ಮಂಗಳೂರು: ವಿಮಾನ ವಿಳಂಬ ದಿಂದಾಗಿ ಮೂರು ದಿನಗಳವರೆಗೆ ಅನ್ನಾಹಾ ರವಿಲ್ಲದೆ ಉಪವಾಸವಿದ್ದ ಹಾಜಿಗಳು ಕೊನೆಗೂ ನಿನ್ನೆ ಊರಿಗೆ ಮರಳುವ ಮೂಲಕ ಮನೆಮಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಈ ಬಾರಿ ಮಂಗಳೂರಿನಿಂದ ಸಾವಿರಕ್ಕೂ ಅಧಿಕ ಮಂದಿ ಹಜ್ ಯಾತ್ರೆಗೆ ತೆರಳಿದ್ದರು. ಯಾತ್ರೆಯನ್ನು ಯಶಸ್ವಿಯಾಗಿ ಪೂರ್ತಿಗೊಳಿಸಿದ ಹಾಜಿಗಳು ಊರಿಗೆ ಮರಳುವ ಸಿದ್ಧತೆಯನ್ನೂ ನಡೆಸಿದ್ದರು. ಅವರ ಪೈಕಿ ಹೆಚ್ಚಿನವರು ತಮ್ಮ ಊರುಗಳಿಗೆ ಮೂರು ದಿನಗಳ ಹಿಂದೆಯೇ ಮರಳಿದ್ದರು. ಆದರೆ ೨೧೦ ಯಾತ್ರಾರ್ಥಿಗಳನ್ನು ಜೆದ್ದಾ ವಿಮಾನ ನಿಲ್ದಾಣದಲ್ಲಿಯೇ ಉಳಿಸಿ ಇಂದು-ನಾಳೆ ಕರೆದೊಯ್ಯಲಾಗುತ್ತದೆ ಎಂದು ಅಧಿಕಾರಿಗಳು ಭರವಸೆ ನೀಡುತ್ತಾ ಬಂದಿದ್ದರು.
ಆದರೆ ವಿಮಾನ ನಿಲ್ದಾಣದಲ್ಲಿ ಮೂರು ದಿನಗಳನ್ನು ಕಳೆದ ಹಾಜಿಗಳು ಮೊನ್ನೆ ಅಧಿಕಾರಿಗಳೊಂದಿಗೆ ಜಗಳ ಕಾದಿದ್ದರು. ಈ ಸಂದರ್ಭದಲ್ಲಿ ಅವಕ್ಕಾದ ಅಧಿಕಾರಿಗಳು ಮಂಗಳೂರಿನಲ್ಲಿ ನಡೆದ ವಿಮಾನ ದುರಂತದ ಬಳಿಕ ಕಂಪೆನಿಗಳು ವಿಮಾನ ಗಳನ್ನು ಮಂಗಳೂರಿಗೆ ಕಳುಹಿಸಲು ನಿರಾಕರಿಸುತ್ತಿದೆ ಎಂದು ಬೋಂಗು ಬಿಟ್ಟಿದ್ದರು. ಇದರಿಂದ ಸಮಾಧಾನಗೊಳ್ಳದ ಹಜ್ಜಾಜ್‌ಗಳು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು ಇದರ ಫಲ ವಾಗಿ ನಿನ್ನೆ ಬೆಳಿಗ್ಗಿನ ಜಾವ ತುರ್ಕಿಯ ವಿಮಾನವೊಂದರ ವ್ಯವಸ್ಥೆ ಮಾಡಲಾಗಿತ್ತು.
ವಿಮಾನದ ವಿಳಂಬದಿಂದಾಗಿ ಕಳೆದ ಮೂರು ದಿನಗಳಿಂದ ಜೆದ್ದಾ ವಿಮಾನ ನಿಲ್ದಾಣದ ಬಳಿಯಿರುವ ಟೆಂಟುಗಳಲ್ಲಿ ಉಳಿದುಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಅನ್ನಾಹಾರದ ವ್ಯವಸ್ಥೆ ಇಲ್ಲದ ಕಾರಣ ಉಪವಾಸವಿರಬೇಕಾಯಿತು. ಮೊನ್ನೆ ರಾತ್ರಿ ಕೆಲವು ಮಂದಿ ಅಧಿಕಾರಿಗಳ ಜೊತೆ ಜಗಳ ಕಾದಿದ್ದು ನಂತರ ಅಂದು ರಾತ್ರಿ ಭರ್ಜರಿ ಊಟದ ವ್ಯವಸ್ಥೆ ನೀಡಲಾಯಿತು ಎಂದು ಹಾಜಿ ಅಬ್ದುಲ್ಲಾರವರು ತಿಳಿಸಿದ್ದಾರೆ. ಮಂಗಳೂರಿನಿಂದಲೇ ಪ್ರಯಾಣಿಸಬೇಕೆ ನ್ನುವ ಹಜ್ಜಾಜ್‌ಗಳ ಹಲವು ವರ್ಷಗಳ ಕನಸು ಕಳೆದ ಬಾರಿ ನನಸಾಗಿದೆ. ಆದರೆ ವಿಮಾನ ಕಂಪೆನಿಗಳ ಕಿರಿಕ್‌ನಿಂದಾಗಿ ಯಾತ್ರೆಯ ಅಂತ್ಯವು ವಿವಾದಕ್ಕೆ ಕಾರಣ ವಾಗುತ್ತಿರುವುದು ಮುಸ್ಲಿಮರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ