ಮಂಗಳವಾರ, ಡಿಸೆಂಬರ್ 07, 2010

ಮಂಗಳೂರು ತಲುಪಿದ ಹಜ್ ಯಾತ್ರಾರ್ಥಿಗಳು

 
ಮಂಗಳೂರು : ಪವಿತ್ರ ಹಜ್ ಯಾತ್ರೆಗೆ ಹೊರಟಿದ್ದ ಮಂಗಳೂರಿನ ಮೊದಲ ತಂಡ ಇಂದು ಮುಂಜಾನೆ ೪.೪೫ ರ ಸುಮಾರಿಗೆ ಮಂಗಳೂರು ವಿಮಾನ ನಿಲ್ಧಾಣವನ್ನು ತಲುಪಿದ್ದು  ಬಂದು ಮಿತ್ರರು ಹಜ್ ನಿರ್ವಹಿಸಿ ಬಂದ ತಮ್ಮ ಆಪ್ತರನ್ನು ವಿಮಾನ ನಿಲ್ಧಾಣದಲ್ಲಿ ಹಾರ್ದಿಕವಾಗಿ ಸ್ವಾಗತಿಸಿದರು. ಇಂದು ಬೆಳಿಗ್ಗೆ ತುರ್ಕಿ ಏರ್ ಲೈನ್ಸ್ ವಿಮಾನದ ಮೂಲಕ ಬಂದಿಳಿದ ೨೨೦ ಯಾತ್ರಾರ್ಥಿಗಳನ್ನು ಸ್ವಾಗತಿಸಿದ ವಿಮಾನ ನಿಲ್ಧಾಣದ ನಿರ್ದೇಶಕ ಎಂ.ಆರ್. ವಾಸುದೇವ್ ಎಲ್ಲರಿಗೂ ಶುಭ ಹಾರೈಸಿದರು.
 
ಕಳೆದೆರಡು ದಿನಗಳಿಂದ ಜಿದ್ದಾ ವಿಮಾನ ನಿಲ್ಧಾಣದಲ್ಲಿ ವಿಮಾನ ವಿಳಂಬದ ಕಾರಣ ಸಂಕಷ್ಟ ಅನುಭವಿಸಿದ್ದ ಪ್ರಯಾಣಿಕರು ಬಳಲಿದಂತೆ ಕಂಡುಬಂದರು. ಮಂಗಳೂರಿನಿಂದ ಹೊರಟ ಇತರ ಯಾತ್ರಾರ್ಥಿಗಳ ತಂಡ ಅತೀ ಶೀಘ್ರದಲ್ಲಿ  ಮರಳಿ ಬರಲಿದೆ. ಮಂಗಳೂರು ವಿಮಾನ ನಿಲ್ಧಾಣದ ಮೂಲಕ ಒಟ್ಟು ೮೨೦ ಮಂದಿ ಈ ಬಾರಿ ಹಜ್ ಯಾತ್ರೆ ನಿರ್ವಹಿಸಲು ತೆರಳಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ