ಹೊಸದಿಲ್ಲಿ, ಫೆ.9: 2011ರ ಜನಗಣತಿಯ ಅರ್ಜಿ ನಮೂನೆಯಲ್ಲಿ ಧರ್ಮದ ಕುರಿತು ಕೇಳಿದಾಗ ‘ಇಸ್ಲಾಂ’ ಎಂದು ಹೇಳದೆ ‘ಮುಸ್ಲಿಂ’ ಎಂದು ನಮೂದಿಸುವಂತೆ ಅಖಿಲ ಭಾರತ ಮಜ್ಲಿಸೆ ಮುಶಾವರತ್ ಮನವಿ ಮಾಡಿದೆ.
‘ಧರ್ಮದ ಪ್ರಸ್ತಾಪ ಬಂದಾಗ ‘ಇಸ್ಲಾಂ’ ಎಂದು ಹೇಳಿ, ‘ಮುಸ್ಲಿಂ’ ಎಂದು ಹೇಳದಿದ್ದರೆ ಜನಗಣತಿಗೆ ಬರುವ ಕಾರ್ಯಕರ್ತರು ‘ಇತರ ಧರ್ಮಗಳು’ ಎಂಬ ಸಾಲಿನಲ್ಲಿ ನಮ್ಮ ಹೆಸರನ್ನು ಸೇರಿಸುತ್ತಾರೆ. ಅದುದರಿಂದ ಮುಸ್ಲಿಮರ ನಿರ್ದಿಷ್ಟ ಸಂಖ್ಯೆ ಇಳಿಮುಖ ವಾಗಲಿದೆ’ ಎಂದು ಮುಶಾವರದ ಕಾರ್ಯಾಧ್ಯಕ್ಷ ಡಾ.ಝಫರುಲ್ ಇಸ್ಲಾಂ ಖಾನ್ ಹೇಳಿದ್ದಾರೆ.

ಗಣತಿ ಫಾರಂ ತಯಾರು ಮಾಡುವಾಗ ಅಧಿಕಾರಿಗಳು ಈ ಲೋಪವನ್ನು ಮಾಡಿದ್ದು, ಧರ್ಮದ ಸಾಲಿನಲ್ಲಿ ‘ಮುಸ್ಲಿಂ’ ಎಂದು ಸೇರಿಸುವ ಬದಲು ‘ಇಸ್ಲಾಂ’ ಎಂದು ಮಾಡಿದ್ದಾರೆ. ಈ ಲೋಪವನ್ನು ಜನಗಣತಿಯ ಎರಡನೆ ಮತ್ತು ಅಂತಿಮ ಹಂತದಲ್ಲಿ ನ್ಯಾಯಾಲಯದ ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆ.
ಆದರೆ ಫೆಬ್ರವರಿ 9ರಿಂದ ಗಣತಿ ಕಾರ್ಯ ಆರಂಭಗೊಳ್ಳುವ ಹಿನ್ನೆಲೆಯಲ್ಲಿ ಸಮುದಾಯದ ಹಿತದಷ್ಟಿಯಿಂದ ಧರ್ಮದ ಹೆಸರಿನ ಮುಂದೆ ‘ಮುಸ್ಲಿಂ’ ಎಂದು ಸೇರಿಸುವಂತೆ ಅವರು ಮನವಿ ಮಾಡಿದ್ದಾರೆ. ಇದನ್ನು ಮಸೀದಿ, ಜಾಹೀರಾತು, ಸುದ್ದಿ, ಕರಪತ್ರ, ಸಂದೇಶಗಳ ಮೂಲಕ ಪ್ರಚಾರ ಮಾಡುವಂತೆ ಅವರು ಮನವಿ ಮಾಡಿದ್ದಾರೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ