ಬುಧವಾರ, ಜನವರಿ 12, 2011

ಚರ್ಚೆಗೆ ಬನ್ನಿ: ಕಾಂಗ್ರೆಸ್‌ಗೆ ಎಸ್‌ಡಿಪಿಐ ಸವಾಲು

ಮಂಗಳೂರು: ಬಿಜೆಪಿಯಿಂದ ಹಣ ಪಡೆದು ಚುನಾ ವಣೆಯಲ್ಲಿ ಸ್ಪರ್ಧಿಸಿ ಕಾಂಗ್ರೆಸ್ ಸೋಲಿಗೆ ಕಾರಣರಾಗಿದ್ದಾರೆ ಎಂಬ ಕಾಂಗ್ರೆಸ್ ಪಕ್ಷದ ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಮೊದಿನ್ ಬಾವಾ ಹೇಳಿಕೆಯಿಂದ ಕೆಂಡಾಮಂಡಲ ವಾಗಿರುವ ಎಸ್‌ಡಿಪಿಐ ನಾಯಕರು ಆರೋಪದ ಬಗ್ಗೆ ಚರ್ಚಿಸಲು ಬಹಿರಂಗವಾಗಿ ಸವಾಲು ಹಾಕಿದ್ದಾರೆ.
ತಾಲೂಕು ಮತ್ತು ಜಿ. ಪಂ. ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನುಭವಿಸಿದ ಬಳಿಕ ಸುದ್ದಿಗೋಷ್ಟಿ ನಡೆಸಿದ್ದ ಬಾವಾ ಎಸ್.ಡಿ.ಪಿ.ಐ. ಹಣ ಪಡೆದು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಜಾತ್ಯತೀತ ಮತಗಳನ್ನು ವಿಭಜಿಸಿ ಬಿ.ಜೆ.ಪಿ. ಗೆಲುವಿಗೆ ಕಾರಣವಾ ಯಿತು ಎಂದು ಗಂಭೀರವಾದ ಆರೋಪ ಮಾಡಿದ್ದರು.
ಆರೋಪದಿಂದ ಕೆಂಡಾಮಂಡಲ ವಾಗಿರುವ ಎಸ್.ಡಿ.ಪಿ.ಐ. ನೂರು ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷದ ಜವಾಬ್ದಾರಿಯುತ ನಾಯಕರಾಗಿರುವ ಬಾವಾ ಒಂದು ವರ್ಷದ ಹಿನ್ನೆಲೆಯಿರುವ ಎಸ್.ಡಿ.ಪಿ.ಐ. ಮೇಲೆ ಆರೋಪ ಮಾಡುವ ಮೂಲಕ ತಮ್ಮ ಘನತೆಯನ್ನು ಕುಗ್ಗಿಸುವಂತಹ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ಸಿನ ಫೈನಾನ್ಸಿಯರ್ ನಾಯಕರಾಗಿರುವ ಬಾವಾರ ಪರಿಸ್ಥಿತಿ ‘ಕೈಲಾಗದವ ಮೈ ಪರಚಿಕೊಂಡಂತಾಗಿದೆ’ಎಂದು ಪಕ್ಷದ ಅಧ್ಯಕ್ಷರಾಗಿರುವ ಹನೀಫ್ ಖಾನ್ ಲೇವಡಿ ಮಾಡಿದ್ದಾರೆ.
ಈಗಾಗಲೇ ಜಾತ್ಯತೀತ ಮತಗಳನ್ನು ಪಡೆದು ಆಯ್ಕೆ ಯಾದ ಅದೆಷ್ಟೋ ನಾಯಕರು ಲಕ್ಷ, ಕೋಟಿ ಹಣವನ್ನು ಪಡೆದು ತಮ್ಮ ಮಾನ ಮರ್ಯಾದೆಯನ್ನು ಕಳೆದುಕೊಂಡಿ ದ್ದಾರೆ ಎಂಬುವುದನ್ನು ಮರೆತಿರುವ ಕಾಂಗ್ರೆಸ್ ನಾಯಕರು ಎಸ್‌ಡಿಪಿಐ ಮೇಲೆ ಆರೋಪ ಮಾಡುವ ಮೂಲಕ ತಮ್ಮ ಪಕ್ಷ ಜಾತ್ಯತೀತ ಮತಗಳನ್ನು ಕಳೆದುಕೊಳ್ಳುತ್ತಿರುವುದು ಸಾಬೀತು ಪಡಿಸಿದಂತಾಗಿದೆ ಎಂದು ಹನೀಫ್ ಖಾನ್ ಕಟಕಿಯಾಡಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ