ಭಟ್ಕಳ, ಜ.12: ‘‘ನನ್ನ ಮಗನನ್ನು ಎಂದೋ ಹತ್ಯೆ ಮಾಡಲಾಗಿದೆ. ಆತ ಅಮಾಯಕ ಹಾಗೂ ಸಭ್ಯನಾಗಿದ್ದ, ಆತನಿಗೆ ಪೊಲೀಸರು ಪದೇ ಪದೇ ನೀಡುತ್ತಿದ್ದ ಕಿರುಕುಳ ತಾಳಲಾರದೆ ಊರು ಬಿಡುವಂತಾಯಿತು. ರಿಯಾಝ್‌ನ ಹತ್ಯೆಯಾಗಿದೆ ಎಂದು ಮಾಧ್ಯಮಗಳಲ್ಲಿ ಬಂದ ಸುದ್ದಿ ನನ್ನ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಏಕೆಂದರೆ ನಾನು ತಿಳಿದುಕೊಂಡಂತೆ ಎಂದೋ ಆತನ ಹತ್ಯೆಯಾಗಿದೆ’’ ಎಂದು ರಿಯಾಝ್ ಭಟಕ್ಳ್‌ನ ತಾಯಿ ಸಈದಾ ಇಸಾ್ಮಯೀಲ್ ಶಾಬಂದ್ರಿ ಮಾಧ್ಯಮಗಳ ಮುಂದೆ ತಮ್ಮ ಮನ ದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ. ಭಟ್ಕಳಮೂಲದ ರಿಯಾಝ್ ಶಾಬಂದ್ರಿಯನ್ನು ಪಾಕಿಸ್ತಾನದ ಕರಾಚಿ ಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿ ಬಂದ ಹಿನ್ನೆಲೆ ಯಲ್ಲಿ ವಾರ್ತಾಭಾರತಿ ಆತನ ತಾಯಿ ಯನ್ನು ಮಾತನಾಡಿಸಿದಾಗ ಈ ಮೇಲಿನಂತೆ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ