ಮದೀನ :ಕುಟುಂಬ ನಿರ್ವಹಣೆ ಮತ್ತು ಉತ್ತಮ ಬದುಕನ್ನು ರೂಪಿಸಿಕೊಳ್ಳಲು ಹಲವು ಕನಸುಗಳನ್ನು ಹೊತ್ತು ಮದೀನಕ್ಕೆ ಬಂದು ಸಂಕಷ್ಟಕ್ಕೆ ಸಿಲುಕಿ ಸೆರೆವಾಸ ಅನುಭವಿಸುತ್ತಿದ್ದ ತಮಿಳು ನಾಡಿನ ತಿರುನೆಲ್ವೆಲಿಯ ಸಲ್ಮಾ ಅಬ್ದುಲ್ ಅಝೀಝ್ ಎಂಬ ಮಹಿಳೆಯನ್ನು ಇಲ್ಲಿನ ಇಂಡಿಯಾ ಫ್ರಟರ್ನಿಟಿ ಫೋರಂ ರಕ್ಷಿಸಿ ಸುರಕ್ಷಿತವಾಗಿ ತಾಯ್ನಿಡಿಗೆ ಮರಳುವಂತೆ ಮಾಡಿದೆ.
ಕುಟುಂಬ ನಿರ್ವಹಣೆಗೆ ಮತ್ತು ಉತ್ತಮ ಬದುಕಿನ ಕನಸು ಹೊತ್ತು ಸಲ್ಮಾ 18 ತಿಂಗಳ ಹಿಂದೆ ಪ್ರವಾದಿಗಳ ನಗರ ಮದೀನ ಮುನಾವರಕ್ಕೆ ಬಂದರು. ಅವರಿಗೆ ಇಲ್ಲಿನ ಮನೆಯೊಂದರಲ್ಲಿ ಮನಗೆಲಸ ಮಾಡುವ ಕೆಲಸ ದೊರೆಯಿತು.ಮನೆಯಲ್ಲಿ ಸಾಕಷ್ಟು ಕೆಲಸಗಳ ನಡುವೆ ಆ ಕುಟುಂಬದವರ ನಿರಂತರ ದೈಹಿಕ ಕಿರುಕಳಕ್ಕೂ ಆಕೆ ಒಳಗಾಗಬೇಕಾಯಿತು.ಆದರೆ ಭಾರತದಲ್ಲಿನ ತನ್ನ ಮನೆಯ ಸಮಸ್ಯೆಯನ್ನು ಕಣ್ಣ ಮುಂದೆ ತಂದುಕೊಂಡ ಆಕೆ ಎಲ್ಲ ರೀತಿಯ ಕಷ್ಟಗಳನ್ನು ಸಹಿಸಿಕೊಂಡು ಸರಿಸುಮಾರು ಆರು ತಿಂಗಳ ಕಾಲ ಇದ್ದರು.
ಆದರೆ ದಿನೇ ದಿನೇ ಕಿರುಕಳ ಅಧಿಕಗೊಂಡಿದ್ದರಿಂದ ಆ ಮನೆಯನ್ನು ಬಿಡಲು ನಿರ್ಧರಿಸಿದ ಸಲ್ಮಾ, ಕೆಲಸವನ್ನರಸುತ್ತ ಅಲೆಯುತ್ತಿದ್ದಾಗ ಮತ್ತೊಂದು ಮನೆಯಲ್ಲಿ ಆಕೆಗೆ ಕೆಲಸ ಸಿಕ್ಕಿತು ಮತ್ತು ಮನೆ ಮಾಲಕ ಒಳ್ಳೆಯವನೂ ಆಗಿದ್ದರಿಂದ ಸಂಕಷ್ಟಗಳೂ ದೂರವಾಯಿತು. ಎಲ್ಲವೂ ನಿರಾಳವಾಯಿತು ಎಂದುಕೊಂಡಾಗ ಆಕೆಗೆ ಮತ್ತೊಂದು ಆಘಾತವುಂಟಾಯಿತು. ಅದೊಂದು ದಿನ ಮಸ್ಜಿದ್ ಅಲ್ ನಬವಿಗೆ ಸಲ್ಮಾ ತೆರಳುತ್ತಿದ್ದಾಗ, ಪೊಲೀಸರು ಆಕೆಯನ್ನು ತಡೆದು ದಾಖಲೆಗಳನ್ನು ಪರಿಶೀಲಿಸಿದರು ಹಾಗೂ ಅವುಗಳ ಅವಧಿ ಮೀರಿದ್ದರಿಂದ ಆಕೆಯನ್ನು ಬಂಧಿಸಿ ಸೆರೆಮನೆಗೆ ಕಳುಹಿಸಿದರು.
ಮೊದಲು ಆರು ತಿಂಗಳು ಆಕೆಯನ್ನು ಮದೀನದಲ್ಲಿರಿಸಿ ನಂತರ ಜೆಡ್ಡಾದ ಸೆರೆಮನೆಗೆ ಸ್ಥಳಾಂತರಿಸಲಾಯಿತು.ಜೆಡ್ಡಾದಲ್ಲಿ ಈ ವಿಷಯ ತಿಳಿದ ಇಂಡಿಯ ಫ್ರಟರ್ನಿಟಿ ಫೋರಂನ ಸದಸ್ಯರು ಆಕೆಯನ್ನು ಭೇಟಿ ಮಾಡಿ ಎಲ್ಲಾ ರೀತಿಯ ನೆರವು ನೀಡುವ ಭರವಸೆಯಿತ್ತರು ಹಾಗೂ ಸೂಕ್ತ ಕಾನೂನು ನೆರವು ಒದಗಿಸಿ ಆಕೆಯನ್ನು ಸೆರೆಮನೆ ವಾಸದಿಂದ ಬಿಡಿಸಿ ತಾಯ್ನಾಡಿಗೆ ಮರಳಲು ಬೇಕಾದ ವ್ಯವಸ್ಥೆಯನ್ನು ಭಾರತೀಯ ದೂತವಾಸದ ಮೂಲಕ ಮಾಡಿಸಿದರು.

ಇದೀಗ ಮನೆಗೆ ಮರಳಿರುವ ಸಲ್ಮಾ ಇಂಡಿಯಾ ಫ್ರಟರ್ನಿಟಿ ಫೋರಂನ್ನು ದೂರವಾಣಿ ಮೂಲಕ ಸಂಪರ್ಕಿಸಿ ತನ್ನ ಸಮಸ್ಯೆಗಳನ್ನು ಬಗೆಹರಿಸಿ ವಾಪಸಾಗಲು ನೆರವಾಗಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ