ಬೆಂಗಳೂರು: ಯಡಿಯೂರಪ್ಪನವರನ್ನು ರಾಜ ಭವನ, ಹೈಕೋರ್ಟ್, ಲೋಕಾಯುಕ್ತ ಈ ಮೂರು ಸಂಸ್ಥೆಗಳು ಸುತ್ತವರಿದಿದೆ. ಈ ಸಂಸ್ಥೆಗಳ ಹಿಡಿತ ದಿಂದ ಅವರು ತಪ್ಪಿಸಿಕೊಂಡರೆ ಕಾನೂನಿನ ಎನ್‌ಕೌಂಟರ್ ಆಗಲಿದೆ. ಯಡಿಯೂರಪ್ಪನವರೇ ಹುಷಾರ್ ಎಂದು ಡಾ. ಜಿ. ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಯಡಿಯೂರಪ್ಪನವರು ನಡೆಸಿದ ಭ್ರಷ್ಟಾಚಾರ ಮಿತಿಮೀರಿ ಹೋಗಿದೆ. ಕಾಂಗ್ರೆಸ್ ಕೈಕಟ್ಟಿ, ಕಣ್ಮುಚ್ಚಿ ಕುಳಿತುಕೊಳ್ಳಲು ಆಗುವುದಿಲ್ಲ. ಕಾಂಗ್ರೆಸ್ ಸಿಡಿದೆದ್ದಿದೆ. ಸರಕಾರ ತೊಲಗು ವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಘೋಷಿಸಿದರು.
ಮುಖ್ಯಮಂತ್ರಿಗಳು ರಾಜೀನಾಮೆ ನೀಡುವವರೆಗೂ ಬಿಡುವುದಿಲ್ಲ. ಸರಕಾರವನ್ನು ಕಿತ್ತೊಗೆಯುವುದೇ ನಮ್ಮ ಮುಂದಿರುವ ಗುರಿ ಎಂದು ಹೇಳಿದರು.
ವಾಜಪೇಯಿ ನಮಗೆ ಆದರ್ಶ, ಅವರ ಆದರ್ಶಗಳನ್ನು ಆಡಳಿತದಲ್ಲಿ ಅನುಷ್ಠಾನಕ್ಕೆ ತರುತ್ತೇವೆಂದು ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಕಳೆದ ಎರಡುವರೆ ವರ್ಷಗಳಿಂದ ನೀವು ನಡೆಸಿದ ಭ್ರಷ್ಟಾಚಾರಕ್ಕೆ ವಾಜಪೇಯಿಯವರು ಮಾದರಿಯೇ, ಆದರ್ಶವೇ ಎಂಬುವುದನ್ನು ನಾಡಿನ ಜನತೆಗೆ ತಿಳಿಸಬೇಕೆಂದು ಆಗ್ರಹಿಸಿದ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ