ಬುಧವಾರ, ಫೆಬ್ರವರಿ 02, 2011

ಬಾಂಬ್ ಸ್ಫೋಟದಲ್ಲಿ ತಲೆಮರೆಸಿಕೊಂಡಿದ್ದ ಪ್ರವೀಣ್ ಮುತಾಲಿಕ್ ಬಂಧನ

ಮುಂಬಯಿ: ಮಾಲೆಗಾಂವ್ ನಲ್ಲಿ ೨೦೦೮ರಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯಾಗಿದ್ದ ಪ್ರವೀಣ್ ಮುತಾಲಿಕ್ ಎಂಬಾತನನ್ನು ಮಹಾರಾಷ್ಟ್ರ ಭಯೋತ್ಪಾದನ ನಿಗ್ರಹ ದಳ ಬಂಧಿಸಿದೆ.
ಪ್ರಕರಣದಲ್ಲಿ ಬೇಕಾಗಿರುವ ಮೂರು ಆರೋಪಿಗಳಲ್ಲಿ ಒಬ್ಬರಾಗಿದ್ದ ಮುತಾ ಲಿಕ್‌ನನ್ನು ಸೋಮವಾರ ರಾತ್ರಿ ಬೆಳಗಾಗಿ ಜಿಲ್ಲೆಯ ಗೋಕಾಕದ ಆತನ ಮನೆಯಿಂದ ಬಂಧಿಸಲಾಗಿದೆ ಎಂದು ಎಟಿಎಸ್ ಮೂಲಗಳು ಹೇಳಿವೆ.
ಮೊಕ್ಕಾ ವಿಶೇಷ ನ್ಯಾಯಾಲಯದ ಮುಂದೆ ಮುತಾಲಿಕ್‌ನನ್ನು ಹಾಜರು ಪಡಿಸಲಾಗಿದ್ದು, ಫೆ. ೧೪ರ ತನಕ ಪೊಲೀಸ್ ಕಸ್ಟಡಿ ನೀಡಲಾಗಿದೆ. ಈ ಪ್ರಕರಣದ ಇತರ ಇಬ್ಬರು ಆರೋಪಿಗಳಾದ ರಾಮ್ಜಿ ಕಲಂಗ ಸಾರಾ ಮತ್ತು ಸಂದೀಪ್ ಡಾಂಗೆ ಈಗಲೂ ತಲೆಮರೆಸಿಕೊಂಡಿದ್ದಾರೆ.
ಇದುವರೆಗೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ೧೨ ಮಂದಿ ಯನ್ನು ಬಂಧಿಸಲಾಗಿದೆ. ಇದಕ್ಕೆ ಮೊದಲು ಸಾಧ್ವ್ವಿ ಪ್ರಜ್ಞಾ ಸಿಂಗ್ ಮತ್ತು ಶ್ರೀಕಾಂತ್ ಪ್ರಸಾದ್ ಪುರೋಹಿತ್‌ನನ್ನು ಬಂಧಿಸಿತ್ತು. ೨೦೦೮ರ ಸೆ. ೨೯ರಂದು ನಡೆದ ಬಾಂಬ್ ಸ್ಫೋಟದಲ್ಲಿ ಏಳು ಮಂದಿ ಮೃತಪಟ್ಟು ಹಲವಾರು ಮಂದಿ ಗಾಯಗೊಂಡಿದ್ದರು.
ಮುತಾಲಿಕ್ ೨೦೦೬ರಲ್ಲಿ ಅಭಿನವ್ ಭಾರತ್ ಸಂಘಟನೆಯನ್ನು ಸೇರಿ ಕೊಂಡಿದ್ದು, ಮಾಲೆಗಾಂವ್ ಸ್ಫೋಟದ ಯೋಜನೆಗಳನ್ನು ತಯಾರಿಸಿದ್ದ ಎನ್ನ ಲಾಗಿದೆ. ೨೦೦೮ರ ಸೆ.೨೮ರಂದು ನಾಸಿಕ್‌ನಲ್ಲಿ ಉಳಿದುಕೊಂಡಿದ್ದ ಪುರೋಹಿತ್, ಸುಧಾಕರ್ ಚತುರ್ವೇದಿ ಮತ್ತು ಪ್ರವೀಣ್ ಮುತಾಲಿಕ್ ಅಲ್ಲಿ ಬಾಡಿಗೆ ಮ ಯೊಂದನ್ನು ಪಡೆದು ಬಾಂಬ್ ತಯಾರಿಸಿದ್ದರು. ಈ ಬಾಂಬ್‌ಗಳನ್ನು ಮಾಲೆಗಾಂವ್‌ನ ಭಿಕು ಚೌಕ್‌ನಲ್ಲಿ ಡಲಾಗಿತ್ತು. ಮುತಾಲಿಕ್ ಕೆಮಿಕಲ್ ಇಂಜಿನಿಯರ್ ಆಗಿದ್ದಾತ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ