ದಿನಾಂಕ ೨/೦೧/೨೦೧೧ರ ದಿನ ಮಂಗ ಳೂರಿನ ಸರ್ವರಿಗೂ ಕರಾಳ ದಿನ ವಾಗಿದೆ. ಇದಕ್ಕೆ ಕಾರಣ ಅಂದು ಉಗ್ರ ಭಾಷಣಕಾರ ತೊಗಾಡಿಯಾ ನೆರೆದಿದ್ದ ಸಭಿಕರಿಂದ ಮುಸ್ಲಿಮರು ಹಿಂದೂಗಳ ಶತ್ರು ಎಂದು ಹೇಳಿಸಿದ್ದಾರೆ. ಬಾಬರಿ ಮಸೀದಿ ಬಗ್ಗೆ ಕೋರ್ಟ್ ಸೌಹಾ ರ್ದತೆಯ ತೀರ್ಪು ಕೊಟ್ಟಿರುವಾಗ ನ್ಯಾಯ ದೇವತೆಗೆ ಅವಮಾನಿಸುವ ಹಾಗೆ ಅಲ್ಲಿ ಮಸೀದಿ ನಿರ್ಮಾಣಕ್ಕೆ ಅವಕಾಶ ಕೊಡು ವುದಿಲ್ಲ ಎಂದಿದ್ದಾರೆ. ಕೇಸರಿ ಭಯೋ ತ್ಪಾದಕರಿಂದ ಮಾಲೆಗಾಂವ್, ನಾಂದೇಡ್, ಅಜ್ಮೀರ್‌ಗಳಲ್ಲಿ ಉಗ್ರ ಕೃತ್ಯ ಗಳು ನಡೆದಿದ್ದರೂ ಕೂಡಾ ಹೇಳಿದ್ದನ್ನೇ ಹೇಳುವ ಕಿಸಬಾ ಯಿದಾಸ ಎಂಬಂತೆ ಇದಕ್ಕೂ ಕಾರಣ ಜೆಹಾದಿಗಳು ಎಂದು ಹೇಳಿ ಬೊಬ್ಬಿಟ್ಟಿದ್ದಾರೆ. ‘ಭಾರತದಲ್ಲಿರುವ ನಾವೆಲ್ಲರೂ ಒಂದೇ’ ಎಂಬ ಶಾಂತಿ ಮಂತ್ರವನ್ನು ಪಠಿಸಬೇಕಾಗಿದ್ದ ಸಭೆಯಲ್ಲಿ ಹಿಂದುಗಳನ್ನು ಮುಸಲ್ಮಾನರ ವಿರುದ್ಧ ಎತ್ತಿಕಟ್ಟಿ ದ್ವೇಷ ಬೆಳೆಯುವಂತೆ ಮಾಡಿದ್ದಾರೆ. ಇದೆಲ್ಲಾ ಆಗು ತ್ತಿದ್ದರೂ ಜಿಲ್ಲಾಧಿಕಾರಿಗಳಾಗಲಿ, ಪೊಲೀಸ್ ವರಿಷ್ಠಾಧಿಕಾರಿಗಳಾಗಲಿ ಕ್ರಮ ಇವರ ಮೇಲೆ ಕ್ರಮ ಕೈಗೊಂಡಿಲ್ಲ. ಆಕಸ್ಮಾತ್ ಮುಸಲ್ಮಾನನೊಬ್ಬ ಈ ಮಾತು ಗಳನ್ನಾಡಿದ್ದರೆ ಉಗ್ರ ಎಂದು ಹೇಳಿ ಜೈಲಿಗೆ ತಳ್ಳುತ್ತಿದ್ದರು. ಉಗ್ರ ಭಾಷಣ ಕಾರರ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ತಾಕತ್ತಿಲ್ಲವೇ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ