ಬುಧವಾರ, ಡಿಸೆಂಬರ್ 01, 2010

ಭಾರತ ದಾಳಿ ನಡೆಸಿದಲ್ಲಿ ಪಾಕ್‌ನಿಂದ ಪ್ರತಿದಾಳಿ:ವಿಕಿಲೀಕ್ಸ್‌ನಿಂದ ಝರ್ದಾರಿ ಹೇಳಿಕೆ ಬಹಿರಂಗ




ವಾಷಿಂಗ್ಟನ್, ಇಸ್ಲಾಮಾಬಾದ್ ಯಾವುದೇ ಆಯ್ಕೆಯನ್ನು ಹೊಂದಿಲ್ಲ. ಆದರೆ ಒಂದುವೇಳೆ ಭಾರತವು ತನ್ನ ಗಡಿಯಲ್ಲಿ ದಾಳಿ ನಡೆಸುವ ಕ್ರಮವನ್ನು ಆಯ್ದುಕೊಂಡಲ್ಲಿ ಇಸ್ಲಾಮಾಬಾದ್ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲಿದೆ’’ ಎಂದು ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಝರ್ದಾರಿ ಅಮೆರಿಕಕ್ಕೆ ತಿಳಿಸಿರುವುದಾಗಿ ವಿಕಿಲೀಕ್ಸ್ ಬಿಡುಗಡೆಗೊಳಿಸಿರುವ ರಹಸ್ಯ ರಾಜತಾಂತ್ರಿಕ ಮಾಹಿತಿಗಳು ತಿಳಿಸಿವೆ.
ಪಾಕಿಸ್ತಾನದಲ್ಲಿದ್ದ ಆಗಿನ ಅಮೆರಿಕನ್ ರಾಯಭಾರಿ ಆ್ಯನ್ ಪ್ಯಾಟರ್ಸನ್‌ರನ್ನು ಜನವರಿ 2ರಂದು ಭೇಟಿಯಾದ ವೇಳೆ, ತನ್ನ ಸರಕಾರವು ರಾಷ್ಟ್ರದ ನೀತಿಯ ಕುರಿತು ಅಧಿಕಾರ ನಡೆಸಲು ಹೊರ ರಾಷ್ಟ್ರಗಳಿಗೆ ಅವಕಾಶ ನೀಡುವುದಿಲ್ಲವೆಂದು ಭರವಸೆ ನೀಡಿದ್ದರು. ಮುಂಬೈ ದಾಳಿ ಪ್ರಕರಣದ ತನಿಖೆಯ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಚರ್ಚೆ ನಡೆಸಲು ಪ್ಯಾಟರ್ಸನ್ ಭೇಟಿಯಾಗಿದ್ದ ವೇಳೆ ಝರ್ದಾರಿ, ಪಾಕಿಸ್ತಾನದ ಮೇಲೆ ದಾಳಿ ನಡೆಸಲು ಭಾರತಕ್ಕೆ ಯಾವುದೇ ರೀತಿಯಿಂದಲೂ ಅವಕಾಶ ನೀಡೆನು ಎಂದು ಹೇಳಿದ್ದರು ಎಂದು ವಿಕಿಲೀಕ್ಸ್ ಬಯಲುಗೊಳಿಸಿದೆ. ‘‘ಕಾಶ್ಮೀರಕ್ಕಿಂತ ಭಿನ್ನವಾದ ಯಾವುದೇ ಸೂಕ್ಷ್ಮ ರಾಜಕೀಯ ಸಮಸ್ಯೆ ಪಾಕಿಸ್ತಾನದಲ್ಲಿಲ್ಲ’’ ಎಂದು ಝರ್ದಾರಿ ತಿಳಿಸಿರುವುದನ್ನೂ ರಹಸ್ಯ ದಾಖಲೆ ಬಹಿರಂಗಪಡಿಸಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ