ಸೋಮವಾರ, ಜನವರಿ 31, 2011

ಕ್ರಿಮಿನಲ್ ಹಿನ್ನೆಲೆಯವರ ಅಧಿಕಾರವೇ ಮಸೀದಿ, ಚರ್ಚ್ ದಾಳಿಗೆ ಕಾರಣ

ಮಂಗಳೂರು: ಅಕ್ರಮ ಚಟುವ ಟಿಕೆಗಳಿಂದ ಜನಪ್ರತಿನಿಧಿಗಳಾಗುವ ಮೂಲಕ ಗಾಂಧೀಜಿಯಂತಹ ಧೀಮಂತ ನಾಯಕರ ತಲೆಗಳು ಉರುಳುತ್ತಿರುವುದು ಮಾತ್ರವಲ್ಲದೆ ಮಸೀದಿ, ಚರ್ಚ್ ಮೇಲೆ ದಾಳಿ ನಡೆಯುತ್ತಿರುವುದಕ್ಕೆ ಮುಖ್ಯ ಕಾರಣ ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸರಕಾರಿ ಉದ್ಯೋಗ ಸ್ಥರ ಒಕ್ಕೂಟದ ಅಧ್ಯಕ್ಷ ಹಾಜಿ ಬಿ. ಎಸ್. ಹುಸೈನ್ ಹೇಳಿದ್ದಾರೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ‘ನ್ಯಾಯದ ನಿರೀಕ್ಷೆಯಲ್ಲಿ ಬಾಬರಿ ಮಸೀದಿ ಅಭಿಯಾನದ ಅಂಗ ಜೋಕಟ್ಟೆ ಏರಿಯಾ ಪಿಎಫ್‌ಐ ವತಿ ಯಿಂದ ನಡೆದ ಗಾಂಧೀಜಿ ಹತ್ಯೆಯಿಂದ ಬಾಬರಿ ಮಸೀದಿ ಧ್ವಂಸದವರೆಗೆ ಎಂಬ ಜನಜಾಗೃತಿ ಕಾರ‍್ಯಕ್ರಮದಲ್ಲಿ ಹುಸೈನ್ ಮಾತನಾಡಿದರು.
೧೯೯೨ ಡಿಸೆಂಬರ್ ಆರರಂದು ಮುಸ್ಲಿಮರ ಸ್ವಾಭಿಮಾನದ ಸಂಕೇತ ವಾಗಿದ್ದ ಬಾಬರಿ ಮಸೀದಿ ಧ್ವಂಸವು ರಾಜಕೀಯವಾಗಿ ಬಲಾಢ್ಯವಾಗ ಬೇಕೆಂಬ ಉದ್ದೇಶವನ್ನಿಟ್ಟುಕೊಂಡು ಹಿಂದುತ್ವವಾದಿ ಶಕ್ತಿಗಳು ರೂಪಿಸಿದ ವ್ಯವಸ್ಥ್ತಿತ ಷಡ್ಯಂತ್ರವಾಗಿದೆ.
ಮುಸ್ಲಿಮರ, ದಲಿತರ, ಕ್ರೈಸ್ತರ ಹಾಗೂ ತುಳಿತಕ್ಕೊಳ ಗಾದವರ ಪ್ರತಿ ಸಮುದಾಯಕ್ಕೂ ಧ್ವನಿಯಾಗಬೇ ಕಾಗಿದ್ದ ಇಲ್ಲಿನ ಜಾತ್ಯ ತೀತ ಪಕ್ಷಗಳು ಗಾಂಧೀಜಿ ಹತ್ಯೆಯಿಂದ ಬಾಬರಿ ಮಸೀದಿ ಧ್ವಂಸದವರೆಗೆ ಮಾತ್ರವಲ್ಲದೆ ಇತ್ತೀಚೆಗೆ ಹೊರಬಿದ್ದಿರುವ ಕೇಸರಿ ಭಯೋತ್ಪಾದಕರ ದೇಶ ವಿರೋಧಿ ಕೃತ್ಯಗಳಿಗೂ ಮೌನ ಸಮ್ಮತಿ ನೀಡು ತ್ತಿರುವುದು ಇದು ನಾಮಾಧಾರಿತ ಜಾತ್ಯತೀತ ಪಕ್ಷಗಳ ವಿನಾಶದ ಸಂಕೇತ ಎಂದು ಮಂಗಳೂರಿನ ಕ್ರಿಯೇಟಿವ್ ಫೌಂಡೇಶನ್ ಕಾರ‍್ಯಾಧ್ಯಕ್ಷ ಅನ್ವರ್ ಸಾದಾತ್ ಎಚ್ಚರಿಸಿದರು.
ಅತಿಥಿಯಾಗಿದ್ದ ಶಶಿಧರ್ ಜೋಕಟ್ಟೆ ಮಾತನಾಡಿ, ದೇಶದಲ್ಲಿ ಬಹಳಷ್ಟು ಹಿಂದಿನಿಂದ ಆಗುತ್ತಿರುವ ತಾರತಮ್ಯ ಧೋರಣೆ ಎಂಬ ರೋಗ ಈಗ ನ್ಯಾಯಾಲಯಕ್ಕೂ ಆವರಿಸಿದ್ದು, ಇದರ ವಿರುದ್ಧ ಜಾತಿಮತ ಭೇದ ಮರೆತು ಹೋರಾಡಬೇಕಾದ ಅನಿವಾರ್ಯತೆ ಇದೆ ಎಂದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ