮಾಡಿವೆ. ರಾಜ್ಯಪಾಲರನ್ನು ಸಿಪಿಎಂ ಕಾರ್ಯದರ್ಶಿ ಮಂಡಳಿ ಸದಸ್ಯ ಎಸ್ ಗುರುಶಾಂತ್ ನೇತೃತ್ವದ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿದೆ. ಜಿ.ಪಂ. ಮತ್ತು ತಾ.ಪಂ. ಚುನಾವಣೆ ಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಧಾರ್ಮಿಕ ಆಚರಣೆಗಳಿಗೆ ನೀತಿ ಸಂಹಿತೆ ಅಡ್ಡಿಯಾ ಗದಿದ್ದರೂ ಹಿಂದೂ ಸಮಾಜೋತ್ಸವ ಮತ್ತು ಕಲಬುರ್ಗಿ ಕಂಪು ರೀತಿಯ ಕಾರ್ಯಕ್ರಮಗಳು ಬಿಜೆಪಿ ತನ್ನ ಪ್ರಣಾ ಳಿಕೆಗಳಲ್ಲಿ ಹೇಳಿಕೊಳ್ಳುವ ಹಿಂದುತ್ವ ವಾದಿ ಸಿದ್ಧಾಂತವನ್ನು ಪ್ರಚುರಪಡಿಸು ತ್ತದೆ. ಉತ್ಸವಗಳು ಸಾಂಪ್ರದಾಯಿಕ ಆಚರಣೆಗಳಲ್ಲ. ಆದರೆ ಇವು ಬಿಜೆಪಿಗೆ ಚುನಾವಣೆಯ ಲಾಭ ತಂದು ಕೊಡುವಂತಹದ್ದು ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ