ಹೊಸದಿಲ್ಲಿ, 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿ ಮಾಜಿ ದೂರಸಂಪರ್ಕ ಖಾತೆಯ ಸಚಿವ ಎ.ರಾಜಾರನ್ನು ಬುಧವಾರ ಸಿಬಿಐ ಬಂಧಿಸಿದೆ. ಇದೇ ವಾರದಲ್ಲಿ ಎರಡನೇ ಬಾರಿ ವಿಚಾರಣೆ ನಡೆಸಿದ ನಂತರ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಡಿಎಂಕೆ ಪಕ್ಷದ ಎ. ರಾಜಾರ ಸಹಾಯಕರಾಗಿದ್ದ ಮಾಜಿ ದೂರಸಂಪರ್ಕ ಕಾರ್ಯದರ್ಶಿ ಸಿದ್ದಾರ್ಥ ಬೆಹೂರಿಯಾ ಮತ್ರು ಆಪ್ತ ಕಾರ್ಯದರ್ಶಿ ಆರ್.ಕೆ. ಚಂದೋಲಿಯಾರನ್ನು ಕೂಡ ಸಿಬಿಐ ಬಂಧಿಸಿದೆ.
2ಜಿ ಸ್ಪೆಕ್ಟ್ರಂ ಹಂಚಿಕೆಯಲ್ಲಿ ನೀತಿ ಉಲ್ಲಂಘನೆ, ಕೆಲ ಅನರ್ಹ ಕಂಪನಿಗಳಿಗೆ ಲಾಭವಾಗುವಂತೆ ಮಾಡಿದ ಮತ್ತು ದುರ್ವರ್ತನೆ ಮಾಡಿದ ಆರೋಪಗಳನ್ನು ಹೊರಿಸಲಾಗಿದೆ. ರಾಜಾರ ಸಹೋದರ ಎ. ಕಲಿಯ ಪೆರುಮಾಳ್ ಮತ್ತು ಆತನ ಆಪ್ತ ಸಹಾಯಕನನ್ನು ಕೂಡ 22 ಸಾವಿರ ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಸಿಬಿಐ ವಿಚಾರಣೆ ನಡೆಸಿತು.
2008ರಲ್ಲಿಯೇ ಈ ಹಗರಣ ಬೆಳಕಿಗೆ ಬಂದಿದ್ದರೂ ಕಳೆದ ವರ್ಷದ ನವೆಂಬರ್ 14ರಂದು ಎ. ರಾಜಾ ತಮ್ಮ ಸ್ಥಾನಕ್ಕೆ ಬಲವಂತವಾಗಿ ರಾಜೀನಾಮೆ ನೀಡಿದ್ದರು.
ಕಳೆದ ಕೆಲ ವಾರಗಳಲ್ಲಿ ಅವರ ದೆಹಲಿ ಮತ್ತು ತಮಿಳುನಾಡಿನಲ್ಲಿನ ಕಚೇರಿ ಮತ್ತು ನಿವಾಸಗಳ ಮೇಲೆ ದಾಳಿ ನಡೆಸಿ ಕಂಪ್ಯೂಟರ್ ಸೇರಿದಂತೆ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಹಗರಣದಿಂದಾಗಿ ದೇಶದ ಬೊಕ್ಕಸಕ್ಕೆ 1.76 ಲಕ್ಷ ಕೋಟಿಯಷ್ಟು ನಷ್ಟವಾಗಿದೆ. ನ್ಯಾ. ಶಿವರಾಜ್ ಪಾಟೀಲ್‌ರ ನೇತೃತ್ವದ ಆಯೋಗ ಕೂಡ ಇತ್ತೀಚೆಗೆ ತನ್ನ ವರದಿಯನ್ನು ಸಲ್ಲಿಸಿದ್ದು, ವರದಿಯಲ್ಲಿ ರಾಜಾರನ್ನು ದೋಷಿ ಎಂದು ಪರಿಗಣಿಸಿದೆ ಎಂದು ಮೂಲಗಳು ತಿಳಿಸಿವೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ