
ಮುಂಬೈ ಉಗ್ರರ ದಾಳಿ ಸಮಯದಲ್ಲಿ ವೀರಮರಣವನ್ನಪ್ಪಿದ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥ ಹೇಮಂತ್ ಕರ್ಕರೆ ಅವರಿಗೆ ಬಲಪಂಥೀಯ ಸಂಘಟನೆಗಳಿಂದ ಜೀವ ಬೆದರಿಕೆ ಇತ್ತು ಎಂಬ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರ ವಿವಾದಾತ್ಮಕ ಹೇಳಿಕೆಯನ್ನು ಕರ್ಕರೆ ಅವರ ಪತ್ನಿ ಸಾರಾಸಗಟಾಗಿ ಅಲ್ಲಗಳೆದಿದ್ದಾರೆ.
ನವದೆಹಲಿ (ಪಿಟಿಐ/ಐಎಎನ್ಎಸ್): ಮುಂಬೈನಲ್ಲಿ ಉಗ್ರರು ದಾಳಿ ನಡೆಸುವುದಕ್ಕೆ ಕೆಲವು ಗಂಟೆಗಳ ಮುಂಚೆ ದೂರವಾಣಿ ಕರೆ ಮಾಡಿ ತಮ್ಮ ಜೀವಕ್ಕೆ ಬಲಪಂಥೀಯ ಸಂಘಟನೆಗಳಿಂದ ಜೀವ ಬೆದರಿಕೆ ಇರುವುದಾಗಿ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥ ಹೇಮಂತ್ ಕರ್ಕರೆ ಅವರು ತಮಗೆ ತಿಳಿಸಿದ್ದರೆಂಬ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರು ನೀಡಿದ ವಿವಾದಾತ್ಮಕ ಹೇಳಿಕೆಯನ್ನು ಕರ್ಕರೆ ಪತ್ನಿ ಕವಿತಾ ಕರ್ಕರೆ ಅವರು ಅಲ್ಲಗಳೆದಿದ್ದಾರೆ.
ಈ ಹೇಳಿಕೆಯು ಶುದ್ಧ ಅವಿವೇಕದಿಂದ ಕೂಡಿದೆ ಎಂದಿರುವ ಕವಿತಾ ಪಾಕಿಸ್ತಾನದ ಉಗ್ರರೇ ತಮ್ಮ ಪತಿಯನ್ನು ಕೊಂದಿದ್ದಾರೆ ಎಂದಿದ್ದಾರೆ.
ಹೇಮಂತ್ ಅವರು ವೀರಮರಣವನ್ನಪ್ಪುವುದಕ್ಕೆ ಕೆಲವೇ ಗಂಟೆಗಳ ಮುಂಚೆ ಸುಮಾರು ಎರಡೂವರೆ ಗಂಟೆ ಸಮಯ ತಮ್ಮೊಡನೆ ದೂರವಾಣಿಯಲ್ಲಿ ಮಾತನಾಡುತ್ತಾ ತಮಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದಿದ್ದರು ಎಂದು ಸಿಂಗ್ ತಿಳಿಸಿದ್ದಾರೆ.
ಆದರೆ ಇದನ್ನು ಅಲ್ಲಗಳೆದಿರುವ ಕವಿತಾ ತಮ್ಮ ಪತಿಗೆ ಈ ರೀತಿಯ ಯಾವುದೇ ಕರೆಗಳು ಬಂದಿರಲಿಲ್ಲ ಎಂದು ಸ್ಫಷ್ಟೀಕರಿಸಿ ದ್ದಾರೆ.
ಸಿಂಗ್ ಅವರ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲವಾಗಿದ್ದು, ಈ ಹೇಳಿಕೆಯಿಂದ ಪಾಕ್ ವಿರುದ್ದದ ಭಾರತದ ವಾದವು ತೀರಾ ದುರ್ಬಲವಾಗಲಿದೆ ಹಾಗೂ ಇದೊಂದು ಬೇಜಾಬ್ದಾರಿತನದ ಹೇಳಿಕೆ ಎಂದು ಟೀಕಿಸಿದೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ