ಗುರುವಾರ, ಮಾರ್ಚ್ 03, 2011

ಶಾಲಾ ವಿದ್ಯಾರ್ಥಿನಿಯ ಬುರ್ಖಾ ಎಳೆದ ನಿರ್ವಾಹಕ-ಕಾನೂನು ಕ್ರಮಕ್ಕೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಆಗ್ರಹ

ಬಸ್ಸು ನಿರ್ವಾಹಕನ ವರ್ತನೆಯಿಂದ ಮಾನವ ಹಕ್ಕು ಉಲ್ಲಂಘನೆಯಾಗಿದ್ದು,  ಶಾಲಾ ವಿದ್ಯಾರ್ಥಿನಿಯು ಮಾನಸಿಕವಾಗಿ ಅಘಾತ ಅನುಭವಿಸುಂತಾಗಿದೆ. ನಿರ್ವಾಹಕನಿಂದ ಶಾಂತಿ ಕದಡುವ ಜೊತೆಗೆ ವಿದ್ಯಾರ್ಜನೆ ಮೊಟಕುಗೊಳ್ಳುವ ಸಾಧ್ಯತೆ ನಿರ್ಮಾಣಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿ ಅಧಿಕಾರಿಗಳು ಆರೋಪಿ ನಿರ್ವಾಹಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪಿ‌ಎಫ್‌ಐನ ವಿದ್ಯಾರ್ಥಿ ಸಂಘಟನೆಯಾದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ  ಪುತ್ತೂರು ಘಟಕದ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಆಗ್ರಹಿಸಿದ್ದಾರೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ