ಮಂಗಳೂರು, ಜ.12: ಗುಮಾನಿಯ ಆಧಾರದಲ್ಲಿ ಬಂಧಿತರಾಗಿರುವ ಹಾಗೂ ಆರೋಪ ಸಾಬೀತಾಗದ ವ್ಯಕ್ತಿ ಗಳ ಫೋಟೊಗಳನ್ನು ಪೊಲೀಸ್ ಠಾಣೆ ಗಳಲ್ಲಿ ಪ್ರದರ್ಶಿಸದಂತೆ ಠಾಣಾಧಿಕಾರಿ ಗಳಿಗೆ ನಿರ್ದೇಶನ ನೀಡುವಂತೆ ಶಾಸಕ ಯು.ಟಿ. ಖಾದರ್ ಪೊಲೀಸ್ ಮಹಾ ನಿರ್ದೇಶಕ ಅಜಯ್‌ಕುಮಾರ್ ಸಿಂಗ್‌ರಿಗೆ ಮನವಿ ಸಲ್ಲಿಸಿದ್ದಾರೆ.
ತಾನು ಪ್ರತಿನಿಧಿಸುವ ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಉಳ್ಳಾಲ, ಕೊಣಾಜೆ ಮತ್ತು ಬಂಟ್ವಾಳದ ಕೆಲ ಗ್ರಾಮಾಂತರ ಕೋಮುಸೂಕ್ಷ್ಮ ಪ್ರದೇಶಗಳಲ್ಲಿ ಅಹಿತಕರ ಘಟನೆಗಳಲ್ಲಿ ಭಾಗವಹಿಸಿದ್ದಾರೆಂಬ ಶಂಕೆಯಲ್ಲಿ ಬಂಧಿತರಾದವರ(ಎಲ್ಲ ಸಮುದಾಯದ) ಫೋಟೊಗಳನ್ನು ಆಯಾ ಪೊಲೀಸ್ ಠಾಣೆಗಳಲ್ಲಿ ಪ್ರದರ್ಶಿಸಲಾಗುತ್ತಿದೆ. ಅಪರಾಧಿಗಳೆಂದು ನ್ಯಾಯಾಲಯದಲ್ಲಿ ತೀರ್ಮಾನವಾಗದೇ ಇದ್ದರೂ ಅವರನ್ನು ಪೊಲೀಸರೇ ಅಪರಾಧಿಗಳೆಂದು ತೀರ್ಮಾನಿಸಿದಂತೆ ಠಾಣೆಗಳಲ್ಲಿ ಫೋಟೊ ಪ್ರದರ್ಶಿಸುತ್ತಿದ್ದಾರೆ.
ಇದರಿಂದಾಗಿ ಆರೋಪ ಹೊತ್ತಿ ರುವ ಯುವ ಜನತೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಾಗೂ ಅವರಿಗೆ ತಮ್ಮ ತಪ್ಪನ್ನು ತಿದ್ದಿಕೊಳ್ಳಲು ಅವಕಾಶ ಇಲ್ಲದಂತಾಗುತ್ತದೆ ಎಂದು ಯು.ಟಿ.ಖಾದರ್ ಮನವಿಯಲ್ಲಿ ತಿಳಿಸಿದ್ದಾರೆ.
ಜನಾಂಗೀಯ ಗಲಭೆಗಳಲ್ಲಿ ಬಂಧಿತ ರಾಗಿರುವವರನ್ನು ಬಿಡುಗಡೆ ಮಾಡಲು ಸರಕಾರ ಆದೇಶ ಹೊರಡಿಸಿದೆ. ಆದರೆ ಇಂತಹ ಆದೇಶ ದ.ಕ. ಜಿಲ್ಲೆಗೆ ಇನ್ನೂ ತಲುಪಿಲ್ಲ ಎಂದು ಈ ಸಂದರ್ಭ ಶಾಸಕ ಖಾದರ್, ಪೊಲೀಸ್ ಮಹಾನಿರ್ದೇಶಕ ಅಜಯ್ ಕುಮಾರ್ ಸಿಂಗ್‌ರ ಗಮನ ಸೆಳೆದಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ