ಮಂಗಳೂರು: ಜಿಲ್ಲೆಯಲ್ಲಿ ಬಲಿಷ್ಠವಾಗಿ ನೆಲೆಯೂರಿರುವ ಮರಳು ಮಾಫಿಯಾ ಇದೀಗ ತನ್ನ ಕಾರ್ಯ ಚಟುವಟಿಕೆಗೆ ಅಡ್ಡಿಯಾಗುತ್ತಿರುವ ಕೊಣಾಜೆ ಠಾಣಾ ಎಸ್.ಐ.ಯನ್ನು ರಾಜಕೀಯ ಪ್ರಭಾವ ಬಳಸಿ ವರ್ಗಾ ಯಿಸುವ ಕಸರತ್ತು ಮತ್ತೆ ಆರಂಭ ಗೊಂಡಿರುವಂತೆಯೇ ಕೊಣಾಜೆ ಠಾಣಾ ವ್ಯಾಪ್ತಿಯ ನಾಗರಿಕರು ಬೀದಿಗಿಳಿದು ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಬಳ್ಳಾರಿ ಗಣಿಗಾರಿಕೆಗಿಂತಲೂ ಒಂದು ಹೆಜ್ಜೆ ಮುಂದೆ ಎಂಬಂತೆ ಜಿಲ್ಲೆಯಲ್ಲಿ ಅವ್ಯಾಹತವಾಗಿ ಅಕ್ರಮ ಮರಳು ಸಾಗಾಟವು ನಡೆಯುತ್ತಿದ್ದು ಇದನ್ನು ಮೆಟ್ಟಿ ನಿಂತು ಇದಕ್ಕೆ ಮೂಗು ದಾರ ಹಾಕುವ ಯಾವೊಬ್ಬ ಅಧಿಕಾರಿಯೂ ಜಿಲ್ಲೆಯಲ್ಲಿರದ ಕಾರಣ ಇದೀಗ ಮರಳು ಮಾಫಿಯಾ ಮತ್ತಷ್ಟು ಬಲ ಗೊಂಡು ಹೆಮ್ಮರವಾಗಿ ಬೆಳೆಯುತ್ತಿದೆ. ಕೊಣಾಜೆಯ ಪಾವೂರು, ಮುಡಿಪು, ಬಾಕ್ರಬೈಲ್, ಸಾಲೆತ್ತೂರು ಪ್ರದೇಶಗಳಲ್ಲಿ ಇತ್ತೀಚೆಗೆ ಅಕ್ರಮ ಮರಳು ಸಾಗಾಟವು ಎಗ್ಗಿಲ್ಲದೆ ನಡೆಯುತ್ತಿದೆ.
ಯಾವ ಅಧಿಕಾರಿಗಳನ್ನು ಲೆಕ್ಕಿಸದೆ ಹಾಗೂ ಮರಳು ಮಾಫಿಯಾ ದವರ ಲಂಚಕ್ಕೆ ಕೈಯೊಡ್ಡದ ಕೊಣಾಜೆ ಠಾಣೆಯ ಎಸ್ಸೈ ಸುನೀಲ್ ಪಾಟೀಲ್ ಅಕ್ರಮ ಮರಳು ಸಾಗಾಟಕ್ಕೆ ತಡೆಯೊ ಡ್ಡುತ್ತಿದ್ದರು. ಆದರೆ ಇವರ ಈ ಪ್ರಯತ್ನಕ್ಕೆ ಯಾವೊಬ್ಬ ಮೇಲಧಿಕಾ ರಿಯೂ ಅಲ್ಲದೆ ಠಾಣೆಯೊಳಗಿರುವ ಪೊಲೀಸರೂ ಸಹಕರಿಸದೇ ಇದ್ದುದ ರಿಂದ ಮರಳು ಮಾಫಿಯಾಕ್ಕೆ ಸಂಪೂ ರ್ಣವಾಗಿ ಬ್ರೇಕ್ ಹಾಕಲು ಸಾಧ್ಯವಾಗಿ ರಲಿಲ್ಲ. ಕಳೆದ ಕೆಲವು ದಿನಗಳ ಹಿಂದೆ ಈ ಮರಳು ಮಾಫಿಯಾವು ತನ್ನ ರಾಕ್ಷಸೀ ರೂಪವನ್ನು ಪ್ರದರ್ಶಿಸಿದ್ದು ಬಾಕ್ರಬೈಲ್ ಸಮೀಪದ ಗುವೆದಪಡ್ಪು ಎಂಬಲ್ಲಿ ಇಬ್ಬರು ಪೊಲೀಸರ ಕೊಲೆ ಯತ್ನವನ್ನು ಕೂಡಾ ನಡೆಸಿತ್ತು. ಈ ಬಗ್ಗೆ ಕೊಣಾಜೆ, ವಿಟ್ಲ, ಮಂಜೇಶ್ವರ ಠಾಣಾಧಿಕಾರಿಗಳು ಒಟ್ಟು ಸೇರಿ ಹಲ್ಲೆ ಗೈದವರನ್ನು ಬಂಧಿಸಿ ಕಠಿಣ ಕ್ರಮ ತೆಗೆದುಕೊಂಡಿದ್ದರು.
ಆದರೆ ತಮ್ಮ ಅಕ್ರಮ ವ್ಯವಹಾರಕ್ಕೆಲ್ಲ ಅಡ್ಡಿಪಡಿಸುತ್ತಿರುವ ಸುನಿಲ್ ಪಾಟೀಲ್ ರವರನ್ನು ಹೇಗಾದರೂ ಮಾಡಿ ಇಲ್ಲಿಂದ ವರ್ಗಾಯಿಸಬೇಕೆಂಬ ಪ್ರಯ ತ್ನವನ್ನು ಹಲವಾರು ತಿಂಗಳುಗಳ ಹಿಂದೆಯೇ ಈ ಮರಳು ಮಾಫಿಯಾ ವು ಮಾಡಿತ್ತು. ಆದರೆ ಇದರಿಂದ ಎಚ್ಚೆತ್ತ ನಾಗರಿಕರು ದಕ್ಷ ಎಸ್ಸೈಯನ್ನು ಯಾವುದೇ ಕಾರಣಕ್ಕೂ ವರ್ಗಾಯಿಸ ಬಾರದೆಂದು ಆಗ್ರಹಿಸಿ ಕಮಿಷನರ್ ಅವರಿಗೆ ಮನವಿಯನ್ನು ನೀಡಿದ್ದರು. ಆದರೆ ವರ್ಗಾಯಿಸುವ ಪ್ರಯತ್ನ ಮಾತ್ರ ಇನ್ನೂ ನಿಂತಿಲ್ಲ. ಸ್ಥಳೀಯ ರಾಜಕೀಯ ನಾಯಕರೂ ಕೂಡಾ ಈ ಮರಳು ಮಾಫಿಯಾದೊಂದಿಗೆ ಬಹಿರಂಗ ವಾಗಿಯೇ ಕೈ ಜೋಡಿಸಿದ್ದಾರೆ ಮಾತ್ರವಲ್ಲದೆ ಇವರು ರಾಜಕೀಯ ವರಿಷ್ಠರ ಬೆನ್ನು ಹಿಡಿದು ಪಾಟೀಲರನ್ನು ವರ್ಗಾಯಿಸಲು ಮತ್ತು ಅವರ ಬದಲಿಗೆ ಹಿಂದಿನ ಎಸ್ಸೈ ಲೋಹರ್ ಅವರನ್ನೇ ಮತ್ತೆ ಕೊಣಾಜೆ ಠಾಣೆಗೆ ಬರಮಾಡಿ ಕೊಳ್ಳುವ ತೆರೆಯ ಮರೆಯ ಪ್ರಯತ್ನ ಗಳು ನಡೆಸುತ್ತಿರುವುದು ಇದೀಗ ಸಾರ್ವಜನಿಕರನ್ನು ಆಕ್ರೋಷಿತ ರನ್ನಾಗಿಸಿದೆ.
ಅಕ್ರಮ ಮರಳುಗಾರಿಕೆ: ಜೈಲು ಶಿಕ್ಷೆ
ಬೆಂಗಳೂರು: ಅಕ್ರಮ ಮರಳು ಗಾರಿಕೆಯಲ್ಲಿ ತೊಡಗುವ ಹಾಗೂ ಫಿಲ್ಟರ್ ಮರಳು ತಯಾರಿಸುವವರ ವಿರುದ್ಧ ಗೂಂಡಾ ಕಾಯ್ದೆ ಜಾರಿಗೆ ತರಲಾಗುತ್ತಿದೆ. ಈ ಕೃತ್ಯದಲ್ಲಿ ತೊಡಗಿರುವವರಿಗೆ ಜೈಲು ಶಿಕ್ಷೆ ಕಾದಿದೆ. ಇಂತಹದ್ದೋಂದು ಮರಳು ಕಾನೂನನ್ನು ರಾಜ್ಯ ಸರಕಾರ ರೂಪಿಸಿದ್ದು, ಮಾರ್ಚ್೧ರಿಂದ ಜಾರಿಗೆ ಬರಲಿದೆ.
ಅಕ್ರಮ ಮರಳು ದಂಧೆಯನ್ನು ಹತ್ತಿಕ್ಕಲು ರಾಜ್ಯ ಸರಕಾರ ಹೊಸ ಮರಳು ನೀತಿ ರೂಪಿಸಿದ್ದು, ಇದಕ್ಕೆ ಸಂಪುಟ ಸಭೆಯ ಅನುಮತಿಯೊಂದೇ ಬಾಕಿ ಇದೆ. ಬೆಂಗಳೂರು ಹಾಗೂ ರಾಜ್ಯದಲ್ಲಿ ಫಿಲ್ಟರ್ ಮರಳನ್ನು ಸಾಮಾನ್ಯ ಮರಳಿನೊಂದಿಗೆ ಸೇರಿಸಿ ಮಾರುವ ದಂಧೆ ಹಲವು ವರ್ಷಗಳಿಂದ ನಡೆಯುತ್ತಿದೆ. ಇಂತಹ ಮರಳನ್ನು ಬಳಸಿ ಕಟ್ಟಲಾದ ಕಟ್ಟಡದ ಗುಣಮಟ್ಟ ಕಳಪೆಯಾಗಿರುತ್ತದೆ. ಇಂತಹ ಕಟ್ಟಡಗಳನ್ನುನೆಲಸಮಗೊಳಿಸಿದ ಪ್ರಕರಣಗಳೂ ನಡೆದಿದ್ದವು.
ಕಳೆದ ಒಂದೂವರೆ ವರ್ಷದಿಂದ ಮರಳು ನೀತಿ ರೂಪಿಸಲು ಅಧ್ಯಯನ ನಡೆಸಿದ ಆರ್. ಅಶೋಕ್ ನೇತೃತ್ವದ ಅಧ್ಯಯನ ಸಮಿತಿ ಹೆಚ್ಚು ಕಡಿಮೆ ತಮಿಳುನಾಡಿನ ಜಾರಿಯಲ್ಲಿರುವ ಕಾನೂನನ್ನೆ ಜಾರಿಗೆ ತರುತ್ತಿದೆ. ಈ ಕಾನೂನಿನಂತೆ ಇನ್ನು ಮುಂದೆ ಖಾಸಗಿ ವ್ಯಕ್ತಿ ಯಾ ಕಂಪೆನಿ ಮರಳುಗಾರಿಕೆಯಲ್ಲಿ ತೊಡಗುವಂತಿಲ್ಲ. ನೇರವಾಗಿ ಸರಕಾರದ ಸಂಸ್ಥೆಗಳಿಂದಲೇ ಮರಳು ಮಾರಾಟ ನಡೆಯುತ್ತದೆ. ಮರಳು ಗಣಿಗಾರಿಕೆ ಈಗ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಬರುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ