ಚಿಕ್ಕಮಗಳೂರು,ಬಾಬಾಬುಡಾನ್‌ಗಿರಿಯಲ್ಲಿ ವಾರ್ಷಿಕ ಉರೂಸ್ ಆಚರಣೆಯ ಸಂದರ್ಭ ನಡೆಯುತ್ತಿದ್ದ ಧಾರ್ಮಿಕ ವಿಧಿ-ವಿಧಾನಗಳನ್ನು ಈ ಹಿಂದಿನಂತೆ ಯಥಾವತ್ತಾಗಿ ಪೂರೈಸಲು ಸರ್ವೋಚ್ಚ ನ್ಯಾಯಾಲಯ ತನಗೆ ಅನುಮತಿ ನೀಡಿದೆ ಎಂದು ಧಾರ್ಮಿಕ ಮುಖಂಡ ಗೌಸ್ ಮುಹಿಯುದ್ದೀನ್ ಶಾಖಾದ್ರಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಅವರು, ಕೆಲವು ವರ್ಷಗಳ ಹಿಂದಿನಿಂದ ಬಾಬಾಬುಡಾನ್‌ಗಿರಿಯಲ್ಲ್ಲಿ ಉರೂಸ್ ಆಚರಣೆಯ ಸಂದರ್ಭ ಧಾರ್ಮಿಕ ವಿಧಿ- ವಿಧಾನಗಳನ್ನು ಪೂರೈಸಲು ಚಿಕ್ಕಮಗಳೂರು ಜಿಲ್ಲಾಡಳಿತ ಅಡ್ಡಿಯುಂಟು ಮಾಡುತ್ತಿತ್ತು. ಜಿಲ್ಲಾಡಳಿತದ ಈ ನಿಲುವಿನ ಬಗ್ಗೆ ತಾನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದೆ. ಇದರ ವಿಚಾರಣೆ ಮಾಡಿದ ಸರ್ವೋಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠ ಮಂಗಳವಾರ ಐತಿಹಾಸಿಕ ತೀರ್ಪು ಪ್ರಕಟಿಸಿದ್ದು, ಇಲ್ಲಿ ಉರೂಸ್ ಸಂದರ್ಭ ಧಾರ್ಮಿಕ ವಿಧಿ- ವಿಧಾನಗಳನ್ನು ಪೂರೈಸಲು ಅನುಮತಿ ನೀಡಿದೆ ಎಂದು ತಿಳಿಸಿದರು.
ಇದೇ ತಿಂಗಳು ಬಾಬಾಬುಡಾನ್ ಗಿರಿಯಲ್ಲಿ ಉರೂಸ್ ನಡೆಯಲಿದ್ದು, ಈ ಸಂದರ್ಭ ಜಿಲ್ಲಾಡಳಿತ ಧಾರ್ಮಿಕ ವಿಧಿ-ವಿಧಾನಗಳಿಗೆ ಅಡ್ಡಿ ಪಡಿಸಿದರೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆ ದ್ವಿಸದಸ್ಯ ಪೀಠ ತನಗೆ ಸೂಚಿಸಿದೆ.
ಉರೂಸ್ ಸಮಾರಂಭಕ್ಕೆ ದೇಶದ ವಿವಿಧೆಡೆಯಿಂದ ಆಗಮಿಸುತ್ತಿದ್ದ ಫಕೀರರು ಜಿಲ್ಲಾಡಳಿತದ ಈ ನಿಲುವಿನಿಂದಾಗಿ ಕಳೆದ ಐದು ವರ್ಷ ಗಳಿಂದ ಆಗಮಿಸುತ್ತಿಲ್ಲ. ಈ ಬಾರಿ ಅವರೆಲ್ಲರೂ ಉರೂಸ್ ಸಮಾರಂಭ ದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಗೌಸ್ ಮುಹಿಯುದ್ದೀನ್ ಶಾಖಾದ್ರಿ ತಿಳಿಸಿದರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ