ಸೋಮವಾರ, ಜನವರಿ 03, 2011

ದ.ಕ.ಜಿಲ್ಲಾ ಪಂಚಾಯತ್‌ನಲ್ಲಿ ಬಿಜೆಪಿಗೆ 24, ಕಾಂಗ್ರೆಸ್‌ಗೆ 11: ಮಂಗಳೂರು ತಾ.ಪಂ. ಕಾಂಗ್ರೆಸ್ ಮಡಿಲಿಗೆ

ಮಂಗಳೂರು, ಜ.4: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನಲ್ಲಿ 35 ಕ್ಷೇತ್ರಗಳಿದ್ದು, ಕಳೆದ ಸಾಲಿನ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ತಲಾ, ಜೆಡಿಎಸ್ 5 ಸ್ಥಾನಗಳನ್ನು ಪಡೆದಿತ್ತು. ಆದರೆ ಈ ಬಾರಿ ಜೆಡಿಎಸ್ ಶೂನ್ಯ ಸಂಪಾದನೆ ಮಾಡಿದ್ದು, ಬಿಜೆಪಿ 24, ಕಾಂಗ್ರೆಸ್ 11 ಸ್ಥಾನಗಳನ್ನು ಪಡೆದಿವೆ. ಈ ಮೂಲಕ ಬಿಜೆಪಿ ಅಧಿಕಾರಕ್ಕೇರಿದೆ.
ಜಿಲ್ಲಾ ಪಂಚಾಯತ್‌ನ ಮಂಗಳೂರು ಕ್ಷೇತ್ರದಲ್ಲಿ 6 ಬಿಜೆಪಿ, 4 ಕಾಂಗ್ರೆಸ್, ಬಂಟ್ವಾಳ ಕ್ಷೇತ್ರದಲ್ಲಿ 6 ಬಿಜೆಪಿ, 3 ಕಾಂಗ್ರೆಸ್, ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿ 5, ಕಾಂಗ್ರೆಸ್ 1 ಹಾಗೂ ಬೆಳ್ತಂಗಡಿ ಕ್ಷೇತ್ರದಲ್ಲಿ ಬಿಜೆಪಿ 5, ಕಾಂಗ್ರೆಸ್ 1, ಸುಳ್ಯ ಕ್ಷೇತ್ರದಲ್ಲಿ ಬಿಜೆಪಿ 2 ಹಾಗೂ ಕಾಂಗ್ರೆಸ್ 2 ಸ್ಥಾಗಳನ್ನು ಪಡೆದಿವೆ.
ಮಂಗಳೂರು ತಾಲೂಕು ಪಂಚಾಯತ್ ಕಾಂಗ್ರೆಸ್ ತೆಕ್ಕೆಗೆ
 ಮಂಗಳೂರು ತಾಲೂಕು ಪಂಚಾಯತ್‌ನಲ್ಲಿ ಒಟ್ಟು 37 ಸ್ಥಾನಗಳಿದ್ದು, 18 ಸ್ಥಾನಗಳನ್ನು ಬಿಜೆಪಿ ಪಡೆದಿವೆ. 19 ಸ್ಥಾನಗಳನ್ನು ಕಾಂಗ್ರೆಸ್ ಗಳಿಸಿವೆ.
ಬಂಟ್ವಾಳ ತಾಲೂಕು ಪಂಚಾಯತ್‌ನಲ್ಲಿ 17 ಬಿಜೆಪಿ, 16 ಸ್ಥಾನಗಳನ್ನು ಕಾಂಗ್ರೆಸ್ ಪಡೆದಿವೆ. ಇಲ್ಲಿ ಒಟ್ಟು 33 ಸ್ಥಾನಗಳಿದ್ದವು.
ಪುತ್ತೂರು ತಾಲೂಕು ಪಂಚಾಯತ್‌ನಲ್ಲಿ ಬಿಜೆಪಿ 16 ಹಾಗೂ ಕಾಂಗ್ರೆಸ್ 5, ಜೆಡಿಎಸ್ 1 ಸ್ಥಾನಗಳನ್ನು ಪಡೆದಿವೆ. ಇಲ್ಲಿ ಒಟ್ಟು 22 ಸ್ಥಾನಗಳಿದ್ದವು.
ಬೆಳ್ತಂಗಡಿ ತಾಲೂಕು ಪಂಚಾಯತ್‌ನಲ್ಲಿ 24 ಸ್ಥಾನಗಳಿದ್ದು, ಬಿಜೆಪಿ 19 ಕಾಂಗ್ರೆಸ್ 5 ಸ್ಥಾನಗಳನ್ನು ಪಡೆದಿವೆ.
ಸುಳ್ಯ ತಾಲೂಕು ಪಂಚಾಯತ್‌ನಲ್ಲಿ ಬಿಜೆಪಿ 7 ಹಾಗೂ ಕಾಂಗ್ರೆಸ್ 6 ಸ್ಥಾನಗಳನ್ನು ಪಡೆದಿವೆ. ಇಲ್ಲಿ ಒಟ್ಟು 13 ಸ್ಥಾನಗಳಿವೆ.
ಕೊಣಾಜೆ ಕ್ಷೇತ್ರದಲ್ಲಿ ಮೂರನೆ ಬಾರಿಗೆ ವಿಜಯಿಯಾಗಲು ಸ್ಪರ್ಧಿಸಿದ್ದ ಅಝೀಝ್ ಮಲಾರ್ ಸೋಲನುಭವಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ