ಬುಧವಾರ, ಡಿಸೆಂಬರ್ 08, 2010

ಎಸ್.ಡಿ.ಪಿ.ಐ ಸ್ಪರ್ಧೆ

ಸೋಶಿಯಲ್ ಡೆಮೊಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಜಿ.ಪಂ., ತಾ.ಪಂ. ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಎಸ್.ಡಿ.ಪಿ.ಐ ತಾಲ್ಲೂಕು ಕಾರ‍್ಯದರ್ಶಿ ಕಲಂದರ್ ಪರ್ತಿಪ್ಪಾಡಿ ತಿಳಿಸಿದ್ದಾರೆ.
ಜಿ.ಪಂ., ತಾ.ಪಂ. ಚುನಾವಣೆ: ಕಾಂಗ್ರೆಸ್‌ಗೆ ಜೆಡಿಎಸ್ ಸಡ್ಡು
ವಿಟ್ಲ: ಜಿ. ಪಂ. ಮತ್ತು ತಾ. ಪಂ. ಚುನಾವಣೆ ದಿನ ನಿಗದಿಯಾದೊಡನೆ ವಿಟ್ಲ ವಲಯ ಜೆಡಿಎಸ್ ತಮ್ಮ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.
ಅಭ್ಯರ್ಥಿಗಳ ಪಟ್ಟಿಯಲ್ಲಿ ಇಲ್ಲಿಯ ಕೊಳ್ನಾಡು ಜಿ.ಪಂ.ಗೆ ಕೆ. ಲಕ್ಷ್ಮಿ ನಾರಾಯಣ ಅಡ್ಯಂತಾಯ ಹಾಗೂ ಅಶ್ರಫ್ ಮಹಮ್ಮದ್ ಪೊನ್ನೋಟು ಎಂಬವರ ಹೆಸರು ಮುಂದಿದ್ದು ಮಹಿಳಾ ಮೀಸಲಾತಿಯಾದ ಜಿಲ್ಲಾ ಪಂಚಾಯತ್ ಜಯಲಕ್ಷ್ಮೀ ಎಂಬವರ ಪಾಲಾಗಿದೆ.
ಮಾಣಿ ಜಿ.ಪಂ. ಅಭ್ಯರ್ಥಿಗಳ ಸ್ಥಾನದಲ್ಲಿ ಜಾಫರ್ ಶಾನ್ ವಿಟ್ಲ, ವಿ.ಎಸ್. ಇಬ್ರಾಹಿಂರವರ ಹೆಸರು ಕೇಳಿ ಬರುತ್ತಿದ್ದು, ತಾ. ಪಂ.ಚುನಾವಣೆ ವಿಟ್ಲ ಪಡ್ನೂರು ಕ್ಷೇತ್ರಕ್ಕೆ ಹನೀಫ್ ಕೂಡಾಂಗೈ, ಹಮೀದ್, ಲತೀಫ್ ಪರ್ತಿಪ್ಪಾಡಿ ಸ್ಪರ್ಧಿಸುವ ಆಕಾಂಕ್ಷಿಗಳಾಗಿದ್ದಾರೆ. ಅಶ್ರಫ್ ಮಹಮ್ಮದ್ ಪೊನೋಟುರವರು ಕಳೆದ ಜಿಲ್ಲಾ ಪಂಚಾಯತ್‌ನಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮಾಜಿ ಶಾಸಕ ಶುಂಠಿಕೊಪ್ಪ ಕೆಎಂ ಇಬ್ರಾಹಿಂರವರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಕಾಂಗ್ರೆಸ್‌ನಿಂದ ಹೊರ ಬಂದು ಜೆಡಿಎಸ್‌ಗೆ ಬೆಂಬಲವನ್ನು ನೀಡಿದ್ದರು

ಜಿ.ಪಂ. ಚುನಾವಣೆಯ ಮೀಸಲಾತಿ
ಮಂಗಳೂರು:ಜಿ. ಪಂ. ಹಾಗೂ ತಾ. ಪಂ. ಚುನಾವಣೆಗೆ ಹಾಲಿ ನಿಗದಿ ಪಡಿಸಿರುವ ಮೀಸಲಾತಿ ಬದಲಾಗು ತ್ತದೆ ಎಂಬ ನಿರೀಕ್ಷೆಯಲ್ಲಿದ್ದವರಿಗೆ ಚುನಾವಣೆಯ ಘೋಷಣೆ ತಣ್ಣೀರೆರಚಿದೆ.
ಮೀಸಲಾತಿ ಬದಲಾಗುತ್ತದೆ. ಆ ಮೂಲಕ ತಮಗೆ ಮತ್ತೊಮ್ಮೆ ಚುನಾ ವಣೆಯಲ್ಲಿ ಸ್ಪರ್ಧಿಸಲು ಅವಕಾಶ ವಾಗುತ್ತದೆ ಎನ್ನುವ ಭರವಸೆಯಲ್ಲಿದ್ದ ವರು ಸೋಮವಾರ ಸಂಜೆಯವರೆಗೂ ಕಾಯುತ್ತಿದ್ದರು. ಆದರೆ ರಾಜ್ಯ ಚುನಾವಣಾ ಆಯುಕ್ತರು ಜಿ.ಪಂ. ಮತ್ತು ತಾ.ಪಂ. ಚುನಾವಣೆ ಘೋಷಣೆ ಮಾಡುವುದರ ಮೂಲಕ ಎಲ್ಲರ ನಿರೀಕ್ಷೆಗಳಿಗೂ ತಿಲಾಂಜಲಿ ಇಟ್ಟಿ ದ್ದಾರೆ.
ಹಿಂದುಳಿದ ವರ್ಗದವರಿಗೆ ಅನ್ಯಾಯವಾಗುತ್ತಿದೆ ಎಂಬುದು ತಿಳಿ ದಿದ್ದರೂ ರಾಜ್ಯ ಸರಕಾರ ಚುನಾವಣೆ ನಡೆಸಲು ತರಾತುರಿಯ ರ್ಧಾರ ಕೈಗೊಂಡಿದೆ. ಹಿಂದುಳಿದ ವರ್ಗ ಗಳಲ್ಲಿಯೇ ಅತೀ ಹಿಂದುಳಿದವರಿಗೆ ಅಧ್ಯತೆ ಒದಗಿಸಿ ಮೀಸಲಾತಿ ಪಟ್ಟಿ ಸಿದ್ಧಪಡಿಸುವಂತೆ ಕೋರ್ಟ್ ಡಿದ್ದ ರ್ದೇಶನವನ್ನು ರಾಜ್ಯ ಸರಕಾರ ಗಾಳಿಗೆ ತೂರಿದೆ. ಸಮಯದ ಅಭಾವದಿಂದಾಗಿ ಹಾಲಿ ಗದಿಪಡಿಸಿರುವ ಮೀಸ ಲಾತಿಯನ್ನು ಬದಲಾಯಿಸುವುದು ಕಷ್ಟಕರ ಎನ್ನುವುದ್ನು ನ್ಯಾಯಾಲಯಕ್ಕೆ ಸರಕಾರ ಮನವರಿಕೆ ಮಾಡಿಕೊ ಟ್ಟಿದೆ.
ದ.ಕ. ಜಿಲ್ಲೆಯಲ್ಲಿ ಹಾಲಿ ಜಿ.ಪಂ. ಸದಸ್ಯರಲ್ಲಿ ಬೆರಳಣಿಕೆಯ ಸದಸ್ಯರನ್ನು ಬಿಟ್ಟರೆ ಬಹಳಷ್ಟು ಸದಸ್ಯರಿಗೆ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯ ವಾಗುವುದಿಲ್ಲ. ಮಹಿಳಾ ಮೀಸಲಾತಿ ಹಾಲಿ ಸದಸ್ಯರ ಅರ್ಧ ಪಾಲನ್ನು ಕಸಿದು ಕೊಂಡಿದ್ದರೆ. ವರ್ಗವಾರು ಮೀಸಲಾತಿ ಶೇ.೫೦ರ ಪ್ರಮಾಣ ಮೀರಬಾರದು ಎಂಬ ಸುಪ್ರೀಂ ಕೋರ್ಟ್‌ನ ಆದೇಶ ಇದು ತನ್ನ ಕ್ಷೇತ್ರ ಎಂದು ಬೀಗುತ್ತಿವರ ಆಸೆಯನ್ನು ಕಮರಿಸಿ ಹಾಕಿದೆ.
ಬದಲಾದ ಸ್ಥಿತಿಗೆ ಹೊಂದಿ ಕೊಳ್ಳಲು ಹಾಲಿ ಪ್ರಭಾವಿ ರಾಜ ಕಾರಣಿಗಳು ಮೊದಲಿಂದಲೇ ಸಿದ್ಧ ರಾಗಿದ್ದು, ತಮಗೆ ದಕ್ಕದ ಕ್ಷೇತ್ರಗಳಲ್ಲಿ ಪತ್ನಿಯರನ್ನು ಅಥವಾ ತಮ್ಮ ಆತ್ಮೀಯರಿಗೆ ಕಣಕ್ಕಿಳಿಸಲು ಇನ್ನಲ್ಲ ಲಾಭಿಯಲ್ಲಿ ತೊಡಗಿದ್ದಾರೆ.
ಮೀಸಲಾತಿ ಬದಲಾಗುತ್ತದೆ ಎಂದುಕೊಂಡಿರುವವರ ಕನಸು ಇನ್ನೂ ಕಮರಿದಂತೆ ಕಾಣುವುದಿಲ್ಲ. ಮೀಸ ಲಾತಿಯ ಬದಲಾವಣೆಗೆ ಕಾಯು ತ್ತಿರುವವರಲ್ಲಿ ಆಶಾ ಭಾವ ಮೂಡಿಸುವ ಸುದ್ದಿಯೂ ಇದೆ.
ಕೊನೆಯ ಆಸೆಗೂ ತಿಲಾಂಜಲಿ
ಈಗ ನಿಗದಿ ಮಾಡಿರುವ ಮೀಸಲಾತಿಯಲ್ಲಿ ೧೦೯ಜಿಲ್ಲಾ ಪಂಚಾಯತ್ ಸ್ಥಾನಗಳು ಹಾಗೂ ೭೦೦ತಾಲೂಕು ಪಂಚಾತ್ ಸ್ಥಾನಗಳು ಹಿಂದುಳಿದ ವರ್ಗದವರ ಕೈ ತಪ್ಪಲಿವೆ. ಇದೇ ಕಾರಣದಿಂದ ಪ್ರತಿ ಪಕ್ಷದವರು ಹಾಗೂ ಆಡಳಿತ ಪಕ್ಷದಲ್ಲಿರುವ ಹಿಂದುಳಿದ ವರ್ಗದವರೂ ಈಗಿನ ಮೀಸಲಾತಿಯನ್ನು ವಿರೋಧಿಸಿದ್ದರು. ಮೀಸಲಾತಿಯ ಗೊಂದಲ ಏರ್ಪಡಲು ಬಿಜೆಪಿಯ ರಾಜ್ಯಸಭಾ ಸದಸ್ಯ ರಮಾ ಜೋಯಿಸರೇ ಕಾರಣ. ಅವರು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಾಡಿದ್ದೇ ರಗಳೆಗಳಿಗೆ ಕಾರಣವಾಯಿತು ಎಂದು ಜನರಿಗೆ ತಿಳಿಸಲು ಪ್ರತಿಪಕ್ಷಗಳು ಸಜ್ಜಾಗಿವೆ. ಮುಂದಿನ ಜಿ.ಪಂ. ಚುನಾವಣೆಯಲ್ಲಿ ಅಭಿವೃದ್ಧಿಯ ವಿಷಯಕ್ಕಿಂತ ಮೀಸಲಾತಿಯ ವಿಷಯವೇ ಪ್ರಚಾರದ ಪ್ರಮುಖ ವಿಷಯ ವಸ್ತು ಆಗಲಿರುವ ಸಾಧ್ಯತೆ ಇದೆ.
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ