ಬುಧವಾರ, ಡಿಸೆಂಬರ್ 01, 2010

ಭದ್ರತಾ ಮಂಡಳಿಯ ಸದಸ್ಯರನ್ನು ಇರಾನ್ ವಿಚಾರಣೆಗೆಳೆಯಲಿದೆ’


ಟೆಹ್ರಾನ್, ಡಿ.1: ಇರಾನ್‌ನ ಇಬ್ಬರು ವಿಜ್ಞಾನಿಗಳ ಮೇಲೆ ಭಯೋತ್ಪಾದಕ ದಾಳಿ ನಡೆದು ಎರಡು ದಿನಗಳು ಕಳೆಯುತ್ತಿರುವಂತೆಯೇ, ಈ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯರನ್ನು ವಿಚಾರಣೆಗೆಳೆಯಲಾಗುವುದು ಎಂದು ಇರಾನ್‌ನ ಅಧ್ಯಕ್ಷ ಮಹ್ಮೂದ್ ಅಹ್ಮದಿನಜಾದ್ ಎಚ್ಚರಿಸಿದ್ದಾರೆ.

‘‘ಒಂದು ವೇಳೆ ಈ ರೀತಿಯ ಘಟನೆ ಇನ್ನೊಂದು ಬಾರಿ ಸಂಭವಿಸಿದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಪ್ರತಿಯೋರ್ವ ಸದಸ್ಯನನ್ನು ಇರಾನ್ ವಿಚಾರಣೆಗೆ ಎಳೆಯಲಿದೆ’’ ಎಂದು ಅಹ್ಮದಿನಜಾದ್ ಹೇಳಿರುವುದಾಗಿ ‘ಇರ್ನಾ’ ಸುದ್ದಿಸಂಸ್ಥೆ ವರದಿ ಮಾಡಿದೆ. ‘‘ಒಂದು ವೇಳೆ ಇರಾನ್‌ನ ವಿಜ್ಞಾನಿಗಳ ಮೇಲೆ ಭಯೋತ್ಪಾದಕ ದಾಳಿ ಮರುಕಳಿಸಿದಲ್ಲಿ, ಅದಕ್ಕೆ ಕಾರಣರಾದವರ ವಿರುದ್ಧ ಎಲ್ಲ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು’’ ಎಂದವರು ಎಚ್ಚರಿಸಿದ್ದಾರೆ.


‘‘ನಮ್ಮ ಪರಮಾಣು ವಿಜ್ಞಾನಿಗಳು ಅಥವಾ ವಿಜ್ಞಾನಿಗಳನ್ನು ದೂರಗೊಳಿಸುವುದರಿಂದ ಅಭಿವೃದ್ಧಿಯ ಪಥದಲ್ಲಿನ ನಮ್ಮ ರಾಷ್ಟ್ರದ ನಡಿಗೆಯು ಸ್ಥಗಿತಗೊಳ್ಳುವುದೆಂದು ಅವರು ಭಾವಿಸಿರಬೇಕು. ಈ ಬಾರಿಯೂ ಅವರು ತಪ್ಪೆಸಗಿದ್ದಾರೆ’’ ಎಂದವರು ಎಚ್ಚರಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ