ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ 85ನೆ ವಾರ್ಷಿಕದ ಪ್ರಯುಕ್ತ ನಗರದ ನೆಹರೂ ಮೈದಾನದಲ್ಲಿ ಮಾ.27ರಂದು ನಡೆಯುವ ಸಮಸ್ತ ಸುನ್ನಿ ಸಮ್ಮೇಳನದ ಪ್ರಚಾರಾರ್ಥ ಅಂಗವಾಗಿ ಎಸ್ಕೆಎಸ್ಸೆಸ್ಸೆಫ್ ಮತ್ತು ಜಂಮಿಯತುಲ್ ಮುಅಲ್ಲಿಮೀನ್‌ನ ನೇತೃತ್ವದಲ್ಲಿ ನಡೆಯುವ ವಾಹನ ಜಾಥಾಕ್ಕೆ ಸೆಯ್ಯದ್ ಶರಫುದ್ದೀನ್ ತಂಙಳ್ ನಗರದ ಸೆಯ್ಯದ್ ವೌಲಾ ದರ್ಗಾದಲ್ಲಿ ಚಾಲನೆ ನೀಡಿದರು.
ಈ ಸಂದರ್ಭ ಶೈಖ್ ಮುಹಮ್ಮದ್ ಇರ್ಫಾನಿ ಫೈಝಿ ವಿಟ್ಲ, ಸ್ವದಕತುಲ್ಲಾ ಫೈಝಿ, ಮುಸ್ತಫಾ ಫೈಝಿ ಕಿನ್ಯ, ಬಂಬ್ರಾಣ ಉಸ್ತಾದ್, ಕೆ.ಎಲ್. ಉಮರ್ ದಾರಿಮಿ, ಇಸ್ಮಾಯೀಲ್ ಯಮಾನಿ, ರಿಯಾಝ್ ಹಾಜಿ, ಅಹ್ಮದ್ ಎಮ್ತಾರ್, ಝಾಕಿರ್ ಬಂದರ್, ತಸ್ಲೀಮ್ ಅರ್ಶದಿ ಮತ್ತಿತರರಿದ್ದರು.
ಕಾಜೂರಿನಲ್ಲಿ ಪ್ರಚಾರ ಜಾಥಾ
ಬೆಳ್ತಂಗಡಿ ವಿಭಾಗದ ಪ್ರಚಾರ ವಾಹನ ಜಾಥಾವು ಕಾಜೂರು ದರ್ಗಾ ಝಿಯಾರತ್‌ನೊಂದಿಗೆ ಪ್ರಾರಂಭ ಗೊಂಡಿತು.ಹಸನಬ್ಬ ಚಾರ್ಮಾಡಿಯವರು ಜಾಥಾದ ನಿರ್ದೇಶಕ ಸೆಯ್ಯದ್ ಹುಸೈನ್ ಬಾಲವಿ ತಂಙಳ್‌ರಿಗೆ ಸಮಸ್ತದ ಧ್ವಜವನ್ನು ಹಸ್ತಾಂತರಿಸಿ ಜಾಥಾಕ್ಕೆ ಚಾಲನೆ ನೀಡಿದರು. ಮೂಸಾ ದಾರಿಮಿ ಕಕ್ಕಿಂಜೆ, ಬೆಳ್ತಂಗಡಿ ಮುದರ್ರಿಸ್ ಶಂಸುದ್ದೀನ್ ದಾರಿಮಿ ಮತ್ತಿತರರು ಉಪಸ್ಥಿತರಿದ್ದರು.
ಕಾಜೂರಿನಿಂದ ಹೊರಟ ಜಾಥಾವು ಚಾರ್ಮಾಡಿಗೆ ಸಾಗಿ ಅಲ್ಲಿಂದ ಬೆಳ್ತಂಗಡಿ, ಉಪ್ಪಿನಂಗಡಿ ಮಾರ್ಗ ವಾಗಿ ಕಡಬದ ಮರ್ದಾಳದಲ್ಲಿ ಸಮಾರೋಪಗೊಂಡಿತು. ಪ್ರಮುಖ ಕೇಂದ್ರಗಳಲ್ಲಿ ರೇಂಜ್ ಪ್ರತಿನಿಧಿಗಳು ಹಾಗೂ ಎಸ್ಕೆಎಸ್ಸೆಸ್ಸೆಫ್ ಕಾರ್ಯಕರ್ತರು ರ್ಯಾಲಿ ನಡೆಸಿ, ಪ್ರಚಾರ ವಾಹನ ಜಾಥಾಕ್ಕೆ ಸಾಥ್ ನೀಡಿದರು. ಸಿರಾಜುದ್ದೀನ್ ಫೈಝಿ ಬಪ್ಪಳಿಗೆ ಸಂದೇಶ ಭಾಷಣ ನೀಡಿದರು. ದ.ಕ. ಜಿಲ್ಲಾ ಎಸ್ಕೆಎಸ್ಸೆಸ್ಸೆಫ್ ಉಪಾಧ್ಯಕ್ಷ ಶುಕೂರು ದಾರಿಮಿ ಸ್ವಾಗತಿಸಿದರು. ದ.ಕ. ಜಿಲ್ಲಾ ಜಂಮಿಯತುಲ್ ಮುಅಲ್ಲಿಮೀನ್ ಕಾರ್ಯದರ್ಶಿ ಇ.ಕೆ. ಅಬ್ದುರ್ರಹ್ಮಾನ್ ಕೊಡಾಜೆ ವಂದಿಸಿದರು.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ