ಮಂಗಳವಾರ, ಫೆಬ್ರವರಿ 01, 2011

ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಎಸ್‌ಡಿಪಿಐ ಪ್ರತಿಭಟನೆ

ಪುತ್ತೂರು: ರಾಜ್ಯ ಸರ್ಕಾರದ ಭ್ರಷ್ಟಾ ಚಾರವನ್ನು ವಿರೋಧಿಸಿ ಮತ್ತು ಮುಖ್ಯಮಂತ್ರಿ ಗಳ ರಾಜೀನಾಮೆಗೆ ಆಗ್ರಹಿಸಿ ಸೋಮವಾರ ಪುತ್ತೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ವತಿಯಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಸಲೀಂ ಗುರುವಾಯನಕೆರೆ ಮುಖ್ಯಮಂತ್ರಿ ಯಡಿ ಯೂರಪ್ಪರ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ರಾಜ್ಯದ ರೈತರು ಸಂಕಷ್ಟ ಕ್ಕೀಡಾಗಿ ಆತ್ಮಹತ್ಯೆ ಮಾಡಿಕೊಂಡಾಗ, ಪದ್ಮಪ್ರಿಯ ಕೊಲೆ ಪ್ರಕರಣ ನಡೆದಾಗ, ಸಚಿವ ಹಾಲಪ್ಪರಿಂದ ಮಹಿಳೆಯೊಬ್ಬರ ಅತ್ಯಾಚಾರ ನಡೆದಾಗ ಮುಖ್ಯಮಂತ್ರಿಯವರಿಗೆ ಅಪ ಮಾನವಾಗಿಲ್ಲ. ಆದರೆ ತಾನು ನಡೆಸಿದ ಭ್ರಷ್ಟಾಚಾರದಿಂದ ತನ್ನ ಅಧಿಕಾರಕ್ಕೆ ತೊಂದರೆ ಯಾಗುತ್ತಿದೆ ಎಂಬುದನ್ನು ಮನಗಂಡ ತಕ್ಷಣ ಮುಖ್ಯಮಂತ್ರಿಯವರು ರಾಜ್ಯದ ಆರು ಕೋಟಿ ಜನತೆಗೆ ಅನ್ಯಾಯವಾಗಿದೆ ಎಂದು ಹೇಳುವ ಮೂಲಕ ತನ್ನ ಸ್ಥಾನ ಭದ್ರಪಡಿ ಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ ಎಂದರು. ಮುಖ್ಯಮಂತ್ರಿಗಳಿಗೆ ಸ್ವಾಭಿಮಾನವಿದ್ದರೆ ನೈತಿಕ ಹೊಣೆಹೊತ್ತು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ಎಸ್‌ಡಿಪಿಐ ಜಿಲ್ಲಾ ವಕ್ತಾರಾದ ವಕೀಲ ಮಜೀದ್ ಖಾನ್ ಮಾತನಾಡಿ ಚರ್ಚ್ ದಾಳಿಯ ಕುರಿತು ಸೋಮಶೇಖರ್ ಆಯೋಗದ ತನಿಖಾ ವರದಿಯು ಮಾನವ ವಿರೋಧಿ ನಿಲುವಿನಿಂದ ಕೂಡಿದೆ. ಕೇವಲ ಸಂಘಪರಿವಾರವನ್ನು ತೃಪ್ತಿಪಡಿಸುವ ಉದ್ದೇಶಕ್ಕಾಗಿ ಸಿದ್ದಪಡಿಸಲಾದ ಈ ವರದಿಯನ್ನು ಅರಬ್ಬಿ ಸಮುದ್ರಕ್ಕೆ ಎಸೆಯಬೇಕು ಎಂದರು.
ಎಸ್‌ಡಿಪಿಐ ತಾಲ್ಲೂಕು ಅಧ್ಯಕ್ಷ ಇಬ್ರಾಹಿಂ ಸಾಗರ್, ಕಾರ್ಯದರ್ಶಿ ಅಬ್ದುಲ್ ಹಮೀದ್, ಸಂಘಟನೆಯ ನೇತಾರರಾದ ಪ್ರೆಸಿಲ್ಲಾ ಡಿ’ಸೋಜ, ರಾಮಣ್ಣ ರೈ, ಕುಸುಮ ಉಪ್ಪಿನಂಗಡಿ, ಆಯಿಷಾ ಬಾನು, ಮೂಸಾಕುಂಞಿ, ಹಂಝ ರಾಮಕುಂಜ ಮತ್ತಿತರರು ಇದ್ದರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ