ಸೋಮವಾರ, ಫೆಬ್ರವರಿ 14, 2011

ಪ್ರವಾಹ ಪೀಡಿತ ಪ್ರದೇಶಕ್ಕೆ ಐಎಫ್‌ಎಫ್ ತಂಡ ಭೇಟಿ

ಇತ್ತೀಚೆಗೆ ಜಿದ್ದಾ ನಗರದಲ್ಲಿ ಉಂಟಾದ ಪ್ರವಾಹದಿಂದ ಸಂತ್ರಸ್ತರಾದವರಿಗೆ ವೈದ್ಯಕೀಯ ನೆರವು ಒದಗಿಸಲು ಜಿದ್ದಾದ ಆರೋಗ್ಯ ಇಲಾಖೆಯ ‘ವೈದ್ಯಕೀಯ ತಂಡ’ ಇಲ್ಲಿಗೆ ಆಗಮಿಸಿತ್ತು.

ವೈದ್ಯರು, ದಾದಿಯರು, ಸಿಬ್ಬಂದಿಯರನ್ನೊಳಗೊಂಡ ಈ ತಂಡವು ಇಂಡಿಯನ್ ಫೆಟರ್ನಿಟಿ ಫೋರಂ (ಐಎಫ್‌ಎಫ್)ನ ತರಬೇತಿ ಹೊಂದಿದ ಸ್ವಯಂ ಸೇವಕರನ್ನು ಒಳಗೊಂಡಿತ್ತು.

ಕಳೆದ ಜನವರಿ 26ರಂದು ಉಂಟಾದ ಪ್ರವಾಹದ ಹಿನ್ನೆಲೆಯಲ್ಲಿ ಪರಿಸರದಲ್ಲಿ ಕಾಣಿಸಿಕೊಳ್ಳಬಹುದಾದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಐಎಫ್‌ಎಫ್‌ನ ಸಹಾಯವನ್ನು ಇಲ್ಲಿನ ಆರೋಗ್ಯ ಇಲಾಖೆ ಕೋರಿತ್ತು.


ಡಾ.ಅಬ್ದುಲ್ಲಾ ಸೂಫಿ, ಡಾ.ಮುಹಮ್ಮದ್, ಡಾ. ಝುಬೈದಾರನ್ನೊಳಗೊಂಡ ತಂಡ, ಅಲ್‌ಸಫಾ, ಸುಲೈಮಾನಿಯಾ, ಅಲ್‌ಹಮ್ರಾ ಮುಂತಾದ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಸಂತ್ರಸ್ತರ ಆರೋಗ್ಯ ತಪಾಸಣೆ ನಡೆಸಿ, ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಿಕೊಟ್ಟಿತು.


ಐಎಫ್‌ಎಫ್‌ನ ಸಮನ್ವಯಕಾರ ಉಮರ್ ಹುಸೈನ್, ಇ.ಎಂ.ಅಬ್ದುಲ್ಲಾ, ನದೀಮ್(ಕರ್ನಾಟಕ), ಫಳಲುಲ್ಲಾ(ಮಂಗಳೂರು), ಅಲಿ ಅನ್ವರ್ ಮತ್ತು ನಾಸಿರ್ ಕುರ್ನಾಯಿ ಮುಂತಾದವರು ತಂಡದಲ್ಲಿದ್ದರು.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ